ಕಥೆ (ಎಲ್ಲ ಕಥೆಗಳ ಹಿಂದಿನ ಕಹಿ ಸತ್ಯಗಳು ) - 13

( ಮುಂದುವರೆದಿದೆ ..... ) ಕೆಲವೊಂದು ಸಾಮಜಿಕ ಕೆಟ್ಟು ಹುಳಗಳ ಅಟ್ಟಹಾಸ ಎಂದಿಗೂ ನಿಲ್ಲುವುದಿಲ್ಲ .., ಹಾಗೆಯೇ ನಮ್ಮ ವಿಜಯನ ಕಥೆಯಲ್ಲಿ ಕೂಡ ., ಎರಡು ತಿಂಗಳು ತನಕ ಈ ಹುಳಗಳು ಮನೆಯಲ್ಲೇ ಇದ್ದು ಮತ್ತೊಂದು ಕೆಟ್ಟ ಕೃತ್ಯಕ್ಕೆ ತಯ್ಯಾರಿ ನಡೆಸುತ್ತಾರೆ. ಮೊದಲೇ ದುಃಖ ಭರಿತನಾದ ವಿಜಯಾ ಆಫೀಸಿಗೆ ರಜೆ ಅಂತಾ ಮನೆಗೆ ಹೊರಡುತ್ತಾನೆ. ಹೆಣ್ಣಿನ ಮನೆಕಡೆಯವರು    ವಿಜಯನ ಸಂಬಂಧಿಕರನ್ನು ಸಂಪರ್ಕಿಸಿ  ಹೆಂಗಾದರೂ  ಮಾಡಿ ತಮ್ಮ ಮಗಳ ಹಾಗು ವಿಜಯನ ಜೀವನ ಸರಿ ಪಡಿಸೋಣ ಅಂತ ಒಪ್ಪಿಸಿ , ವಿಜಯನನ್ನು ಒಂದುಕಡೆ ಕರೆಸಿ ಆಮೇಲೆ ಎಲ್ಲಾ ವಿಷಯ ಇತ್ಯರ್ಥ ಮಾಡೋಣ ಅನ್ನುತ್ತಾರೆ , ಇವರ ಕುತಂತ್ರ ತಿಳಿಯದ ವಿಜಯನ ಸಂಬಂಧಿ ಒಂದು ಒಳ್ಳೆಯ ಕೆಲಸ ನನ್ನಿಂದ ಆಗಿಬಿಡಲಿ ಅಂದುಕೊಳ್ಳುತ್ತಾರೆ. ಹಾಗೆ ಒಂದು ಜಾಗ ಗುರುತು ಮಾಡಿ ಇಬ್ಬರ ಮನೆಕಡೆಯವರನ್ನ ಬರಲು ಹೇಳಿಕಳಿಸುತ್ತಾರೆ.  ಏನೋ ಸಂತೋಷ , ಮತ್ತೆ ಹೆಂಡತಿಯನ್ನು ಸೇರುತ್ತಾನೆ , ಇಬ್ಬರ ಸಂಕಸ್ಟಗಳು ಪರಿಹಾರವಾಗುತ್ತವೆ, ಮತ್ತೆ ಜೀವನ ದಾರಿಗೆ ಮರಳುತ್ತದೆ ಅಂತ  ಖುಶಿಪಡುತ್ತಾನೆ. ಆದರೆ ಅವನ ಹೆಂಡತಿಯ  ಕೆಟ್ಟ ಮಾವನ   ಕುತಂತ್ರ ವಿಜಯನಿಗೆ ತಿಳಿಯದೆ ಹೋಗಿತ್ತು.  ಸರಿ ವಿಜಯ, ವಿಜಯನ ತಂದೆ ಹಾಗು ತಮ್ಮಂದಿರು ಈ ಸಭೆಗೆ ಹೋಗುತ್ತಾರೆ , ಹುಡುಗನಿಗೆ ಒಬ್ಬನಿಗೆ ಕರಿಯಿರಿ ಅವನ ಹತ್ತಿರ ಮಾತಾಡೋಣ ಅಂತಾ ಹೇಳುತ್ತಾರೆ . ಹೆಣ್ಣಿನಕಡೆಯವರು ಪೂರ್ವ  ಸುಸಜ್ಜಿತವಾಗಿ ಗುಂಡಾಗಳನ್ನ ಕರೆದುಕೊಂಡು ಬಂದಿರುತ್ತಾರೆ , ಏನು ಇಲ್ಲಾ ಅಂದರೂ ೫೦ ಗುಂಡಾಗಳು , ರೌಡಿಗಳನ್ನ  ಕರೆಸಿರುತ್ತಾರೆ . ಓದುಗರೇ ನಿಮಗೆ ಹೆಣ್ಣೀನ ಮನೆಯವರು ಹೀಗೆ ಏಕೆ ಕರೆತಂದರು ಅಂತಾ ಊಹಿಸಬಲ್ಲಿರಾ ? ಈ ಸಭೆಯ ಉದ್ದೇಶ  ಯಾರಿಗಾದರೂ ತಿಳಿಯುತ್ತದೆ , ಇದಕ್ಕೆ ಹೆಣ್ಣು  ಅಂದರೆ ವಿಜಯನ ಪತ್ನಿ ಕೂಡಾ ಹೊರತಾಗಿರಲಿಲ್ಲ . ವಿಜಯನ ಕೆಟ್ಟ ಹೆಂಡತಿ ವಿಜಯ್ನನ್ನ ಕೊಲ್ಲಿಸುವ ಪ್ಲಾನು ಮಾಡಿಸಿಬಿಟ್ಟಿರುತ್ತಾಳೆ .  