Thursday, November 28, 2019

ಮುಂಜಾನೆ

ಅವಳ ಕೇಶವ
ನೆತ್ತಿಗೆ ಸರಿಸಿದ ರಭಸಕ್ಕೆ...
ಕತ್ತಲೆಯು ಸರಿದಂತೆ !
ಮುಖದ ಚೆಲುವಿಗೆ...
ಬೆಳಕು ಹರಿದಂತೆ !
ಕಣ್ಣ ಅಂಚಿನ ಭಾಷ್ಪವು..
ಎಲೆಯ್ ಮೇಲಿನ ಮಂಜಿನ ಹನಿಯಂತೆ !
ಅದರುತ್ತಿರುವ ತುಟಿಗಳೇ ಸಾರುತ್ತಿವೆ..
ಚುಮು ಚುಮು ಚಳಿಗಾಲದ ಸವಿ ಮುಂಜಾನೆ..!!

Wednesday, November 27, 2019

ಅವಳು

ಅವಳು ಕಂಡಳು
ನಾಚಿ ನಕ್ಕಳು...
ಅಂಗಳ ತುಂಬಾ
ಹಾಲು ಬೆಳದಿಂಗಳು..!
ಬಾಗಿಲು ಮುಚ್ಚಲು
ಮನೆಯ ತುಂಬಾ ಮಕ್ಕಳು..!!

ಬಾಲ ಚಂದ್ರ

ನಕ್ಷತ್ರಗಳ ಕಾಣುತ್ತ
ಹಂಬಲಿಸಿ ಅಂದಳು..
ತುಂಬಿ ಬಿಡು ನಲ್ಲ
ಆ ಮಿನುಗುವ ತಾರೆಗಳ
ನನ್ನ ಉಡೆಯಲ್ಲಿ...!
ನಸು ನಕ್ಕ ನಲ್ಲ...,
ಜಗವೆಲ್ಲಾ ಹಾಲ ಬೆಳಕ
ಹಾಸಿದ ಆ ಬಾಲ ಚಂದ್ರ..
ನಿನ್ನ ಮಡಿಲಲ್ಲೇ
ನಗುತಿರುವನು.... ಎಂದನಲ್ಲ...!!

Monday, November 25, 2019

ಹಾ....ಯಾರ್ಯಾರಿಗೆ ಗಿರ್ಮಿಟ್...ಗಿರ್ಮಿಟ್...?


ಸೋಮವಾರ ಬಂತಂದ್ರ ಗತವೈಭವದ ಗಿರ್ಮಿಟ್
ಇತಿಹಾಸದ ಪುಟಗಳಿಂದ
ಹೆಮ್ಮೆಯ ಕರುನಾಡ ಚರಿತ್ರೆ
ಶತ ಶತಮಾನದ ವೈಭವ
" ಗತವೈಭವದ ವಿಷಯಧಾರೆ "
ಹಾ....ಯಾರ್ಯಾರಿಗೆ ಗಿರ್ಮಿಟ್...ಗಿರ್ಮಿಟ್...?

ಮಂಗಳವಾರದ ಚಿಣ್ಣರು ಬಡಿಸುವ ಗಿರ್ಮಿಟ್
ಮುದ್ದು ಮನಸ್ಸಿನ ಮುಗ್ಧತೆ
ಸ್ವಚ್ಚ  ಹೃದಯ ಸಿರಿವಂತಿಕೆ
ಹಿರಿಯ ಮನಗಳಿಗೆ ಇಂಪು
ನಮ್ಮ ಚಿಣ್ಣರ ಕಲರವ  " ಸಂಜೆಗೆಂಪು "
ಹಾ....ಯಾರ್ಯಾರಿಗೆ ಗಿರ್ಮಿಟ್...ಗಿರ್ಮಿಟ್...?

ಬುಧುವಾರ ಬಂತಂದ್ರ ನೆನಪುಗಳ ಗಿರ್ಮಿಟ್
ಸಿಹಿ ನೆನಪುಗಳ ಮೆಲುಕಿನಲ್ಲಿ
ಸವಿ ಸಮಯ ಸವೆದ ಕ್ಷಣಗಳಲ್ಲಿ
ತೇಲಿ ಹೊರಟ ಮನಗಳಿಗೆ....
ನೆನಪಿನಂಗಳದ " ನೆನಪಿನೋಕುಳಿ "
ಹಾ....ಯಾರ್ಯಾರಿಗೆ ಗಿರ್ಮಿಟ್...ಗಿರ್ಮಿಟ್...?

