Thursday, December 19, 2019

ಕುತಂತ್ರಿ


ಚುನಾವಣೆ ಮುಂಗಡ
ಕಳಸಾ ಬಂಡೂರಿ ಯೋಜನೆಗೆ ಅಸ್ತು..!

ಮತ ಹಾಕಿ ಗೆಲ್ಲಿಸಿದವರಿಗೆ
ಮಾಡಿದರು ಬೆಪ್ಪು,ಕೂಡಲೆ ಸಿಕ್ಕಿತು ಶಾಕು..!

ಡೊಂಬರಾಟದ ರಾಜಕೀಯಕ್ಕೆ
ಪೆದ್ದ ಜನರು ಸುಸ್ತೋ....ಸುಸ್ತು...!

Wednesday, December 18, 2019

" ಮತ (ವೋಟು) "

" ಮತ (ವೋಟು)"
ಭಿಕ್ಷೆ ಕೇಳಿ
ಪಡೆಯುವ ವಸ್ತುವಲ್ಲ !
ಸಮಾಜಿಕ ಕೆಲಸಗಳನ್ನು
ಪಾರದರ್ಶಕತೆ ಇಂದ
ನಿರ್ವಹಿಸುವ ಧ್ಯೇಯ
ಇಟ್ಟಿಕೊಂಡು, ಪ್ರಮಾಣಿಕತೆಯಿಂದ
ನಮ್ಮವರಲ್ಲಿ ನಮ್ಮವರ ಜೊತೆ
ಒಡಗೂಡಿ, ದುಡಿಯುವಾತನಿಗೆ
ಕಾರ್ಮಿಕನ ಉದ್ಯೋಗ ನೀಡಿ..
ಅವರಿಂದ ಉಪಯುಕ್ತ
ಕೆಲಸ ಮಾಡಿಸಿ...
ಪಡೆದುಕೊಳ್ಳುವ ಪರಿ !
ಸ್ವಾಭಿಮಾನದಿಂದ ನಮ್ಮನ್ನು
ನಮ್ಮ ವಿಚಾರಗಳಿಗೆ ಬೆಂಬಲಿಸಿ
ಎನ್ನುವ.,
ಪ್ರಜ್ಞಾವಂತ ಪ್ರಜೆಗಳಿಗೆ
ನೀಡುವ ಅಸ್ತ್ರವು..

" ಮತ (ವೋಟು)"

ಮಾನವೀಯತೆಯ ಮರೆತು

ಯಾರದೋ ಅಟ್ಟಹಾಸ
ಇನ್ನಾರಿಗೋ ಶಾಪ

ನೆಪಕ್ಕೆ ಧರ್ಮ ಸ್ಥಾಪನೆ
ಮಾನವೀಯತೆಯ ಕಗ್ಗೊಲೆ

ವಿಷವ ಬಿತ್ತಿ ಮನದಲ್ಲಿ
ಸುಖವ ಮರೆಸಿದ ಜನರಲ್ಲಿ

ಹುಟ್ಟು ಹಾಕಿದೆ ದ್ವೇಷ
ಎಲ್ಲೆಡೆ ಜನರ ಆಕ್ರೋಶ

ರಾಜಕೀಯ ಪ್ರೇರಿತ ಆಟ
ಗಹಗಹಿಸಿ ನಗುತಿರೆ ನೋಡಾ.., ಜನರ ಪರದಾಟ !!

Tuesday, December 17, 2019

ಧಾರವಾಡ ಒಂದು..

ಧಾರವಾಡ ಒಂದು..
ನಮ್ಮೂರಿಗೆ ಬರುವರೆಲ್ಲಾ ನಮ್ಮ ಬಂಧು !

ಧಾರವಾಡ ಹುಬ್ಳಿ ನಮ್ಮದರೀ
ಬಂದ ನಮ್ಮ ಪ್ರಸಿದ್ಧ ಠಾಕೂರ್ ಪೇಡಾ ಸವಿರಿ !

ವಿದ್ಯಾಲಯಗಳ ಹಸಿರು ಚಂದಾ
ಬರಮಾಡಿಕೊಂಡಾವ ಜನರ ಹೃದಯದಿಂದಾ !

ಓದಿ ಕಲಿತವರ ಜೀವನ ಪಾವನ
ಕಡೆತನಕ ಮರೆಯುವುದಿಲ್ಲ ಇಲ್ಲಿಯ ಮಣ್ಣ ರುಣ !

ಉಸಿರಿರುವತನಕ ಮಾಡುವೆ ನಾ ಗುಣಗಾನ
ಧಾರವಾಡ್ ಅಂದ್ರ ನನಗ ಪಂಚಪ್ರಾಣ !

