ಧ್ವನಿ ಕೇಳಿಬರುತಿದೆ ...ಧ್ವನಿ ಕೇಳಿಬರುತಿದೆ ..
ಆಗಸದ ತೀರದಿಂದ ...!
ಮಧುರ ಸವಿ ಧ್ವನಿ ಅದು, 
ಮೋಡಗಳ ನಡುವೆ.. 
ಅವಿತು ಕರೆದಿಹುದು ...
ಮಿಂಚಿನ ಆಟಕೆ, 
ಗುಡುಗಿನ ಅಬ್ಬರಕೆ.., 
ಹೆದರಿ ನನ್ನಯ ಕೂಗುತಿಹುದು...
ಮನವು ಕರಗಿ ಆ ಧ್ವನಿಯನ್ನೇ 
ಅರಸುತಿರುವುದು ....!
ಕರಿ ಮೋಡಗಳೇ  ಕಾಡದಿರಿ  ಅವಳನ್ನ ..
ನಿಮ್ಮಯ ಛಾಯೆಯ ತೆರುವು ಮಾಡಿರಿ...!
ಹೃದಯವು ಅವಳನ್ನು ಕಾಣಲು ಬಯಸಿಹುದು ..
ನನ್ನಯ ಪ್ರೇಯಸಿಯ ಬಿಟ್ಟು ಬಯಲಾಗಿರಿ ...!
ಮಳೆಯಂತೆ ವೇಗವಾಗಿ  ಸುರಿದು ಬರಲಿ...  
ನನ್ನೆದೆಯ ಭೂಮಿಯ ಅವಿಚುಕೊಳ್ಳಲಿ ...!

ಹಸಿರ ಮಲ್ಲಿಗೆಹಸಿರ ಮಲ್ಲಿಗೆಗೆ  ತುಂಟ ಹೂ ನಗೆ ,
ಚೆಲುವಿನ ಅಂದಕೆ ಘಮ ಘಮ ಸಂಪಿಗೆ !
ಕಣ್ಣ ಅಂಚಿಗೆ ಕಾಡಿಗೆ ..
ತುಟಿಯ ಮೇಲೆ ಮಾತಿನ ಮಳಿಗೆ ..!
ಕಿವಿಯ ಅಂಚಿಗೆ ತೂಗುವ ತುಗೋಲೆ ...
ಕಂಡ ಮನವು ತೂಗಿದೆ ಉಯ್ಯಾಲೆ ...!
ಶಶಿಯ ವರ್ಣ ಕದ್ದ ಚೆಲುವೆ ...
ದೃಷ್ಟಿಯ ಬೊಟ್ಟು ಹಚ್ಚೆ.. ಕೆನ್ನೆಯ ತುದಿಗೆ  ..!
ತಳಕುವ ಹಾದಿಯಲಿ ನಿನ್ನಯ ಓಟ
ಹುಡ್ಗರ ಕಂಗಳಿಗೆ ಹಬ್ಬದ ಊಟ      
ಮುಂಜಾವಿನ ಬಾಗಿಲಿಗೆ ಪುಷ್ಪಗಳ ತೋರಣ
ದಕ್ಷಿಣ ಒಬ್ಬಟ್ಟಿಗೆ.. ಉತ್ತರದ ಹೂರಣ ..!

ನನ್ನ ಮೊದಲ ಹಾರಾಟ ..!ರೆಕ್ಕೆ ಇರದೇ ಹಾರುವ ಕುತೂಹಲ ,
ಒದಗಿ ಬಂತು ಆ ಅವಸರ ಒಂದು ಸಲ !
ನನ್ನ ಕಛೇರಿಯವರು ಏರ್ಪಡಿಸಿದ್ದರು ಪ್ರವಾಸ
ದೂರದ ಊರಿಗೆ ಹಾರಲು ಕಲ್ಪಿಸಿಕೊಟ್ಟಿದ್ದರು ಅವಕಾಶ
ಮೊದಲ ವಿಮಾನ ಯಾನವದು ನನ್ನದು ..
ಹತ್ತಿ ಕೊಂಡೊಡನೆ ಎದೆ ಢವ ಡವಿಸಿತ್ತು !
ಮೆಲ್ಲನೆ ಸಾಗಿತ್ತು ಉದ್ದನೆಯ ರನ್ ವೆ ಯೊಳಗೆ
ತಿರುಗಿ ನಿಂತಿರಲು ಮತ್ತೊಂದು ಕಡೆ ಇಂದ ,
ಮುನ್ನಿಗ್ಗಿ ಬರುತಿರುವ ವಿಮಾನ ಕಂಡು ಎದೆ ಝಲ್ ಎಂದಿತ್ತು !
ನಿಟ್ಟುಸಿರು ಬಿಟ್ಟೆನು... ಆ ವಿಮಾನ ಕೆಳಗಿಳಿದು ನಮಗೆ ದಾರಿ ಬಿಟ್ಟ ನಂತರ ..
ಸುಯ್ಯನೆ ಶುರುವಾಯಿತು ಜೋರಾಗಿ ಕೂಗುತ್ತ
ವೇಗ ಹೆಚ್ಚಿದೊಡನೆ ರೋಮ ರೋಮವೆಲ್ಲ ಕಂಪನ ,
ಎರಡೇ ನಿಮಿಷದಲ್ಲಿ ಗಾಳಿಯಲ್ಲಿ ತೇಲುತ್ತಿದ್ದೆವು !
ಮರುಳಿ ತಿರುಗಿದಾಗ ಎದೆ ಕಲುಕುವ ಆಭಾಸ
ಊರು, ಕೇರಿ, ಭೂಮಿ, ಇಂದ ಬಲು ಎತ್ತರ
ನನ್ನ ಹೃದಯದಲ್ಲೆಲ್ಲಾ ತುಂಬಿತ್ತು ಸಂತಸ ಅಪಾರ !
ಮೋಡಗಳೆಲ್ಲ ನನ್ನ ಕಾಲ ಕೆಳಗೆ
ಎಂದೋ ಅಂದು ಕೊಂಡಿದ್ದೆ ಬರಬೇಕು ಇ ಗಳಿಗೆ
ಸಂಜೆಯ ಸೂರ್ಯ ಕಿಟಕಿ ಇಂದ ಇಣುಕಿದ
ಜಂಭದಿ ಹೇಳುವೆನು ಇಂದು , ನಾನು ನಿನ್ನ ಸಮಾನ
ಖುಷಿ ಖುಷಿ ಇಂದ ಕಣ್ಣ ಮುಚ್ಚಿ ಲೀನ ನಾದೆನು
ಮಧುರ ಧ್ವನಿಯೊಂದು ಅಲೆಯಾಗಿ ಬಂದಿತು
ಯುವರ್ ವೆಜಿಟೆಬಲ ಸ್ನ್ಯಾಕ್ಸ ಸರ್ ಅಂದಳು
ಪಕ್ಕದಲ್ಲಿ ಬಂದು ನಿಂತು ಗಗನ ಸಖಿ !
ಕೆಂಪು ಉಡುಗೆ ತೊಟ್ಟು ,
ಕೆಂಪನೆಯ ಲಿಪ್ಸ್ಟಿಕ್ಕು ಇಟ್ಟು,
ಕಿಲಕಿಲನೆ ನಸು ನಕ್ಕಿದ್ದಳು ..
ಹುಬ್ಬುಗಳ ಹಾರಿಸಿ ಮುಂದೆ ಸಾಗಿದ್ದಳು !
ಒಂದುಗಂಟೆ ಕಳೆಯುತಿದ್ದಂತೆ
ಮತ್ತೆ ಅದೇ ಮಧುರ ಧ್ವನಿಯೊಂದು ಮೂಡಿತು
ನಿಮ್ಮ ನಿಮ್ಮ ಪೇಟಿಗಳನ್ನು ಕಟ್ಟಿಕೊಳ್ಳಿ
ನಾವು ಇನ್ನು ಭೂ ಸ್ಪರ್ಶಿಸುತ್ತೇವೆ ಎಂದು
ಅಲ್ಲಿಗೆ ನನ್ನ ಮೊದಲ ವಿಮಾನಯಾನ ಮುಗಿದಿತ್ತು !
ಕುತೂಹಲ ನೆರವೇರಿದ ಖುಷಿ
ಕನಸ್ಸು ನನಸಾದ ಸಂತೃಪ್ತಿ ...!

