Friday, March 28, 2014

ಗೌರಮ್ಮ

ಬಿಚ್ಚೋಲೆ ಗೌರಮ್ಮನಿಗೆ ರಾಜಕೀಯ ಹುಚ್ಚು


ಯಾವ ಮೂಢರು ಆನ್ ಮಾಡಿಹರು ಇವಳ ಮನದ ಸ್ವಿಚ್ಚು ?

ಚುನಾವಣೆ

ಬೀಸುತ್ತಿದೆ ರಾಜ್ಯಕೀಯ ಗಾಳಿ

ಪಕ್ಷ , ಪ್ರತಿ ಪಕ್ಷಗಳ ವಾಗ್ದಾಳಿ

ಯಾರ ಮುಡಿಗೇರಿದರೂ " ಚುಕ್ಕಾಣಿ " ನೀ ತಿಳಿ

ವಸ್ತುಗಳು ತುಟ್ಟಿ, ಜನರು ದಿವಾಳಿ !

Thursday, March 27, 2014

ಅರ್ಹತೆ

ಪ್ರತಿ ಚಿತ್ರದಲ್ಲೂ ಬದಲಾಯಿಸುವಂತೆ ಪಾತ್ರ
ದಿನೆ ದಿನೆ ಬದಲಾಯಿಸುತ್ತಿರುವರು ಪಕ್ಷ !
ಸಮಾಜ ಸೇವೆ ಅನ್ನುವುದು ತೆರೆಯ ಮೇಲಿನ ಚಿತ್ರವಲ್ಲ
ಇಂತಹ ನಟಿಮಣಿಯರು ಸಮಾಜದ ಕಾರ್ಯಕ್ಕೆ ಅರ್ಹರೇ ಅಲ್ಲಾ !!

ವಿಪರ್ಯಾಸ

ನಟನೆಯ ಬಿಟ್ಟು ಬೀದಿಗೆ ಇಳಿತಾರಂತೆ ನಟರು,
ತೆರೆಯ ಮೇಲಿನ ನಾಟಕ ಬಿಟ್ಟು, ಬೀದಿ ನಾಟಕಕ್ಕೆ ಹಾಜರು !!

ಕಸರತ್ತು

ಇನ್ನು ಶುರುವಾಯ್ತು...
ಚುನಾವಣೆಯ ಪ್ರಚಾರದ ಭರಾಟೆ !
ಜನರನ್ನು ಒಲಿಸಲು ನಡೆಸುವರು...
ಹಲವು ತರಹದ ಕಸರತ್ತು - ಕರಾಟೆ !!

ಹುಸಿ ನಗೆ

ಹುಸಿ ನಗೆಯ ಬೀರಿ ಜಗವ ಮೆಚ್ಚಿಸಬಹುದು
ಹುಸಿ ನಗೆಯು ಅನ್ಯರ ಜೊತೆ ಬೆರೆಸಲೂಬಹುದು
ಹುಸಿ ನಗೆಯ ಬಣ್ಣವ ಬಲ್ಲವರ್ಯಾರು ?

ಹುಸಿ ನಗೆಯ ಮರ್ಮ ತಿಳಿದವರಿಲ್ಲ
ಹುಸಿ ನಗೆಯೊಂದಿಗೆ ಬಾಳಲಾಗುವುದಿಲ್ಲ
ಹುಸಿ ನಗೆಯು ಎಂದೆಂದಿಗೂ ನೋವನ್ನು ಅಳಿಸುವುದಿಲ್ಲ !!

THOUGHT FOR THE DAY

"  The false SMILE on the face never cures the pain of the heart " 

Wednesday, March 26, 2014

ಬೇಲಿ

ಅವನು ಹೃದಯದ ಸುತ್ತಲೂ,
ಬೆಸಿದ್ದಿದ್ದಾನಂತೆ ಮುಳ್ಳಿನ ಬೇಲಿ !
ಯಾರೂ ಕದಿಯ ಬಾರದು ಅಂತಾ..,
ಅವನ ಹೃದಯದ ಮಲ್ಲಿ !!

ಸಿಹಿ ಮುತ್ತು

ನಲ್ಲೆ, ತಂದು ಕೊಡಲೆ ನಿನಗೆ ಆ ಸಾಗರದಾಳದ ಮುತ್ತು .? ಅಂದನವನು.... 
ನಲ್ಲಾ, ಆ ಮುತ್ತಗಳ ಬೆಲೆ ಎಷ್ಟೇ ಇದ್ದರೂ .., ನೀ ನೀಡುವ ಪ್ರೀತಿಯ ಸಿಹಿ ಮುತ್ತಿಗೆ ಬೆಲೆ ಕಟ್ಟಲಾದೀತೆ ಎಂದಳಾಕೆ ..?

ಸಹಜ ಗುಣ

ದಿನ ದಿನ ಮುನಿಸಿಕೊಂಡರೂ ನಾ

ಮರುದಿನ ಅವಳು ಮತ್ತೆ ಸಹಜ

ಮನಮೆಚ್ಚಿಹುದು ಅವಳ ಆ ಸಹಜ ಗುಣ

ಮತ್ತೆ ಮತ್ತೆ ಸೆಳೆಯುತ್ತದೆ ಅವಳೆಡೆಗೆ ನನ್ನ.

ರಾಜ್ಯಕೀಯ

ದಿಲ್ಲಿಯಿಂದ ಕನ್ಯಾಕುಮಾರಿವರೆಗೂ ಕುಟುಂಬ ರಾಜ್ಯಕೀಯ

ಯಾರು ಗೆದ್ದರು ನಮಗೆ ಸುಖವೇನೂ ಇಲ್ಲಾ,

ಜನರ ಕಷ್ಟಗಳ ದೂಡಿ.., ತುಂಬಿಸಿಕೊಳ್ಳುವರು ಅವರವರ ಪಾತ್ರೆಯ !

ಸುದ್ದಿ


ದೇವರನ್ನು ಒಲಿಸಿಕೊಳ್ಳಲು ಏನ್ ಏನು ಮಾಡುತ್ತಾರೋ ಮೂಢ ಜನ
ಇವರುಗಳ ಕೆಟ್ಟ ಚಟ ತೀರಿಸಿಕೊಳ್ಳಲು ದೇವರಿಗೂ ಮದ್ಯದ ನೈವೇದ್ಯ !

Tuesday, March 25, 2014

ಮತ್ತೆ ಮತ್ತೆ ನೆನಪಾಗುತ್ತದೆ.....!

