ಚುಟುಕ

ಅವಳು ಜೊತೆಯಲ್ಲಿದ್ದರೆ, 

ಹೃದಯವದು ಕನಸ್ಸುಗಳ ಸಾಗರ !

ವಿರಹದ ಕ್ಷಣಗಳು ಆವರಿಸಿದರೆ,

ನೆನಪುಗಳಿಂದ ಮನಸ್ಸು ಭಾರ !!

------------------------------

ಬೆಳಕಿಗೆ ಸಾವಿದೆ ಇರುಳಡಿಗೆ
ಕತ್ತಲಿಗೂ ಸಾವಿದೆ ನಸುಕಿನಡೆಗೆ
ಎಂದಿಗೂ ಸಾವಿಗೆ ಅಂಜದಿವರು
ಮತ್ತೆ ಹುಟ್ಟುತ್ತೇನೆ ಎಂಬ ದೃಡ ನಂಬಿಕೆ !

ಚಾಳಿ

ಕೆಲವು ಹೆಣ್ಣುಮಕ್ಕಳದು
ಅದು ಎಂಥದೋ ಚಾಳಿ,
ಮದುವೆಯಾದರೂ...
ಕುವರಿ ಎಂದು ಭಿಂಬಿಸಲು,
ಮುಚ್ಚಿಟ್ಟುಕೊಳ್ಳುತ್ತಾರೆ ತಾಳಿ !!

ಹುಟ್ಟು ಸಾವು

ಬಯಸಿ ಪಡೆದದ್ದಲ್ಲಾ ಹುಟ್ಟು 
ಬಯಸಿದರೂ ಬರುವುದಿಲ್ಲ ಸಾವು 
ಹುಟ್ಟು ಸಾವಿನ ನಡುವೆ ತಪ್ಪಿದ್ದಲ್ಲ ನೋವು !!

ಸಾವೂ ಸುಂದರ

ಸಾವು ಇರಬಹುದು 
ಬಲು ಸುಂದರ.,.!
ಭೇಟಿ ಮಾಡಿದವರು
ಮರೆತೇ ಬಿಡುವರು
ಜೀವಿಸುವ ಸಮರ...!!

ಕುವರಿ ಬರುತ್ತಾಳೆ....!!

ಕುವರಿ ಬರುತ್ತಾಳೆ....
===========
ನವ ಜಗಕೆ ಕಾಲಿಟ್ಟ ಕುವರಿ
ನವ ಉಲ್ಲಾಸ ತಂದ ಕುವರಿ
ನವ ಕನಸ್ಸುಗಳ ಹೊತ್ತು ಬರುತ್ತಾಳೆ , ಕುವರಿ ಬರುತ್ತಾಳೆ....!!

ಮುಗ್ಧ ಮನಸಿನ ಕುವರಿ
ಕಿಲ ಕಿಲ ನಗುವ ಕುವರಿ
ಕುದುರೆಯ ಏರಿ ಬರುತ್ತಾಳೆ, ಕುವರಿ ಬರುತ್ತಾಳೆ....!!

ಪುಟ್ಟ ಪುಟ್ಟ ಹೆಜ್ಜೆಯ ಕುವರಿ
ದೊಡ್ಡ ದೊಡ್ಡ ಕಣ್ಣಿನ ಕುವರಿ
ಸಂತಸವ ಬಡಿಸುವ ಕುವರಿ, ಕುವರಿ ಬರುತ್ತಾಳೆ..!!

ಕೆಂಪು ಅಂಬಾರಿಯ ತನ್ನಿರಿ
ರತ್ನ ಕಂಬಳಿಯ ಹಾಸಿರಿ
ಹೃದಯ ಆಳುವ ಕುವರಿ ಬರುತ್ತಾಳೆ.., ನಮ್ಮ ರಾಜಕುಮಾರಿ ..!!

***********************
ಭಾವಪ್ರಿಯ
***********************

ಮತ್ತೆ ಹಾಡುವುದು ಹೃದಯ


ಪರದೆಯ ಸರಿಸಿ ನಿಂತೆ
ಕಿಟಕಿಯಲಿ ಇಣುಕುತ ನಕ್ಕಳು ಆಕೆ
ಮೇಲೆ ಕರಿ ಮುಗಿಲು ...
ಬೀಸುತಿಹುದು ಪರಿಮಳದ ಘಮಲು
ಕಣ್ಣುಗಳು ಕಲಿಯಬೇಕಷ್ಟೆ
ಮುಂದೆ ನಡೆಯಲಿದೆ ಹೃದಯದ್ದೇ ಜಾತ್ರೆ.

THOUGHT FOR THE DAY

I don't say I'm PERFECT, But never pull back myself in putting efforts to be PERFECT & that is my LIFE STYLE.

