ಮುಂದುವರೆದಿದೆ....) ಹೇಗೊ ಮತ್ತೆ ಮನೆಗೆ ಬಂದಳು ಮುಂದೆ ಹೊಂದಿಕೊಂಡು ಹೋಗುತ್ತಾಳೆ ಎಂದು ಭಾವಿಸಿದ್ದ ವಿಜಯ. ಆದರೆ, ಅವಳ ಮನಸಲ್ಲಿ ಬೇರೆಯೇ ಇತ್ತು. ಅವಳ ವರ್ತನೆಗಳು ಬರಿ ಅನುಮಾನಗಳನ್ನ ಊಂಟು ಮಾಡುತ್ತಿದ್ದವು..ಕದ್ದು ಮುಚ್ಚಿ ಬಚ್ಚಲ ಮನೆಯಲ್ಲಿ ಯಾರದೊ ಹತ್ತಿರ ಮಾತನಾಡುತ್ತಿದ್ದಳು.,ಏನೋ ನಡೆಯುತ್ತಿತ್ತು...ಏನು ಅನ್ನುವುದು ಅವನಿಗೆ ತಿಳಿಯುತ್ತಿರಲಿಲ್ಲ..ಇವಳ ವಿಜಯನ ಜೊತೆ ಮತ್ತೆ ಸರಿಯಿಲ್ಲ ಏನೋ ಕುತಂತ್ರ ನಡೆಸುತ್ತಿದ್ದಳು. ಏನೂ ತಿಳಿಯದಾದಾಗ ವಿಜಯ ಅವಳ ಗೆಳತಿಯ ಸಹಾಯ ಪಡೆಯಲು ನಿರ್ಧರಿಸುತ್ತಾನೆ. ಅವರ ಮನೆಗೆ ತೆರಳಿ ನೀವು ಬಂದು ಸ್ವಲ್ಪ ಇವಳಿಗೆ ಬುದ್ಧಿ ಹೇಳಿ.., ಇವಳು ಬದುಕಬೇಕಾದದ್ದು ಗಂಡನ ಜೊತೆಯಲಿ, ಇಬ್ಬರು ಒಬ್ಬರಿಗೊಬ್ಬರು ಆಸರೆಯಾಗಿರಬೇಕು ಗಂಡನ ಗೌರವ ಪ್ರತಿಷ್ಠೆಯೆ ಇವಳ ಪ್ರಧಾನ್ಯತೆ ಆಗಿರಬೇಕು ಹಾಗೆಯೇ ಗಂಡನು ಕೂಡ ಹೆಂಡತಿಯ ಬೇಕು ಬೇಡಗಳನ್ನು ತಿಳಿದು ಅರಿತು ಬಾಳಬೇಕು. ಅವರುಗಳು ಕೂಡ ಸರಿ ನಿಮ್ಮ ಜೀವನ ನಮ್ಮ ಮಧ್ಯಸ್ತಿಕೆಯಿಂದ ಸರಿ ಹೋಗುವುದು ಅಂದರೆ ನಾವು ಬರುತ್ತಿವಿ ಅನ್ನುತ್ತಾರೆ. ಸಂಜೆ ಆರು ಗಂಟೆಗೆ ಸರಿಯಾಗಿ ಅವಳ ಗೆಳತಿ ಮತ್ತು ಗಂಡ ಮನೆಗೆ ಬರುತ್ತಾರೆ. ಗೆಳತಿಯೊಡನೆ ಕುಶಲ ಸಮಾಚಾರವಾಗುತ್ತದೆ. ವಿಜಯನ ಕುರಿತು ಎನ್ ವಿಜಯರವರೆ ಏನ್ ಸಮಾಚಾರ..ಅಂತಾ ಮಾತುಗಳು ಶುರುಮಾಡುತ್ತಾರೆ, ಅದಕ್ಕೆ ವಿಜಯನು... ನೋಡಿ ನೀವು ತಿಳಿದ್ದಿದ್ದವರಿದ್ದಿರಿ ಇವಳು ಮಾಡಿದ್ದು ಸರಿಯೇ ನೀವೇ ಹೇಳಿ...