ಕನ್ನಡಿಕನ್ನಡಿಯೇ ಮನುಷ್ಯನ ಆತ್ಮೀಯ ಸ್ನೇಹಿತ!
ನಾವು ನಕ್ಕರೆ ಕನ್ನಡಿಯೂ ನಕ್ಕು ನಗೆಯ ಹಂಚುವುದು ...
ನಾವು ಅತ್ತರೆ , ಅದು ಕೂಡ ನಮ್ಮ ಜೊತೆಯಲೇ ಅಳುವುದು...
ನಿನಂತೆಯೇ ನಾನು ...ನಿನ್ನೊಡನೆ ಎಂದೆಂದೂ ...
ಇದ್ದರು ಜೊತೆಯಲಿ ....ಅಳಿದರೂ ಜೊತೆಯಲಿ...
ಚೂರು ಚೂರಾದರೂ ಕನ್ನಡಿ ...ಬಿಡದು ತನ್ನ ಸ್ವಭಾವವ ..
ಪ್ರತಿಯೊಂದು ಚೂರಿನಲು ನಮ್ಮದೇ ಬಿಂಬವು...
ಬಿಡದೆ ಕಾಡುವುದು ...ಬಿಟ್ಟು ಎಂದೆಂದೂ ಹೋಗದು...
ನಮ್ಮ ಒಂಟಿತನಕೆ ಕನ್ನಡಿಯೂ ಪಾಲುದಾರ ..
ನಮ್ಮ ಬದುಕಿಗೆ ನಿರಂತರ ಜೊತೆಗಾರ..!

ಮೌನರಾಗ

ಯಾವುದೊ ಹಳೆಯ ಕವಿತೆ ಅದು
ನೋವಿನ ಖಾತೆಯ ಹೆಣೆದಿಹುದು
ಬಿಚ್ಚಿಟ್ಟು ಹೇಳದ ಸಂಗತಿಗಳು
ಅವಿತು ಕುಳಿತ ನೆನಪುಗಳು
ಒಡಲು ತುಂಬಿ ಉಕ್ಕಿಹವು
ಹಾಡಲು ಬರಲಾರದು
ಗುನುಗುತಾ ಗುನುಗಲಾರೆನು
ನಿಶಬ್ದದಿ ಹೊರಡುತಿದೆ ಮೌನರಾಗ ...!

ನಮ್ಮ ಸುಮಧುರ ಧಾರವಾಡ ....!ಮಹಾನಗರಗಳ ಜೋಡಿಸುವ ಉದ್ದನೆಯ ರಸ್ತೆಗಳು..
ಸಣ್ಣ ಸಣ್ಣ ಸಿಗ್ನಲ್ಲುಗಳು..
ಟೋಲನಾಕಾ, ಕೋರ್ಟು ,ಜುಬ್ಲಿ ವೃತ್ತಗಳು..
ನಗರ ಸಾರಿಗೆ,ಬೇಂದ್ರೆ ಬಸ್ಸುಗಳು..
ದೊಡ್ಡ,ಸಣ್ಣ,ಹೊಸ ಬಸ್ಸ ನಿಲ್ದಾಣಗಳು..
ಚಂದನೆಯ ಚೆನ್ನ್ನಮ್ಮ.. ಆಜಾದ್ ಉದ್ಯಾನಗಳು..
ತಂಪನೆಯ ತಪೋವನಗಳು..
ಜ್ಞ್ಯಾನ ದೇಗುಲಗಳು..
ವಿಶ್ವ ವಿದ್ಯಾಲಯಗಳು..
ಕವಿಗಳ ತವರು..
ಮಾಳಮಡ್ಡಿಯ ಉಳವಿ ಬಸವಣ್ಣರು..
ನುಗ್ಗಿಕ್ಕೆರಿಯ ಆಂಜನೇಯರು..
ಮಾರಾಟ ಕಾಲೋನಿಯ ದುರ್ಗಾ ದೇವಿಯರು..
ಸುಭಾಷ್ ರಸ್ತೆಯ ಥಾಕೂರ್ ಪೇಡೆಗಳು..
ನವಲೂರಿನ ಪ್ಯಾರಲ,ಮಾವಿನ ಹಣ್ಣುಗಳು..
ಜಿಟಿ ಜಿಟಿ ಮಳೆ ಹನಿಗಳು..
ಸಾಧನಕೇರಿ,ಕೆಲಗೇರಿ,ಎಮ್ಮಿಕೇರಿ..
ಮಳೆಗೆ ತುಂಬಿರುವ ಕೆರೆಗಳು..
ಸುಮಧುರ ಧಾರವಾಡ..
ಇದು ನಮ್ಮ ಧಾರವಾಡ...!

ಪಂಚರಂಗಿ ಪ್ರಭಾವಿತ ....!ಭಾವನೆಗಳ ಹೇಳಲಾಗದ ಹುಡುಗರುಗಳು,
ಅರ್ಥ ಮಾಡಿಕೊಳ್ಳಲಾಗದ ಹುಡುಗೀರುಗಳು,
ಒಡೆದು ಹೋಗುವ ಮನಸುಗಳು,
ಚೂರು ಚೂರಾಗುವ ಹೃದಯಗಳು ,
ಭಗ್ನಗೊಂಡ ಕನಸ್ಸುಗಳು ,
ನೀರೆರೆವ ಕಣ್ಣುಗಳು,
ನಗುವ ಮರೆತ ತುಟಿಗಳು,
ಬೇಸತ್ತ ಮುಖಗಳು,
ನೊಂದ ಜೀವಗಳು ,
ಖಾಲಿ ಹಾಳೆಗಳು,
ಬರಿಯಲು ಬಾರದ ಪದಗಳು,
ಶಾಹಿ ಇಲ್ಲದ ಲೇಖನಿಗಳು,
ಅರ್ಥವಾಗದ ಸಾಲುಗಳು,
ಆದರೂ ಶೋಕ ಕವನಗಳು.

ಜಾತಿಗಳು ಎರಡೇ....!ಮನಸ್ಸು , ಮನಸ್ಸು ಒಂದಾದರೆ ,ಪ್ರೀತಿ ತುಂಬಿ ಬಂದಂತೆ ..!
ಹೃದಯ ಹೃದಯ ಮಿಡಿದರೆ , ಅಂದೇ ಪ್ರಣಯ ಪ್ರಯಾಣವಂತೆ..!
ಇಬ್ಬರಲ್ಲಿ ಇರಲು ಒಬ್ಬರನ್ನೊಬ್ಬರು ಸುದಾರಿಸುವ ಚಿಂತೆ ..!
ಜಾತಿ ಕುಲ ಯಾವುದು ಬರದು ನಮ್ಮ ಹಿಂದೆ ..!
ಜಗದೆಡೆಯೆಲ್ಲ ಇರುವುದು ಎರಡೇ ಜಾತಿ ...!
ಒಂದು ಗಂಡು ಮತ್ತೊಂದು ಹೆಣ್ಣು ಜಾತಿ ...!
ಹೆಣ್ಣೇ ನಿನ್ನ ಜಾತಿಯ ಧರ್ಮ ಪಾಲಿಸು ...!
ಸಂಸಾರ ನಡೆಸುವ ಧರ್ಮ ನನಗೆ ಅರ್ಪಿಸು...!
ಜಗವು ಬೆರಗಾಗುವಂತೆ ನಾವು ಬಾಳೋಣ ...!
ಇಬ್ಬರೂ ಬೆರೆತು ನಾವು ಉನ್ನತಿಯ ಗಳಿಸೋಣ ..!

ನಾ ನಿನ್ನ ಪ್ರೀತಿಸಲೇ ?ನಿನ್ನಯ ನೆನಪು ತುಂಬಿದೆ ಮನವೆಲ್ಲ ,
ನಿನ್ನ ನಗುವೇ ಈ ಹೃದಯವೆಲ್ಲ ,
ನಿನ್ನ ಜೊತೆ ಬಾಳುವ ಆಸೆಯಾಗಿದೆಯೆಲ್ಲ ..
ಹೇಳು ಗೆಳತಿ ನಾ ನಿನ್ನ ಪ್ರೀತಿಸಲೇ ?

ನನ್ನ ಭಾವಗಳ ನಿ ತಿಳಿದಿರುವೆ,
ನನ್ನ ದುಗುಡವ ನಿ ಅರೆತಿರುವೆ,
ನನಗೆ ಧರ್ಯ ನಿ ತುಂಬಬಲ್ಲೆ ,
ಹೇಳು ಗೆಳತಿ ನಾ ನಿನ್ನ ಪ್ರೀತಿಸಲೇ ?

ನನ್ನ ಕೋಪಕೆ ನಿ ಸಹನೆ ತೋರುವೆ,
ನನ್ನ ಒಂಟಿತನವ ನಿ ದೂರೆರೆದೆ ,
ನಾ ನಿನ್ನ ಪೀಡಿಸಿದರೂ ನಿ ಒಲವ ತೋರಿದೆ ,
ಹೇಳು ಗೆಳತಿ ನಾ ನಿನ್ನ ಪ್ರೀತಿಸಲೇ ?