ಗುರುವಾರದ ಜಗಲಿ ಕಟ್ಟೆ ಗಿರ್ಮಿಟ್
ಊರ ಅಗಸ್ಯಾಗ ಮಂದಿ ಭರಾಟೆ
ಅವರಿವರ ಕಥೆ ಪುರಾಣ..,ಕೇಳಾಕ ಕೂತ್ರ " ಹರಟೆಕಟ್ಟೆ "
ಶ್ರೊತ್ರುಗಳಿಗೆ ಭಗವದ್ ಗೀತೆಯ " ಗೀತಭಾವಧಾರೆ "
ಹಾ....ಯಾರ್ಯಾರಿಗೆ ಗಿರ್ಮಿಟ್...ಗಿರ್ಮಿಟ್...?

ಶುಕ್ರವಾರ ಬಂತಂದ್ರ ಕವಿಗಳ ಗಿರ್ಮಿಟ್
ಕವಿತೆ, ಕವನ, ಚುಟುಕ
ಹಬ್ಬ ಹರಿದಿನಗಳಲ್ಲಿ ಕವನಗಳ ಜಳಕ
ಅಡಗಿ ಕುಳಿತ ಕವಿಗಳಿಗೆ ಪ್ರೇರಣೆಯ ವೇದಿಕೆ " ಭಾವಪುಷ್ಪ "
ಹಾ....ಯಾರ್ಯಾರಿಗೆ ಗಿರ್ಮಿಟ್...ಗಿರ್ಮಿಟ್...?

ಶನಿವಾರದ ಕಥನಗಳ ಗಿರ್ಮಿಟ್
ನಾಟಕ, ಕಥೆಗಳ,ವಾಚಕರೇ ಪಾತ್ರಧಾರಿಗಳು
ರಾಮಾಯಣ ಮಹಾಭಾರತದ ಆಯ್ದ ಕತೆಗಳು
ಕಥಾಗುಚ್ಚ, ಅರವಿಂದ್ ಅಂಕಣ
ಹಾ....ಯಾರ್ಯಾರಿಗೆ ಗಿರ್ಮಿಟ್...ಗಿರ್ಮಿಟ್...?

ರವಿವಾರಕ್ಕೊಂದು ಚೂಟಿ ಗಿರ್ಮಿಟ್
ತೊದಲು ನುಡಿಗಳಲ್ಲಿ
ನಲಿವ ಹೂಗಳಿಂದ
ನೀತಿ ಕತೆ ಆಲಿಸುವುದೇ " ಚಿನ್ನರ ಕಥಾಗುಚ್ಚ "
ಹಾ....ಯಾರ್ಯಾರಿಗೆ ಗಿರ್ಮಿಟ್...ಗಿರ್ಮಿಟ್...?

ಹಬ್ಬಗಳ ವಿಷೇಶ, ಸ್ಪೇಶಲ್ ಗಿರ್ಮಿಟ್
ಹಬ್ಬಗಳ ಮಹತ್ವದ ಕವನಗಳೋ
ಆಚರಣೆಗಳ ಸಂಬ್ರಮವೋ
ಹಬ್ಬದ ಸವಿಯನ್ನು ಉಣಬಡಿಸುವ " ಸ್ಪಂದನಾ "
ಹಾ....ಯಾರ್ಯಾರಿಗೆ ಗಿರ್ಮಿಟ್...ಗಿರ್ಮಿಟ್...?

ಸವಿಯೋಣ ಬನ್ನಿ ರುಚಿ ರುಚಿ ಗಿರ್ಮಿಟ್
ದಿನ ದಿನ ಕೇಳುತ್ತ ಕನ್ನಡ ಸಾಹಿತ್ಯದ ರಸದೌತಣ
ಅನುದಿನವೂ ಆತ್ಮಕೆ ಜ್ಞಾನವ ತುಂಬೋಣ
ನಾಡಿನ ಒಳಿತಿಗೆ ನುಡಿಯ ಏಳಿಗೆಗೆ ನಮ್ಮ ಪಣ
ಸವಿಯಿರಿ ಗಿರ್ಮಿಟ್....ಹಾ....ಯಾರ್ಯಾರಿಗೆ ಗಿರ್ಮಿಟ್...ಗಿರ್ಮಿಟ್...?