ಅವಳನ್ನು ರಮಿಸಲು ಹೋದ 
ನನ್ನ ಕೈ ಮೇಲೆ ಬಿದ್ದ ಅವಳ ಕಣ್ಣ ಹನಿ.. 
ಎಷ್ಟೋ ತಿಂಗಳುಗಳು ಕಳೆದರೂ..., 
ನನ್ನ ಕೈ ನೋಡಿಕೊಂಡಾಗಲೆಲ್ಲಾ
ಅವಳ ಕಣ್ಣ ಹನಿಯ ತಂಪು ಇಂದಿಗೂ,
ಅವಳ ನೋವನ್ನು ಮತ್ತೆ ಮತ್ತೆ ಮರುಕಳಿಸುತ್ತದೆ. !!

THOUGHT FOR THE DAY

Faith is the blind belief, where it is lost when its not kept.

Monday, March 24, 2014

ಅನಿಸುತಿದೆ....

ಆದರೆ ಆಗಬೇಕು..,
                        ನೊಂದ, ಬೆಂದ ಕಣ್ಣಗಳಿಗೆ ತಂಪು ನೀಡುವ ಚೇತನ
                        ಹಸಿದ ಹೊಟ್ಟೆಗೆ ಹಸಿವ ನೀಗಿಸುವ ಮೃಷ್ಟಾನ
                        ಅನಾಥರಿಗೆ ಆಸರೆಯಾಗಬೇಕು ಸಲಹುವ ಅಣ್ಣ
                        ಕಂಗೆಟ್ಟ ಹೆಣ್ಣಿಗೆ ಕಣ್ಣಾಗಬೇಕು ಅರ್ಥಪೂರ್ಣಾಗಿಸಲು  ಅವಳ  ಜೀವನ !
                        

ಜೋಡಿ

ನಾನು ನೀನು ಸೂಪರ್ ಜೋಡಿ

ಪ್ರೀತಿನ ನಮ್ಮ ಪಯಣದ ಗಾಡಿ

ಯಾರಾದರೂ ಆದ್ರ ಅಡ್ಡ ಗ್ವಾಡಿ

ಎಲ್ಲಾ ಬಿಟ್ಟಕೊಟ್ಟು ಹೋಗೊಣ ಓಡಿ

ಹನಿ

ನಮ್ಮಿಬ್ಬರ ಪಿರುತಿ..

ಜನುಮ ಜನುಮದಾ ನಂಟು !

ಸುಮ್ನ ಹು ಅನ್ನಾಕ...

ಏನ್ ಹೋಗ ತೈತಿ ನಿನ್ನ ಗಂಟು ?

Friday, March 21, 2014

ಹುಡುಗೀಯರೇ ಫಾಸ್ಟು ಕಣ್ರಿ...!

ಕಾಮನ ಹುಣ್ಣಿಮೆಯಂದು
ಬಿಲ್ಲು ಹಿಡಿದು ಬಾಣ ಹೂಡಿ ನಿಂತ ಅವನು
ಬಾಣ ಬಿಡುವ ಮುಂಚೆನೆ ಗುಂಡೊಂದು
ಜೋರಾಗಿ ಬಂದು ಹೃದಯ ನಾಟಿತು...!
ಹುಡುಗರು ತುಂಬಾ ಸ್ಲೋ ಕಣ್ರಿ ...ಅದಕ್ಕೆ, 
ಅವಳೇ ಮೊದಲು ಅವನ ಹೃದಯಕ್ಕೆ ಹೊಡೆದಳಂತೆ !!

ಸುಮ್ ಸುಮ್ನೆ

ನನ್ನಷ್ಟೇ ಕೂತುಹಲ 
ಅವಳಿಗೂ..., ನನ್ನಲ್ಲಿ !
ಅದಕ್ಕೆ..,
ಕದ್ದು ಕದ್ದು ನೋಡುತ್ತಾಳೆ..
ಕೂತು, ಮರೆಯಲ್ಲಿ..! 

Thursday, March 20, 2014

ಹೃದಯ ಹಾಡಿದೆ ಇಂದು

ನಗು ಮಲ್ಲಿಗೆ ತುಟಿಗಳಲ್ಲಿ ನಗುತಿವೆ
ಸಣ್ಣನೆಯ ಕಣ್ಣುಗಳು ಭಾಷ್ಪದಲ್ಲಿ ಅರಳಿವೆ
ಹೊಸ ಭಾವಗಳು ಮೂಡುತ ಮನಸಲಿ
ಉಲ್ಲಾಸಗೊಂಡು ಹೃದಯ ಹಾಡಿದೆ ಇಂದು..!

ನವ ಮಾಸದ ನವ ಋತುವಿನಲಿ
ನವ ಕನಸ್ಸುಗಳ ಹೊತ್ತು ಕಣ್ಣಲಿ
ಮತ್ತೆ ಚಿಗುರುತಿವೆ ಆಸೆಗಳು
ತೂಗುಯ್ಯಾಲೆಯಲ್ಲಿ ತೆಲುತ್ತಾ ಹಾಡಿದೆ ಹೃದಯ ಇಂದು..!

ಕತ್ತಲೆ ದಾರಿಯ ಕವಿದು
ಬೆಳೆಕು ಎಲ್ಲೆಡೆ ಮೆರೆದು
ಹೊಸ ಗುರಿಯಡೆಗೆ ದಾಪುಗಾಲು
ಕುಣಿಯುತ್ತಾ ಸಾಗಲು.., ಹಾಡಿದೆ ಹೃದಯ ಇಂದು..!!



Monday, March 17, 2014

ಮಚ್ಚು V/s ಲೇಖನಿ

ಮಚ್ಚುಗಳಿಂದ ಇರಿದರೆ ಕೊಲೆ


ಲೇಖನಿಯಿಂದ ಇರಿದರೆ ಕಲೆ

ಮಚ್ಚು ಮನೆ ದೀಪವ ಆರಿಸುವುದು

ಲೇಖನಿ ಜ್ಯೋತಿಯ ಬೆಳಗಿಸಬಲ್ಲದು !

ನನ್ನ ಭಾವಗಳು

ಕದ್ದೋಡ ಬೇಡವೇ ಭಾವನಾ ನನ್ನ ಭಾವಗಳನ್ನ


ಹೇಗೆ ಇರಲಿ ಬರೆಯದೇ ಸಾಲುಗಳನ್ನ ?

ನಿದ್ದೆಯನ್ನಾದರೂ ಕದ್ದುಬಿಡು

ಆ ಕ್ಷಣಗಳೇ ಸಾಕು ನೆನೆಯಲು ನಿನ್ನ !!

