Posts

Showing posts from September, 2012

ಗೆಳತಿ

ಕಾಡ ಬೇಡ ಗೆಳತಿ 
ಬೇರ್ಯಾರಿಲ್ಲ  ನನ್ನ ಗೆಳತಿ ಇದ್ದರೂ..., ಆಗಲಾರಳು  ನಿನ್ನ  ಸವತಿ   ನನ್ನ ಮನಸಿನ್ಯಾಗ  ಯಾಕ  ತಣ್ಣೀರು  ಸುರಿತಿ    ನೀನ... ನನ್ನ ಹೃದಯದ ಒಡತಿ 
ಮೌನವಾಗಿ ಓಡುತಿ ಯಾಕ ಚಿತ್ತ ಕದಡಿ  ಬೆಂದು ಹೋಗತೇನಿ ನಾ ಒದ್ದಾಡಿ-ಒದ್ದಾಡಿ    ನನ್ನ ಕ್ಷಣಗಳು ಕಳೆದಾವ ನಡು-ನಡುಗಿ  ಆಗಬಾರದೇ ನೀ ನನ್ನ ಅಮೃತ ಗಡಗಿ .

***ಭಾವಪ್ರಿಯ***    

ಮೇಘ ಮಾಯೆ

Image
ಮತ್ತೆ ಕವಿದಿದೆ ಕಪ್ಪು ಛಾಯೆ  ಮತ್ತೆ ಹರಿಸ್ಯಾಳ ಹನಿ, ಮೇಘ ತಾಯೆ  ಗೆಳತಿ ಇಳೆಯ ಸಿಟ್ಟು ಅಳಿಸಲಿಕ್ಕೆ  "ಧೋ..." ಎಂದು ಸುರಿದಾಳೆ ಮೇಘ ಮಾಯೆ 
ಹರಿ-ಹರಿದು ಬರಲಿ ಅವಳ ಧಾರೆ  ತುಂಬಲಿ ಹಳ್ಳ , ನದಿ , ಕಣಿವೆ, ಕೆರೆ  ಹಸಿರು ಬಡಿಸಲಿ ಬಾಳೆಯಲೆಯಲೇ ಹಸಿರನುಟ್ಟು ಬಸಿರಾಗು ನೀ ಧರೆ
ಮುಗಿಲು ನೋಡುತಿದ್ದ ರೈತರೇ  ಹಾರಿ ಕುಣಿದಾಡಿ ಇಗಲೇ   ಬೆಳೆಯ ಬೆಳೆಯಲು ಕರುಣಿಸಿಹಳು  ತಾಯೆ  ಇನ್ನು ಸಂಕಷ್ಟಗಳು ಮಂಗ ಮಾಯೆ  
***ಭಾವಪ್ರಿಯ***

खामोश होगई है प्यार

बांध करके ह्रदय का द्वार  इसको ना है किसीका इंतज़ार  ना है इसको किसीसे ऐतबार  खामोश होगई है प्यार  !
जो प्यार की भाषा ना समाज पाया वोह शायर   कैसे हो उसको  किसीकी प्यार की खबर  खोगाया है अँधेरे में होके बेखबर  खामोश होगई है प्यार !
धड़कते अरमानो को छुपाकर खुशिया सब भुलाकर  जीवन की हर उम्मीद छोड़कर  खामोश होगई है प्यार  !

ಮತ್ತೆ ಶುರುವಾಗಿದೆ ಓಟ

ಮತ್ತೆ ಶುರು ಮಾಡಿದೆ ಓಟ  ಚಿಕ್ಕವರಿದ್ದಾಗ ಓಡಾಟವೇ ಆಟ  ಬೆಳೆದು ಬೆಳೆಯುತ್ತಲೇ ವಿದ್ಯೆ ದೇವಿಯಡೆಗೆ ಓಟ  ಮತ್ತೆ ಶುರುವಾಗಿದೆ ಓಟ 
ಪದವಿಧರನಾದ ಮೇಲೆ ಮುಗಿಯಲಿಲ್ಲ ಓಟ  ಕೆಲಸ ಹುಡುಕುತ್ತಲೇ ಶುರುವಾಯಿತು.., ಮತ್ತೊಂದು  ಜಂಜಾಟ  ಮಹಾನಗರಿಯಲ್ಲಿ  ಅಲೆದು, ಅಲೆದು, ಕಡೆಗೂ ಸಿಕ್ಕಿತೊಂದು ಆಸರೆಯ ಕೂಟ  ಮತ್ತೆ ಶುರುವಾಗಿದೆ ಹೊಸದೊಂದು ಓಟ
ಬೆನ್ನಮೇಲೊಂದು ರೊಟ್ಟಿಯ ಬುತ್ತಿ  ಹೊರೆಟೆವು ನಾನು  ಹಣದ ಬೆನ್ನಹತ್ತಿ. ನೆಮ್ಮದಿ ಇರದ ಖುಷಿಯ ಮೆಟ್ಟಿ    ತಪ್ಪದೆನಗೆ ಕಚೇರಿಯ ಕಾಟ  ಮತ್ತೆ ಶುರುವಾಯಿತು ಓಟ    
ಹುಟ್ಟಿದಾಗಿನಿಂದಲೂ ಹೀಗೆಯೇ ಇದೆ ಓಟ  ಒಮ್ಮೆ ನನಗಾಗಿ,  ಇನ್ನೊಮ್ಮೆ ನನ್ನ ಹಡೆದವರಿಗಾಗಿ  ಓಟ ನನ್ನ ಆರೋಗ್ಯವ ಕಾಪಾಡಿಕೊಳ್ಳಲು, ವರುಷಗಳ ನಂತರ ಮತ್ತೆ ಶುರುವಾಗಿದೆ ಓಟ.
***ಭಾವಪ್ರಿಯ***
Image
ಬಾನ ಚಂದಿರ