Tuesday, November 12, 2019

ಬಾವುಟ


ಹಾರಿಸಿಲ್ಲವೆಂದರೆ ಏನಂತೆ

 " ಸರ್ ಖಾರಾ " ಕನ್ನಡದ ಬಾವುಟ ... ??

ಪ್ರತಿ ವಾಹನದ ಮೇಲೆ,

ಕಂಗೊಳಿಸುತಿದೆ ನೋಡಾ.....

ನಮ್ಮ ಕನ್ನಡದ ' ಭೂ' ಪಟ !!

ಶುಭೋದಯ

ಸ್ವಪ್ನ ಲೋಕದಲ್ಲಿ ತೇಲುತ್ತಿದ್ದ ಮೋಡಗಳಿಗೆ...

ಮಿಂಚು ಹೊಡೆದು ಅರಚಿದ ಹಾಗೆ...

ಎದ್ದು ನಸುಕಿನಲ್ಲಿ ಭೋರ್ಗರೆದಳು ವರ್ಷಧಾರೆ...

ಊರ ಅಂಗಳವೆಲ್ಲಾ ಶುಚಿ...

ನಿದ್ದೆಯಿಂದ ಎದ್ದ ಮನುಕುಲಕ್ಕೆ ಭವ್ಯ ಸ್ವಾಗತ..!!

ಸಮೃದ್ಧ ಕರ್ನಾಟಕ



ಸದಾ ಕಂಗೊಳಿಸುವ ಬೆಳಗಾವಿ
ಸೈನಿಕರು ಹೊರಟಾರ ಹಿಡಕೊಂಡು ಕೋವಿ

ಉತ್ತರ ಕರ್ನಾಟಕಕ್ಕೆ ಹೆಬ್ಬಾಗಿಲು
ಕವಿಗಳ ಗೂಡು ಚೆಲುವ ಧಾರವಾಡ ಬೀಡು

ಸುಡುಸುಡುವ ತವರು ರಾಯಚೂರು
ಬೆಂಕಿಗೂ ಬೆವರಿಳಿಸುವುದು ಬಲು ಜೋರು

ಕರುನಾಡ ಹೃದಯವದು ದಾವಣಗೆರೆ
ನಾಲಿಗೆ ರುಚಿಗೆ ನೀರೊರಿಸುವುದು ಬೆಣ್ಣೆದೋಸೆ

ಮೆಣಸಿಕಾಯಿ ಇಳುವರಿ ಹಾವೇರಿ
ಬ್ಯಾಡಗೀಯ ಕೆಂಪು ಮೆಣಸಿನಕಾಯಿ ಬಹಳ ಖಾರಾ ರೀ

ಕವಿಗಳ-ಸಂಗೀತ  ದಿಗ್ಗಜರ ನಾಡು ಗದಗ
ಭಿಮಸೇನರು, ಪುಟ್ಟರಾಜ ಗವಾಯಿಗಳು ಚೆನ್ನವೀರ ಕಣವಿ, ಆಲೂರು ವೆಂಕಟರಾಯರು