ಚಮರ ಗೀತೆ

ಅವನು ಬರೆದ ಕವಿತೆ ಅವಳಿಗೆ, ಚಮರ ಗೀತೆ


ಕಾಳಿದಾಸ ಭೋಜರಾಜನಿಗೆ ಹಾಡಿದಂತೆ !!

ಲೋಕ ತ್ಯಜಿಸಿದವಳು

ಅಂದು,

ನನ್ನ ಕಪ್ಪು ಬಿಳುಪಿನ ಜೀವನಕ್ಕೆ ಬಣ್ಣ ಹಚ್ಚಿದ್ದಳು

ಇಂದು,

ಬಣ್ಣಗಳಿದ್ದೂ.., ಅವಳ ನೆನಪುಗಳೆಲ್ಲಾ ಕಪ್ಪು ಬಿಳುಪು !!

ಆಹ್ವಾನ

ಅವಳು,


ಎರೆದುಕೊಂಡು ಹೊರ ಬಂದಾಗ..

ಬಚ್ಚಲಮನೆ,

ಬಿಸಿಯಾಗಿ ಬುಸುಗೂಡುತ್ತಿತ್ತು !

ಅವಳ,

ಆ ಅದರುವ ತುಟಿಗಳ

ಮೇಲೆ ಜಿನುಗುವ ಹನಿಗಳು

ಅವಳ ಸನೀಹಕೆ ಆಹ್ವಾನಿಸುತ್ತಿದ್ದವು.!!

ಹನಿ

ಅವಳ ನಿರಂತರ ಒಲವಿಗೆ

ನನ್ನ ಪ್ರೀತಿಯ ಒಪ್ಪಿಗೆ !

ಹಾಗಿದ್ದರೆ..

ಕೊಡು ಎಂದಳು..,

ಒಂದು ಬಿಗಿಯಾದ ಅಪ್ಪುಗೆ !!