ನಿನ್ನನ್ನು ಮನತುಂಬಿ ಪ್ರಿತಿಸುವೇನು..
ನಿನ್ನ ಪ್ರತಿ ಹೆಜ್ಜೆಗೂ ನಾ ಪ್ರೇರೆಪಿಸುವೆನು..
ನಮ್ಮ ಆ ಚೆಲುವ ಬಾಳಿಗಾಗಿ ನಾ ದುಡಿವೇನು ..
ಹೇಳು ಗೆಳತಿ ನಾ ನಿನ್ನ ಪ್ರೀತಿಸಲೇ ?

ಹೇಗೆ ಬಿನ್ನಹಿಸಲಿ ನನ್ನ ಪ್ರೀತಿ ..?ಹೇಗೆ ಬಿನ್ನಹಿಸಲಿ ನನ್ನ ಪ್ರೀತಿ ..?
ತಿಳಿಯುತ್ತಿಲ್ಲ ಅದನ್ನು ಅರ್ಪಿಸುವ ರೀತಿ..
ಮನದಲ್ಲಿ ಮೌನ ಕಾಡಿಹುದು,
ಮಾತುಗಳೇ ಹೊರಡದೆ ನಿನ್ನನ್ನೆ ನೋಡಿಹುದು..
ನಿನ್ನ ಇ ಕಂಗಳಲ್ಲಿ ನಾ ಲಿನವಾದೆನೆ ..
ನಿನ್ನ ಸರಳ ಸ್ವಭಾವಕೆ ಸೋತು ಹೋದೆನೆ ...
ನಿನ್ನ ಕೆಂದಾವರೆ ತುಟಿಗಳು ಅರಳಿ ..
ಮುತ್ತಿನ ನಗು ಮಳೆಗರಿಯಲಿ..
ಮತ್ತೆ ಮುಂಗಾರು ಚುರುಕಾಗಿ ..
ನನ್ನ ಪ್ರೀತಿಯ ಹನಿಗಳು ನಿನಗೆ ಅರಿಯುವಂತಾಗಲಿ...!

ಮನಸಿನ ಕದ ..!ಮನಸಿನ ಕದವ ತಟ್ಟಿರುವೆ ನೀನು,

ಅತಿಥಿಯೇ ನಿನ್ನ ಆದರಿಸಿಕೊಂಡೆನು ನಾನು !

ನಿನ್ನ ಪಾದ ಸ್ಪರ್ಶದಿಂದ ಮೂಡಿಹುದು ಹೊಸ ಕನಸು,

ಆ ಕನಸುಗಳಿಗೆ ತುಂಬುತ್ತಿರುವೆ ನಿ ಹುಮ್ಮಸ್ಸು !

ನಿನ್ನ ಮನದಂಗಳಲ್ಲಿ ಆಡುವ ಆಸೆ ಎನಗೆ..,

ಬಾ ನನ್ನ ಆವರಿಸು ...ವಿಶಾಲ ಹೃದಯವಿದು ತೆರೆದಿಹುದು ನಿನಗೆ ..!

ಹತಾಶಯದ ಬದುಕು ..!ನೆಮ್ಮದಿ ಇಲ್ಲದ ಬದುಕು ,
ಅಡಗಿ ಹೋಯಿತು ಮೆರಗು ,
ಬರಿದಾದ ಹಾಳೆ ತುಂಬಿ ಕೊರಗು
ಜೀವಿಸುವ ಅರ್ಥವೇ ಕಾಣದು ಎನಗೆ ...!

ಕಿತ್ತು ತಿನ್ನುವ ರಣ ಹದ್ದುಗಳು
ಸತ್ತ ಮನಸ್ಸಿಗೆ ಯಾವ ಗುಟ್ಟು..
ಕಮರಿ ಹೋಯಿತು ಬಾಳು..
ಜೀವವೇ ನಿ ಹೇಳು ...ಸಾವು ಕಾಣದೆ ಇನ್ನೂ ನಿನಗೆ ?

ಕಲ್ಪನೆಯ ಬಳ್ಳಿ...!ನನ್ನ ಕಲ್ಪನೆಯ ಬಳ್ಳಿ
ನಿನ್ನ ಮನದಲ್ಲಿ ಅರಳಿ
ಹೃದಯ ಕದಿಯುತ್ತಿರುವೆಯಾ ಕಳ್ಳಿ ..?

ಮಾತು ಮಾಣಿಕ್ಯ ನಡೆಯು ಸರಳ
ನನ್ನ ಮನ ಮೆಚ್ಚುವ ನಿನ್ನ ಗುಣ
ಬೆಲೆ ಕಟ್ಟಲಾಗದು ಯಾವ ಹಣ ..?

ನನ್ನ ಬಿಸಿಲ ಧಗೆಯ ಆರಿಸಿ
ನಿನ್ನ ಉಸಿರು ಅದಕೆ ಬೆರೆಸಿ ..
ಒಲವಿನ ಕವನ ಬರೆಯಲು ಕುಳಿತೆಯಾ ..?

ಬಾಹ್ಯ ಸೌಂದರ್ಯ ಜೀವನ ಸಾಗಿಸದು ..
ನಂಬಿಕೆ ವಿಶ್ವಾಸವೇ ಬಾಳ ಬೆಳಗುವುದು ..
ಬಾಳುವೆ ಎಂಬ ಛಲವಿದೆ, ನನ್ನೊಡನೆ ಕೈ ಜೋಡಿಸುವೆಯಾ ..?

ಶುಭ ಮುಂಜಾವು !ನಸುಕಿನ ಕೆಂಪನೆಯ ಮುಗಿಲು,
ಗೌರವ ವರ್ಣದ ಒಲವು ,
ಇಬ್ಬನಿಯ ತಣ್ಣನೆಯ ಮುಂಜಾವು ,
ಕಿವಿಗಳ ನಿವಿರೇರಿಸುವ ಚೆಲುವು,
ಹರ್ಷದಿಂದ ಕುಣಿಯುತಿದೆ ಮನವು,
ಸೂರ್ಯ ಆಗಸದಡಿ ಮೂಡುವ ಮೊದಲು ,
ನಿಮಗೆ ಸಿಹಿ.. ಸವಿ.. ಶುಭ ಮುಂಜಾವು !

कडुवा सच्च...!!!
सच्च केहेने वालों को लोग मानते नहीं
सच्चाई की रास्ते में कबी फूल खिलते नहीं
दर्द भरी सच्चाई में कोई जीना चाहता नहीं
झूठे लोगों की ही दरबार है हर जगह
बेईमानी की हर जगह कदर
जूट की साम्राज्य में सत्य का निर्नाम
कहाँ गया वो गांधीजी का आदर्ष
सज्जन लोग कर रहें संघर्ष
कब होगा इन जैसे लोगों का नाश
कब मिलेगा इंसानियत को आस ..!

ಭಾರತಿಯ ನಾರಿ...!!!

ಸೀರೆ ಉಟ್ಟ ನಾರಿ ಈಗ ಸಮಾಜದಿಂದ ಪರಾರಿ  
ಕಳೆದುಕೊಂಡರು ಆ ಗೌರವ, ಹೆಣ್ಣಿಗೆ ಇದ್ದ ಸ್ಥಾನ  ಮಾನ.!
ಲಂಗ ದಾವಣಿ ಎಲ್ಲಾ ಮಂಗ ಮಾಯ,
ಬಿಗಿಯುವ ಟಿ-ಶರಟುಗಳು ಅಪ್ಪಿಕೊಳ್ಳುವ ಜೀನ್ಸು,
ನಾಚಿಕೆ ಮರ್ಯಾದೆಗಳ ಮೆಟ್ಟಿ  ಹೊರಟರೋ !
ಹಣೆಯ ಬೊಟ್ಟು ಮಾಯವಾಯಿತು
ತುಟಿಗೆ ಬಣ್ಣ ಬಂದು ಸೇರಿತು !
ಮೊಗದ ಸೊಗಸ್ಸು ಕಣ್ಣ ಮರೆಯಾಯಿತು 
ಕೃತಕ ಸೌದರ್ಯ ರಾರಾಜಿಸಿತು ! 
ಮುಡಿಯ ಮಲ್ಲಿಗೆ ಕಾಣದಾಯಿತು
ಹೈ ಹೀಲ್ಸ ಮೆಟ್ಟಿ , ಇಟ್ಟ  ಹೆಜ್ಜೆಯು ನಡಿಗೆಯಾಯಿತು ! 
ಹೆಣ್ಣಿನ ಅಂದ ಸಿರೆಯೋಳಗಿದ್ದಾಗ ಇತ್ತು ಚಂದ,
ಇತ್ತು ನಮ್ಮಲ್ಲಿಯೂ ಪೂಜ್ಯ ಭಾವನೆಯ ಬಂದ
ಭಾರತಿಯ ನಾರಿ ಈಗ ವಿದೇಶಿ ಸಂಸ್ಕೃತಿಯ ರೂವಾರಿ..!

ऐसा क्यूँ है घूम शुम..?बादल छाया है तो सूरज हुवा गुम ..
ना है पवन तो हवा हुवा है थम..
फिजा की ज़ोर थम्गायी बरसात की शोर से ..  
हर गली का शोर जो अभी आहट बनगई...
दूर दूर के राह पे सन्नाटा चागई  ..! 
दर्द भरा  है  जैसे ...ऐसा क्यूँ है घूम शुम..?

ನನ್ನ ಮನದ ಕಾಮನಬಿಲ್ಲು....!!


ಮನವ ಗೆದ್ದಿಹೆ ನೀನು
ಹೃದಯ ಕದ್ದಿಯೇ ನೀನು ..!
ತಣಿಸಿದೆ ಮೈ ಯನ್ನ
ಮಾತು ಮೈ ಮರೆಸಿದೆ ನನ್ನ ...!
ಕಂಬನಿ ಹನಿ ಅದು ಮಾರ್ಪಟ್ಟಿಹುದು
ನಗೆಯ ಹನಿಯಾಗಿ ಬೇರ್ಪಟ್ಟಿಹುದು...!
ಅಳಲು ಮರೆಸಬಲ್ಲೆ ನೀನು.,
ಅಕ್ಕರೆಯ ಮೂಡಿಸುತ್ತಿರುವಳು ನೀನು..!
ನಯನ ನಿದ್ದ್ರಿಸುವ ಮುನ್ನ
ನೆನೆಯುತ್ತಿರುವುದು ನಿನ್ನ ..!
ತವಕ ಉಕ್ಕುತ್ತಿಹುದು .,
ಮೋಹಕ ಆವ್ಹಾನಿಸುತ್ತಿಹುದು ..!
ಬಾಳ ಜ್ಯೋತಿ ಅದು ..,
ಬೆಳಗಿಸುವ ಎಣ್ಣೆಗಾಗಿ ತಪಿಸುತ್ತಿಹುದು ..!
ಗಂಗೆಯೇ ಧರೆಗೆ ಇಳಿದಂತೆ
ಹಸಿರು ವನಶ್ರಿ ನಡುವೆ ಶ್ವೇತ ಸೀರೆ ಉಟ್ಟಂತೆ..!
ಕಣ್ಣ ಮನ ಸೆಳೆಯುತ್ತಾ ನಿ ನಿಲ್ಲು.,
ಬಯಸುತ್ತ ನಿನ್ನೆ ...ಕಾದಿಹುದು... ನನ್ನ ಮನದ ಕಾಮನಬಿಲ್ಲು...!!

ಬಾಳೆಂಬ ರಂಗೊಲಿಯಲಿ....ಬಣ್ಣ ತುಂಬುತ್ತ ನಿ ಕುಳಿತೆ ..!ಬಾಳೆಂಬ ರಂಗೋಲಿಯಲ್ಲಿ..ಚುಕ್ಕಿ ಇಟ್ಟಂತೆ ನಿ ಬಂದೆ.,
ಅಕ್ಕಿಗಳ ಚುಕ್ಕಿ ಜೋಡಿಸುತ್ತ ರೇಖೆಗಳ ಬರೆದೆ.,
ಅಂಕೋ..ಡೊoಕೋ .....ಸರಳ ರೇಖೆಯೋ....,
ಎಲ್ಲ್ಲ ರೇಖೆಗಳು ಸೇರಿ ಚಂದದೊಂದು ರಂಗೋಲಿ..,
ಆ ಚಿತ್ರಕ್ಕೆ ಜೀವ ತುಂಬಿದಂತೆ...ಪ್ರೀತಿ ಎಂಬ ಬಣ್ಣ ತುಂಬುತ್ತ ನಿ ಕುಳಿತೆ ,
ಕಮರಿದ ನನ್ನೀ ಬಾಳನ್ನು ಬೆಳಗುವಳು ನೀನೆ.., ಎಂಬುದ ನಾ ಅರಿತೆ..!

ತುಂಬಿ ಬಿಡು ನಿ ನನ್ನ .....!!!ಸೊಬಗನ್ನು ತುಂಬುವ ಸೂರ್ಯನ ಹಾಗೆ
ಬೆಳದಿಂಗಳನ್ನು ಚೆಲ್ಲುವ ಚಂದ್ರನ ಹಾಗೆ
ಸಂಗೀತ ತುಂಬುವ ವಾದ್ಯಗಳ ಹಾಗೆ
ಹೂಗಳ ತುಂಬುವ ಪರಿಮಳದ ಹಾಗೆ
ಸ್ವರವನ್ನು ತುಂಬುವ ಚಿಲಿಪಿಲಿಗಳ ಹಾಗೆ
ಹೃದಯವನ್ನು ತುಂಬುವ ಮಿಡಿತದ ಹಾಗೆ
ಕೆರೆ, ನದಿಗಳನ್ನು ತುಂಬುವ ಮಳೆ ಹನಿಗಳಂತೆ
ತುಂಬಿ ಬಿಡು ನಿ ನನ್ನ ...ಪ್ರೀತಿಯ ಹುಳುವಿನಂತೆ ....!!!

ಆ ಹೆಸರಿಗೆ .......ಕಳಂಕ ನೀನು...!!!
ತನಗಾಗಿ ಬಾಳದೆ ತನ್ನವರಿಗಾಗಿ ಬೆಳಗುವುದು ದೀಪ ,
ಕತ್ತಲೆಯ ಬಡಿದೋಡಿಸಿ ಬೆಳಕನ್ನು ಚೆಲ್ಲುವುದು ದೀಪ .!
ತನ್ನನ್ನೇ ಸುಡುತ್ತಾ ತನ್ನವರಿಗಾಗಿ ಶ್ರಮಿಸುವುದು ದೀಪ
ನಂಬಿ ಪ್ರೀತಿಸಿವವರನ್ನು ಕಾಪಾಡುವುದು ದೀಪ,
ಇದ್ದ ಮನೆಗೂ, ಹೋದ ಮನೆಗೂ, ಬೆಳಗುತ್ತದೆ ದೀಪ .!
ಆ ದೀಪದ ಹೆಸರಿಗೆ ಕಳಂಕ ತಂದಂತೆ ನಿ .....,
ಪ್ರೀತಿಯ ಚಿಲುಮೆ ಹಚ್ಚಿ ನಿ ಬೆಳಗುವ ಬದಲು ..,
ಅಹಂಕಾರ, ನಂಬಿಕೆ ದ್ರೋಹ ಮೆರೆದು,
ಗಂಡ, ಮನೆ ಮಂದಿಯ ಮನಸ್ಸಿಗೆ ಬೆಂಕಿ ಹಚ್ಚಿ ಹೋದಳು.!
ನೊಂದವರ ಶಾಪ ನಿನಗೆ ಎಂದೆಂದಿಗೂ ತಪ್ಪದು...!!!

ಹಸಿರು ಅಂದ ...ಹಸಿರೇ ಚಂದ ..!!
ಮೋಡ ಮುಸುಕಿದೆ ಇಂದು ಜಗವೆಲ್ಲ
ಜಡಿ ಮಳೆ ಬಿದ್ದ ಹನಿಗಳಿಂದ ಭೂಮಿಯಲ್ಲ ಹಸಿರು
ಹಸಿರು ಕೊಸರಿಕೊಂಡಂತೆ ಗದ್ದೆ ಕಣಿವೆಗಳೆಲ್ಲ
ಹಸಿರ ಉಟ್ಟ ಪೈರು , ಹಸಿರ ಹೊತ್ತ ತೇರು
ಹಸಿರ ಬಸಿರ ಜಾತ್ರೆಯಲಿ ಮನಸ್ಸು ಕೂಡ ಹಚ್ಚ ಹಸಿರಾಗಿದೆಯೆಲ್ಲ
ಕೆರೆಯ ಮೇಲೆ ಪಚ್ಚೆ ಹಸಿರು, ಬಂಡೆಗಳ ಮೇಲೆ ಪಾಚಿ ಹಸಿರು
ಹಸಿರ ವನಶ್ರೀ ನಡುವಿನಲ್ಲಿ ಕಪ್ಪು ಹೆದ್ದಾರಿ ಹಾದಿಹೆಯಲ್ಲ
ತೆಂಗಿನ ಗರಿಯ ಹಸಿರ ನಡುವೆ ಕೋಗಿಲೆ ಅದು ಕೂಗುತಿಹುದು
ತಿಳಿಯ ಹಸಿರ ಗಿಳಿರಾಮ ಕೂತು ಹಣ್ಣ ಸವೆದಿಹನಲ್ಲ
ಪ್ರಕೃತಿಯ ಹಸಿರು ತಂತು ... ಇಂದು ಧರೆಗೆ, ಅಂದ ಚಂದ ..!