THOUGHT FOR THE DAY

COMPLAINING ON SUPERIORS TO HIDE ONE'S OWN FAULTS DOES NOT MAKE SENSE & NEVER EARN RESPECT.

ನೋಟ


ಹನ್ನೆರಡು ವರುಷ ಕಳೆದರೂ,
ನೀನು ಇಂದಿಗೂ ಹಾಗೆ...!
ಈ ನೋಟಕು, ಆ ನೋಟಕೂ...
ಇಂದಿಗೂ ಹೃದಯಕೆ, ಹೊಗೆ...!!

ಪ್ರೀತಿ ಇದು ಯಾವ ರೀತಿ ?

ಇಬ್ಬರಲ್ಲೂ,
ಅನ್ಯೋನ್ಯ ಪ್ರೀತಿ
ಮನ ಸೋತ ತಪ್ಪಿಗೆ...
ಮನೆಯವರ.,
ನೋಯಿಸದಿರುವ ರೀತಿ,
ಆ ಇಬ್ಬರ ಪ್ರೀತಿ
ಅವಿಸ್ಮರಣೀಯ ಪ್ರೀತಿ !!

ನಿದಿರಾ ದೇವಿ

ಇರುಳಲ್ಲಿ ಕಾಣುತ್ತಿಲ್ಲ
ಬೆಳಕಲ್ಲಿ ಹೋಗುತ್ತಿಲ್ಲ
ಕಣ್ಣು ಬೆಂಕಿ ಕೆಂಡ,
ಯಾರೋ ಕದ್ದಿಹರು..!!


ತನುವಿಗೆ ವಿಶ್ರಾಂತಿ ಇಲ್ಲ
ಮನಸ್ಸಿಗೆ ನೆಮ್ಮದಿ ಇಲ್ಲ
ಜೀವ ಚಟಪಟಿಸುಹುದಲ್ಲ,
ಯಾರೋ ಕದ್ದಿಹರು..!!


ಕೊರೆಯುವ ಚಳಿ ಅಲ್ಲ
ಸುಡುತಿರುವ ಬೆಂಕಿಯೂ ಅಲ್ಲ
ಕರಿಮೋಡವೇ ಕವಿದಿರೆ ಕಣ್ಣಿಗೆ ಕಾಣುತ್ತಿಲ್ಲ
ಯಾರೋ ಕದ್ದಿಹರು...!!

ಅಪ್ಪುಗೆ

ಈ ಜುಣುಗುಡುವ ಚಳಿಗೆ

ಯಾವ ಕಂಬಳಿಯೂ ಬಾರದು ಕೆಲಸಕೆ

ನಿನ್ನ ನೆನಪಿನ ಬಿಸಿ ಅಪ್ಪುಗೆ..,

ಬಿಸಿಲನೂ ಮೀರಿಸುವುದು ಬೆಚ್ಚಗೆ !!

ಶ್ವೇತಧಾರಿ


ಎಂದೋ ಕಂಡ ಕನಸ್ಸು
ನನಸಾದದ್ದು ಸೊಗಸು
ಮಳೆಯಲ್ಲಿ ನೆನೆದದ್ದು ಸವಿ ನೆನಪು
ಹಿಮದಲ್ಲಿ ಮಿಂದದ್ದು ಅತಿ ಮೋಜು
ಬ್ರಹ್ಮ ಕರಣಿಸಿದ ಹಾಲು ವರವು
ಭೂಮಿ ಕಂಗಳಿಸಿದಳು ಶ್ವೇತವ ಉಟ್ಟು !

ವಿಹಂಗಮಯ

ಎಲೆಗಳ ಹೊದಿಕೆ ಕಳಚಿದ
ತರು ಲತೆ ಬಳ್ಳಿಗಳಿಗೆ,
ಕೃಷ್ಣ ಸುರಿಸಿದನು
ಮಂಜು ಹನಿಯ ಮಲ್ಲಿಗೆ,
ಶುಭ್ರ ಸುಮಧುರ
ವಿಹಂಗಮಯ ನೋಟಕೆ,
ಕಂಗಳಿಸಿಹರು ಇವರು
ಭುವಿಯಲ್ಲಾ ಶ್ವೇತ ಉಡುಗೆ !!
 

ವರ್ಷಧಾರೆ

ಸರ-ಸರನೆ ಹರಿದು ಬರುತ್ತಿರುವ ವರ್ಷಧಾರೆಗೆ ಬೇಲಿಯ ಕಟ್ಟಲಾದೀತೆ....? ನೀರು ತುಂಬಿ ಹರಿಯುವ ನದಿಯನು ಹರಿಯುವುದನ್ನು ನಿಲ್ಲಿಸಲಾದೀತೆ....? ಒಲಿದು ಬಂದ...