ಬೇಡುವೆನು ..


ಬೇಡುವೆನು ಮೋಡನೇ...,
ಹರಿಸಿಬಿಡು ಮಳೆಯನ್ನ
ತುಂಬಿಸಿ ಬಿಡು ಕಾವೇರಿಯ ಮಡಿಲನ್ನ
ನಮ್ಮ ರೈತರ ಅಳುವು ನಿನ್ನ ನೀರಲ್ಲಿ ಮರೆಯಾಗಿ ಹೋಗಲಿ..!
ಬೇಡುವೆನು ಮೋಡನೇ...,
ಹರಿಸಿಬಿಡು ಮಳೆಯನ್ನ
ಒಳಹರಿವು ತುಂಬಿ ಉಕ್ಕಲಿ ನಮ್ಮ ರಾಜಸಾಗರ
ಕಿತ್ತು ತಿನ್ನುವ ರಣ ಹದ್ದುಗಳಿಗೂ ತಲುಪಲಿ ಜಲದ ಅಬ್ಬರ !
ಬೇಡುವೆನು ಮೋಡನೇ...,
ಹರಿಸಿಬಿಡು ಮಳೆಯನ್ನ
ಮಿಡಿದು ಬಿಡು ಕರುನಾಡ ಕಂದರಿಗೆ
ಒರೆಸಿ ಬಿಡು ಕಂಗಳ ಹರಿದು ಹೋಗಲಿ ನೀರು ಅವರಿಗೆ..!
ಬೇಡುವೆನು ಮೋಡನೇ...,
ಹರಿಸಿಬಿಡು ಮಳೆಯನ್ನ
ಅವರ ಒಡಲೂ ತುಂಬಲಿ
ಇಷ್ಟೊಂದು ಮಳೆ ಹರಿಸು..., ಆ ಪ್ರಳಯ ಮತ್ತೆ ಮರುಕಳಿಸಲಿ..!!


ಬಿ......ಕ......ಟ್ಟು

ನೀರು ಬಿಟ್ಟು ಬಿಟ್ಟು, ಕೃಷ್ಣರಾಜಸಾಗರ ಖಾಲಿಯಾಯಿತು...!
ನೀರು ಕುಡಿದ ಹಂದಿ, ಕುಡಿದು ಕುಡಿದು ಆನೆಯಾಯಿತು...!!

ಕಾವೇರಿ


ಕಾವೇರಿ ನಮ್ಮವಳಲ್ಲ 
ಕಾವೇರಿ ನಿಮ್ಮವಳೂ ಅಲ್ಲ
ಕಾವೇರಿ ಕರುನಾಡ ಭೂಮಿಯಲ್ಲಿ ಜನಿಸಿದವಳು
ಅವಳು ಸ್ವತಂತ್ರಳು
ಮೈತುಂಬಿದರೇ ಹರಿದಾಳು
ಇಲ್ಲದಿರೆ, ಮೌನಕ್ಕೆ ಜಾರಿಹಳು
ಅವಳು ಜನನಿ, ಅವಳು ಜೀವನದಿ
ಅವಳು ಅವಳಾಗಿಯೇ ಇರಲು ಬಿಡಿ !!


========ಭಾವಪ್ರಿಯ========

ಚಿಂತಾಜನಕ ಸ್ಥಿತಿ


ಕಾವು ಏರಿ ಬಿಸಿಯಾಗಿದೆ, 
ಕುಡಿಯೋಕೆ ನೀರಿಲ್ಲದೆ, 
ಪತ್ರಗಳು ಬರೆದು ಲೇಖನಿ ಕರಗಿದೆ...
ಶಾಂತಿಯುತ ಹೋರಾಟಕ್ಕೆ ಬೆಲೆ ಎಲ್ಲಿದೆ ?


------------ಭಾವಪ್ರಿಯ------------

ವರ್ಷಧಾರೆ

ಸರ-ಸರನೆ ಹರಿದು ಬರುತ್ತಿರುವ ವರ್ಷಧಾರೆಗೆ ಬೇಲಿಯ ಕಟ್ಟಲಾದೀತೆ....? ನೀರು ತುಂಬಿ ಹರಿಯುವ ನದಿಯನು ಹರಿಯುವುದನ್ನು ನಿಲ್ಲಿಸಲಾದೀತೆ....? ಒಲಿದು ಬಂದ...