ನಾನು ಮನೆಯಲ್ಲಿ ಇರದಾಗ ಇವಳು ಮನೆ ಬಿಟ್ಟು ಹೋದಳು,ಎಲ್ಲಿಗಾದರೂ ಹೋಗಬೇಕಾದಾಗ ಹೇಳಿ ಹೋಗ ಬೇಕೊ ಬೇಡವೊ ನೀವೇ ಹೇಳಿ..ಯಾವಾಗಲೂ ನೋಡಿದರು ಪೋನಿನಲ್ಲಿ ಮಾತನಾಡುತ್ತನೆ ಇರುತ್ತಾಳೆ,ಹೋಗುವ ಮೊದಲು ಗಂಡನಿಗೆ ಒಂದು ಪೋನು ಮಾಡಬಹುದಿತ್ತಲ್ಲ..., ಕೇಳಿ ಇವಳು ಮಾಡಿದಳಾ ಅಂತ....ಇಷ್ಟು ಮಾತುಗಳು ಆಗುತ್ತಿದ್ದರೂ ಇವಳ ಅಡುಗೆ ಮನೆಯಲ್ಲಿ ಸುಮ್ಮನೆ ಕುಳಿತಿರುತ್ತಾಳೆ.., ನೋಡಿ ಇಲ್ಲಿ ನೀವು ಬಂದ್ದಿದ್ದಿರಾ, ನಾವು ನಮ್ಮ ಸಂಸಾರದ ಬಗ್ಗೆ ಮಾತನಾಡುತ್ತಿದ್ದೇವೆ ಇವಳಿಗೆ ಸ್ವಲ್ಪನಾದರೂ ಚಿಂತೆ ಇದೆಯೆ..? ಯಾವಾಗಲೂ ನನ್ನ ಫ್ಯಾಮಲಿ ನನ್ನ ಜನ ಅಂತ ಇರ್ತಾಳೆ, ಹಾಗದರೆ ಇವಳಿಗೆ ಅವರ ಬಗ್ಗೆನೆ ಚಂತಿಸುವುದಿತ್ತೆಂದರೆ ಮದುವೆ ಏಕೆ ಬೇಕಿತ್ತು, ನನ್ನ ಗೌರವ, ಪ್ರತಿಷ್ಟೆ ಬಗ್ಗೆ ಇವಳಿಗೆ ಕಿಂಚಿತ್ತು ಚಂತೆಯಿಲ್ಲ, ಹೀಗಿದ್ದರೆ ಸಂಸಾರ ನಡೆದೀತಾ ? ಸರಿ ವಿಜಯ ಅವರೆ ಈಗ ಏನ್ ಆಗಿದೆ ಅದನ್ನ ಮರೆತು ಬಿಡೋಣ,ನೀವು ಕೂಡ ಮರೆತು ಬಿಡಿ.., ನಮ್ಮನ್ನ ಗೌರವವಿಟ್ಟು ಕರೆದಿದ್ದೀರಿ ಹಾಗೆ ನಾವು ಬಂದಿದ್ದೀವಿ ಮುಂದೆ ಹೇಗಿರಬಹುದು ಅನ್ನೊ ಯೋಚನೆ ಮಾಡೊಣ ಅಂತ ಹೇಳುತ್ತಾಳೆ ಗೆಳತಿ..ನೋಡೆ ( ವಿಜಯನ ಪತ್ನಿಯತ್ತ ನೋಡುತ್ತಾ..) ನಿಮ್ಮ ಯಜಮಾನರು ತುಂಬಾ ಒಳ್ಳೆಯವರು, ನಿನ್ನ ಮೇಲೆ ತುಂಬಾನೆ ಜೀವ ಇಟ್ಟುಕೊಂಡಿದ್ದಾರೆ, ಅವರು ಹೇಗೆ ಹೇಳುತ್ತಾರೆ ಹಾಗೆ ಕೇಳಿಕೊಂಡು ಹೋಗು, ನಿನಗೇನೆ ಸಮಸ್ಯವಿದ್ದರೆ ನಿನ್ನ ಯಜಮಾನರ ಹತ್ತಿರ ಹೇಳಿಕೊ ಪದೆ ಪದೆ ನಿನ್ನ ಮನೆಯವರನ್ನ ನಿಮ್ಮ ಜಗಳದಲ್ಲಿ ತರಬೇಡ..,ನೀನು ಈಗಾಗಲೇ ಕೆಲವು ವಿಷಯಗಳನ್ನ ಹೇಳಿ ಅವರುಗಳು ಇವರ ದೊಡ್ಡವ್ವನವರಿಗೆ ಹೇಳಿದ್ದು ನಿನ್ನ ಯಜಮಾನರಿಗೆ ಬೇಸರ ಉಂಟು ಮಾಡಿದೆ ಇಂತಹ ಘಟನೆಗಳು ಮತ್ತೆ ಆಗದ ಹಾಗೆ ನೋಡಿಕೊ, ನಿಜ ಹೇಳಬೇಕೆಂದರೆ ನಿಮ್ಮ ಮನೆಯವರಿಂದ ಸ್ವಲ್ಪದಿನ ದೂರವಿರು, ಗಂಡನ ನೆಚ್ಚಿನ ಹೆಂಡತಿಯಾಗಲು ಪ್ರಯತ್ನಿಸು, ಅವನ ಪ್ರೀತಿ ವಿಶ್ವಾಸ ಗಳಿಸು ಬೆರೆಯರ ಬಗ್ಗೆ ಚಿಂತಿಸುವುದು ನಿನ್ನ ಕಾಯಗವಲ್ಲ,ಅವರವರ ಸಂಸಾರ ಅವರೇ ನೋಡಿಕೊಳ್ಳಬೇಕು. ಇಷ್ಟೆಲ್ಲಾ ಹೇಳಿದರು ಅವಳು ಒಂದು ಮಾತಿಗೂ ಸರಿ ಅಂತ ಹೇಳಲೇ ಇಲ್ಲ, ನನಗೆ ನಮ್ಮ ಮನೆಯವರನ್ನ ಬಿಟ್ಟು ಬದುಕಲು ಆಗುವುದಿಲ್ಲ ಅವರೇ ನನಗೆಲ್ಲಾ....ಅಂತಾ ಹೇಳುತ್ತಾಳೆ ಈ ಮಾತುಗಳನ್ನ ಕೇಳಿದ ಗಂಡನಿಗೆ ತಲೆಗೆ ಏರುತ್ತದೆ...ನೋಡಿರಿ ಇವಳ ಗರ್ವ...ಹೇಗೆ ಹೇಳುತ್ತಾಳೆ ಅಂತಾ, ಇವಳಿಗೆ ಗಂಡ ಇದ್ದರು ಸತ್ತರೂ ಏನು ಫರಕ್ ಬೀಳುವುದಿಲ್ಲ ಅಂತ ಹೇಗೆ ಹೇಳುತ್ತಾಳೆ ನೋಡಿ ಅಂದನು...ಪಾಪ ಅವರು ತಾನೆ ಏನು ಹೇಳ್ಯಾರು...ನೀನು ಹಿಂಗೆ ಆಡಿದರೆ ಸರಿ ಹೋಗುವುದಿಲ್ಲ, ನಿಮ್ಮ ಇಬ್ಬರ ಮನೆಕಡೆಯವರನ್ನ ಕೂಡಿಸಿ ಮಾತನಾಡಿ ಅಂತ ಹೇಳುತ್ತಾರೆ, ವಿಜಯನ ಹೆಂಡತಿ ಆಯ್ತು ನಾನು ಕರೆಸುತ್ತೇನೆ ಆದರೆ ನಾನು ಇವತ್ತು ಇಲ್ಲಿ ಇರುವುದಿಲ್ಲ...,ಏಕೆಂದರೆ ನನಗೆ ಇವನ ಮೇಲೆ ಭರವಸೆ ಇಲ್ಲ..ನಾನು ಇಲ್ಲೆ ಇದ್ದರೆ ನಾನೆ ಏನಾದರೂ ಮಾಡಿಕೊಳ್ಳಬಹುದು ಅಂತ ಧಮಕಿ ಹಾಕುತ್ತಾಳೆ.