Thursday, March 13, 2014

ಚಿಕ್ಕದಾದ ದೊಡ್ಡ ಕಥೆ

ಅವರಿಬ್ಬರು ಒಳ್ಳೆಯ ಸ್ನೇಹಿತರು. ಒಬ್ಬರಿಗಿಂತ ಒಬ್ಬರೂ ಗುಣವಂತರು, ಯೋಚನಾಶೀಲರು. ವಯಸ್ಸು ಬೆಳೆದಂತೆ ತಮ್ಮ ತಮಗೆ ತಕ್ಕಂತ ಹುಡುಗ ಹುಡುಗಿಯ ನೋಡಿ ಮದುವೆಯಾದರು.  ಮದುವೆಯ ಹೊಸದರಲ್ಲಿ ಇಬ್ಬರೂ ತಮ್ಮ ತಮ್ಮ ಸಂಸಾರದಲ್ಲಿ ಸಂತೋಷ  ಸಂಭ್ರಮಗಳಲ್ಲಿ ಮಗ್ನರು. ದಿನಗಳು ಕಳೆದಂತೆ ಗೆಳತಿಗೆ ಮನೆಯಲ್ಲಿ ಸಣ್ಣ ಪುಟ್ಟ ಜಗಳ, ಮನಸ್ತಾಪ ಶುರುವಿಡುತ್ತವೆ. ಅವಳು ಎಷ್ಟೇ ಕಷ್ಟಗಳ ಪಡುತ್ತಿದ್ದರೂ ಸ್ನೇಹಿತನ ಜೊತೆ ಹೇಳಿಕೊಳ್ಳುವುದಿಲ್ಲ. ಆ ಗೆಳೆಯ ಇವಳನ್ನು ಮೊದಲಿನಿಂದಲೂ ನೋಡಿದವ, ಅವಳು ಹೇಳದೇ ಇರುವ ವಿಷಯ ಅವಳ ಮುಖದಲ್ಲಿ ಅವನಿಗೆ ಕಾಣುತ್ತಿತ್ತು.., ಆದರೂ ಸಹ ಅವಳಾಗಿಯೇ ಹೇಳಲಿ ಎಂದು ಸುಮ್ಮನಾಗಿದ್ದನು. ಅವಳ ಗಂಡನೆನೋ ಒಳ್ಳೇಯವನೆ ಆದರೆ ಅವಳ ಅತ್ತೆ ಮಾವಂದಿರ ಕಾಟ ಅವಳಿಗೆ. ಹೀಗೆ ಮಾಡಬಾರದು.., ಹಾಗೆ ಮಾಡಬಾರದು.., ಅವಳಿಗೆ ಈ ಸಣ್ಣ ಪುಟ್ಟ ಮನಸ್ತಾಪಗಳು ದೊಡ್ಡದು ಅನ್ನುವ ಭಾವನೆ. ಏಕಾ ಏಕಿ ಒಂದು ದಿನ ಸ್ನೇಹಿತನ ಬಳಿ ಬಂದು ತನ್ನ ಸಮಸ್ಯೆಯ ಬಗ್ಗೆ ವಿವರಿಸುತ್ತಾಳೆ. ಅವಳ ಮನಸ್ಥಿತಿಯ ಅರ್ಥ ಮಾಡಿಕೊಂಡ ಸ್ನೇಹಿತ ಅವಳಿಗೆ ಮೊದಲು ಶಾಂತವಾಗಿಸುತ್ತಾನೆ. ಅವಳನ್ನು ಕುರಿತು, ನೋಡು ಮದುವಯ ಹೊಸದರಲ್ಲಿ ಇವಲ್ಲಾ ಸಾಮಾನ್ಯ, ಗಂಡನ ಮನೆಯಲ್ಲಿ ಹೊಂದಿಕೊಳ್ಳಲು ಸಮಯ ಬೇಕು, ಒಮ್ಮಿಂದೊಮ್ಮೆಲೆ ಎಲ್ಲವೂ ಅಂದುಕೊಂಡಹಾಗೆ ನಡೆಯುತ್ತಿಲ್ಲ ಅಂದು ಆತುರತೆಯಲ್ಲಿ ನಿರ್ಣಯ ತೆಗೆದುಕೊಳ್ಳುವುದು ಸಮಂಜಸವಲ್ಲ. ಎಲ್ಲರ ದೃಷ್ಟಿಯಲ್ಲಿ ಒಂದು ಸನ್ನಿವೇಶವನ್ನು ಗಮನಿಸು, ಒಬ್ಬೊಬ್ಬರ ದೃಷ್ಟಿಯಲ್ಲಿ ಆ ಸನ್ನಿವೇಶ ಬೆರೆ ಬೆರೆ ಅರ್ಥದಲ್ಲಿ ಗೋಚರಿಸುತ್ತದೆ. ಹಾಗೆಯೇ ನೀನು ನಿನ್ನ ಮಾವನ ಸ್ಥಾನದಲ್ಲಿ ನಿಂತು ಯೋಚಿಸು, ಹಾಗೆಯೇ ಅತ್ತೆಯ ಸ್ಥಾನದಲ್ಲಿ, ಗಂಡನ ಸ್ಥಾನದಲ್ಲಿ ಯೋಚಿಸು, ಅವರುಗಳಿಗೆಲ್ಲಾ ಒಂದೊಂದು ಅವರದೇ ಆದ ಯೋಚನೆ ಇರುತ್ತದೆ. ಎಲ್ಲಾ ವಿಷಯಗಳನ್ನು ನಿನ್ನ ಒಬ್ಬಳ ದೃಷ್ಟಿಯಲ್ಲಿ ಯೋಚಿಸದಿರು. ನೀನು ಅವರ ಮನೆಯ ಮಗಳು, ಆ ಮನೆ ನಿನ್ನದೇ ಎಂದು ಭಾವಿಸು. ನಿನ್ನ ಅಪ್ಪಾ ಅಮ್ಮಂದಿರ, ಅಣ್ಣ ತಮ್ಮಂದಿರ ಪ್ರೀತಿ ನಿನ್ನಲ್ಲಿಯೇ ಇರಲಿ, ಆದರೆ ಅವರುಗಳನ್ನ ಕಟ್ಟಿಕೊಂಡು ಜಗಳಕ್ಕೆ ಇಳಿಯುವುದು, ನಿನ್ನ ನೆಮ್ಮದಿ ಹಾಗು ಗಂಡನ ನೆಮ್ಮದಿ ಹಾಳು ಮಾಡುವುದರಿಂದ ನಿನ್ನ ಜೀವನಕ್ಕೆ ಸಂಕಷ್ಟ ಬರುತ್ತದೆ, ಅದು ಸಲ್ಲದು. ನಾನು ನನ್ನ ಗಂಡನ ಜೊತೆ ಸುಖವಾಗಿ ಜೀವನ ಮಾಡಲು ಏನು ಮಾಡಬೇಕು, ಗಂಡ ನನ್ನಿಂದ ಯಾವ ವರ್ತನೆ ಬಯಸುತ್ತಾನೆ, ಅವನು ಅಂದುಕೊಂಡ ಹಾಗೆ ನಾನು ವರ್ತಿಸಿದರೆ ಖಂಡಿತ ಗಂಡನು ತನಗೆ ಒಳ್ಳೆಯವನಾಗಿಯೇ ಇರುತ್ತಾನೆ ಅನ್ನುವುದ ತಿಳಿ. ಹಾಗೆಯೇ ಅತ್ತೆಗೆ ತಕ್ಕ ಸೊಸೆ ಆಗಲು ಏನು ಮಾಡಬೇಕು, ನಿನ್ನ ಅತ್ತೆಯ ಅಭಿಲಾಷೆಗಳೇನು ಅವಳು ನಿನ್ನಲ್ಲಿ ಏನೇನು ಗುಣಗಳನ್ನು ಅಪೇಕ್ಷಿಸುತ್ತಾಳೆ, ಅದೇ ತರಹ ಅವಳೊಂದಿಗೆ ನಡೆದುಕೊಂಡರೆ ಅವಳ ಕಣ್ಣಿನಲ್ಲಿ ಒಳ್ಳೆಯ ಸೊಸೆ ಅನ್ನಿಸಿಕೊಳ್ಳಬಹುದು. ಹಾಗೆಯೇ ಮಾವನ ಕೂಡಾ ಸಹ. ಒಂದು ಸೊಸೆಯ ಸ್ಥಾನ ಮನೆಯಲ್ಲಿ ತುಂಬಾ ಅನರ್ಘ್ಯವಾದದ್ದು ಅದನ್ನು ನಂಬಿಕೆಯಿಂದ ಗಳಿಸಲು ಬಹಳಷ್ಟು ಶ್ರಮ ಪಡಬೇಕಾಗುತ್ತದೆ. ಹಾಗೆ ಇವುಗಳನ್ನು ಸಾಧಿಸಲು ಬರೀ ಒಂದು ಎರಡು ವರ್ಷಗಳು ಸಾಲುವುದಿಲ್ಲ. ನಿನಗೆ, ಈ ನಿನ್ನ ಸ್ನೇಹಿತನ ಮೇಲೆ ಗೌರವ ಇದ್ದರೆ ನಾನು ಹೇಳಿದ ಹಾಗೆ ಕೆಲ ದಿನ ಬಾಳಿ ನೋಡು, ಅದರ ಸಂತೋಷ ಸಂತೃಪ್ತಿಯನ್ನು ಅನುಭವಿಸಿ ನೋಡು ಆಗ ನಿನಗೇ ಅರ್ಥವಾಗುತ್ತದೆ. ಒಂದು ತಪ್ಪು ಹೆಜ್ಜೆ ಎಲ್ಲರ ಜೀವನವನ್ನು ಹಾಳು ಮಾಡಬಹುದು ಅದಕ್ಕೆ ಆತುರತೆಯಿಂದ ಜೀವನ ಹಾಳು ಮಾಡಿಕೊಳ್ಳುವುದು ಸಮಂಜಸವಲ್ಲ. ಇನ್ನೊಂದು ವಿಷಯ ನಿನ್ನ ಅಪ್ಪ ಅಮ್ಮಂದಿರು ನಿನ್ನ ಮದುವೆ ಮಾಡುವಾಗ ಬೆಟ್ಟದಷ್ಟು ಆಸೆಗಳ ಇಟ್ಟುಕೊಂಡು ಮದುವೆ ಮಾಡಿದ್ದಾರೆ, ನಿನ್ನ ಒಂದು ತಪ್ಪು ಹೆಜ್ಜೆ ಅವರ ಎಲ್ಲಾ ಕನಸ್ಸುಗಳನ್ನು ನುಚ್ಚುನೂರು ಮಾಡಬಹುದು. ನೀನು ತುಂಬಾ ಯೋಚನಾಶಿಲಳು ಹೌದು, ಅದಕ್ಕೆ ಸ್ವಲ್ಪ ಸಮಯ ತೆಗೆದುಕೊಂಡು ದಿಟ್ಟತನದಿಂದ ಮುಂದುವೆರೆ. ನನಗೆ ನಂಬಿಕೆ ಇದೆ, ನೀನು ನಿನ್ನ ಎಲ್ಲಾ ಸಮಸ್ಯೆಗಳಿಂದ ಹೊರ ಬಂದು ಒಂದು ಒಳ್ಳೆಯ ಜೀವನ ಪಡೆಯುತ್ತಿ ಅಂತಾ. ನನ್ನ ಮಾತುಗಳನ್ನು ನೆನಪಿನಲ್ಲಿ ಇಟ್ಟುಕೊಂಡು, ಎಲ್ಲವನ್ನು ಅನುಷ್ಟಾನಕ್ಕೆ ತಂದು ನೋಡು ನಿನ್ನ ಜೀವನ ಸುಖಮಯವಾಗುತ್ತದೆ. 
ಮಧ್ಯಾಂತರ ವಿರಾಮ...................೬ ತಿಂಗಳುಗಳ ಬಳಿಕ ಇವರ ಭೇಟಿ.........!!
ಅವಳ ಮುಖದಲ್ಲಿ ಮಂದಹಾಸ......! ಅವಳ ಮುಖ ಭಾವಗಳು ಸುಖದ ಸುಪ್ಪತ್ತಿಗೆಯಲ್ಲಿ ತೇಲುತ್ತಿವೆ. ಬಹು ದಿನಗಳ ಬಳಿಕ ಸ್ನೇಹಿತರು ಮತ್ತೆ ಮಾತುಗಳಿಗೆ ಇಳಿಯುತ್ತಾರೆ. ಏನಮ್ಮಾ ನಿನ್ನ ಮುಖದಲ್ಲಿ ಕಳೆ ರಾರಾಜಿಸುತ್ತಿದೆ, ನಿನ್ನ ಗಂಡ, ಅತ್ತೆ ಮಾವಂದಿರು ಹೇಗಿದ್ದಾರೆ, ನಿಮ್ಮ ಅಪ್ಪ ಅಮ್ಮಂದಿರು, ಅಣ್ಣ ತಮ್ಮಂದಿರು ಎಲ್ಲರೂ ಹೇಗಿದ್ದಾರೆ ? ಹಾ...ಹಾ.....ಹೇಳಿತ್ತೆನೆ...ಎಲ್ಲಾರೂ ಚೊಲೊ ಇದ್ದಾರ. ನನ್ನ ಮನೆ ಇಂದು ನಂದಾನವನ, ನನ್ನ ಗಂಡ ನನ್ಗೆ ತುಂಬಾ ಪ್ರೀತಿ ಮಾಡುತ್ತಾನೆ, ನನ್ನ ಅತ್ತೆ ಅಲ್ಲ ಅವರು ನನ್ನ ಅಮ್ಮ, ಅವರ ಮಾತೃ ಛಾಯೆಯಲ್ಲಿ ನಾನು ಬೆಳಗುತ್ತಿದ್ದೇನೆ, ಮಾವ ಕೂಡಾ ನನ್ನ ತಂದೆಯ ಸ್ಥಾನದಲ್ಲಿ ಇದ್ದು ನನ್ನ ಸ್ವಂತ ಮಗಳ ಹಾಗೆ ನೋಡಿಕೊಳ್ಳುತ್ತಿದ್ದಾರೆ. ನನ್ನ ಅಪ್ಪಾ, ಅಮ್ಮಾ, ಅಣ್ಣಾ, ತಮ್ಮ ಎಲ್ಲರೂ ಮನೆಗೆ ಬಂದು ಹೋಗುತ್ತಾರೆ. ನನ್ನ ಮನೆಯೇ ಸ್ವರ್ಗ. ನನಗಿಂತಾ ಪುಣ್ಯವತಿ ಈ ಭೂಮಿ ಮೇಲೆ ಯಾರು ಇಲ್ಲಾ ಅಂತಾ ತನ್ನ ಸಂತೋಷವನ್ನು ಹಂಚಿಕೊಂಡಳು. ಈ ದೊಡ್ಡ ಪರಿವರ್ತನೆಗೆ ನಿನ್ನ ಸ್ನೇಹಮಯ ಮಾತುಗಳು, ನಿನ್ನ ಮಾರ್ಗ ದರ್ಶನ ಕಾರಣವಾಯಿತು. ಹೆಣ್ಣಿಗೆ ತಾಳ್ಮೆ, ಯೋಚನೆ ಮಾಡುವ ಒಂದು ಮನಸ್ಸು ಇದ್ದರೆ,ಜಗದಲ್ಲಿ ಯಾವುದನ್ನು ಸಾಧಿಸಬಹುದು ಎನ್ನುವ  ಧೈರ್ಯ ತುಂಬಿ ನನ್ನನ್ನು ಉಜ್ವಲ ಜೀವನದೆಡೆಗೆ ಸಾಗಲು ಬುದ್ದಿ ಮಾತುಗಳ ಹೇಳಿದ್ದಕ್ಕೆ ತುಂಬು ಹೃದಯದ ಧನ್ಯಾವಾದಗಳು. ನಿಮಗೆ ಒಂದು ಒಳ್ಳೆಯ ಸುದ್ದಿ ಹೇಳಬೇಕು......, ಹಾ....ಏನದು ಹೇಳು ಬೇಗ.....! ನಾನು ಈಗ ೪ ತಿಂಗಳು ಗರ್ಭಿಣಿ...! ಅವಳ ಸಂತೋಷಕ್ಕೆ ಪಾರವೇ ಇರಲಿಲ್ಲ. ಅವಳ ಸಂತೋಷವ ಕಂಡು ಗೆಳೆಯನಿಗೂ ಸಂತೋಷವಾಯಿತು. ಕಥೆ ಸುಖವಾಗಿ ಅಂತ್ಯವಾದರೆ....ನಡೆಯುತ್ತದೆಯೇ......???? ಇದು ಒಂದು ಸಿನಿಮಾ ಕಥೆಯಾಗುತ್ತದೆ ಅಷ್ಟೇ.... ಅದಕ್ಕೆ ಕೊನೆಯಲ್ಲಿ ಒಂದು ಟ್ವಿಷ್ಟ್.......!!! ಆ ಸ್ನೇಹಿತನ ಜೀವನದಲ್ಲಿ  ಬಿರುಗಾಳಿ...! ಸಂಸಾರವೆಂಬ ಜೋಡು ಎತ್ತಿನ ಬಂಡಿಯಲ್ಲಿ ಅವನ ಮಡದಿಯಾಗಿ ಬಂದ ಹೆಣ್ಣು, ಮತ್ತೊಬ್ಬನ ಮೋಹ ಪಾಷಕ್ಕೆ ಸಿಲುಕಿ ಗಂಡನ ತೊರೆದು ಓಡಿ ಹೋಗಿರುತ್ತಾಳೆ....! :’(    ದುಃಖ ಬರಿತ ಟ್ವಿಶ್ಟಿಗೆ...ಕ್ಷಮೆ ಕೋರುತ್ತಾ.... " ಭಾವಪ್ರೀಯ " :)