ಇತಿಹಾಸದ ಮರಿ ಮಗಳು ವಿಜಯಪುರ
ಗೋಲಗುಮ್ಮಟದ ಇಮಾರತವು ಜನಪ್ರೀಯ

ಕರಾವಳಿಯ ಸೊಬಗು ಮಂಗಳೂರು
ಮೀನ ಸವಿದ ಜನರು ಓದುದರಲ್ಲಿ ಚುರುಕು

ಅದಿರು ಸಂಪತ್ತಿನ ನಾಡು ಬಳ್ಳಾರಿ
ಸುಪ್ಪತ್ತಿಗೆಯಲಿ ಮಿಂದ ಜನರು ಸುವಿಹಾರಿ

ಕಲ್ಲಿನ ಕೋಟೆಗೆ ಪ್ರಸಿದ್ಧ ಚಿತ್ರದುರ್ಗ
ಮಾರಿ ಕಣಿವೆಯ ನೋಟ ಅತಿ ಮಧುರ

ಕೊಳ್ಳೆಗಾಲ, ಬಂಡಿಪುರ, ಚಾಮರಾಜನಗರ
ವನ್ಯಜೀವಿಗಳ ತವರು ಕಾಪಾಡಿಕೊಳ್ಳುವುದು ನಮ್ಮಯ ಭಾರ

ಬೆಂಗಳೂರು ಕರುನಾಡ ವಾಣಿಜ್ಯ ಖಣಜ
ಎಲ್ಲ ಭಾರತೀಯರಿಗೂ ಅನ್ನ ನೀಡುವ ಅನ್ನದಾತ

ಚಿಕ್ಕಮಗಳೂರು ಕಾಫಿ ಸಮೃದ್ಧಿಯ ಸಾಗರ
ಜನರ ದಣಿವಾರಿಸಿ ಚೈತನ್ಯ ತುಂಬುವ ಅಗರ

ತೊಗರಿ ಬೆಳೆಯುವ ತಾಣ ಗುಲ್ಬರ್ಗ
ಭಾರತಕ್ಕೆ ಸಿಮೆಂಟು ತಯ್ಯಾರಿಸುವ ದಿಗ್ಗಜ

ಬಿಸಿಲು ನಾಡಿನ ತಂಪು ಸ್ಥಳ ಬೀದರ
ಕರಕುಶಲ ವಸ್ತುಗಳಿಗೆ ಪ್ರಸಿದ್ಧಿ ಹೊಂದಿ ಅಮರ

ವೀರ ಯೋಧರ ನಾಡು ಕೊಡಗು
ಕಾವೇರಿ ಹುಟ್ಟು ತಲಕಾವೇರಿ, ಕೊಡವ ನಾಡೆಲ್ಲಾ ಹಸಿರು

ಅಪರಂಜಿಯ ಗಣಿ ಕೋಲಾರ
ಕರುನಾಡಿಗಿದು ವಜ್ರದ ಹಾರ

ಐತಿಹಾಸಿಕ ನಗರಿ ಮೈಸೂರು
ಒಡೆಯರ ಅರಮನೆ ವೈಭವ ನೋಡಲು ಸಾಲದು ಈ ಜನುಮವು

ಕಬ್ಬು ಬೆಳೆವ ಸೀಮೆ ಮಂಡ್ಯ 
ಸಿಹಿ ಸುತ್ತುಕಬ್ಬು ಉಣಬಡಿಸುವುದು ಗಾಣ

ರಾಮನಗರ ರೇಷ್ಮೆಯ ಶಿಖರ
ಬರ್ಜರಿ ರೇಷ್ಮೆಸೀರೆಗಳೆ ಹೆಂಗಳೆಯರಿಗೆ ಭೂಷಣ

ಬತ್ತ, ಅಕ್ಕಿ ಬೆಳೆವ ಬೈಲು ಕೊಪ್ಪಳ
ಹೆಸರುವಾಸಿಯಾಗಿಹುದು ಅಕ್ಕಿಯ ಬಟ್ಟಲ

ಇಳಕಲ್, ಬಾದಾಮಿ, ಬಾಗಲಕೋಟೆ
ಚಾಲುಕ್ಯರು ಕೆತ್ತಿದ ಕಲ್ಲಿನ ಗುಡಿ-ಗವಿಗಳೇ  

ಶಿವನ ಮೊಗದ ಹಿರಿಮೆ ಶಿವಮೊಗ್ಗ
ಭಾರತದ ಎರಡನೆಯ  ಪ್ರಸಿದ್ದ ಜಲಪಾತ ಜೋಗ 

ಹೊಯ್ಸಳರು ಆಳಿದ ನಾಡು ಹಾಸನ
ಬೇಲೂರು, ಹಳೆಬೀಡು, ಐತಿಹಾಸಿಕ ಶಿಲ್ಪ ಕೆತ್ತನೆಯ ಕುರುಹು

ಸಾವಿರಾರು ಮಕ್ಕಳಿಗೆ ಶಿಕ್ಷಣ ನೀಡಿದ ತುಮಕೂರು
ಕರ್ನಾಟಕ ರತ್ನ ಶ್ರೀ ಶಿವಕುಮಾರ ಸ್ವಾಮಿಜಿಯವರು, ನಾಡು ಕಂಡ ನಡೆದಾಡುವ ದೇವರು.

