Posts

Showing posts from May, 2013

ಕಳಂಕಿತೆ

ಕಳಂಕ ಹೊತ್ತು ಮನೆ ಬಿಟ್ಟು ನಡೆದವಳು
ತಾನು ಕಳಂಕಿತಳಲ್ಲಾ ಅನ್ನುವದ ನಿರೂಪಿಸಲೇ ಇಲ್ಲಾ
ಏಕೆಂದರೆ, ಅವಳ ಅಂತರಂಗ ಕೂಡಾ ಅವಳು ಕಳಂಕಿತೆ  ಅಂತಾ ಸಾರಿ ಸಾರಿ ಹೇಳುತ್ತಿತ್ತು.

ಕಿಡಿ ನುಡಿ

ಕೊಬ್ಬು ಮೈಯೊಳಗೆ ಬೆಳೆದರೆ ಪರವಾಗಿಲ್ಲಾ  (ಸ್ವಂತ ವಿಚಾರ)

ಆದರೆ,

ನಿಮ್ಮ ನಡೆ ನುಡಿಗಳನ್ನು ಕೊಬ್ಬಿನಿಂದ ಪೋಶಿಸಬೇಡಿರಿ.  (ಪರರರಿಗೂ ತಟ್ಟುವ ವಿಚಾರ)

"ಪಾದರಕ್ಷೆ "

ನಡೆದು ನಡೆದು ನೋವನುಂಡ ಕಾಲುಗಳಿಗೆ ಸವೆದ ಚಪ್ಪಲಿಗಳು

ಸೊಲುಗಳು ಕತ್ತರಿಸಿದರೂ ಕಾರ್ಯ ಸ್ಥಗಿತಗೊಳಿಸಲಿಲ್ಲ ಅವುಗಳು

"ಪಾದರಕ್ಷೆ " ತನ್ನ ಹೆಸರಿಗೆ ಕುಂದು ಬಾರದೆ ರಕ್ಷಿಸಿದ ಪಾದುಕೆಗಳು

ಹೊಸ ಸೊಲುಗಳ ಹಚ್ಚಿ ಬಿಟ್ಟೊಡನೆ ಮತ್ತೆ ಆ ರಕ್ಷೆಗಳಿಗೆ ಹೊಸ ಜೀವನ ಶುರು !

ಹಿತ ವಚನ

ತಿಳಿಯದೇ ತಪ್ಪು ಮಾಡಿ ಅದಕ್ಕೆ ಕ್ಷಮಾರ್ಪಣೆ ಕೇಳುವವರಿಗೆ ಕ್ಷಮಿಸಬಹುದು .... ಅದರೆ ತಿಳಿದು ತಿಳಿದು ತಪ್ಪು ಮಾಡಿ ಸೋಗು ಮಾಡವರನ್ನು ಎಂದಿಗೂ ನಂಬಬಾರದು ಹಾಗೆ ಕ್ಷಮಿಸೂಬಾರದು !!

ಗಂಡ ಹೆಂಡತಿ ಜಗಳ...

ನೆನ್ನೆ ವರ್ಷಧಾರೆ ಸುರಿಸಿದವಳು ಎಲ್ಲಿರುವಳು ಎಂದು ನೋಡಲು ಆಗಸದೆಡೆಗೆ

ಬಿದ್ದು ಬಿದ್ದು ನಗುತಿದ್ದ ಚಂದ್ರ ಅಂದ, ಮುನಿಸಿಕೊಂಡ ಹೆಂಡತಿಯ ರಮಿಸದೇ ಕೂಡುವ ಗಂಡು ನಾನಲ್ಲ !!

***ಭಾವಪ್ರಿಯಾ***

THOUGHT FOR THE DAY

EXPRESS YOURSELF WITHOUT RELUCTANCE, THOUGH YOU MAY NOT FIND SOLUTIONS TO THE PROBLEMS BUT ATLEAST YOU WILL GET SOME RELIEF FOR YOUR PAINS.