ಕವಿಗಳ ಬೀಡಿದು ಎಲ್ಲರಿಗೂ ಅಭಿಮಾನ
ನಾಡ ಹೆಮ್ಮೆ ಹೆಚ್ಚಿಸಿದ ಗಣ್ಯರಿಗೆ ಹೃತ್ಪೂರ್ವಕ ಅಭಿನಂದನ !!

ಅವಾ ಅಂದ್ರ

ಅವಾ ಅಂದ್ರ ಭಾರಿ ಹಾಟ್

ಅವನ ನೋಡಿ ನಾ ಸಪಾಟ್

ಹುಡಿಕಿ ತೆಗಿಬೇಕಿಲ್ಲಾ ಕಪಾಟ್

ಸ್ವೆಟರ್ರು ಇರದಿದ್ದರೂ, ಚಳಿ ಬೊಂಬಾಟ್ !!

Thursday, December 12, 2019

ಹೌದೋ ಹುಲಿಯಾ....!


ಮಹದಾಯಿ ನೀರನು ಕೊಡಿಸಲಾಗಲಿಲ್ಲ..

ಹೌದೋ ಹುಲಿಯಾ..!

ನೆರೆ ಸಂತ್ರಸ್ತರಿಗೆ ಪರಿಹಾರ ನೀಡಲಿಲ್ಲ
ಹೌದೋ ಹುಲಿಯಾ..!

ರಸ್ತೆ ಕೆಟ್ಟು ಕೆರಾ ಹಿಡಿದರೂ.., ಟೋಲು ತೊಗೊತಾರಲ್ಲಾ
ಹೌದೋ ಹುಲಿಯಾ..!

ಜಿಡಿಪಿ ನೆಲಾಕಚ್ಚಿದರೂ..., ಬಾಯಿ ಮುಚ್ಚಿ ಕೂತಾರಲ್ಲಾ..
ಹೌದೋ ಹುಲಿಯಾ..!

ಊಳಾಗಡ್ಡಿ ಇನ್ನೂರು ದಾಟಿದರೂ..., ರೈತರ ಕಣ್ಣೀರು ತಪ್ಪಲಿಲ್ಲಾ
ಹೌದೋ ಹುಲಿಯಾ..!

ದಿನಕ್ಕೊಬ್ಬಳು ಅತ್ಯಾಚಾರಾಗಿ ಕೊಲೆ ಆಗ್ಯಾಳಲ್ಲೊ..
ಹೌದೋ ಹುಲಿಯಾ..!

ಬ್ಯಾಂಕಿನ್ಯಾಗ ರೊಕ್ಕ ಇಟ್ಟವ..., ರೊಕ್ಕ ತಗಿಯಾಕ ಆಗದನ ಸತ್ತಾನಲ್ಲೋ
ಹೌದೋ ಹುಲಿಯಾ..!

ಕಪ್ಪು ಹಣ ಇನ್ನೂ ಬರಲಿಲ್ಲವಲ್ಲೋ ಮುನಿಯಾ....
ಹೌದೋ ಹುಲಿಯಾ..!

ನಮ್ಮ ತೆರಿಗೆ ಹಣ ಕುದುರೆ ವ್ಯಾಪಾರವಾಯ್ತು....
ಹೌದೋ ಹುಲಿಯಾ..!

ನಾಡು, ದೇಶ ಹೊತ್ತಿ ಉರಿಯಾಕತ್ತೈತೋ.....
ಹೌದೋ ಹುಲಿಯಾ..!

ರಾಜಕೀಯದಾಗ ಬರಿ ದೋಚೋದ ನಡದೈತೋ.....
ಹೌದ್.... ಹೌದೋ ಹುಲಿಯಾ !!

Monday, December 09, 2019

ಸಮಸ್ಯೆ

ಬದುಕು ಸಮಸ್ಯೆಗಳ ರಂದ್ರ
ಪರಿಶ್ರಮ, ತಾಳ್ಮೆಯ ಹೊಲಿಗೆ 
ಸದಾ ಮುಚ್ಚುವುದು ಮೆಲ್ಲಗೆ 

ದ್ರಿತಿಗೆಡಬಾರದು ಜೀವನದಿ
ಈಜು ಬರದಿದ್ದರೂ  ಕೈ ಬಡಿಯುತ್ತಿರಬೇಕು...
ದಂಡೆಯ ದೇವರು ಕರುಣಿಸ್ಯಾರು

ತಲೆ ಮೇಲೆ ಬಿದ್ದ ಗುಡ್ಡ 
ಗುಂಡೆದೆಗೆ ಒಡೆದು ಮಣ್ಣು ಪಾಲು
ಸಮಸ್ಯೆಗಳ ಸರ್ಪಳಿ ಹರಿದೇ ತೀರಬೇಕು

ಕಷ್ಟಗಳ ಹುಟ್ಟಿಸಿದ ಕೈಗಳು
ಸುಂಕವಿರದೆ ಬರಿದಾಗಿ ಹೋದಾವು
ಮತ್ತೆ ಅರಳುವುದು ಹೊಸ ಹೂವು  !!