ಗುಲಾಬಿಗಳ ನಡುವೆ ಸೂರ್ಯಕಾಂತಿಮುಳ್ಳಿನ ಕಂಟಿಯ ನಡುವೆ, ನಸು ನಗುವ ಸೂರ್ಯಕಾಂತಿ 
ಮಂಜು ಬಿದ್ದ ಹನಿಗೆ ಮಿಂಚಿದೆ ಕಣ್ಣ ಕಾಂತಿ.!
ನಲಿವ ಗುಲಾಬಿಗಳು ನಿನ್ನ ತುಟಿ ಸವರಿದಂತೆ ..
ಮುಳ್ಳಿನ ಹಣಗೆ ನಿನ್ನ ಕೇಶ ಬಾಚಿದಂತೆ .!
ಮನದ ಭಾಷೆಯನಾಡಿ ನಿ ಹೃದಯ ಕದ್ದಂತೆ ..
ನಗುವ ಗುಲಾಬಿಗಳ ನಡುವೆ ನಿ, ಕಾಯುತ ನಿಂತೆ.!  
ಕೆಂಪು ಪಕಳೆಯ ಹಾಸಿಗೆ ಹಾಕಿದಂತೆ ..
ನವ ವಧುವು ನಿನಾಗಿ .....ನನ್ನ ಸನಿಹಕೆ ಕರೆದಂತೆ...!!!

********ಭಾವಪ್ರಿಯ *********

ಪ್ರಕೃತಿಯ ಸೊಬಗು..!


ಮೇಘ ಮಾಯೆಗೆ ಒಡಲು ತುಂಬಿ, ಸಂತಸದ ಶಬ್ದ
ಜಿಣು ಜಿಣುಗೊ ಹನಿಗೆ ಇಂದು, ಜಿಣುಗೂಡೊ ಹಬ್ಬ
ಆಫೀಸಿನ ಕಾಜಿನ ಕಿಡಕೀಯ ಮೇಲೆ ಮಳೆ ಹನಿಯ ದಿಬ್ಬ .

ಸೂರ್ಯನಿಂದು, ತನ್ನ ಕೆಲಸಕೆ ಗೈರು ಹಾಜರಿ.!
ಭೂಮಿಗಿಂದು ಮಳೆಯ ಜೋತೆಯಲಿ, ಗಾನ ಲಹರಿ..
ಚಂದ್ರನಂತೂ ನಾಳೆಯ ತನಕ.. ನಿದ್ರೆಯಲ್ಲಿ ಸುವಿಹಾರಿ.

ಹಕ್ಕಿಗಳು ತಮ್ಮ ಗೂಡಲ್ಲಿ ಕ್ಷೇಮ
ಗಿಡ ಮರಗಳೇ ಅವುಗಳಿಗೆ ವಿಶ್ರಾಂತಿ ಧಾಮ..!
ಸತಿ ಪರಿವಾರದೊಡನೆ ಹಂಚಿಕೊಂಡಾವ ಪ್ರೇಮ.

ಮಳೆಯ ಸಿಂಚನದಿಂದ ಇಂದು ಭೂಮಿಯೆಲ್ಲಾ ಹಸಿರು
ಧರೆಯ ಎಲ್ಲಾ ಹೃದಯಗಳಿಗೆ ನವಿರು ಹಚ್ಚನೆಯ ಚಿಗುರು
ಮನವು ಉಲ್ಲಾಸಗೊಂಡಿದೆ ಕಂಡು ಪ್ರಕೃತಿಯ ಸೊಬಗು..!

- ಭಾವಪ್ರಿಯ

ಸೌಂದರ್ಯ ನಶಿಸುವ ತನಕ .......!


ಕಣ್ಣ ಮಿಂಚು ಮೊಸಮಾಡಿತು
ನಗುವ ಅಂಚು ಕುಕ್ಕಿ ತಿಂದಿತು
ಮೋಹಿನಿಯ ಮಾಟವದು
ತಿಂಗಳು ಕಳಿದಂತೆ ಜಾರಿತು
ವರ್ಷ ತುಂಬದೆ ಹಾರಿತು
ಧನ ಪಿಶಾಚಿ ಅದು
ಮೋಹ ವಂಚಕಿ ಅವಳು
ಕಾಮ ಅವಳ ಕಿಚ್ಚು
ಸೌಂದರ್ಯ ನಶಿಸುವ ತನಕ
ಮೂಡಲಾರದು ಅವಳಿಗೆ ಅರಿವು ..!

ಹೃದಯ ಕಳ್ಳರ ಚಿಂತೆ......ತಪ್ಪೀತೆ ಮೋಸಗಾರರ ಸಂತೆ..???

ಹುಡುಗರ ಮನಸ್ಸು ಹಗುರ ಹೂವ ..,
ಹುಡುಗೀರ ಅಂದಕ್ಕೆ ಅವರ ಮೋಹ ..!
ಹುಚ್ಚು ಹರೆಯ ವಯಸ್ಸಿನ ಪ್ರೀತಿ ...,
ಮಂಕು ಮಾಚಿದೆ ಅದೇ ಪ್ರೀತಿಯ ರೀತಿ ..!
ಹುಸಿ ಬಾಲೆಯ ನಗು, ಮರುಳಾಗಿ ಹೋದ ಮಗು ..!
ಅವಳ ನಡುಗೆಯೇ ನೆನೆಯುತ , ಜಾರಿ ಬೀಳುವನ ಇ ಯುವಕ ..!
ಕಪಟ ನುಡಿಗಳಿಗೆ ಸೋತ , ಸುಳ್ಳಿನ ಸುಳಿಯಲ್ಲಿ ನಿರತ ..!
ಹೂವುಗಳೇ ಇರಬಹುದು ಅವರು, ಕಿವಿಗಳಲ್ಲಿ ಹೂವುಗಳು ಇಡಬಹುದು ..!
ಹೃದಯವಂತರೆ ನಿಮಗೊಂದು ಸಲಹೆ ...!!!
ಹೃದಯ ಕಳ್ಳರೇ ಆಲಿಸಿ ... ತಪ್ಪಲಾರದು ನಿಮಗೆ ಮೋಸಗಾರರ ಸಂತೆ ...!

ಮನದಾಳದ ಮುಗಿಲು ...!


ಮನದಾಳದ ಮುಗಿಲು ...,
ಹೃದಯ ಮೀಟುವ ಕಡಲು ....!
ಕನಸ್ಸಿನ ಅಲೆ ತೆವಳಿ ದಡಕೆ ಬಡಿಯಲು,
ಮುಗಿಲ ಚೆಲುವು ಆಗಸದಡಿ ಹಾರಲು,
ಬೃಹತ್ ಬ್ರಹ್ಮಾ ೦ಡವಿದು ವಿಶಾಲವಿಹುದು..!
ಪದಗಳಿಗೆ ರೆಕ್ಕೆ ಪುಕ್ಕವ ಬರೆದು,
ಹಕ್ಕಿಯಂತೆ ಹಾರಿಸಲು ಬಹುದು,
ಮನದ ಆಸೆಗಳ ಅಡಗಿಸಬಾರದು,
ಅಕ್ಕರೆಯ ಹೃದಯಕೆ ಸಕ್ಕರೆಯ ಮಾತು,
ಕಹಿಯ ನುಂಗಿ, ಅಳಸಿ, ದೂರ ತೀರವ ಸೇರಲೇ ಬೇಕು !

ನಮ್ಮ ಕಾರುಗಳು ....!!!


ಬೀಟ್ ಚೊಲೋ ಐತಿ ನೋಡಾಕ,
ಜಾಗ ಬಹಳ  ಇಲ್ಲ ಕೂಡಾಕ .!
ಸ್ಪಾರ್ಕ್  ಬೀದಿಗೆ  ಬಂದರೆ,
ಅನ್ಯರಿಗೆ ಬಹಳ ತೊಂದರೆ !
ತವೇರ ನಮ್ಮ ಚಿಲುಮೆ,
ಬೃಹತ್ ಸಂಸ್ಥೆಗಳಿಗೆ ಇದರ ಮೇಲೆ ಒಲುಮೆ ! 
ಆಪ್ಟ್ರಾ ನಮ್ಮ ವಿಶಾಲ ವಾಹನ,  
ಬಾಳಲ್ಲಿ ತರುವುದು ವಿಲಾಸಿ ಜೀವನ ! 
ಕ್ಯಾಪ್ಟಿವ ಬಲು ಜೋರು, 
ಇದು ಬರಿ ದೊಡ್ಡವರ ಕಾರು ! 
ಕ್ರುಜು ಕಂಡರೆ ಜನರು ಎನುತಿಹರು,
ಅಲ್ಲಿ ನೋಡು... ರಾಜರು ಬರುತಿಹರು  .!  

ನನ್ನ ಮನದಲ್ಲಿ ಕಾಡುವ ಪ್ರಶ್ನೆಗಳು ...!!!

