Saturday, March 23, 2013

ಆ ಕಾಲಕ್ಕೆ ಮತ್ತೆ ಮರಳಬೇಕೆನ್ನಿಸಿದೆ ...


ನಾ ಕಾಲಿಟ್ಟ ಈ ಜಗದ ಹೊಸದರಲ್ಲಿ.., ಅಳು ಅಳುತ್ತಾ ಬಂದದ್ದು...,
ನಿದ್ದೆ ಮಾಡದೇ ಇಡಿ ರಾತ್ರಿಯಲ್ಲಾ ಅಪ್ಪ ಅಮ್ಮನ ನಿದ್ದೆಗೆಡಿಸಿದ್ದು
ನಾ ತೆವಳುತ್ತಾ ಅಂಬೆಗಾಲಿಟ್ಟದ್ದು , ಗೊಡೆಯ ಹಿಡಿದು ಇಟ್ಟ ಮೊದಲ ಹೆಜ್ಜೆ
ಅಲ್ಲಿಗೆ ಶುರುವಾದ ಕಲರವದ ಆಟ., ನನ್ನ ಹಿಡಿಯಲಾಗದೇ ಸುಸ್ತಾದ ಅಮ್ಮ..
ಆಡು ಆಡುತ್ತಾ ತಲೆ ನೆಲಕಚ್ಚಿ ಹೌದಿಗೆ (ತೊಟ್ಟಿಗೆ) ಬಿದ್ದದ್ದು
ಗಾಬರಿಗೊಂಡ ಅಮ್ಮ ನನ್ನ ಪುಟ್ಟ ಕಾಲುಗಳ ಹಿಡಿದು ಮೇಲಕ್ಕೆ ಎತ್ತಿದ್ದು
ಮರಳಬೇಕೆನ್ನಿಸಿದೆ ಆ ಕಾಲಕ್ಕೆ ಮತ್ತೆ....

ಅಮ್ಮ ಕೈ ಹಿಡಿದು  ಅ ಆ ಇ ಈ ತಿದ್ದಿಸಿದ್ದು
ತೊಡೆ ಮೇಲೆ ಕೂಡಿಸಿಕೊಂಡು ಉಣ್ಣಿಸುತ್ತಿದ್ದದ್ದು
ಅಂಗಳವೆಲ್ಲಾ ಸಾರಿಸಿ ಆಡಲು ಜಗ ಮಾಡಿ ಕೊಟ್ಟಿದ್ದು
ಅಪ್ಪ ಕೊಡಿಸಿದ ಮೊದಲ ಸೈಕಲ್ಲು ತುಳಿಯುತ್ತಾ
ಕಛೇರಿಯಿಂದ ಮರಳಿದ ಅಪ್ಪನ ತೋಳಲಿ ಜಿಗಿದು ಸೇರಿದ್ದು
ಬಾರ್ ಬಾರ ಗುಬ್ಬಚ್ಚಿಯ ಹಾಡು, ಸುಖ ನಿದ್ದ್ರೆಗೆ ಜಾರಿಸುತ್ತಿತ್ತು
ಮರಳಬೇಕೆನ್ನಿಸಿದೆ ಆ ಕಾಲಕ್ಕೆ ಮತ್ತೆ....

ಬಾಲವಾಡಿಯಲ್ಲಿ ಹೊಸ ಗೆಳೆಯರ ಸೇರಿದ್ದು
ಲಲಿತಾ ಟೀಚರ ಅವರ ಹಾಸ್ಯಮಯ ಪಾಠಗಳು
ಗೆಳೆಯರ ಜುಟ್ಟು ಹಿಡಿದು ಜಗಳವಾಡಿದ್ದು
ಜೀವನದ ಪ್ರಥಮ ಪರೀಕ್ಷೆ ಬರೆದು, ಮುದುಡಿ ಮಾಡಿ, ಪಾಟಿಚೀಲದಲ್ಲಿ ತುರಿಕಿಕೊಂಡ ಉತ್ತರ ಪತ್ರಿಕೆ..
ನೋಡಿದ ಅಮ್ಮ.., ಲತ್ತಿಗುಣಿಯಲೇ ಬೆನ್ನಿಗೆ ಬಾರಿಸಿದ್ದು
ನೆನೆಸಿಕೊಂಡರೆ ಇನ್ನೂ ನೆನಪಿಗೆ ಬರುತ್ತವೆ ಆ ಬಾಸುಂಡೆಗಳು....
ಮರಳಬೇಕೆನ್ನಿಸಿದೆ ಆ ಕಾಲಕ್ಕೆ ಮತ್ತೆ....

