ಮತ್ತೆ ಚಿಗುರಿದೆ ಮಾಮರದ ಎಲೆ 
ಮಾವು ಹೂವಿನ ಸೊಂಪು ಎಲ್ಲೆಡೆ 
ಜೇನ ಹೀರಲು ಹುಳಗಳದ್ದೇ ಜಾತ್ರೆ 
ತನ್ನ ಗೂಡ ಕಟ್ಟಲು ತುಂಬುತ್ತಿವೆ ಪಾತ್ರೆ 
ಇರುವೆಗಳು ಮನೆ ಕಟ್ಟಿ ಬುಡಕೆ 
ನಡೆದಿಹೆ ಸಾಲು ಸಾಲಾಗಿ ರಸವ ಹೀರೋಕೆ 
ಹಕ್ಕಿಗಳು ಗೂಡು ಕಟ್ಟಿ, ಇಟ್ಟಿರುವವು ಮೊಟ್ಟೆ 
ಕಾವು ನೀಡುತ, ಹಸಿದಿದೆ ತಾಯಿಯ ಹೊಟ್ಟೆ 
ಪಿಳಿ ಪಿಳಿ ಹಾರುತ ಬರುತಿವೆ ಚಿಟ್ಟೆ 
ಬಣ್ಣ ಬಣ್ಣದ ಪಂಕಗಳಿಂದ ಮರಕೆ ಹೊದೆಸಿಹವು ಬಟ್ಟೆ 
ವಸಂತ ಬಂದು ಪಸರಿಸಿದೆ ಕಲರವ ಎಲ್ಲೆಡೆ 
ಎಲ್ಲಾ ಜೀವ ಸಂಕುಲಕೂ ಸಂತೋಷದ ಹರುಷದ ಅಲೆ .

No comments:
Post a Comment