ಚಂಚಲ ಮನಸ್ಸು ನನ್ನದು,
ಚಟ ಪಟನೆ ಮಾತನಾಡಲು ಬಲ್ಲದು ..
ನೂರೆಂಟು ವಿಷಯವ ಮನದ ಬಲೆಯಲ್ಲಿ ಬೆಸೆದು ,
ತಿರುಗಿ ತಿರುಗಿ ಆದದ್ದನ್ನೇ ನೆನೆಯುವುದು ..!
ಯಾಕೆ ಇ ಮನಸ್ಸು ಇಸ್ಟೊಂದು ನಿಗೂಡ..?
ಯಾಕೆ ಇ ಮನಸ್ಸು ಪಾದರಸದಸ್ಟು ಚಂಚಲ ?
ವಿಷವೆಂದು ತಿಳಿದರೂ, ಕುಡಿಯುವ ಬಯಕೆ ಏಕೆ ನಿನಗೆ ...?
ಭಾವನೆಗಳೇ ಇಲ್ಲದ ಕಟುಕಿಗೆ ಏಕೆ ನಿನ್ನ ಒಲವು ..?
ಪ್ರೀತಿಯೇ ಇಲ್ಲದ ಕಿರಾತಕಿಯ ಮೇಲೆ ನಿನ್ನಲೇಕೆ ಅನುಕಂಪ ?
ಪ್ರಾಣವ ತಗೆಯುವ ಕೆಟ್ಟ ಹೆಂಗಸಿಗೆ ಏಕೆ ನಿನ್ನಲ್ಲಿ ಸಹಾನುಭೂತಿ ?
ಮರೆತು ಬಿಡು ಓ ಮನವೇ... ಅದು ಒಂದು ಕೆಟ್ಟ ಕನಸ್ಸೆಂದು ...!
ಮರೆತು ಬಿಡು ಆ ಹೆಂಗಸನ್ನ.... ಅದು ಒಂದು ಕೆಟ್ಟ ಮೃಗವೆಂದು..!
ಮನುಷ್ಯರಿಗೆ ಪ್ರಾಣಿಗಳಿಗೆ ವ್ಯತ್ಯಾಸ ತಿಳಿಯದ ರಾಕ್ಷೆಸಿ ಎಂದು ...!
ಆ ಜೀವಕೆ ಪ್ರೀತಿಯ ಬೆಲೆಯೇ ತಿಳಿದಿಲ್ಲ...ಸ್ವಾರ್ಥತೆ ಮೆರೆಯುವ ಆ.......!
ಮರೆತು.. ಮರೆತು.., ಹಾಯಾಗು ಓ ನನ್ನ ಮನವೇ ......!!!

ಎಲ್ಲಿರುವೆ ಮನವ ಕಾಡುವ ರೂಪಸಿಯೇ ?

ಎಲ್ಲಿ ಅಡಗಿರುವೆ ನನ್ನ ಚೆಲುವೆ
ಮನವ ಕಾಡಿ ಕಾಡಿ ಓಡಿರುವೆ
ಕ್ಷಣ ಕ್ಷಣಕೆ ನೆನಪಾಗುವೆ
ಮುಖ ತೋರದೆ ನಿ ಮಾಯವಾಗುವೆ
ಗಾಳಿಯ ಹಾಗೆ ಮೈಯ್ಯ ಸವರಿ ಕೈಗೆ ಎಟುಕದೆ ಹಾರಿ ಹೋದೆ
ಗುಡುಗು ಸಿಡಿಲು ಬಡಿದರು ಮಳೆ ಬಾರದೆ ಹೋಗಿದೆ
ನಿನ್ನ ಕಾಣುವ ಬಯಕೆ ಹೆಚ್ಚಾಗಿದೆ
ಬಳಲುವ ಬಳ್ಳಿಗೆ ಕಿಚ್ಚು ಹಚ್ಚ ಬೇಡ
ಪ್ರೀತಿಸುವ ಹೃದಯವಿದು ದೂರ ತಳ್ಳಬೇಡ
ಮನವ ಕಾಡುವ ರೂಪಸಿಯೇ....ಇ ಉಸಿರು ನಿನಗಾಗಿಯೇ...!!!
**************ಭಾವಪ್ರಿಯ *************

ಮತ್ತೆ ಹಚ್ಚುತ್ತಿರುವೆ ನಾ ಕವನಗಳ ಬೆಳಕ..!!!


ಭಾವನೆಗಳು ಮೊಳಗಲು ಭಾವನ
ಕವಿತೆಯ ಸಾಲುಗಳಿಗೆ ಕವನ
ತಂತಿಗಳ ಮಿಡಿತವೆ ಪ್ರೇರಣ
ಮನವ ಸಂತೈಸಲು ಮನೋರಮಾ
ಕವನಗಳು ಹುಟ್ಟಲು ಬೇಕು ಸ್ಪೂರ್ತಿ
ಅದರೊಳಗೆ ಅಡಿಗಿರಬಹುದು ಕೀರ್ತಿ
ನನ್ನ ಪದಗಳಿಗೆ ಒಲಿದ ನೂರೆಂಟು ಲಲನೆಯರೇ
ಪಾದಾರ್ಪಣೆ ಮಾಡಿ ಈ ಕವಿ ಹೃದಯದಲ್ಲಿ ...ಮತ್ತೆ ಹಚ್ಚುತ್ತಿರುವೆ ನಾ ಕವನಗಳ ಬೆಳಕ.

ದೂರ ದೃಷ್ಟಿ....!

ಅರ್ಜುನನು ಗುರಿ ಇಟ್ಟದ್ದು ಕಣ್ಣಿಗೆ
ತಪ್ಪಲಿಲ್ಲ ಅವನ ಗುರಿ ಕಿರೀಟಕ್ಕೆ ಏರಿಸಿಕೊಂಡ ಮತ್ತೊಂದು ಗರಿ
ಭೀಮನ ಬಲವನ್ನು ಕಂಡವರಿಲ್ಲ
ಬಡಿದು ಬಂಟರ ಮೂಳೆಗಳ ಮುರಿದನಲ್ಲ
ಕೃಷ್ಣನ ಚಾತುರ್ಯ ಜಗತ್ತ ಪ್ರಸಿದ್ದ
ಅವನಲ್ಲಿತ್ತು ಪಾಂಡವರ ಗೆಲ್ಲಿಸುವ ದೃಷ್ಟಿ
ಮನುಷನಲ್ಲಿ ಇರಬೇಕು ದೂರ ದೃಷ್ಟಿ
ಅದನ್ನು ಸಾದಿಸಿದಾಗಲೇ ಅವನಿಗೊಲಿವುದು ಪುಷ್ಪ ವೃಷ್ಟಿ ..!
ಜೀವನದಲ್ಲಿ ಮುನ್ನುಗ್ಗಲು ಬೇಕು ಧ್ಯೇಯ ,ಧೈರ್ಯ, ಎಲ್ಲವನು ಸಾಧಿಸಲು ಪಡಬೇಕು ಶ್ರಮ..!

ಮುಂಜಾನೆಯ ಮಳೆ ...!!


ಬೆಂಗಳೂರಿನಲ್ಲಿ ಮುಂಜಾನೆಯ ಮಳೆ ಹನಿಯ ಸಿಂಚನ
ಬಾಗಲಿನ ಕಸ ತೆಗೆದು , ಅಂಗಳದಲ್ಲಿ ರಂಗೋಲಿಯ ತೋರಣ
ತಂಪನೆಯ ಗಾಳಿಗೆ ತೇಲಿ ತೂಗಿ ನಲಿವ ತೆಂಗಿನ ಗರಿಯ ನರ್ತನ
ಗೂಡು ತೊರೆದು ಹಕ್ಕಿಗಳು ಬಾನಿನೊಳಗೆ ಪಲಾಯನ
ಕೋಗಿಲೆಯ ಕುಹೂ ಕುಹೂ ಮೂಡಿಸಿದೆ ಮನದಲ್ಲಿ ಗಾಯನ
ದಿನಗಳು ಹೀಗೆ ಸಾಗಲಿ ತುಂಬುತ್ತ ನವ ಚೇತನ..!

***************ಭಾವಪ್ರಿಯ*************

ಬೇಕಾಗಿದ್ದರೆ...!

