ಸ್ತ್ರೀ ವಿರೋಧಿ


ಹುಟ್ಟುತ್ತಲೆ ಮಗನ ತ್ಯಜಿಸಿ 
ಕಸದ ತೊಟ್ಟಿಗೆ ಎಸೆದಳು ಇವಳೆಂತಾ ಹೆಣ್ಣು ?
ಬೀದಿಯಲ್ಲಿ ಬೆಳೆದ.. ಭಿಕ್ಷೆ ಬೇಡಲೆಂದು ಹೋದವನಿಗೆ,
ದೂರ ದೂಡಿದಳು ಇವಳೆಂತಾ ಹೆಣ್ಣು..?
ಕಲಿತು ದೊಡ್ಡವನಾಗಿ ಬೆಳೆಯಬೇಕೆನ್ನುವಾಗ ಸಿಕ್ಕಳೊಬ್ಬಳು ಹುಡುಗಿ
ಪ್ರೀತಿಯ ಹೆಸರು ಹೇಳಿ ಮನ ಕೆಡಸಿ ನಡೆದಳು ಇವಳೆಂತಾ ಹೆಣ್ಣು ?
ಮಾಯೆಗೆ ಮರುಳಾಗಿ ಮದುವೆ ಬಂಧನಕ್ಕೆ ಜಾರಿದ,ನಟನೆಯ ಸುಳಿ ಬೆಸೆದಳು..
ಮನೆಯ ದೋಚಿ ಓಡಿ ಹೋದಳು ಮರ್ಯಾದಿಯ ಕಳೆದು.. ಇವಳೆಂತಾ ಹೆಣ್ಣು. ? 
ಪ್ರತಿ ಹೆಜ್ಜೆಗೂ ಮೋಸ ಹೋದವ ಒಬ್ಬ ಗಂಡು,
ಅದಕ್ಕೆ ಇವನು ಇಂದು ಸ್ತ್ರೀ ವಿರೋಧಿ ಬೆಂಕಿಯ ಚೆಂಡು.

ಅರುಣರಾಗ

ಚುಮು ಚುಮು ಚಳಿ ಮೈ ಸೊಕಿದಾಗ


ಮಂಜಾನೆಯ ಮಂಜು ಕಣ್ಣಾವರಿಸಿದಾಗ

ಹಕ್ಕಿಗಳ ಚಿಲಿಪಿಲಿ ಮುಗಿಲು ಮುಟ್ಟಿದಾಗ

ಸೂರ್ಯನ ಕಿರಣಗಳು ಭುವಿ ತಟ್ಟಿದಾಗ

ಸಮಸ್ತ ಮನು ಸಂಕುಲಕೆ ಶುಭ ಅರುಣರಾಗ .!***ಭಾವಪ್ರಿಯ***

ಇಬ್ಬನಿ


ಮಾಗಿಯ ಚಳಿಯಲ್ಲಿ ಇಬ್ಬನಿ..,
ಮೂಡಿದೆ ಎಲೆ ಎಲೆ ಮೇಲೆ !
ರವಿಯ ತಿಳಿ ಬಿಸಿಲಿಗೆ ಕರಗಿದ ಇಬ್ಬನಿ,
ಜಾರಲು ಕಾದಿದೆ ಎಲೆಯ ತುದಿಯಲಿ
ಜೋತು ಬಿದ್ದ ಇಬ್ಬನಿಯ ಹನಿಗೆ,
ರವಿಕಿರಣದ ಪ್ರೀತಿಯ ಅಪ್ಪುಗೆ !

