ಕಣ್ಣು ಮುಚ್ಚಾಲೆ 

ಕಣ್ಣು ಕಣ್ಣಲ್ಲೇ, ಕಣ್ಣು ಮುಚ್ಚಾಲೆ 
ಕಣ್ಣ ಸನ್ನೆಯಲ್ಲೇ ಪ್ರೀತಿಯ ಓಲೆ 
ನವಿರು ಕಣ್ಣಗಳ  ಮೇಲೆ 
ಹಣೆಯ ಚುಂಬಿಸುವ ಮುಂಗುರುಳ ಮಾಲೆ
ಕೆಂಪು ತುಟಿಗಳ ಅಧರದ ಸೆಲೆ 
ಆ ಸುಳಿಗಳಲ್ಲಿ ಸಿಲುಕಿ ಜಾರಿಬಿಡಲೇ   
ತಂಪನೆಯ ಗಾಳಿಯ ಅಲೆ 
ಸೋಕಿದೆ ನಿನ್ನ ಮೃದು ಗಲ್ಲದ ಮೇಲೆ 
ಮೆಲ್ಲುಸಿರು ಗಾನಕೆ ಹಾರಿದೆ ನಿನ್ನ ಕೇಶದ ಬಲೆ 
ನಿನ್ನ ಅಂದಕೆ ಸೋಲದೆ, ನಾ ಹೇಗಿರಲಿ ಬಾಲೆ ?

ನಿನ್ನ ಗೆಜ್ಜೆ ಸದ್ದು ಕೇಳಿದಾಗಲೆಲ್ಲಾ ನಾ ಕವಿಯಾಗಬೇಕು ಅನ್ನಿಸುತ್ತದೆ 


ಆ ನಾದ ಕೇಳದೆ ಹೋದಲ್ಲಿ, ನನ್ನ ಮನಸು ಕಪಿಯಾಗುತ್ತದೆ...!
 
 ಭಾವಪ್ರಿಯ
ನಮ್ಮ ಕನ್ನಡದ ಬ್ಲಾಗು

ನಮ್ಮ ಕನ್ನಡದ ಬ್ಲಾಗು
ಒಂದು ಚಿಂತಕರ ಚಾವಡಿ
ಚಿಗುರು ಕನಸುಗಳಿಗೆ ಒಂದು ಮುನ್ನುಡಿ
ಅರಳುವ ಭಾವಗಳಿಗೆ ಒಂದು ಕೈಪಿಡಿ
ಮನಸಿನ ಭಾವನೆಯ ಹಂಚಿಕೊಳ್ಳಲು ದಿನಚರಿ

ನಮ್ಮ ಕನ್ನಡದ ಬ್ಲಾಗು
ನೊಂದ ಮನಸಿಗೆ ಸಾಂತ್ವನ ಹೇಳುವ ವೇದಿಕೆ
ಸೋತ ಮನಗಳಿಗೆ ಧೈರ್ಯ ತುಂಬುವ ತಾಣ
ಜಯ ಸಾಧಿಸಿದ ಹೃದಯಗಳಿಗೆ ಅಭಿನಂದಿಸುವ ವನ
ಗುರಿಯ ಮುಟ್ಟಲು ಹುರಿದುಂಬಿಸುವ ಬಣ

ನಮ್ಮ ಕನ್ನಡದ ಬ್ಲಾಗು
ನಗೆ ಹಂಚುವ ಹನಿಗವನ
ಉಲ್ಲಾಸ ನೀಡುವ ಪ್ರೀತಿಯ ಗಾನ
ಕವಿ ಕವಿಯಿತ್ರಿಯರ ಸುಮಧುರ ಪದಗಳ ನರ್ತನ
ಪ್ರೀತಿಯ ಹರಿಸುವ ಆನಂದನವನ

ಕನ್ನಡ ಬ್ಲಾಗಿನ ಹುಟ್ಟು ಹಬ್ಬದ ಪ್ರಯಯುಕ್ತ ......
ಪ್ರೀತಿಯಿಂದ ,
" ಭಾವಪ್ರಿಯ "

ಜೋಡಿ ಹಕ್ಕಿ

ಅಕ್ಕ ಪಕ್ಕದ ಮನೆಯ ಜೋಡಿ ಹಕ್ಕಿ
ಯಾರ ಹುಡುಕುವೆ ಹೆಕ್ಕಿಹೆಕ್ಕಿ
ಅತ್ತ, ಇತ್ತ , ಮೇಲೆ ಕೆಳಗೆ
 ಗೂಡಲಿ,  ಮರದಲಿ,
ಏನನ್ನು ನೋಡುತಿರುವೆ ಇಣುಕಿ ಇಣುಕಿ  ?

ಅತ್ತೆಗೊಂದು ಕಾಲ ..
ನೀನು ಅಂದು ನಗುತಿದ್ದೆ ನಿನ್ನ ವಂಚನೆ  ಸಾಧಿಸಿದಿ ಎಂದು...
ಇಂದು ನಾ ನಗುತಿರುವೆನಿನ್ನ  ವಂಚನೆಗೆ ಫಲವ ತಂದು...!

ಅವ್ವ ನನಗ ಇಂತಹ ಹುಡುಗಿನ ಬೇಕ

ಸೀರಿ ಉಡಾಕ ಅಕೀಗ ಬರಬೇಕು
ಹಣಿಯಾಗ ಬೊಟ್ಟಿಡಬೇಕು
ತಲಿತುಂಬಾ ಹೂ ಮುಡಿದಿರಬೇಕು
ತಳಕು ಬಳುಕೋ ನಾಚುವ ಬಳ್ಳಿಯಾಗಿರಬೇಕು
ರೊಟ್ಟಿ ಮಾಡಕ ಬರಬೇಕು
ಮನೀನು ಸ್ವಚ್ಛಗ ಇಡಬೇಕು
ದೇವರ ಪೂಜೆ ಮಾಡಬೇಕು
ಗುರು ಹಿರಿಯರಲ್ಲಿ ಭಕ್ತಿ ಕೂಡ ಇರಬೇಕು
ಗಂಡನ ಮೇಲೆ ಅಭಿಮಾನವಿರಬೇಕು
ಅನುಕಾಲ ಪ್ರೀತಿ ಹರಿಸಬೇಕು
ನನ್ನ ಬಾಳ ಬೆಳಗುವ ನಂದಾದೀಪವಾಗಬೇಕು
ಅವ್ವ ನನಗ ಇಂತಹ ಹುಡುಗಿನ ಬೇಕ.

***ಭಾವಪ್ರಿಯ***

ವರ್ಷಧಾರೆ

ಸರ-ಸರನೆ ಹರಿದು ಬರುತ್ತಿರುವ ವರ್ಷಧಾರೆಗೆ ಬೇಲಿಯ ಕಟ್ಟಲಾದೀತೆ....? ನೀರು ತುಂಬಿ ಹರಿಯುವ ನದಿಯನು ಹರಿಯುವುದನ್ನು ನಿಲ್ಲಿಸಲಾದೀತೆ....? ಒಲಿದು ಬಂದ...