ಹುಡುಗ ೫0 ಜನರ ಮಧ್ಯದಲ್ಲಿ ಒಮ್ಮಿಂದೊಮ್ಮೆಲೆ  ವಿಜಯನನ್ನ ಹೊಡಿಯಲು ಶುರುಮಾಡುತ್ತಾರೆ. ವಿಜಯನ ಪತ್ನಿ ಮುಂದೆ ನಿಂತು ಹೊಡಿಯಿರಿ ಅವನನ್ನ ಅಂತಾ ಕೂಗುತ್ತಿರುತ್ತಾಳೆ , ಇವಳನ್ನ ಕಂಡ ವಿಜಯಾ ದಿಗ್ಬ್ರಾಂತನಾಗುತ್ತಾನೆ . ಇವಳು ನನ್ನ ಕೊಲೆಯ ಸಮಯ ನಿಗದಿ ಪಡಿಸಿದಳಾ ? ಏನೂ ತಿಳಿಯುವಷ್ಟರಲ್ಲಿ ವಿಜಯನ ಅಂಗಿಯನ್ನು ಹರೆದು , ಅವನ ಬಂಗಾರದ ಚೇನು , ಮೊಬೈಲು ಕೈಯ್ಯಲ್ಲಿಯ ಉಂಗುರಗಳು ಎಲ್ಲವನ್ನು ಕದ್ದುಕೊಳ್ಳುತ್ತಾರೆ , ಕಳ್ಳ ಕಧಿಮರ ಜೊತೆ ಸಂಬಂಧಗಳ ಇಟ್ಟು ಕೊಂಡವಳು ಇವಳು ಎಂತಹ ಹೆಣ್ಣು.. ? ಇವಳು ಹೆಣ್ಣೇನೆ ನಾ ಅಥವಾ ಹೆಮ್ಮಾರಿನಾ ? ಓದುಗರೇ ನೀವೇ ಯೋಚಿಸಿ .. ! ಸದ್ದು ಗದ್ದಲ ಕೇಳುತ್ತಲೇ ವಿಜಯನ ತಂದೆ ಹಾಗು ತಮ್ಮಂದರು ಸ್ಥಳಕ್ಕೆ ಧಾವಿಸುತ್ತಾರೆ. ವಿಜಯನ ಸುತ್ತುವರೆದ ಮಂದಿಯನೆಲ್ಲಾ ಹಿರಿಯ ತಮ್ಮ ಒಂದೇ ಏಟಿನಲ್ಲಿ ಚದಿರುಸುತ್ತಾನೆ , ಎಲ್ಲರೂ ವಿಜಯನನ್ನು ಬಿಟ್ಟು ಅವನನ್ನು ಹೊಡೆಯಲು ಶುರುವಿಟ್ಟ   ತಕ್ಷಣ ಅವನು ಎಲ್ಲರನ್ನು  ಒಂದೇ ಸಮನೆ ಎತ್ತಿ ಕೊಡವುತ್ತಾನೆ , ಇವನು ಒಬ್ಬ ಕುಸ್ತಿಪಟು ಇದ್ದಹಾಗೆ ಒಂದೇಸಮನೆ ಹತ್ತಾರು ಜನರನ್ನು ಹೊಡಿಯಬಲ್ಲವ , ಇವನದು ನೂರಾನೆಯ ಬಲ , ಇವನ ಅಬ್ಬರ ಕಂಡು ಎಲ್ಲರೂ  ಸುಮ್ಮನಾಗುತ್ತಾರೆ , ಅತ್ತ ಕಡೆ ಆ ಕೆಟ್ಟ ಹೆಣ್ಣಿನ ಅಕ್ಕ ವಿಜಯನ ಇನ್ನೊಬ್ಬ ತಮ್ಮನಿಗೆ ಹೊಡೆಯುತ್ತಿರುತ್ತಾಳೆ , ಅವನು ಕೂಡ ತನ್ನ ಶಕ್ತಿಯ ಗೂಡಿಸಿ ಅವಳ ಹೊಟ್ಟೆಗೆ ಒಂದು ಒದೆಯುತ್ತಾನೆ , ಗಂಡಸರ ಮೇಲೆ ದಾಳಿ ಮಾಡಲು ಬಂದ ಈ ಹೆಂಗಸು ಕೂಡಾ ಮಾದುವೆ ಆದವಳು,  ಲಜ್ಜಗೆಟ್ಟ ಜಲುಮ ಇವಳದು ಗಂಡನನ್ನು ಹತೋಟಿಯಲ್ಲಿತ್ತುಕೊಂಡು ಆಡಿಸುವ ಬೇವರ್ಸಿ ಇವಳು. ಇವರ ಬಳಗವೇ ರೌಡಿಗಳ ಅಡ್ಡ .  