ಚಂದ್ರ ತುಂಬಿದ ಬಾನ ತುಂಬಾ,
ಹಾಲಂತೆ ಚೆಲ್ಲಿದ ಬೆಳದಿಂಗಳ ಬೆಳಕ,
ತಂಗಾಳಿ ತೇಲಿತು ಭೂಮಿ ತುಂಬಾ,
ಸಾರಿತು ರಾಗ ತೋಟದ ಬಳಗ,
ಹೂಗಳ ಚೆಲ್ಲಾಟ ಇರುಳು ತುಂಬಾ,
ಮರೆಯಾದ ಚಂದ್ರ ಮೋಡದ ಒಳಗ.
Image
ಹೆದ್ದಾರಿ ಸುಂದರಿ

ಅಂಕು ಡೊಂಕಿನ ಮೈಮಾಟದ ಸುಂದರಿ,
ಉಬ್ಬು ತಗ್ಗುಗಳ ಒಯ್ಯಾರಿ,
ನಿನ್ನ ಮೇಲೆ ಹರಿದೊಡೆ ಎಬ್ಬಿತೋ ಧೂಳಿ !
ಉದ್ದಕ್ಕೂ, ಅಗಲಕ್ಕೂ, ಏಕೆ ಮರಿಮಾಚಿದೆ ನಿನ್ನ ಸಾರಿ ?
ಓಡಾಡುವ ಜನರು ನಿನ್ನ ಮೇಲೆ ಕೆಂಡಕಾರಿ,
ನಿನ್ನ  ಸುಧಾರಿಸುವವರು  ಹೌಹಾರಿ,
ಭರದಿಂದ ನಡೆದಿದೆ ನಿನ್ನ ಸಿಂಗರಿಸುವ ಕಾಮಗಾರಿ.

***ಭಾವಪ್ರಿಯ***

ಮಿಡಿಯುತಿದೆ ಹೃದಯ

Image
ಚೆಲುವೆ ಕುಳಿತು ಬಿಡು ಹೀಗೆ ಮೌನವಾಗಿ  ಹೃದಯದ ಮೌನವನ್ನೇ ಆಲಿಸುತ್ತಿರುವೆ ನಿನಗಾಗಿ  ಮಾತುಗಳ ಬಿನ್ನಹಿಸಲಾರದ ಭಾವನೆಗಳಿಗಾಗಿ ಮಿಡಿಯುತಿದೆ ಎನ್ನ ಹೃದಯ ನಿನ್ನ ಸಂತೈಸುವುದಕ್ಕಾಗಿ .
ಮನಸದು ನಿನ್ನ ಕಾಡುತಿಹುದು ನಾ ಅರಿಯೆ  ಮೂಕ ರಾಗದಲಿ  ಹಾಡುತಿದೆ ನಾ ತಿಳಿದೆ ಬೇಸರವ ದೂರ ಮಾಡಲು ವಿಧಾನವ ಹುಡುಕುತಿರುವೆ ನಿನ್ನ ಮನದ ಡುಗುಡಕೆ ಎನ್ನ ಹೃದಯ ಮಿಡಿಯುತಿದೆ 
ಅಕ್ಕರೆಯ ತೋರಿಸಿದರೆ ನಿನಗೆ, ನೀ ತಪ್ಪಾಗಿ ತಿಳಿಯದಿರೆ  ಸಹಾನುಭೂತಿ ಅಲ್ಲ ಅದು ನನ್ನ ಪ್ರೀತಿಯ ಸೆರೆ  ಸ್ವಾಭಿಮಾನಿ ನೀ , ಧೈಯಶಾಲಿಯೂ ನೀ    ನಿನ್ನ ಒಂಟಿತನವ ಹೋಗಲಾಡಿಸಲು ಮಿಡಿಯುತಿದೆ ಈ ಹೃದಯ 
ಬಯಸುತ್ತಿರುವ ಪ್ರೀತಿ, ನಿನಗೆ ದೊರಕದೆ  ನೀ ಬಳಲುತ್ತಿರುವುದ ನಾ ಕಾಣಲಾರೆ ಸುಮ್ಮನೆ ಕೂಡುವ ಗೆಳೆಯ ನಾನಲ್ಲೇ  ನಿನ್ನ ಕಂಗಳಲಿ ಆನಂದ ಭಾಷ್ಪ ಕಾಣಲು ಈ ಹೃದಯ ಮಿಡಿಯುತಿದೆ.  
***ಭಾವಪ್ರಿಯ***

ಕನ್ನಡದ ಹುಡುಗಿ

ಕನ್ನಡದ ಹುಡುಗಿ ಈಗ ಬಲು ಜೋರುಮದುವೆಕೂ ಮುಂಚೆ ಇರಬೇಕು ಹುಡುಗನ ಬೈಕು ಕಾರುನಂತರ ಕೊಡಬೇಕು ಅವಳಿಗೆ ಮನೆಯ ಕಾರು ಬಾರುಪ್ರತಿ ವೀಕೆಂಡಿಗೂ ಕೊಡಿಸಬೇಕು ಒಡವೆಗಳು ನೂರಾರುಗಂಡನ ಜೇಬು ಚಿಂದಿ ಚೂರು ಚೂರುಆಮೇಲೆ ಅವನಿಗೆ ಗತಿಯೇ ನವ್ಯ ಬಾರು.-ಭಾವಪ್ರಿಯ