ಕನಕನ ಕಿಂಡಿಯ ಖ್ಯಾತಿ ಉಡುಪಿ
ಶ್ರೀ ಕೃಷ್ಣನ ದೇವಸ್ಥಾನ ಪ್ರೇಕ್ಷಣಿಯ ತದ್ರೂಪಿ

ಹಡುಗಿನ ಬಂದರು, ಕರಾವಳಿಯ ನಗರ ಕಾರವಾರ
ಹಸಿರುಮಯ ಸಹ್ಯಾದ್ರಿ ಕಾನನ, ಪಶ್ಚಿಮಕ್ಕೆ ನೀಲಿ ಸಾಗರ

ಯಾದವರು ಆಳಿದ ಗುಡ್ಡಗಳ ಯಾದಗಿರಿ
ಅಧ್ಯಾತ್ಮಗಳ ತಾಣ, ಮೈಲಾಪುರ ಮಲ್ಲಯ್ಯ, ಮೌನೇಶ್ವರ ಗುಡಿ, ಗುರಿಮಿಟ್ಕಲ್ ಮಾತೆ ಮಾಣಿಕೇಶ್ವರಿ

ದ್ರಾಕ್ಷಿ, ಕಾಳು, ರೇಷ್ಮೆ ಬೆಳೆವ ಚಿಕ್ಕಬಳ್ಳಾಪುರ
ಆಧುನಿಕ ಜಗದಲಿ ಆಗ ಹೊರಟಿಹುದು ಬೆಂಗಳೂರಿನ ಅಂಗ

ಕರುನಾಡು ಅಡಿಯಿಂದ ಮುಡಿವರೆಗೂ ಸಮೃದ್ಧಿಯ ಬೀಡು
ಇಲ್ಲಿ ಹುಟ್ಟಿದ ಜನರ ಜೀವನವು., ಸುಗಮ ಸಂಗೀತದ ಹಾಡು !!

ಹಚ್ಚು ಬಾರೋ ದೀಪವ


ಹಚ್ಚು ಬಾರೋ ದೀಪವ, ಹಚ್ಚು ಬಾರೋ....
ಗುಡಿಸಿ ಮನೆಯ, ಮನೆ ಅಂಗಳವ
ಶುಚಿಗೊಳಿಸಿ ಗೋಡೆಯ,
ಸುಣ್ಣ ಬಣ್ಣವ ಸಾರಿಸು ಬಾರೋ...
ಹಚ್ಚು ಬಾರೋ ದೀಪವ, ಹಚ್ಚು ಬಾರೋ....!

ತಾಂಬ್ರದ ಬಿಂದಿಗೆಯ ಬೆಳಗಿ
ಮಾಲಿಂಗನ-ಅಮೃತ ಬಳ್ಳಿಯ ಸುತ್ತಿ
ಅರಿಶಿಣ ಕುಂಕುಮವ ಹಚ್ಚಿ ನೀರನು ತುಂಬಿ...
ಹಚ್ಚು ಬಾರೋ ದೀಪವ, ಹಚ್ಚು ಬಾರೋ....!

ಜಗಲಿಯ ಮೇಲೆ ಬೆಳ್ಳಿ ದೀಪ
ಕಿಟಕಿಯ ಅಡಿಯಲ್ಲಿ ಹಣತೆಯ ದೀಪ
ತುಳಸಿಯ ಗೂಡಿಗೊಂದು ಹಿತ್ತಾಳೆಯ ದೀಪ...
ಹಚ್ಚು ಬಾರೋ ದೀಪವ, ಹಚ್ಚು ಬಾರೋ....!

ಮನೆಯ ಹೆಬ್ಬಾಗಿಲಿಗೆ ತೋರಣ ಕಟ್ಟಿ
ಚೆಂಡು ಹೂವಿನ ಮಾಲೆ ತೊಡಿಸಿ
ಬಾಗಿಲ ಇಬ್ಬದಿಗೆ ಪಾಂಡವರ ಕೂಡಿಸಿ.....
ಹಚ್ಚು ಬಾರೋ ದೀಪವ, ಹಚ್ಚು ಬಾರೋ....!

ಮಕ್ಕಳು ನಲಿದಾರು ಹೊಸ ಬಟ್ಟೆಯ ತೊಟ್ಟು
ಸಂತಸದಿ ಕುಣಿದಾರು ಸುಚಂದ್ರಿ ಕಡ್ಡಿ, ಪಟಾಕಿ ಸುಟ್ಟು
ಚಕ್ರದ ಮದ್ದಿಗೆ ಮನೆ ಮುಂದೆ ರಂಗೋಲಿ....
ಹಚ್ಚು ಬಾರೋ ದೀಪವ, ಹಚ್ಚು ಬಾರೋ....!