ವೇದಾಂತ

ಕಳ್ಳ ಖಧಿಮರ, ಕೊಲೆಗಡುಕರ ಮಾತಿನಲ್ಲಿ  " ವೇದಾಂತ "  ಕೇಳಿ ಯಾರು ಕೂಡಾ ಬದಲಾಗುವುದಿಲ್ಲ.

ಅವರುಗಳಿಗೆ ಕೊಲೆ , ಸುಲುಗೆ , ವಂಚನೆ ,  ಎಂಬುದು " ಸಾಮಾನ್ಯ " ವಿಷಯ. ಏಕೆಂದರೆ, ಅವರಿಗೆ ಇವೆಲ್ಲವ ಮಾಡಿ

ಗೊತ್ತಿರುತ್ತದೆ ಹೊರೆತು, ಅನುಭವಿಸಿ ಗೊತ್ತಿರುವುದಿಲ್ಲ.

THOUGHT FOR THE DAY

If wishes are being fulfilled, it just means that god believes that wishes are true.


On contrary,

If the intensions are bad then, surely even god is helpless to change the way of thinking. :D

ಎಲ್ಲಿ ಮಾಯವಾಯಿತೋ ಆ ವಿಮಾನ ???

ಎಲ್ಲಿ ಮಾಯವಾಯಿತೋ ಆ ವಿಮಾನ


ನಲ್ಲ ನಲ್ಲೇಯರ, ಅಣ್ಣ ತಮ್ಮಂದಿರ

ಅಪ್ಪ ಅಮ್ಮಂದಿರ, ಅಜ್ಜ ಅಜ್ಜಿಯರ

ಹೊತ್ತುಕೊಂಡು....!

ಮಿಡಿಯುವ ಹೃದಯಗಳು ಕಾಯುತಿವೆ

ಆಪ್ತರ ಸುಳಿವಿಲ್ಲದೇ....

ಕಂಬನಿಗಳು ಹೆಪ್ಪುಗಟ್ಟಿವೆ...

ಒಂದು ಸುಳಿವಿಲ್ಲ...ಒಂದು ಸುದ್ದಿಯಿಲ್ಲ

ಆಕ್ರಂದನ ಮುಗುಲು ಮುಟ್ಟಿದರೂ..

ಆ ವಿಧಿಗೂ ಇನ್ನೂ ಕರುಣೆಯಿಲ್ಲಾ..

ಎಲ್ಲಿ ಮಾಯವಾಯಿತೋ ಆ ವಿಮಾನ..???

ಸತ್ಯ V/s ಮಿಥ್ಯ


ಸತ್ಯ : ನಾವು ಹೇಳ ಬಯಸುವ ಭಾವಗಳನ್ನು ಜನರ ಮುಂದೆ ಬಹಿರಂಗವಾಗಿ ಹೇಳಿದರೆ ಆ ವಿಷಯದಲ್ಲಿ ಸತ್ಯತೆ ಕಾಣುತ್ತದೆ.

ಮಿಥ್ಯ : ಕದ್ದು ಮುಚ್ಚಿ ಗುಪ್ತ ಸಂಭಾಷಣೆಗಳಲ್ಲಿ ಬಿನ್ನಹಿಸುವವರು, ಮಂಗನ ಮುಸುಡಿಗೆ ತುಪ್ಪ ಸವರಿದಂತೆ.

ವಿಚಾರ

ಕೆಲವೊಂದು ಬಾರಿ ನಾವು ತೆಗೆದುಕೊಂಡಿರುವ ನಿರ್ಣಯಗಳು ತಪ್ಪಿರಬಹುದು ಎಂದೆನಿಸಿದಾಗ..., ಎದಿರಿನವರು ತಮ್ಮ ಕುಹಕು ಚಲನವಲನಗಳಿಂದ ನಮ್ಮ ನಿರ್ಧಾರಗಳು ಸರಿಯಾಗಿವೆ ಎಂದು ನಿರೂಪಿಸುತ್ತಾರೆ.

ಹಿತವಚನ

ನಮ್ಮ ದೌರ್ಬಲ್ಯಗಳು ಎಂದಿಗೂ ನಮ್ಮ ದೌರ್ಬಲ್ಯಗಳಲ್ಲ  ಆದರೆ, ಅವುಗಳನ್ನು ನಮ್ಮ ಶಕ್ತಿಯಾಗಿ ಬಳಸುವುದು ನಮ್ಮ ಕೈಯಲ್ಲೇ ಇದೆ.

Tuesday, March 11, 2014

ಊಸ್ರವಳ್ಳಿ

ಗಳಿ - ಗಳಿಗೆ ಬದಲಾಗುವುದು ಉಸ್ರವಳ್ಳಿಯ ಬಣ್ಣ
ಅದಕ್ಕಿಂತ ಹುಚ್ಚರು ಯಾರೂ ಇಲ್ಲಾ ನಂಬಲು ಅದನ್ನ
ಅದರ ನಾಟಕವನ್ನು, ಚಲವಲನವನ್ನು ಇಂಚು ಇಂಚು ತಿಳಿದವ
ಯಾವ ಮಿನುಗುವ ಬಣ್ಣ ಹಚ್ಚಿದರೂ ಬೆಪ್ಪಾಗುವುದಿಲ್ಲಾ ಇನ್ನಾ !!

ಪಾಪಿ ಜನ್ಮ

ಪಾಪಿ ಜನ್ಮವೇ..

ನಿನ್ನ ಪಾಪಕ್ಕೆ ಪ್ರಾಯಶ್ಚಿತವಿಲ್ಲ

ನಿನ್ನ ಕೆಟ್ಟ ವರ್ತನೆಗೆ ಕೊನೆಯಿಲ್ಲ

ನಿನ್ನ ಉಳಿವಿಂದ ಯಾರಿಗೂ ಸುಖವಿಲ್ಲ

ನೀ ಜೀವಿಸಿದರೂ ಯಾರಿಗೂ ಒಳಿತಿಲ್ಲ

ಬಾವಿಯೋ, ಕೆರೆಯೋ,ರೈಲ ಹಳಿಯೋ

ಏನೇ ಕಂಡುಕೊಂಡರು ಯಾರೂ ಸಂತಾಪ ಪಡುವವರಿಲ್ಲ.!!

