ಕಳ್ಳನ ಮನಸ್ಸು ಹುಳ್ಳಹುಳ್ಳಗೆ

ಕಳ್ಳನ ಮನಸ್ಸು ಹುಳ್ಳಹುಳ್ಳಗೆ

ಸುಳ್ಳನ ಅಳುಕು ತಪ್ಪು ಮುಚ್ಚುವವರೆಗೆ

ಸತ್ಯವ ಮರಿಸಲು ಅಳುವ ನಾಟಕ

ಸುಳ್ಳಿನ ನಷ್ಟ ತಪ್ಪಿಸಲು ಗೋಳಿಡುವ ನಾಟಕ

ಹರಿ ಇಲ್ಲದೆ ನಾಲಿಗೆ ರೋಜ್ಜಿನಂತೆ ಹರಿದಿರಲು

ಕ್ಷುಲ್ಲಕ ಜನರಿವರು ಮತಿಯೇ ಇಲ್ಲದೆ ಮಾತನಾಡಿಹರು

ಇವರಿವರ ಕುಡಿಗೆ ಕುತ್ತು ತರುವ ಇವರು

ಪ್ರೀತಿಯ ಅರಿಯದೆ ತೋರಿಕೆಯ ಅಭಿಮಾನ ತೋರಿಹರು

ಕೈಯಲಾಗದ ಇವರು ಅತ್ತು ಕರೆದು ಸಮಯವ ಸಾದಿಸಿಹರು

ಇವರ ಮಟ್ಟ ಇಲ್ಲಿಯವರೆಗೆ .... ನಾ ಕಾಣಿಸುವೆನು ದಾರಿ ಇವರಿಗೆ ಕೊನೆಯವರೆಗೆ ...!

ಧೀರ ಧೀಮಂತ...!

ಧೀರ ಧೀಮಂತ ಈ ಘಟ
ನ್ಯಾಯ ನಯವಾದ ನನ್ನ ಹಠ
ಅಡಗಿಸಿ ನಿನ್ನಯ ಹುಟ್ಟು
ಬಡಿದು ಬಗ್ಗಿಸುವೆ ನಿನ್ನ
ಸೇರಿಸುವತನಕ ನಿನಗೆ ಮಠ
ಕ್ರೂರಿ ಕಪಟಿ ಮೋಸ ಜಾಲದ ಮಾಟಗಾತಿ
ನಿನ್ನ ಘರ್ವವ ಮೆಟ್ಟಿ ನಿಲ್ಲುವ ತನಕ
ನಾ ಸುಮ್ಮನೆ ಕೂಡೆನು ..!

ಉಪ್ಪು ತಿಂದವನು......!

ಉಪ್ಪು ತಿಂದವನು ನೀರು ಕುಡಿಯಲೇ ಬೇಕು
ತಪ್ಪು ಮಾಡಿದವನು ಅದನ್ನು ಭರಿಸಲೇಬೇಕು
ಮೆಲ್ಲ ಮೆಲ್ಲನೆ ಮಜ್ಜಿಗೆ ಕಡಿದರೆ
ಅಜ್ಜಿಗೆ ತಿಳಿಯಲಿಲ್ಲ ಎಂದು ತಿಳಿಯ ಬೇಡವೋ ಮೂಢ
ನಿ ಚಾಪೆಯ ಕೆಳಗೆ ನುಸುಳಿದರೆ ...ನಾ ರಂಗೋಲಿ ಕೆಳಗೆ ತೂರುವ ಜಾಣ ...!

ಹೊಸದು

ಬದಲಾದ ವಸಂತ ಈ ವರುಷ ಹೊಸದು ಈ ಬದುಕು ಹೊಸದು ಹೊಸದೊಂದು ಕಟ್ಟಿ ಕನಸ್ಸು ಬೆಳಕಿನೆಡೆಗೆ ಸಾಗುವ ಹುರುಪು ನನ್ನದು !