ಸಮರಸ ಜೀವನ


ನನ್ನ ಮನವು ನುಡಿಸುತಿರಲು ಕೊಳಲು,
ಆಲಿಸುತ್ತಾ ಬಳಿ ಬಂದವಳು ಅವಳು !

ಹೃದಯ ಮಿಡಿತಕ್ಕೆ ಅವಳದೇ ತಾಳ,
ಅನುರಾಗದ ಅಲೆಗಳದೇ ಮೇಳ!

ಅವಳ ನೋಟಕೆ ನುಲಿದಿದೆ ನಯನ,
ನಮ್ಮಿಬ್ಬರದು ಪ್ರೀತಿಯ ಗಾಯನ!

ಜೀವ ಜೀವಗಳು ಬೆರೆಯುತಿರಲು,
ನಗೆಯು ಚಿಮ್ಮಿ ಹರೆಯುತಿದೆ ಹೊನಲು!

ಭಾವದ ರಾಗಗಳ ಸಮ್ಮಿಲನ,
ಹೂವು ಹಾಸುತಿದೆ ನವರಸದ ಜೀವನ !!

Comments

Popular posts from this blog

ಹುಟ್ಟು ಸಾವು

ಸ್ವಾಭಿಮಾನ /ಅಹಂಕಾರ

ನಗು-ನಗಿಸು