Thursday, March 06, 2014

ನೆಮ್ಮದಿ

ಅವಳ ಎಲ್ಲಾ ಕಣ್ಣ ಹನಿಗಳಿಗೆ


ಪರಿಹಾರ ಇಲ್ಲಾ ನನ್ನ ಬಳಿ..!

ಆದರೂ,

ಅವಳ ಮೊಗದ ಸಿಂಗಾರಕೆ

ಸಣ್ಣ ನಗು ನೀಡಿದ ಸಂತೋಷವಿದೆ ನನ್ನಲಿ..!!

Wednesday, March 05, 2014

ವಸಂತದ ಚಿಗುರು

ಗರಿಯ ಚಿಗುರು

ಹೊಸ ಚಿಗುರು

ಹಸಿರ ಚಿಗುರು

ಕೆಂಪ ಚಿಗುರು

ಪಚ್ಚೆ ಹಸಿರು

ತಿಳಿಯ ಹಸಿರು

ಹಸಿರು ಉಸಿರಾಗಿ ಚಿಗಿಯುತಿದೆ !!


ಕಾಡ ಮರದಲಿ

ನಾಡ ಮರದಲಿ

ಚಿಕ್ಕ ಗಿಡದಲಿ

ಹೆಮ್ಮರದಲಿ

ಮುಳ್ಳು ಕಂಟಿಯಲಿ

ಹೂ ಬಳ್ಳಿಯಲಿ

ಹಸಿರು ಉಸಿರಾಗಿ ಚಿಗಿಯುತಿದೆ !!


ವಸಂತ ಬಂದ

ಖುಷಿಯಲಿ

ನವ ಮಾಸದ

ಹುರುಪಲಿ

ಹಸಿರು ಮೊಳೆತು

ಹರುಷದಲಿ

ಹಸಿರು ಉಸಿರಾಗಿ ಚಿಗಿಯುತಿದೆ !!

ಜ್ವರ

ಸೂರ್ಯನಿಗೂ ನಿನ್ನ ಮೇಲೆ ಮನಸ್ಸು
ಅದಕ್ಕೆ ಅನ್ನಿಸುತ್ತೆ ಉದಯಿಸುವುದ ಬಿಟ್ಟು
ಇಂದು ನಿನ್ನಲ್ಲೇ ಅವಿತಿಹನು.

Tuesday, March 04, 2014

अर्मान

अर्मान तो बहुत छुपे है दिलके बादलों में
बस तुम्हारे आने की देरि है...
बरस जाएँगे बादल, बारिश की बूँदों में !

ನಂಟು

ಅವಳ ಕೆನ್ನೆಯ ಗುಳಿ ಕಂಡಾಗಲೆಲ್ಲಾ..
ಚಿಗುರುವುದು ನನ್ನ ಆಸೆಯ ಗಂಟು !
ಇನ್ನೂ ಯಾವ ಕ್ಷಣಕ್ಕೆ ಕಾಯಬೇಕು ನಾ....
ಬೆಸೆದುಕೊಳ್ಳಲು ನಮ್ಮಿಬ್ಬರ ನಂಟು !!

ನ್ಯಾನೊ ಕಥೆ

ಒಬ್ಬ ಹೆಣ್ಣು ತನ್ನ ಚಟಕ್ಕಾಗಿ, ಗಂಡನ ಮೆನೆ ತೊರೆದು ಹೇಳದೇ ಕೇಳದೇ ಓಡಿ ಹೋದಾಗ


ಸಮಾಜ ಕೇಳುವ ಪ್ರಶ್ನೇ " ಯಾವನ ಜೊತೆ ಓಡಿಹೋಗಿದ್ದಳು ?? "

ನಾಚಿಗೆ ಇಲ್ಲದೇ ಮರಳಿ ಅವನೆದಿರು ನಿಂತರೆ ಗಂಡ ಕೂಡಾ ಕೇಳುವ ಪ್ರಶ್ನೇ ಅದೇ " ಯಾವನ ಜೊತೆ ಓಡಿಹೋಗಿದ್ದೆ ? "

ತಾನು ಪವಿತ್ರೆ ಅಂತಾ ಹೇಳುವುದರಿಂದ ಅವಳು, ಕಳಂಕದಿಂದ ತಪ್ಪಿಸಿಕೊಳ್ಳಲಾರಳು. ಅವಳ ನಿಜ ಚರಿತ್ರೆ ಎಲ್ಲಾ ತರಹದ ಪರೀಕ್ಷೆಗೆ ಅವಳು ಸಿದ್ದವಿದ್ದಾಗಲೇ ಅವು ಸುಳ್ಳೊ ನಿಜವೋ ಅನ್ನುವುದು ತಿಳಿಯುತ್ತವೆ. ಇದಕ್ಕೆ ಅವಳು ತಯ್ಯಾರಿರದಲ್ಲಿ .., ಅವಳ ನಿಜ ಸ್ವರೂಪ ಬಯಲು !!

====================================================

ಇಂದಿನ ಸಾಮಾಜಿಕ ಚಿಂತನೆಯ ವಿಷಯ

ಗರ್ಭಗುಡಿ

ಮನಸೆನೋ ವಿಶಾಲವೆ ನನ್ನದು


ಹೃದಯದ ಗರ್ಭಗುಡಿಯ ಬಾಗಿಲು ಚಿಕ್ಕದು

ಬರುವುದಾದರೆ.., ತಲೆ ಬಾಗಿಯೇ ಬರಬೇಕು

ಅಹಂ ಬಿಟ್ಟು, ಭಕ್ತಿಯನಿಟ್ಟು !

Monday, March 03, 2014

ಹಿತವಚನ

ಸಣ್ಣ ತಪ್ಪುಗಳಿಗೆ " ಕ್ಷಮೆ " ಇರುತ್ತದೆ ಆದರೆ ನಂಬಿಕೆ ಮುರಿದ ಮೇಲೆ " ಕ್ಷಮೆ" ಕೂಡಾ ಮರೆಯಾಗುತ್ತದೆ.