ಬಡವರ ಪಾಲಿನ ಮಣ್ಣಿನ ಹಣತೆ
ಸಿರಿವಂತರ ಅಂತಸ್ಠಿನ ಬಂಗಾರದ ಬೆಳಕೆ..
ಮನೆಮನಗಳ ಬೆಳಗುವ ದೀಪಗಳ.....
ಹಚ್ಚು ಬಾರೋ ದೀಪವ, ಹಚ್ಚು ಬಾರೋ....!

ದೀಪಗಳ ಹಬ್ಬವೇ ಬಲು ಸೊಗಸ್ಸು
ದೀಪಾವಳಿಂದಲೇ ಹೆಚ್ಚಿಸುವುದು ಹುಮ್ಮಸ್ಸು
ಬೆಳಗುತಿರಲಿ ದೀಪಗಳು ಹೆಚ್ಚಿಸುತ್ತಾ ವರ್ಚಸ್ಸು.....
ಹಚ್ಚು ಬಾರೋ ದೀಪವ, ಹಚ್ಚು ಬಾರೋ....!!


ಮನುಷತ್ವ

ಗುಡಿ ಕಟ್ಟಿದರೂ
ಮಸೀದಿ ಕಟ್ಟಿದರೂ
ಇಲ್ಲಾ,
ಚರ್ಚ್ಗಳೇ ಕಟ್ಟಿದರೂ
ಅಲ್ಲಿ ಯಾವುದೇ ದೇವರು ಬಂದು ನೆಲೆಸುವುದಿಲ್ಲ...!

ಮನುಷ್ಯನಿಗೆ,
ಮನುಷತ್ವದ ಬೆಲೆ ತಿಳಿದಾಗಲೇ.....,
ಎಲ್ಲರಲ್ಲೂ ದೇವರು ಕಾಣುತ್ತಾನೆ....!!
ಸ್ವಲ್ಪ ಯೋಚಿಸಿ ನೋಡಿ.......................................... !!

Monday, November 11, 2019

ಹಿಂದುಗಳು ನಾವು...!!


ಗುಡಿಗಳ ಕಟ್ಟಿ
ಭಕ್ತಿ ತೋರುವೆವು
ಮಂತ್ರ ಪಠನೆ ಮಾಡಿ
ಹಾಲೆರೆದು ಪೂಜಿಪೆವು
ಹೂವು ಹಣ್ಣು ಕಾಯಿ
ಅರಿಶಿಣ,ಕುಂಕುಮ,ವಿಭೂತಿ
ಕರ್ಪುರ,ಧೂಪ,ಊದಬತ್ತಿ
ಧಗ ಧಗನೆ ಹೊಗೆ ಹತ್ತಿ
ಸ್ವರ್ಗ ಲೋಕ ಕಂಡಂತೆ..!
ನಾವು ಉತ್ತಮರು...ನಾವು ಸರ್ವೋತ್ತಮರು...ಹಿಂದುಗಳು ನಾವು...!!

ಪೂಜಿಸಿದ ದೇವರು
ಅರಳಿ ಕಟ್ಟೆಯೇ ಸೂರು
ಮನೆಯಲ್ಲಿ ರಾರಾಜಿಸಿದ ದೇವರು
ಬೀದಿ ಕಸದಲ್ಲಿ, ರಸ್ತೆ ಪಾಲು
ಯಾರಿಗೆ ಹರಸಿದರೇನು...
ಯಾರದೋ ಕಷ್ಟಕ್ಕಾದರೇನು...
ದೀಪ ಬೆಳಗಿದವನು ಕೂಡಾ...
ಇಂದು ಕತ್ತಲಲ್ಲಿ ಚೆಲ್ಲಿಹನು...
ಯಾರವರು...ಯಾರವರು....?? 
ನಾವು ಉತ್ತಮರು...ನಾವು ಸರ್ವೋತ್ತಮರು...ಹಿಂದುಗಳು ನಾವು...!!

ಸಾವಿಗೆ ಕಿವಿ ಕೊಟ್ಟಾಗ..!

ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...