ಸ್ವಲ್ಪ ದೊಡ್ಡವನಾಗುತ್ತಲೇ ಗಳಸಿಕೊಂಡ ಉಡಾಳ ಗೆಳೆಯರು
ಆಟಿಗೆಯ ಟ್ರಕ್ಕನ್ನು ತೊಳೆಯಲು ಹೊಳೆಗೆ ತರಳಿದ್ದು
ಮನೆಗೆ ಬಂದೊಡನೆ ಅಮ್ಮನಿಗೆ ಹೇಳಿ ಬಯಸಿಕೊಂಡಿದ್ದು
ಹುಳ ಹುಪ್ಪಡಿ ಹಾವುಗಳು ಇರುವಲ್ಲಿ ಏಕೆ ಹೋಗಿದ್ದೆ..?
ಅಲ್ಲಿ ಏನೂ ಕಾಣಲಿಲ್ಲ ಅಂತ ಉತ್ತರಿಸಿದ ಮುಗ್ಡತೆಯ ತುಂಟ ಉತ್ತರ..
ಯಲ್ಲಮ್ಮನ ಮಗ ಮಲ್ಲೆಷಿಯ ಜೊತೆ ಗೋಲಿ ಆಡಿದ್ದು..
ಮರಳಬೇಕೆನ್ನಿಸಿದೆ ಆ ಕಾಲಕ್ಕೆ ಮತ್ತೆ....

ಮಳೆಗಾಲದಲ್ಲಿ ಚತ್ರಿ ಹೊತ್ತು ಶಾಲೆಗೆ ಹೋಗುತ್ತಿದ್ದದ್ದು..
ರಸ್ತೆಯಲ್ಲಿ ಪುಟಿಯುತ್ತಿದ್ದ ಸಣ್ಣ ಸಣ್ಣ ಕಪ್ಪೆ ಕಂಡು ವಿಸ್ಮಯಗೊಂಡದ್ದು
ದಾರಿಯ ಉದ್ದಕ್ಕೂ ಹರಡಿದ ಬಳ್ಳಿಗಳಲ್ಲಿ ಬೋರಂಗಿ ಹಿಡಿದದ್ದು
ಕೇಜಿಗಟ್ಟಲೆ ಪಾಟಿಚೀಲ ಹೊತ್ತು ಸುಸ್ತಾಗಿ ಮನೆಗೆ ಮರಳಿದ್ದು
ಹಪ ಹಪಿಸುತ್ತ ಬಂದು ರೊಟ್ಟಿ ಬಡಿಯುತ್ತಿದ್ದ ಅಮ್ಮನ ಮುಂದೆ ನಿಂತು ಹಸಿವು ಅಂದಿದ್ದು
ಅಮ್ಮ ಮಾಡುತ್ತಿದ್ದ ಚವಳಿಕಾಯಿ ಪಲ್ಲ್ಯೆ  ಚಟ್ನಿ ಜೊತೆ ಊಟ ಸವೆದದ್ದು..
ಮರಳಬೇಕೆನ್ನಿಸಿದೆ ಆ ಕಾಲಕ್ಕೆ ಮತ್ತೆ....

ಶಾಲೆಯಲ್ಲಿ ಸಿಕ್ಕ ಬಾಲ್ಯದ ಮೊದ ಮೊದಲ ಗೆಳತಿ ನೀತಾ
ಯಾರೇ ಕಾಡಿಸಿದರೂ ಹೇಳು.., ನಾ ಹೊಡೆಯುವೆ ಅವರಿಗೆ ಅಂದದ್ದು..
ಶಾಲೆ ಬಿಟ್ಟೊಡನೆ ಕೈ ಕೈ ಹಿಡಿದು ಮನೆಗೆ ಮರಳುತ್ತಿದ್ದದ್ದು..
ಅಮ್ಮ ನಾ ಸುನಿಯೊಡನೆ ಊಟ ಮಾಡುವೆ ಅಂತ ಪೀಡಿಸುತ್ತಿದ್ದ ಗೆಳತಿ
ಇಬ್ಬರನ್ನೂ ಕೂಡಿಸಿ ಅಡುಗೆ ಬಡಿಸಿ, ನಂತರ ನಾಯಿ ಮರಿ ನಾಯಿ ಮರಿ ತಿಂಡಿ ಬೇಕೆ..? ಉಮಾ ಅಂಟಿ ಕಲಿಸಿಕೊಟ್ಟಿದ್ದ ಪದ್ಯ..
ನೆನಪುಗಳು ಇನ್ನೂ ಹಚ್ಚ ಹಸಿರಾಗಿದೆ ಎನ್ನ ಎದೆಯಲ್ಲಿ...
ಮರಳಬೇಕೆನ್ನಿಸಿದೆ ಆ ಕಾಲಕ್ಕೆ ಮತ್ತೆ....

***ಭಾವಪ್ರಿಯ***

No comments:

ಸಾವಿಗೆ ಕಿವಿ ಕೊಟ್ಟಾಗ..!

ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...