Sunday, March 02, 2014

ನೆನಪುಗಳು

ಅವಳು ಹಾಸಿಗೆಯಿಂದ ಎದ್ದಳು, ಕಣ್ಣುಗಳ ಉಜ್ಜುತ್ತಾ ಮನೆಯಲ್ಲಾ ನಡೆದಾಡುತ್ತಾ ಏನನ್ನೋ ಹುಡುಕುತ್ತಿದ್ದಳು. ಮನೆಯ ಮುಂದಿನ ಅಂಗಳ, ಹಿತ್ತಲು ಆ ರೂಮು, ಈ ರೂಮು, ಮನೆಯಲ್ಲಾ ಅಡ್ಡಾಡಿ ಹುಡುಕಿದರೂ ಸಿಗಲಿಲ್ಲಾ...ಅಮ್ಮಾ ಅನ್ನುತ್ತಾ ಅಡುಗೆಯ ಮನೆಯ ಒಳಗೆ ಹೋಗುತ್ತಾಳೆ. ಅವಳ ಅಮ್ಮ ಕಾಫ಼ಿ ಮಾಡುತ್ತಾ ಇರುತ್ತಾರೆ. ಅಮ್ಮಾ " ಮಾಮಾ ಎಲ್ಲಿ " ? ಮಾಮಾ ಆಫ಼ಿಸಿಗೆ ಹೋಗಿದ್ದಾರೆ, ಬೇಗ ಬರ್ತಾರೆ....!, ನಿನಗೆ ಬೇಗ ಸ್ನಾನ ಮಾಡಿಸ್ತಿನಿ ಬಜ್ಜಲ ಮನೆಗೆ ಹೊರಡು ಅಂದಳು ಅಮ್ಮ. ಅಮ್ಮ ಬಂದು ಇವಳಿಗೆ ಸ್ನಾನ ಮಾಡಿಸಲಿಕ್ಕೆ ನೀರು ಹಾಕಿ ಸೋಪು ಹಚ್ಚುತ್ತಾರೆ..ಮತ್ತೆ ಅವಳ ಪ್ರಶ್ನೇ ಅಮ್ಮಾ ಮಾಮಾ ಎಲ್ಲಿ ? ಮಾಮಾ "ಬೂ" ಬೇಗ ಬೇಗ ಸ್ನಾನಾ ಮಾಡು ಮಾಮಾ ಬರ್ತಾರೆ.. ಸ್ನಾನಾ ಆಯ್ತು, ಪಿಂಕು ಬಾರಮ್ಮಾ ಇಲ್ಲಿ ಟಿಫ಼ನ್ ತಿನ್ನಸ್ತಿನಿ ಮತ್ತೆ ಅವಳ ಪ್ರಶ್ನೆ " ಮಾಮಾ ಎಲ್ಲಿ " ? ತಿಂಡಿ ಆಯ್ತು , ಇವಳ ಕಾಟ ತಾಳಲಾರದೇ ಅಜ್ಜಿ ಪಿಂಕುಳನ್ನು ಕರೆದುಕೊಂಡು ತರಕಾರಿ ತರಲು ಹೋಗುತ್ತಾರೆ..., ಎರಡು ನಿಮಿಷ ಸುಮ್ಮನಿದ್ದ ಪಿಂಕು ಮತ್ತೆ ಅಜ್ಜಿಗೂ ಕೂಡಾ ಅದೇ ಪ್ರಶ್ನೆ..? ಅಜ್ಜಿ... " ಮಾಮಾ ಎಲ್ಲಿ " ಇವರುಗಳು ಮನೆಗೆ ಮರಳಿದಾಗ ೧ ಗಂಟೆ, ಸೊಸೆ ಇನ್ನೂ ಮಾಮನ ದಾರಿ ನೋಡುತ್ತಲೇ ಕುಳಿತ್ತಿದ್ದಳು. ಅಷ್ಟೊತ್ತಿಗೆ ಗೇಟಿನ ಶಬ್ದ ಆಯ್ತು....., ಪಿಂಕು ಓಡಿ ಹೋಗುತ್ತಾಳೆ..... ಅಜ್ಜೀssss....... " ಮಾಮಾ ಬಂಡ್ರು " ಮಮ್ಮಿ " ಮಾಮಾ ಬಂಡ್ರು " ಅವಳಿಗೆ ಎಲ್ಲಿಲ್ಲದ ಖುಶಿ, ಓಡಿ ಹೋಗಿ ಮಾಮನ ತೋಳು ಸೇರುತ್ತಾಳೆ..., ಬಾರಪ್ಪಾ ಈವಾಗ ಬಂದಿಯಾ, ಪಿಂಕು ಬೆಳಿಗ್ಗೆಯಿಂದ ನಿನ್ನ ಕೇಳಿ ಕೇಳಿ ತಲೆ ಕೆಡಸಿಬಿಟ್ಟಳು. ತೊಗೋ ನಿನ್ನ ಸೊಸೆನ ನೀನೆ ಸಮಾಧಾನ ಮಾಡು...!:) ಇದು ನಡೆದದ್ದು ೧೦-೧೨ ವರ್ಷಗಳ ಕೆಳಗೆ..., ಮಕ್ಕಳು ಒಬ್ಬರನ್ನ ಹಚ್ಚಿಕೊಂಡರೆ ಎಷ್ಟೊಂದು ಆತ್ಮಿಯತೆ ಬೆಳೆಸಿಕೊಳ್ಳುತ್ತಾರೆ ಅಲ್ವಾ..?? ಈಗ ಅವಳು ದೊಡ್ಡವಳಾಗಿದ್ದಾಳೆ, ನನ್ನ ಹತ್ತಿರ ಮಾತನಾಡಲು ನಾಚುತ್ತಾಳೆ. ನಾನು ಅವಳೊಂದಿಗೆ ಮಾತನಾಡಿದ ಮಾತುಗಳು, ಅವಳ ತುಂಟುತನಗಳು ಇನ್ನೂ ಕೂಡಾ ನನ್ನ ಮನದಲ್ಲಿ ಆ ನೆನಪುಗಳು ಹಚ್ಚು ಹಸಿರಾಗಿವೆ. ಅವಳು ನನ್ನ ಕಣ್ಣಿಗೆ ಇನ್ನೂ ೨ ವರ್ಷದ ಪುಟ್ಟ ಪಿಂಕು ಆಗಿಯೇ ಕಾಣುತ್ತಾಳೆ.

ಅವಿವೇಕಿಗಳು

ಒಂದು ಘಟನೆಯಿಂದ ದುರ್ಘಟನೆ,
ಒಂದು ಚುಂಬನ ಕೂಡ ತರಬಲ್ಲದು ಜೀವಕೆ ಅಂತ್ಯ
ಬಹಿರಂಗವಾಗಿ ಮುತ್ತಿಟ್ಟ ಪತ್ನಿ
ಕೋಪಗೊಂಡ ಗಂಡನು ಇಟ್ಟನು ಅಗ್ನಿ
ಪತ್ನಿ ಪರಲೋಕದಲ್ಲಿ...
ಗಂಡ ಆಸ್ಪತ್ರೆಯಲ್ಲಿ.....!! 

ಸಾವಿಗೆ ಕಿವಿ ಕೊಟ್ಟಾಗ..!

ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...