ಒಲವಿನ ಕಾದಂಬರಿ ಸಂಚಿಕೆ - ೨

ಒಂದು ವರ್ಷದ ಓದು ಮುಗಿದೇ ಹೋಯ್ತು, ಆ ಒಂದು ವರ್ಷದಲ್ಲೆ ರಾಜ್ಗೆ ಏರಿಳಿತದ ಅನುಭವ ಕೂಡಾ ಆಯ್ತು. ಜೀವನ ಹಾಗೆ ತಾನೆ ಏರಿಳಿತಗಳ ಪ್ರಯಾಣ. ಗೆಳೆಯರ ನಡುವೆ ಹೆಚ್ಚು ಒಡನಾಟ, ಎಲ್ಲರೂ ಕೂಡಿಕೊಂಡು ಕಾಲೇಜಿನ ಜೀವನವನ್ನು ಸಂತೋಷದ ಕ್ಷಣಗಳಿಂದ ಕಳೆಯುತ್ತಿದ್ದರು. ಸಾಮಾನ್ಯವಾಗಿ ಹುಡುಗೀಯರಿಗೆ ಓದೊ ಹುಚ್ಚು.., ಹುಡುಗರದು ಲೈಫ್ ಎಂಜಾಯ್ ಮಾಡುವ ತವಕ, ಅದಕ್ಕೆ ಹುಡುಗರು ಹಾದಿ ತಪ್ಪುವುದು , ಇಲ್ಲಾ ಯಾವುದೊ ಒಂದು ಚಟಕ್ಕೆ ಬಲಿಯಾಗುವುದು , ಇಲ್ಲಾ ಪ್ರೀತಿಯಲ್ಲಿ ಬಿದ್ದು ಓದುವುದ ಮರೆತು ಅತ್ಯಮೂಲ್ಯ ಸಮಯವನ್ನು ಹಾಳು ಮಾಡಿಕೊಳ್ಳುವುದು. ಇವೆಲ್ಲಾ ಹುಡುಗಿಯರ ಜೀವನದಲ್ಲಿ ಆಗುವುದಿಲ್ಲಾ ಅಂತೇನೂ ಇಲ್ಲಾ, ಅಲ್ಲಿಯೂ ಆಗುತ್ತವೆ ಆದರೆ ಕಡಿಮೆ ಪ್ರಮಾಣದಲ್ಲಿ. ಸರಿ ರಾಜ್ ಸ್ವಲ್ಪ ಜಾಗರುಕನಾಗುತ್ತಾನೆ, ಮೊದಲನೆ ವರ್ಷದ ಸ್ಥಿತಿ ಮತ್ತೆ ಬರಬಾರದು ಅಂದುಕೊಂಡು ಶ್ರದ್ದೆಯಿಂದ ವಿಧ್ಯಾಭ್ಯಾಸ ಮಾಡುತ್ತಿರುತ್ತಾನೆ. ಕ್ಲಾಸಿನ ಪರೀಕ್ಷೆಗಳಲ್ಲಿ ಒಳ್ಳೆಯ ಅಂಕ ಪಡೆದು ಮುನ್ನುಗ್ಗುತ್ತಿರುತ್ತಾನೆ. ಈ ಸಮಯದಲ್ಲಿ ತನ್ನದೇ ಕ್ಲಾಸಿನವಳಾದ ಗೀತಾಳ ಪರಿಚಯವಾಗುತ್ತದೆ. ಗೀತಾ ಸ್ವಲ್ಪ ಸುಂದರಿ, ಶ್ವೆತ ವರ್ಣ, ಅಚ್ಚುಕಟ್ಟು ಮೈಕಟ್ಟು ಧಾರ್ಮಿಕ ಹಾಗು ಒಳ್ಳೆಯ ಮನೆತನದವಳಾಗಿರುತ್ತಾಳೆ. ಸ್ವಚ್ಚ ಮನಸು ಅವಳದು, ನೇರ ಹಾಗು ದಿಟ್ಟ ಸ್ವಭಾವದವಳು. ಒಂದೇ ಕ್ಲಾಸಿನಲ್ಲಿ ಓದುತ್ತಾರೆ ಅಂದರೆ ಗೆಳೆತನ ಇರಲೇಬೇಕಲ್ಲವೆ ಅನ್ನುತ್ತಾ ನಮ್ಮ ರಾಜ್ ನೆ ಮೊದಲ ಬಾರಿಗೆ ಅವಳಿಗೆ ತನ್ನ ಪರಿಚಯ …