ಜಿದ್ದಿಬಾಯಿ ಇವಳ ತಾಯಿಯು ಈ ಗಲಾಟೆ ನಡೆಯುತ್ತಿರುವಾಗ  " ಹ್ಹಾ...ಹಾ ನಿಮಗೆಲ್ಲಾ ಇದು ಬೇಕಿತ್ತಾ " ಅಂತ ವ್ಯಂಗ್ಯ ಮಾಡುತ್ತಾಳೆ , ಮಗಳ ಜೀವನ ಹಾಳು ಆಗುತ್ತಿರುವುದು ಅನ್ನುವ ಪರಿವೆ ಇಲ್ಲದ ನಾಚ್ಚಿಗ್ಗೆಡು ಜಲುಮ ಗಂಡ ಸತ್ತ ಮುಂಡೆ , ಮಕ್ಕಳನ್ನ ಧಂಧೆಗೆ ಬಿಟ್ಟು ಹಣಗಳಿಸುವವಳು. ಮಧ್ಯಸ್ತಿಕೆ ವಹಿಸಿದವರಿಗೆ ನನ್ನ ಮಗಳು ಇವನ ಹತ್ತಿರ ಒಂದು ವರುಷ ಸಂಸಾರ ಮಾಡಿದ್ದಾಳೆ ಅದಕ್ಕೆ ಪರಿಹಾರ ಕೊಡಿಸಿ ಅಂತಾ ಹೇಳುತ್ತಾಳೆ .  ಗಂಡನ ಮನೆಯವರಿಗೆ ಹಾಗು ಗಂಡನಿಗೆ ಹೊಡೆದು ಪರಿಹಾರ ಕೇಳುವುದು ಎಲ್ಲಾದರೂ ಕೇಳಿದ್ದಿರಾ ಪ್ರೀಯ  ಓದುಗರೇ ? ಇದಕ್ಕೆ ಹೈ ಟೆಕ್  ಸೂಳೆಗಾರಿಕೆ ಅಂದರೆ ತಪ್ಪಾಗಲಾರದು ಅನ್ನುವುದು ನನ್ನ ಭಾವನೆ . ಹಣಕ್ಕಾಗಿಯೆ ಮದುವೆ ಆಗುವುದು , ಸಂಸಾರದ ನಾಟಕವಾಡುವುದು ಕೆಲವು ತಿಂಗಳ ನಂತರ ಮಗಳಿಗೆ ಜಗಳ ಮಾಡಿ ಓಡಿ  ಬರಲು ಹೇಳುವುದು . ಮನೆಗೆ ಬಂದ ಮೇಲೆ ಇವರ ಕುತಂತ್ರಗಳ ಹೂಡುವುದು.  ಇಂತಹ ಹೆಣ್ಣಿನ ಸಹವಾಸ ಮಾಡಿ, ಮದುವೆಯಾಗಿ  ಜೀವನ ಹಾಳು ಮಾಡಿಕೊಂಡು ಎಷ್ಟೋ  ವಿಜಯನಂತವರು ಇದ್ದಾರೆ . ಈ ಹುಡುಗರ  ತಪ್ಪಾದರೂ ಏನು ? ಕಷ್ಟಪಟ್ಟು ಕಲಿತು, ಅಪ್ಪ-ಅಮ್ಮ ನೋಡಿದ ಹುಡುಗಿಯ ಒಪ್ಪೊಕೊಂಡು ಮಾದುವೆ ಆದರೇ , ಇಂತಹ ಹೆಮ್ಮಾರಿಗಳಿಂದ ಹುಡುಗರು ಪಡುವ ಕಷ್ಟಗಳು ಹೇಳತೀರದ್ದು . ನಾಳಿನ ಸಂಚಿಕೆಯಲ್ಲಿ ಕಥೆಯ ಮುಖ್ಯ ಪಾತ್ರಾಧಾರಿಗಳು , ಇವರ ಒಳ ಸಂಚು ಹಾಗು ಇವರುಗಳ ವ್ಯಕ್ತಿತ್ವದ ಬಗ್ಗೆ ಸ್ವಲ್ಪ ಹೇಳುತ್ತೇನೆ.  (....... ಮುಂದುವರೆಯಲಿದೆ ) 

No comments:

ವರ್ಷಧಾರೆ

ಸರ-ಸರನೆ ಹರಿದು ಬರುತ್ತಿರುವ ವರ್ಷಧಾರೆಗೆ ಬೇಲಿಯ ಕಟ್ಟಲಾದೀತೆ....? ನೀರು ತುಂಬಿ ಹರಿಯುವ ನದಿಯನು ಹರಿಯುವುದನ್ನು ನಿಲ್ಲಿಸಲಾದೀತೆ....? ಒಲಿದು ಬಂದ...