ಹಾಗಿದ್ದರೆ ಹೊರಬಿದ್ದು ಹೋಗು ಅಂತ ಹೇಳುತ್ತಾನೆ,ಅದಕ್ಕೆ ಅವಳು ನಗಲಾರಂಭಿಸುತ್ತಾಳೆ, ಇದನ್ನು ಕಂಡ ಗಂಡನಿಗೆ ಇನ್ನಷ್ಟು ರೇಗಿ ಹೋಗುತ್ತದೆ, ಸಿಟ್ಟು ತಾಳಲಾರದೆ ಒಂದು ಕೆನ್ನೆಗೆ ಬಾರಿಸುತ್ತಾನೆ...ಇವಳು ತನ್ನ ಮಾವನಿಗೆ ಎಲ್ಲಾ ತಯ್ಯಾರಿ ಮಾಡಿಕೊಳ್ಳಿ ಅಂತಾ ಪೋನು ಮಾಡಿ ಗಂಡನ ಮುಂದೆನೆ ಹೇಳುತ್ತಾಳೆ. ಇವಳು ಏನು ಹೇಳಿದಳು ಅನ್ನುವುದು ವಿಜಯನಿಗೆ ತಿಳಿಯದೇ ಹೋಯಿತು. ಅವತ್ತು ಅವಳು ತನ್ನ ತಾಳಿಯ ಬಿಚ್ಚಿ ಎಸೆದು ತನ್ನ ಕಪಟಿ ಮಾವನ ಮನೆಗೆ ಮತ್ತೆ ಮರಳುತ್ತಾಳೆ, ಹೋಗುವ ಮುನ್ನ, ತನ್ನ ಎಲ್ಲಾ ಸಾಮಾನುಗಳನ್ನು ತೆಗೆದುಕೊಂಡು ಹೋಗುತ್ತಾಳೆ, ಮುಂದೆ ವಾಪಸ್ಸು ಬರಬಾರದು ಎಂದುಕೊಂಡು... ಇವಳನ್ನ ಕರೆದು ಕೊಂಡು ಹೋಗಲಲು ಇವನ ಮಾವ ಇವಳ ಗೆಳತಿಯ ಮನೆಗೆ ಬಂದು ಕಾಯುತ್ತಿರುತ್ತಾನೆ. ಹೋಗುವ ಮುನ್ನ, ಇವನಿಗೆ ಒಂದು ಗತಿ ಕಾಣಿಸುತ್ತೇನೆ ಅಂತಾ ಹೇಳಿ ಹೋಗಿರುತ್ತಾನೆ, ಆದರೆ ಈ ವಿಷಯ ವಿಜಯನಿಗೆ ತಿಳಿದಿರುವುದಿಲ್ಲ...ಮತ್ತೆ ಎರಡು ತಿಂಗಳುವರೆಗೆ ಇವರಿಬ್ಬರ ನಡುವೆ ಯಾವುದೇ ಮಾತುಗಳು ನಡೆಯುವುದೇ ಇಲ್ಲ...ಹೀಗೆಯೇ ಸಂಬಂಧಗಳು ಹಳಿಸಿ ಹೋಗಲಾರಂಭಿಸಿದವು....ಹೆಣ್ಣಿನ ಮನೆಯವರು ಇದನ್ನ ಹೀಗೆ ಬಿಡಬಾರದು ಬೇಗ ಮಾತನಾಡಿ ಬೆಗೆ ಹರಿಸಬೇಕು ಅನ್ನುವ ಗೋಜಿಗೆ ಹೋಗುವುದಿಲ್ಲ.., ಸುಮ್ಮನೆ ಮನೆಯೊಳಗೆ ಇಟ್ಟುಕೊಂಡು ಅವಳ ಸಂಬಳವನ್ನು ಉಡಾಯಿಸುತ್ತಾ ಮಜಾ ಮಾಡುತ್ತಿರುತ್ತಾರೆ. ಗಂಡ ತಾನೆ ಹೆಂಡತಿಯ ಬಿಡಲಾರದೇ ಓಡಿ ಬರುವನು ಎಂದುಕೊಂಡು..... ಇವಳು ಮಾತ್ರ ತನಗೆ ಏನೂ ಆಗಿಲ್ಲ ಅನ್ನುವ ಹಾಗೆ ತನ್ನ ಮನೆಯವರ ಜೊತೆ ಸುಖವಾಗಿ ಇರಲಾರಂಭಿಸುತ್ತಾಳೆ.. ಯಾರಾದರೂ ಇಂತಹ ಮನೆಯವರನ್ನ ಹಾಗು ಗಂಡನನ್ನ ಬಿಟ್ಟು ತವರಿನಲ್ಲಿ ಕುಳಿತವರನ್ನ...ನೋಡಿದ್ದೀರಾ ಗೆಳೆಯರೆ...ಇವರ ಮದುವೆಯ ಹಿಂದಿನ ಉದ್ದೇಶ ಇನ್ನು ಮೇಲೆ ತಿಳಿಯುತ್ತದೆ.... ಈ ಮಧ್ಯದಲ್ಲಿ ಇವಳ ಆಫೀಸು ಲಿಲೆಗಳು ಶುರುವಾಗುತ್ತವೆ..... ಒಂದು ಮದುವೆ ಆದ ಹೆಂಗಸ್ಸು ಯಾವ ಮಟ್ಟಕ್ಕೆ ಇಳಿಬಹುದು ಅನ್ನುವುದು ಕಾದು ನೋಡಿ......(ಮುಂದುವರೆವುದು...)
Subscribe to:
Post Comments (Atom)
ಸಾವಿಗೆ ಕಿವಿ ಕೊಟ್ಟಾಗ..!
ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...
-
ಕನ್ನಡಿಯೇ ಮನುಷ್ಯನ ಆತ್ಮೀಯ ಸ್ನೇಹಿತ! ನಾವು ನಕ್ಕರೆ ಕನ್ನಡಿಯೂ ನಕ್ಕು ನಗೆಯ ಹಂಚುವುದು ... ನಾವು ಅತ್ತರೆ , ಅದು ಕೂಡ ನಮ್ಮ ಜೊತೆಯಲೇ ಅಳುವುದು... ನಿನಂತೆಯೇ ನಾನು .....
-
ಹಸಿರು ಮಾನವನ ಜೀವದ ಉಸಿರು ಹಸಿರು ಇದ್ದಾರೆ ಭಾಗ್ಯ , ಹಸಿರು ತರುವುದು ಸೌಭಾಗ್ಯ ಹಸಿರು ಬೆರೆತಿರಲು ಜೀವನ , ಹಸಿರು ಬದುಕಿನ ಪಯಣ ಕಾಡು ಬೆಳೆದರೆ ನಾಡಿಗೆ ಮಳೆ , ಸೋನೆ ಗರ...
-
ಸಣ್ಣ ಕಂದಮ್ಮಗಳ ಹಸಿವು ಕರುಳ ಹಿಚುಕಿ ಹೊಸೆಯುವುದು ಕಣ್ಣ ಹನಿಗಳ ನೋವು ಮನವ ಹಿಂಡಿ ಕದಡುವುದು ಆಡುತ್ತಾ ಕಳೆಯಬೇಕಿದ್ದ ಬದುಕು ಬೀದಿಗಳಲ್ಲಿ ಅರಸಿದೆ ನೆರವು ...
No comments:
Post a Comment