Thought for the day

When people seem to be stressed or angry , leave them alone for few span expecting things to be alright by sometime later.

ಮಳೆ ಗೆಳತಿ

ನಿನ್ನ ಆಗಮನವ ಸ್ವಾಗತಿಸುತಿಹರು ಗುಡುಗುಡುಗಿ
ಕ್ಷಣ ಕ್ಷಣ ನಡುವೆ ನಗೆಮೊಲ್ಲೆ ಚಲ್ಲಿದೆ ಮಿಂಚು
ಧರೆ ಬಾಯ್ ಬಿರಿದು ನಿನ್ನ ಆಹ್ವಾನಿಸಿಹಳು
ನಿನ್ನ ಅಕ್ಕರೆಯ ಸಿಂಚನ ಮೈಗೆ ಸೊಕಿ 
ವಾತಾವರ್ಣ ತಂಪಾಗುತಿದೆ... ಜೀವ ಸಂಕುಲವೆಲ್ಲವೂ ನಿರಾಳ !!

ಒಲವಿನ ಕಾದಂಬರಿ - ಸಂಚಿಕೆ ೧

ನಾಯಕ : ರಾಜ್ಗೆಳೆಯರು : ಮೊಹನ , ಪವನ , ಮಂಜು ನಾಯಕಿ : ಸುಮನಾಗೆಳೆಯರು : ಸ್ಮಿತಾ , ಕಾವ್ಯಾ, ಕವನ , ನಯನಾ , ಗೀತಾ ಸನ್೧೯೮೦ಇಸವಿಯಕಥೆಇದು..,ನಾಯಕರಾಜ್ಒಬ್ಬಪ್ರತಿಭಾವಂತ, ಸುಸಂಸ್ಕೃತ, ಸ್ವಲ್ಪ ನಾಚಿಗೆ ಸ್ವಭಾವದ, ಒಳ್ಳೆಯ ಮನೆತನದ ಹುಡುಗ. ತಂದೆ ಅರೆಸರ್ಕಾರಿ ನೌಕರಿ ಅಧಿಕಾರಿ , ತಾಯಿ ಒಬ್ಬ ಅಧ್ಯಾಪಕಿ. ಮಗನಿಗೆ ಶಿಸ್ತಿನಿಂದ ಬೆಳೆಸುವಲ್ಲಿ ಇಬ್ಬರ ಪಾತ್ರವೂ ದೊಡ್ಡದು. ರಾಜ್ ಶಾಲಾ ಅಭಾಸ ಮುಗಿಸಿದ ನಂತರ ದೂರದ ಊರಿನಲ್ಲಿ ಪಿ ಯು ಸಿ ಮುಗಿಸಿ ಉತ್ತಮ ಅಂಕ ಪಡೆದು ಮುಂದಿನ ಅಭಾಸಕ್ಕೆ ಯಾವ ಕಾಲೇಜು ಸೇರಿಕೊಳ್ಳಬೇಕು ಅನ್ನುವ ಚಿಂತೆಯಲ್ಲಿ ತೊಡಗಿರುತ್ತಾನೆ. ಅಷ್ಟರಲ್ಲಿ ಇವನಿಗೆ ಒಂದು ಒಳ್ಳೆಯ ಕಾಲೇಜಿನಿಂದ ಸಂದರ್ಶನಕ್ಕೆ ಆಹ್ವಾನ ಬರುತ್ತದೆ. ಸಂತಸಗೊಂಡ ರಾಜ್ ಎಲ್ಲ ತರಹದ ತೈಯ್ಯಾರಿ ಮಾಡಿಕೊಂಡು ನಿಗದಿತ ದಿನದಂದು ಕಾಲೇಜಿಗೆ ಹೊರಡಲು ಸಜ್ಜಾಗುತ್ತಾನೆ. ಅಪ್ಪ ಅಮ್ಮನ ಆಶಿರ್ವಾದ ಪಡೆದು, ದೇವರಿಗೆ ನಮಸ್ಕಾರ ಮಾಡಿ ಹೊರಡುತ್ತಾನೆ. ಕಾಲೇಜಿನ ಆವರ್ಣ ನೋಡುತ್ತಿದ್ದಂತೆಯೇ ಏನೋ ಖುಶಿ ಏನೋ ಉಲ್ಲಾಸ. ಮುಖ್ಯ ಅಧಿಕಾರಿಗಳ ಕಚೇರಿಯ ಹೊರಗೆ ಸರದಿಗಾಗಿ ಕಾಯುತ್ತಿರುವ ಹುಡುಗರನ್ನು ಕಂಡು ತಾನೂ ಅಲ್ಲೆ ತನ್ನ ಸರದಿಗಾಗಿ ಕಾಯುತ್ತಾ ನಿಲ್ಲುತ್ತಾನೆ. ಬರುವ ಹೋಗುವ ಹುಡುಗರ ನೋಡುತ್ತಾ ಅವರ ಮುಖದ ಭಾವನೆಗಳನ್ನು ಆಲಿಸುತ್ತಾನೆ, ಕೆಲವರು ಖುಶಿಯಿಂದ ಹೊರ ಬರುತ್ತಿದ್ದರೆ ಕೆಲವರು ಪೇಚು ಮುಖ ಧರಿಸಿ ಹೊರಬರುತ್ತಿದ್ದರು

ಅವಳ ಪ್ರೀತಿ ( ಮಳೆ )

===========
ಎಷ್ಟೊಂದು ಪ್ರೀತಿ ನಿನಗೆ ನನ್ನ ಮೇಲೆ ಗೆಳತಿ
ಬೆಳಿಗ್ಗಿನಿಂದ ಕಾದು ಕಾದು ಹೊರ ನಡೆದೊಡನೆ ಸುರಿದು ಬಿಟ್ಟೆ
ನಿನ್ನ ಮೊಹದ ಪಾಷದಲ್ಲಿ ನಾ ನೆನೆ ನೆನೆದು ಬಿಟ್ಟೆ..!

ಸ್ನೇಹ

ಅವಳ ಚುಚ್ಚುಮಾತುಗಳು ಸಹಿಸಲಾಗದೇ ನಿಲ್ಲಿಸಿಬಿಟ್ಟೆ ಅವಳೊಡನಾಟ
ಅವಳ ಮನಸ್ಸಿನ ಕಸಿವಿಸಿ ಕಂಡು ನನ್ನ ಮನಸ್ಸೇ ಆಡುತ್ತಿರುವುದು ಡೊಂಬರಾಟ
ಎಷ್ಟೇ ಮುನಿಸಿಕೊಂಡರೂ ನಾ..., ಮತ್ತೆ ಮರುಗುವುದು ನನ್ನ ಮನಸ್ಸೇ...
ಪ್ರೀತಿಸಲಾರೆ...ದ್ವೇಶಿಸಲಾರೆ....... ಸ್ನೇಹವೆಂದರೆ ಇದೆ ದೃವತಾರೆ..!

