ಬಯಸಿದೆ  ಮನ ನಿನ್ನ....  ಸನಿಹಕೆ  ಬಾರೆ..!    

ಬಟ್ಟ ಬಯಲ ಆಗಸದಿ 
ಬೆಳ್ಳಿ ಮೋಡದಂತೆ ನಿನ್ನ ನಗು  
ಹನಿ ಹನಿ ಪೋಣಿಸಿ 
ಮಳೆಗರೆವ ನಿನ್ನ ಪ್ರೀತಿಯ ಸೊಬಗು 
ಚೆಲುವು ಸಿಹಿ ಹಂಚುತ್ತಿರುವ  ಮೆರಗು ಕಂಡು..,  ಬಯಸಿದೆ  ಮನ ನಿನ್ನ... ಸನಿಹಕೆ ಬಾರೆ 

ನಿನ್ನ ಒಲವು ಗೆಲ್ಲುವ ಪರಿ 
ನಾ ಅರಿಯದೆ ಹೋದೆ , ಸರಿ ..!
ಆದರೂ ನಿನ್ನ ಸೂಕ್ಷ್ಮ ಸನ್ನೆ ಸಾಕೆನಗೆ 
ನಿನ್ನ ಪಡಿಯದೇ ನಾ ಬದುಕಲಾರೆ 
ಹೃದಯದ ಪೇಚಾಟಕೆ  ಸುರಿ ನೀ ಅಮೃತ ಧಾರೆ .. ಬಯಸಿದೆ ಮನ ನಿನ್ನ... ಸನಿಹಕೆ ಬಾರೆ 

ಕೋಟಿ ಕೋಟಿ ಇಲ್ಲ ನನ್ನೆಡೆಗೆ 
ಆದರೂ ಕೋಟಿ ಶತಕೋಟಿ ಹರಿಸುವೆ ಒಲುಮೆ 
ಕಲ್ಲು ಮುಳ್ಳುಗಳು ಇರಲಿ ನನ್ನ ಪಾಡಿಗೆ 
ಸದಾ ಹೂ ಮಳೆಯ ಭೋರ್ಗರೆಸುವೆ ನಿನ್ನ ಹಾದಿಗೆ
ನನ್ನ ಬಾಹುಬಂಧನದೊಳು ಇರಿಸಿ  ಪ್ರೀತಿಸುವೆ .......ನಿನ್ನನ್ನೇ ಬಯಸಿದೆ ಮನ.... ಸನಿಹಕೆ ಬಾರೆ    


ಸುಗ್ಗಿ ಬಂತು ಸುಗ್ಗಿ

ರೈತನ ದುಡಿಮೆಗೆ ಪುರ್ಸ್ಕಾರದ ಸುಗ್ಗಿ ಹೊಲವ ಊಳಿದ ಎತ್ತುಗಳಿಗೆ ಅಲಂಕರಿಸಿ ಮೆರವಣಿಗೆಯ ಸುಗ್ಗಿ ಹಸಿರು ಪಸರಿಸಿದ ಪೈರಿಗೆ ಕಾಳು ನವಿರೆರಿದ ಸ...