ವಿಧ್ಯಾರ್ಹತೆ : ಹೆಚ್ಚು ಕಲಿತವಳಿರದಿದ್ದರು ಪರವಾಗಿಲ್ಲ ,
ಭುಧ್ಧಿವಂತಳಾಗಿರಬೇಕು ..!
ಹೆಚ್ಚು ಅಂಕಗಳಿಸದಿದ್ದರು ಪರವಾಗಿಲ್ಲ ,
ಅಂಕೆಶಾಸ್ತ್ರ ಬಲ್ಲವಳಾಗಿರಬೇಕು...!
ಪಾಕ ಪ್ರವಿಣೆ ಆಗಬೇಕಿಲ್ಲ ,
ಅಡುಗೆ ಬಲ್ಲವಳಾಗಿದ್ದರೆ ಸಾಕು ..!
ಪ್ರೀತಿಯೇ ಅರಿಯದಿದ್ದರು ಪರವಾಗಿಲ್ಲ
ಮನಸ್ಸಿನ ಮಾತು ತಿಳಿದುಕೊಂಡರೆ ಸಾಕು..!
ಹೃದಯ ಬಡಿತ ಕೇಳಿಸದಿದ್ದರೂ ಪರವಾಗಿಲ್ಲ ,
ತುಡಿತಕ್ಕೆ ಮಿಡಿಯುವಂತವಳಾಗಿರಬೇಕು ..!
ಜೀವನವೆಂಬುದು ತಿಳಿಯದಿದ್ದರೂ ಪರವಾಗಿಲ್ಲ,
ಬಾಳುವೆ ಎಂಬ ಆತ್ಮವಿಶ್ವಾಸವಿದ್ದವಳು ಬೇಕು ..!
ಹೀಗೆಂದು ಒಬ್ಬ ಮಡದಿ ಬಾಳ ಸಂಗಾತಿಯಾಗಿ ಬೇಕು...!

ಓ ಒಲವೆ ತಡ ಮಾಡದೆ ಬಾ....!!!

ನನ್ನ ಚೆಲುವಿನ ಒಲವೆ
ನನ್ನನು ಕಾಯಿಸುವುದು ತರವೇ
ನಿನ್ನ ಕಾಣಲು ಕಾತುರದಿ ನಾ ಕಾದಿರುವೆ
ಬಾರದೆ ನಿ ಏಕೆ , ಹೀಗೆ ಮೌನವಾಗಿರುವೆ ?

ನನ್ನ ಹೃದಯದ ಬಡಿತವೆ
ನನ್ನ ಬಡಿತದ ತುಡಿತವ ನಿ ಅರಿಯೆ
ನಿನ್ನ ಬರ ಮಾಡಿಕೊಳ್ಳಲು ನಾ ಅರಸುತಿರುವೆ
ಉಸಿರಿಗೆ ಉಸಿರಾಗಲು ಹೀಗೇಕೆ ನಿನಗೆ ನಾಚಿಕೆ ..?

ನನ್ನ ಪ್ರೀತಿಯ ಪಾತ್ರವೇ
ನನ್ನ ಒಲುಮೆಗೆ ಒಡತಿಯೇ
ನನ್ನ ಬಾಳ ಕಥೆಯನ್ನು ಹೆಣೆಯುವಳೇ
ನಿನ್ನ ಸಾಲುಗಳಿಲ್ಲದೆ ಈ ಕಥೆಯು ಮುಂದುವರಿಯುವುದೇ..?

ನನ್ನಯ ನಂಬಿಕೆಯ ಉಳಿಸಿ
ನನ್ನಯ ವಿಶ್ವಾಸವ ಗಳಸಿ
ನನ್ನ ಲೋಕವ ರಾರಾಜಿಸಲು
ರತ್ನ ಕಂಬಳಿಯ ಹಾಸಿ ನಾ, ನಿನ್ನ ದಾರಿಯನ್ನೇ ನೋಡುತಿರುವೆ...!

ಓ ಒಲವೆ ತಡ ಮಾಡದೆ ಬಾ..! ನಿ ಎಲ್ಲಿಯೇ ಇದ್ದರು ಓಡೋಡಿ ಬಾ...!!

ಮುಂಜಾನೆಯ ಒಂದು ದಿನ...!!!

ಮುಂಜಾನೆಯ ಮಂಜಿನಲ್ಲಿ ನಡಿದು ಬರುತಿದ್ದಳು  
ಮೆಲ್ಲ ಮೆಲ್ಲನೆ ಹೆಜ್ಜೆಯ ಮೇಲೆ ಹೆಜ್ಜೆಯನಿಡುತ್ತ
ದಿಟ್ಟ ಧ್ಯೇಯದಿ  ಆತ್ಮವಿಶ್ವಾಸದಿ ಮುನ್ನುಗ್ಗುತಿದ್ದಳು   
ಕಾಲ ಗೆಜ್ಜೆಯದು ಜ್ಹಲ್ ಜ್ಹಲ್ ಎಂದು ಗುಣುಗಿದ್ದವು
ಕಿವಿಯ ಜುಮುಕಿಗಳು ಅಲುಗಾಡಿ ಕುಣಿದಿದ್ದವು
ಬಳೆಗೆ ಬಳೆ ತಗುಲಿ ಗಂಟೆಗಳು ಮೊಳಗಿದಹಾಗೆ    
ಅವಳ ಕಂಗಳ ತೇಜಸ್ಸು ಪ್ರಕಾಶ ಚೆಲ್ಲಿದ ಹಾಗೆ
ಅವಳು ನಡೆದು ಬಂದ ಹಾದಿಗೆ ಬೆಳಕು ಚೆಲ್ಲಿದೆ 
ಹೀಗೆಂದು ವರ್ಣಿಸಲು ನಾನು ಅವಳಿಗಂದೆ
ನಿಮ್ಮ ಗೆಜ್ಜೆ ಸದ್ದು ನಮ್ಮನ್ನು ಕದಡಿದೆ ಎಂದೇ 
ಅದಕ್ಕೆ ಅವಳು ಕಿವಿಗಳನ್ನ ಮುಚ್ಚಿಕೊಳ್ಳಿ ಎಂದಳು....!!!  
***************************************
~ ಭಾವಪ್ರಿಯ ~

ಮುಂಗಾರು ಮಳೆಯಲ್ಲಿ ಮುಂಗುರುಳ ಬಾಲೆ...!

ಮುಂಗಾರು ಮಳೆಯಲ್ಲಿ ಕಂಡೆ ಮುಂಗುರುಳ ಬಾಲೆ...!
ಹನಿ ಹನಿಯು ತೋಟಕುತಿತ್ತು ಅವಳ ಹಣೆಯ ಮೇಲೆ ...!
ಕಪ್ಪೆ ಚಿಪ್ಪಿನೊಳಗೆ ಕುಳಿತಂತೆ ಅವಳ ಕಣ್ಣು ಕಣಗಿಲೆ  ...!
ಮೊಗದಲ್ಲಿ  ಅರಳಿದೆ ಕೆಂಪು ನಗೆಯ ಅಲೆ...!
ತುಟಿಗಳು ಅದರಿ , ಮೂಡಿಸಿದೆ ನವ ಚಿತ್ರದ  ಕಲೆ  ..!
ಹೃದಯದಲ್ಲಿ ಹರಿದಿದೆ ಪ್ರೇಮ ಕವಿತೆಯ  ಹೊಳೆ ..!
ಆ ಮಳೆಯ ಸ್ಪರ್ಶ ಬೀಸಿದೆ ಒಲವಿನ ಬಲೆ...!
ಹನಿಗಳಲ್ಲಿ ನೆನೆಯಲು  , ನೆನಪಿಗೆ ಬರುವಳು ನನ್ನ ನಲ್ಲೆ..!  
ಮನ ತುಂಬಿ ನನ್ನವಳು ಉಕ್ಕಿಸುತಿರುವಳ ಪ್ರೀತಿಯ  ಹೂ ಮಳೆ .!
ಮುಂಗಾರಿನ  ಮಳೆಯೇ ನಿಜವಾಗಿಯೂ , ಏನು ನಿನ್ನಯ ಇ ಲೀಲೆ ...?  
 
************************************************************

ಯಾರನ್ನು ಹೇಗೆ ನಂಬಲಿ ...?

ಮೊಸಕರೆ ವಂಚಕರೆ ಕೂಡಿರುವ ಜಗದಲ್ಲಿ
ಆಪ್ತರೋ ಸ್ನೇಹಿತರೋ ಯಾರನ್ನು ನಂಬಲಿ ..?
ಪ್ರೀತಿ ಪಾತ್ರರೋ ..ಅಥವ ಪ್ರೀತಿಸಿ ವಂಚಿಸುವವರೋ
ಹುಸಿ ಪ್ರೀತಿಯ ತೋರಿ ಬೆನ್ನಲ್ಲಿ ಚೂರಿ ಹಾಕಿದವರೋ
ಶಶಿವರ್ಣವ ಕಂಡು , ಕೀಚಕ ಮನವ ಅರಿಯದೆ ಹೋದೆ
ನಂಬಿಕೆ ಶಬ್ದಕ್ಕೆ ಮಸಿ ಬಳಿದವರ ...
ವಿಶ್ವಾಸ ಗಳಿಸಲು ಕಪಟ ನಾಟಕವಾಡಿದವರ ....
ಯಾರನ್ನು ಹೇಗೆ ನಂಬಲಿ ಶಿವ....ಯಾರನ್ನು ಹೇಗೆ ನಂಬಲಿ...?

==================================ಭಾವಪ್ರಿಯ

ಕರುನಾಡಿನಲ್ಲಿ ಮುಂಗಾರು ಮಳೆಯ ಆರ್ಭಟ...