ಜೀವನಾ

ನನ್ನ ಜೀವ ನೀ ಗೆಳತಿ, ನಿನ್ನ ಜೀವ ನಾ... 
ನಾವಿಬ್ಬರೂ ಬೆರೆತಾಗಲೇ ತಾನೆ, ನಮ್ಮದೊಂದು "ಜೀವನಾ"

ಅವಳು

ಪ್ರತಿ ಕ್ಷಣವೂ ನನಗೆ ಅವಳದೇ ಖಯಾಲಿ
ನೆನೆಯದೆ ಸಾಗುವುದೇ ಇಲ್ಲಾ ನನ್ನ ಒಲವಿನ ಗಾಲಿ
ತೂಗುತಿಹುದು ಅವಳ ನೆನಪಲ್ಲೇ ಮನದ ಜೋಕಾಲಿ
ನಿದ್ದ್ರೆಗೆ ಜಾರು ಇನಿಯ ಅನ್ನುತಿರುವಳು ಬಂದು ಸೇರುವೆ ನಿನ್ನ ಕನಸಲಿ !

ತಾಪಾ

ನಾ ಬರೆಯುವ ಕವಿತೆಯಲಿ
ಅವಳ ಕುರುಹು ಇರಬಾರದಂತೆ...
ಇದ್ದರೇ ಅವಳಿಗೆ ಕೋಪ....ಆಮೇಲೆ ನಾನೇ ಅನುಭವಿಸಬೇಕು ಅದರ ತಾಪಾ..!!

ಆತುರ :’(

ಅವಳಿಗೆ ಅವನೆಂದರೆ ಪ್ರಾಣ
ದಿನ ನಿತ್ಯವೂ ಬೆಳೆಸುತ್ತಿದ್ದಳು ಕಛೇರಿಯವರೆಗೆ ಪ್ರಯಾಣ
ಕ್ಷಣ ಕ್ಷಣವೂ ಅವನ ಜೊತೆ ಇರಬೇಕು ಅನ್ನುವಂತದ್ದು ಅವಳ ಪಣ
ಕಡೆಗೊಂದು ದಿನ ಅವನೊಬ್ಬನೆ ಹೊರಟಿದ್ದನು ಅವಳಲಿಲ್ಲದೆ...
ಎಲ್ಲಿ ಅವಳು...ನಿನ್ನವಳು ಎಂದೊಡನೆ ಅಂದನು...
ಅವಳಿಗೆಂದಿಗೂ ತಾನೆ ಬೇಗ ತಲುಪುವ ಹಠ...
ನನ್ನ ಅರ್ಧ ದಾರಿಯಲ್ಲೇ ಬಿಟ್ಟು ಹೋದಳು...
ಅವಳಿಗಿದ್ದಿದ್ದು ಕ್ಯಾನ್ಸರ್....!

ಸುಭಾಷಿತ

ನೆನ್ನೆಯ ಸಿಟ್ಟನ್ನು ಇಂದು ಕೂಡಾ ಮುಂದುವರೆಸಿದರೇ ಎರಡು ದಿನದ ನಷ್ಟ , ಸುಮ್ಮನೆ ಏಕೆ ಬೇಕು ಆ ಕಷ್ಟ , ನೆನ್ನೆಯದನ್ನು ನೆನ್ನೆಗೆ ಬಿಟ್ಟು ಇಂದು ಸುಖಿಸೋಣ.

ಡ್ರಾಮಾ ಡ್ರಾಮಾ

===========

ಡ್ರಾಮಾ ಡ್ರಾಮಾ ಡ್ರಾಮಾ  ಹುಡುಗೀರ್ದೆಲ್ಲಾ ಎಲ್ಲಾ ಡ್ರಾಮಾ
ಕೋಮಾ ಕೋಮಾ ಕೋಮಾ ಲವ್ವಲ್ಲಿ ಬಿದ್ದ ಸೊಮಾ  !!