***ಭಾವಪ್ರಿಯ***

ಲಗಾಮು ಇರದ ಕುದುರೆಕುದುರೆ ಓಡುತಿಹುದು ಕುದುರೆ

ಆಧುನಿಕತೆಯ ಬೆನ್ನೇರಿ ,

ಸಂಸ್ಕ್ರುತಿಯ ಮರೆತು,

ದಿಕ್ಕು ದಿಸೆ ಇಲ್ಲದೆ ಓಡುತಿದೆ, ಕುದುರೆ ಓಡುತಿದೆ.ಅಹಂ ಗುಣವ ಮೇಲೆತ್ತಿ

ಶಿಷ್ಟರನ್ನ ನೆಲಕ್ಕೆ ಒತ್ತಿ

ಹೊಲಸು ತಿಪ್ಪೆಯಲಿ

ಸುಖ ಕಾಣುತಲಿ ಓಡುತಿದೆ , ಕುದುರೆ ಓಡುತಿದೆ.ಹಿರಿತನದ ಗೌರವ ಇಲ್ಲ ಅದಕೆ

ಸೊಕ್ಕು ತುಂಬಿ ಮೈಯ ಓಳಗೆ

ಮಧ್ಯ ಕುಡಿಸಿದ ಮಂಗನ ಹಾಗೆ

ಎಲ್ಲವನ್ನು ಬಿಟ್ಟುಕೊಟ್ಟು ಓಡುತಿದೆ, ಕುದುರೆ ಓಡುತಿದೆ.ಲಂಗು ಇಲ್ಲದ ಕುದುರೆ

ಲಗಾಮು ಇರದ ಕುದುರೆ

ತನ್ನ ಅವನತಿಯೆಡೆಗೆ

ಅವಸರದಿ ಓಡುತಿದೆ, ಕುದುರೆ ಓಡುತಿದೆ.***ಭಾವಪ್ರಿಯ***

ನನ್ನದು ನೂರು-ನೂರು ಜನುಮದ ಕೋಪ


ಆ ಕ್ಷಣದಿ ಬಂದವಳ ಮೇಲೆ ಹರಿ ಹಾಯಿತು ವಿಕೋಪ

ಆದರು ಹತ್ತಿರ ಬಂದು ಮಾತನಾಡುತ್ತಾಳೆ ಪಾಪ

ಇವಳೆನಪ್ಪಾ.. ಬಿಟ್ಟರೂ ಬಿಡಲಾರದೆ ತೊರುತ್ತಾಳೆ ಅನುಕಂಪ.

ಅಭಿಲಾಶೆ
ನಯವಾದ ನುಣುಪು ಹುಬ್ಬು ಸೌಮ್ಯತನವ ಮೆರೆದಂತೆ

ಕಾಡಿಗೆ ಲೇಪಿಸಿದ ಕಣ್ಣು ., ಧ್ರುವ ನಕ್ಷತ್ರದಂತೆ

ಹಣೆಯ ಬೊಟ್ಟು.., ಹುಣ್ಣಿಮೆ ಚಂದ್ರನಂತೆ

ಕನ್ನಡವ ನುಡಿವ ತುಟಿಗಳು, ನಾಡಿಗೆ ಶ್ರೆಯಸ್ಸಂತೆ

ವಿಶಾಲ ಹಣೆ.., ಉದಾರತನ ಸಾಕ್ಷಿಯಂತೆ

ಸೀರೆಯನುಟ್ಟು ನೀ ನಡೆದರೆ ಹಸಿರು ಬನಸಿರಿಯೇ ನೀನಂತೆ

ಹೀಗೆಯೇ ನೀ ಕಾಣಬೇಕೆನ್ನುವ ನನ್ನ ಅಭಿಲಾಶೆ

ನಲಿಯುತಾ ಬರುವೆಯಾ ನನ್ನ ಉಷೆ..?***ಭಾವಪ್ರಿಯ ***
ಮನುಜರು ತುಂಬಿದ ಜಗದಲ್ಲಿ ನಾನೋಬ್ಬ ಒಂಟಿಗ


ಸದ್ದು ಗದ್ದಲದಲ್ಲೂ ಮೂಕನಾಗಿ ನಡೆದಿಹ ಪಯಣಿಗ

ಜೀವನದ ಹಾದಿಯಲ್ಲಿ ಮಂಜು ಕವಿದಿರಲು

ದಾರಿ ಕಾಣದ ಮುಸುಕೇ ಮೊಳಗಿರಲು

ಆ ವೆಂಕಟನನ್ನು ನೆನೆದರೂ ದೂರವಾಗದು ಸಂಕಟ

ಮೂರು ಮಾಸ ಕಳೆದು ಮಗದೊಂದು ಮಾಸ ಬಂದಿಹುದು

ಅಂದಿಗೂ ಅಲ್ಲೆ ಇತ್ತು...ಇಂದಿಗೂ ಅಲ್ಲೆ ಇಹುದು

ಜೀವನ ಸಹಜ ಅನ್ನುವ ಕ್ಷಣವೇ ಬಾರದೇ

ಸಾಗಲಿ ಹೇಗೆ.... ಆಶಯದೆಡೆಗೆ ?

ಶೂನ್ಯ

ಶೂನ್ಯ
ನೀ ಹತ್ತಿರವಿದ್ದರೂ ದೂರಮನದಲ್ಲಿ ನೆಲೆಸಿರುವೆ.., ಹೆಚ್ಚಿದೆ ಮನಸ್ಸಿನ ಭಾರಅನುಕ್ಷಣವೂ ಬಂದು ನೀ ನೆನಪಿಗೆ...,ತುಳುಕುತಿದವೆ ಭಾವನೆಗಳ ಸಾಗರಹೃದಯ ಚಿಮ್ಮುವ ನೆತ್ತರು ..ದಿನೇ ದಿನೇ ಹೆಚ್ಚಿಸಿದೆ ಉಸಿರುಮನಸ್ಸು - ಹೃದಯಗಳು ಭಾವವ ಬೆಸೆಯುತಿಹರುನೀ ದೂರಾದರೆ ಇನ್ನ ....ನನ್ನ ಲೋಕವೇ ಶೂನ್ಯ .ಭಾವಪ್ರಿಯ

ಕನ್ನಡ ಕೊಲೆಗಡಕರು

ಬೇಂದ್ರೆ ಅಜ್ಜಾ ನಿನ್ನ ಕವನ ವಾಚಿಸಿ ಖುಶಿ ಪಟ್ಟಿದ್ದೆ ನಾನು... ಮತಿಗೆಟ್ಟ ರಾಜಕೀಯದವರು ವಾಚಿಸಿ ನಿಮ್ಮ ಕವನವ ಅವಮಾನಿಸುತಿಹರು ಕನ್ನಡ ಬಾರದ ಒಬ್ಬ ಮೂರ್ಖ ತಾನು ಕ...