ಕರುನಾಡಿನಲ್ಲಿ ಮುಂಗಾರು ಮಳೆಯ ಆರ್ಭಟ...
ರೆಂಬೆ, ಕೊಂಬೆಗಳು ನೆಲಕ್ಕೆ ಉರುಳಿ ಧುಳಿಪಟ...
ಉರಿ ಬಿಸಿಲಿನ ತವೆಗೆ ನಿರೆರೆಚಿದ ಹಾಗೆ..
ತಲೆಯ ತಟ್ಟಿ ಎಣ್ಣೆಯ ಬಡಿದಹಾಗೆ..
ಧೂಳು ಕಡ್ಡಿ ಕಸ ಗಾಳಿಯಲ್ಲಿ ತೂರಿ ,
ಕಪ್ಪನೆಯ ಮೋಡಗಳು ಸಿಟ್ಟಿಗೆದ್ದು ಸುರುದಿರಲು ,
ಚಟ ಪಟನೆ ಪೆಟ್ಟು ತಿಂದು ಭೂಮಿ ಕರಗಿ ನಿಂತಿಹಳು ..
ಮೈಯೊಡ್ಡಿ ಬಳಕುತ ಹಸಿರನುಟ್ಟು ಮೆರೆದಿಹಳು...!

-ಭಾವಪ್ರಿಯ

ಮಿಂಚು

ಸೂರ್ಯನು ಮೋಡದೊಳಗೆ ಮರೆಯಾಗಿ
ಭೂಮಿಯಲ್ಲಿ ಕತ್ತಲು ಆವರಿಸಿದಾಗ
ಆ ದೇವರು ತಗೆಯುವ ಛಾಯಚಿತ್ರವೇ ಇ ಮಿಂಚು...!!!

ಜೀವನ ಎಂಬುದು ......!

ಜೀವನ ಎಂಬುದು ಬರೀ ಒಂದು ಚಕ್ರದ ಮೇಲೆ ಚಲಿಸುವ ಚಕ್ಕಡಿ ಅಲ್ಲ ,
ತಗ್ಗು ದಿಣ್ಣೆಗಳು ಬಂದಾಗ ಒಂದಕ್ಕೊಂದು ಸರಿ ಸಮಾನವಾಗಿ ಹೊಂದಿಕೊಳ್ಳಬೇಕು..!
ಒಂದು ಚಕ್ರ ಹಳ್ಳಕ್ಕೆ ಬಿದ್ದರೆ ಇನ್ನೊಂದು ಮೇಲೆಳೆಯಬೇಕು..,
ಎಡ ಎತ್ತು ಎಡವಿದರೆ ...ಬಲ ಎತ್ತು ನನಗೇನಂತೆ ಅಂದರೆ..,
ಬಲ ಚಕ್ರ ಮುಳುಗಿದರೆ ....ಎಡ ಎತ್ತಿಗೆ ತೊಂದರೆ...!

ಸೇರಿ ನಡಿಬೇಕಾದ ಚಕ್ಕಡಿ ಕುಂಟುತ್ತ ಸಾಗದು...,
ಚಕ್ಕಡಿ ತೈಯ್ಯಾರಿಸಿದಾತ ಇದಕ್ಕಾಗಿ ಶ್ರಮ ಪಟ್ಟಿರಲಿಲ್ಲ ...!
ನೀತಿ ಹೇಳುವರು.... ಅನೀತಿ ಬೋಧಿಸಿದರೆ ....
ತಿಳಿಯದೇ ಪಾಲಿಸುವ ನೀನು...ನಿನ್ನ ಅವನತಿಗೆ ಆವ್ಹಾನ ಇತ್ತಂತೆ ..,
ನಿನ್ನ ಬಾಳು ಎಂದೂ ತಲುಪದು ಗುರಿ .., ಅದು ಕಟ್ಟುವುದು ನಿನ್ನಯ ಗೋರಿ..!

ಓಡಿ ಹೊಗ್ಯಾಳೋ ನನ್ನ ಹೆಂಡತಿ

ಓಡಿ ಹೊಗ್ಯಾಳೋ ನನ್ನ ಹೆಂಡತಿ
ನಾ ಮನ್ಯಾಗ ಇರದ ಗಳಿಗ್ಯಾಗ
ಮರ್ಯಾದಿ ಕಳೆದು ಮಂದ್ಯಾಗ
ಯಾರ ಸೂರು ಹುಡುಕಿಕೊಂಡು ಹೊಗ್ಯಾಳೋ ?
ಯಾರ ನಂಬಿ ಒಡ್ಯಾಳೋ ?
ಯಾವನ ಪ್ರೀತಿ ಕರಿದೈತೆ ನಾ ಕಾಣೆ ....
ಇವಳೊಂದಿಗೆ ಬಾಳುವ ಆಸೆಯೇ ನುಚ್ಚು ನೂರು ಮಾಡಿ ,
ಹಾಳಾಗಿ ಹೋಗ್ಯಾಳ ಗಂಡ ಸತ್ತಾನ ಅಂತ...
ಹಿಂತಕಿ ಬ್ಯಾ ಡವಪ್ಪ ನನಗೆ .....ಶಿವ ...

ಅತ್ತಿಗೆಯೋ ಇಲ್ಲ ಕತ್ತು ಇರಿಯುವ ಕಿರಾತಕಿಯೋ ?

ಅತ್ತಿಗೆಯೋ ಇಲ್ಲ ಕತ್ತು ಇರಿಯುವ ಕಿರಾತಕಿಯೋ ?
ಕ೦ಡು ಅರಿಯದೆ ನಿ ಅವನ ಪ್ರೀತಿಯ ತೊರೆದೆಯೋ ...
ಬಾಳ ಬೆಳಗುವ ಸುದ್ದಿಯ ನಿ ಬೆ೦ಕಿ ಹಚ್ಚಿ ತ೦ದೆಯೋ ....
ಹಚ್ಚಿದ ಉರಿಯನು ನ೦ದಿಸಲು ನಿ ಅದನ್ನು ನೆವ ಮಾಡಿ ಬ೦ದೆಯೋ.....
ಮನೆಯವರನ್ನು ಮರೆಮಾಚಲು ಮನದಲ್ಲಿರುವವರ ಮರ್ಯಾದಿ ಕಳೆದೆಯೋ ......
ಅಣ್ಣನ ಮನದ ಅ೦ತರಾಳ ತಿಳಿಯದ ಮೂಡೆ .........
ನಿಮ್ಮ ಬದುಕಿಗೆ ನೀನೆ ಕುತ್ತು ತ೦ದೆಯೋ .

ನನ್ನ ಸಹನೆಯ ಎಲ್ಲೇ ಒಡೆಯಿತು

ನನ್ನ ಸಹನೆಯ ಎಲ್ಲೇ ಒಡೆಯಿತು ,
ಅವಳು ಹಟಮಾರಿ, ಗಂಡನ ಪ್ರಾಣವ ನುಂಗುವ ಛಲ ಅವಳದು..
ಇವಳ ತಾಳಕ್ಕೆ ಕುಣಿಯುವ ಇವರ ಮನೆಯವರು.
ಮಾತು ಮೀರಿದರೆ, ಕಂಟಕ ತಪ್ಪದು ಎಂದು ತಿಳಿದರೂ..
ಮಾಡಿ ನೋಡೋಣ, ಅದೇನು ಮಾಡುತ್ತಾರೋ...? ನೋಡಿಯೇ ತಿರೋಣ ...!
ಹೇಳದೆ ಕೇಳದೆ ಮನೆಯ ತೊರೆದರೆ ಅರೆಸುತ್ತ ಬರುವರು ಎಂಬ ಕೆಟ್ಟ ಮೊಂಡ ನಂಬಿಕೆ....!
ತಿಳಿದು ತಿಳಿದು ಭಾವಿಗೆ ಬಿದ್ದರೆ ದೇವರು ತಾನೇ ಏನು ಮಾಡ್ಯಾನು ?
ನಿನ್ನ ಕರ್ಮ....! ಅನುಭವಿಸು ಎಂದು ಕುಹಕು ನಗೆ ಬಿರ್ಯಾನು ....!

ಕನ್ನಡ ಕೊಲೆಗಡಕರು

ಬೇಂದ್ರೆ ಅಜ್ಜಾ ನಿನ್ನ ಕವನ ವಾಚಿಸಿ ಖುಶಿ ಪಟ್ಟಿದ್ದೆ ನಾನು... ಮತಿಗೆಟ್ಟ ರಾಜಕೀಯದವರು ವಾಚಿಸಿ ನಿಮ್ಮ ಕವನವ ಅವಮಾನಿಸುತಿಹರು ಕನ್ನಡ ಬಾರದ ಒಬ್ಬ ಮೂರ್ಖ ತಾನು ಕ...