ಮೊದಲ್ನೆ ದಿನಾ ಕಾಲೇಜು ಹೊರಟ್ಟಿದ್ದ ಸೊಮಾ
ನೋಡಿ ಲುಕ್ಕು ಕೊಟ್ಟು.. ಕಣ್ಣು ಹೊಡೆದಳು ಭಾಮಾ

ಡ್ರಾಮಾ ಡ್ರಾಮಾ ಡ್ರಾಮಾ  ಹುಡುಗೀರ್ದೆಲ್ಲಾ ಎಲ್ಲಾ ಡ್ರಾಮಾ
ಕೋಮಾ ಕೋಮಾ ಕೋಮಾ ಲವ್ವಲ್ಲಿ ಬಿದ್ದ ಸೊಮಾ !!

ಚಪ್ಲಿ ಮಾಯವಯ್ತು ಶು ಹಾಕ್ಕೊಂಡು ಹೊರಟ ಸೊಮಾ
ಹುಡುಗಿ ನೋಡಿ ನಕ್ಕ್ಲು...ಅವ್ನಿಗೆ ಮರುಕ್ಷಣ ಪ್ರೇಮಾ

ಡ್ರಾಮಾ ಡ್ರಾಮಾ ಡ್ರಾಮಾ  ಹುಡುಗೀರ್ದೆಲ್ಲಾ ಎಲ್ಲಾ ಡ್ರಾಮಾ
ಕೋಮಾ ಕೋಮಾ ಕೋಮಾ ಲವ್ವಲ್ಲಿ ಬಿದ್ದ ಸೊಮಾ  !!

ಕ್ಲಾಸಲ್ ಕೂತು ಕೊಂಡು ಪಾಠ ಕೇಳುತ್ತಿದ್ದ ಸೊಮಾ
ಪಕ್ಕಕ್ಕೆ ಬಂದು ಕೂತ್ಲು...ಅವನ ಮೈಯಲ್ಲಾ ಜುಮ್ಮಾ

ಡ್ರಾಮಾ ಡ್ರಾಮಾ ಡ್ರಾಮಾ  ಹುಡುಗೀರ್ದೆಲ್ಲಾ ಎಲ್ಲಾ ಡ್ರಾಮಾ
ಕೋಮಾ ಕೋಮಾ ಕೋಮಾ ಲವ್ವಲ್ಲಿ ಬಿದ್ದ ಸೊಮಾ  !!

ಮರುದಿನ ಬಂದ್ಲು ಕೇಳಲು ಇವ್ನ ನೋಟ್ಸನಾ
ಕೈಯ್ಯಾ ಹಿಡಿದು ಕುಲುಕಿದಳು ಅವಳ ಸ್ಪರ್ಷಕ್ಕೆ ಇವ್ನು ಲಿನಾ

ಡ್ರಾಮಾ ಡ್ರಾಮಾ ಡ್ರಾಮಾ  ಹುಡುಗೀರ್ದೆಲ್ಲಾ ಎಲ್ಲಾ ಡ್ರಾಮಾ
ಕೋಮಾ ಕೋಮಾ ಕೋಮಾ ಲವ್ವಲ್ಲಿ ಬಿದ್ದ ಸೊಮಾ !!

ಸ್ನೇಹಾ ಸ್ನೇಹಾ ಅಂತ ಮೈಮೇಲೆ ಬೀಳುತ್ತಿದ್ದಳು ಭಾಮಾ
ಶಾಕು ಹೊಡೆದ ಸೊಮಾ..ಮೈಮೇಲೆ ಇಲ್ಲಾ ಪ್ರಜ್ಞಾ

ಡ್ರಾಮಾ ಡ್ರಾಮಾ ಡ್ರಾಮಾ  ಹುಡುಗೀರ್ದೆಲ್ಲಾ ಎಲ್ಲಾ ಡ್ರಾಮಾ
ಕೋಮಾ ಕೋಮಾ ಕೋಮಾ ಲವ್ವಲ್ಲಿ ಬಿದ್ದ ಸೊಮಾ  !!