ಚಳಿ

ಇನ್ನೂ..., ಯಾಕೋ ಎದ್ದಿಲ್ಲ ಅವ..

ಜಗದಾಗ ಎಲ್ಲರಿಗೂ ಎಬ್ಬಿಸವ...!

ಮೂಡಣದಾಗ ಹೊದ್ದು ಮಲಗ್ಯಾನ

ಅವ್ವ ಕೊಟ್ಟ ಮೊಡದ ಚಾದರ್ರ...

ಈ ಚಳಿಯಪ್ಪನದೂ ಭಾರಿ ಆತ..., ಆರ್ಭಟ

ನಾಕ ಕಂಬಳಿ ತೊಟ್ರೂ.... ಕಡಿಮಿ ಆಗ್ವಲ್ತು

ಚಳಿಯ " ಮಾಟ " !!

Thursday, December 05, 2019

ನಸುಕಿನ ಕಲರವ

ಹಾಲು ಗಲ್ಲದ ಕಂದ
ಮುಸುಕಿನ ನಸುಕಲಿ ಎದ್ದ

ಅವ್ವನ ಕಾಣದ ಮುಕುಂದ
ಹಾಸಿಗೆಯಲ್ಲೇ.., ಕುಸು-ಕುಸು ಎಂದ

ಕಾಲು ಕೈಗಳ ಬಡೆಯುತ
ಅತ್ತ ಇತ್ತ ಎಲ್ಲೆಡೆ ನೋಡುತ

ಸಣ್ಣನೆಯ ದನಿಯ ಮಾಡುತ
ತನ್ನಷ್ಟಕ್ಕೆ ತಾನೆ ಆಡತೊಡಗಿದ !!




Tuesday, December 03, 2019

ತಿರುಳು

ವಿಧ ವಿಧ ಹೂವುಗಳಿಡಲು
ಒಂದೇ ಬುಟ್ಟಿಯಲಿ...!

ಕುಣಿಯುತಾ ನಲಿದಿರಲು
ಒಟ್ಟಿಗೆ ಸಂತೋಷದಲಿ..!

ಸ್ನೇಹ ಬೆಸೆದವು
ಕೆಲವೇ ಕ್ಷಣಗಳಲಿ...!

ಪ್ರೀತಿ ವಿಶ್ವಾಸಕ್ಕೆ, ಸಾಕ್ಷಿ ಹಲವು..
ಕೂಡಿ ಬಾಳುವುದೇ, ಜೀವನದ ತಿರುಳು..!!


ಬಡ ರೈತರು


ಇರುಳ್ಳಿ ಕ್ವಿಂಟಾಲಿಗೆ,
ಎಂಟು ಸಾವಿರ !!

ಇಂದಾದರೂ ಮೂಡಲಿ..,
ರೈತನ ಮುಖದಲ್ಲಿ ಮಂದಾರ !

ಐಟಿ ಬಿಟಿ ಜನರೇ..,
ತಗೆಯದಿರಿ ಉದ್ಗಾರ..!

ಬಡ ರೈತರೂ ನಡೆಸಬೇಕು...
ನೆಮ್ಮದಿಯ ಸಂಸಾರ !!

ಹಸಿವು



ಸಣ್ಣ ಕಂದಮ್ಮಗಳ ಹಸಿವು
ಕರುಳ ಹಿಚುಕಿ ಹೊಸೆಯುವುದು

ಕಣ್ಣ ಹನಿಗಳ ನೋವು
ಮನವ ಹಿಂಡಿ ಕದಡುವುದು

ಆಡುತ್ತಾ ಕಳೆಯಬೇಕಿದ್ದ ಬದುಕು
ಬೀದಿಗಳಲ್ಲಿ ಅರಸಿದೆ ನೆರವು

ಚಳಿಗೆ ಬೆಚ್ಚಗಿಡಲಾಗದ ಅಂಗಿ
ಹೊಟ್ಟೆ ಹೊರೆಯುವುದೇ ನೀರ ನುಂಗಿ ?

ಹಸಿವಿನ ಬೇಗೆಗೆ ಬೇಸತ್ತ ಬದುಕು..
ನಿವಾರಿಸಲಾಗದ ಸಿರಿವಂತಿಕೆ ಏತಕ್ಕೆ ಬೇಕು ???

Photo Courtesy : Internet

ಸಾವಿಗೆ ಕಿವಿ ಕೊಟ್ಟಾಗ..!

ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...