ಜಗವೇ ಮರೆತನು ಸೊಮಾ ಕನಸಿನ ಲೋಕದಲ್ಲೇ ಪಯಣ
ಊಟಾ ತಿಂಡಿ ಬಿ…

ಫಲಿತಾಂಶ

೧೦ನೇಯ ತರಗತಿ ಫಲಿತಾಂಶ - ಎಂದಿನಂತೆ ಹುಡುಗಿಯರದೇ ಎತ್ತಿದ " ಕೈ"

೨೦೧೩ ಚುನಾವಣೆ ಫಲಿತಾಂಶ - ಎಲ್ಲ ಜನ ಸಾಮಾನ್ಯರು ಎತ್ತಿಹಿಡಿದರು " ಕೈ "

THOUGHT FOR THE DAY

When you don't like someONE's behaviour, better change them..!!

ಚುಟುಕ

ಆನೆಯ ಮೇಲೆ ನಾವು ಕುಳಿತರೆ 
                                      " ಜಂಬೂಸವಾರಿ "
ಆನೆ ನಮ್ಮ ಮೇಲೆ ಕುಳಿತರೆ..
                                     " ಪರಲೋಕಕ್ಕೆ ದಾರಿ "

ಚುಟುಕ

ದಡವಾಗಿ ಕಾಯುತಲಿರುವೆ

ದುಮ್ಮಿಕ್ಕುವ ಅಲೆಯಾಗಿ ಬಂದು ಸೇರು

ಎದೆಮೇಲೆ ಬರೆದಿದ್ದ ನಿನ್ನ ಹೆಸರೇಕೆ

ನೀನೆ ಬಂದು ನೆಲಸು..ಕಾದಿರುವುದು ಹೃದಯದ ಸೂರು !

ನೋಟುಗಳ ಕಾರ್ಬಾರು

===========

ನೂರರ ನೋಟು ಕೊಟ್ಟು..,

ಗಿಟ್ಟಿಸುವರು ವೋಟು !

ಸೀಟು ಸಿಕ್ಕ ಮೇಲೆ..,

ಬಾಚಿಕೊಳ್ಳುವರು ಕೋಟಿ ಕೋಟಿ ನೋಟು !!

-------------------------------------

ಚುಟುಕ

ಗಲ್ಲಿ ಗಲ್ಲಿಯ ಗೋಡೆಯ ಮೇಲೆ ಅಭ್ಯರ್ಥಿಗಳ ಪೋಷ್ಟರ್ರು

ಯಾರೇ ಗೆದ್ದು, ಆರಿಸಿ ಬಂದರೂ ಸುದಾರಿಸಲಿಲ್ಲ ನಮ್ಮೂರು

ಬೀದಿಯ ಕತ್ತೆಗಳಿಗೆ ಮಾತ್ರ ಹೊಟ್ಟೆ ತುಂಬಿತು ಬಲು ಜೋರು !

ಒಲವಿನ ಗುಂಗು

========
ಲೇಖನಿ ಹರಿಸಿದ,
ಒಲವನು ಶಾಹಿಯಿಂದ..
ಬಿಳಿ ಹಾಳೆಯಲ್ಲಾ ರಂಗು ರಂಗು..
ಅಂದಿನಿಂದ ಶಾಹಿಗೆ,
ಬರೀ ಲೇಖನಿದೇ ಗುಂಗು...!!
--------------------------

ಲೇಖನಿ

====
ಲೇಖನಿಯ ಸ್ಪರ್ಶಕ್ಕೆ...
ಖಾಲಿ ಹಾಳೆಗಳು ಮಾತಾಡಿದವು..!
ಲೇಖನಿಯ ಮನದಾಳಾದಿಂದ
ಗುಟ್ಟುಗಳೆಲ್ಲಾ ರಟ್ಟಾದವು..!
-----------------------