ಕಥೆ (ಎಲ್ಲ ಕಥೆಗಳ ಹಿಂದಿನ ಕಹಿ ಸತ್ಯಗಳು ) - 11

(ಮುಂದೆವರೆದಿದೆ....... )  ಗಂಡನ ಮನೆಯಿಂದ   ತಾಳಿ ಎಸೆದು ಬಂದ ಹೆಂಗಸಿಗೆ ಎನೋ ಸಂತೋಷ , ಅಂತು ಇಂತು ಗಂಡನ ಮನೆಯಿಂದ ತಪ್ಪಿಸಿಗೊಂಡು ಬಂದೆ, ಇನ್ನು ಮುಂದೆ ನನ್ನ ಯಾರು ಏನೂ  ಕೇಳುವುದಿಲ್ಲ ಅನ್ನುವ ಸಂತಸ ಅವಳಿಗೆ. ಮರುದಿನದಿಂದಲೇ ಇವಳ ಬಾಯ್ ಫ಼್ರೆಂಡ ಇವಳನ್ನ ತನ್ನ ಬೈಕಿನ ಮೇಲೆ ಆಫಿಸಿಗೆ ಕರೆತರುತ್ತಾನೆ. ಅವನು ಸಹ ಅವಳದೇ ಆಫಿಸಿನಲ್ಲಿ ಕೆಲಸ ಮಾಡುತ್ತಿರುತ್ತಾನೆ.  ಇವರಿಬ್ಬರ ಒಡನಾಟ ತುಂಬಾ ಜೋರಾಗಿ ಶುರುವಾಗುತ್ತದೆ. ಆಫೀಸಿನ ಸಹುದ್ದ್ಯೋಗಿಗಳು ಮುಂಚೆ ಇವರು ಬರಿ ಸ್ನೇಹಿತರು ಅಂದು ಕೊಂಡಿರುತ್ತಾರೆ , ಇವಳು ಗಂಡನ ಬಿಟ್ಟು   ಬಂದವಳು ಅನ್ನುವುದು ಅವಳ ಗೆಳತಿಯ ಹೊರೆತು ಯಾರಿಗೂ ತಿಳಿದಿರುವುದಿಲ್ಲ . ಇವಳ ನಡೆವಳಿಕೆ ನೋಡಿದ ಗೆಳತಿ ನೀನು ಮಾಡುತ್ತಿರುವುದು ತಪ್ಪು ... ಹೀಗೆ ಮದುವೆಯಾದ ನೀನು ಬೇರೆಯವರೊಂದಿಗೆ ಸಲಿಗೆಯಿಂದ ಇರುವುದು  ತಪ್ಪು  ಅಂದಿದ್ದಕ್ಕೆ ..., ನೀನ್ಯಾವಳೆ  ಕೇಳೋದಕ್ಕೆ ? ನಾನು ಏನ್ಬೇಕಾದರೂ ಮಾಡಿಕೊಳ್ಳುತ್ತೇನೆ ನಿನಗ್ಯಾಕೆ ಅವೆಲ್ಲಾ ಅಂತ ಗದರಿಸಿ ಬಿಡುತ್ತಾಳೆ . ಇವಳ ಕಷ್ಟಗಳಿಗೆಲ್ಲ ಸ್ಪಂದಿಸಿದ ಗೆಳತಿಗೆ ಕಥಾ ನಾಯಕಿ ಕೊಟ್ಟ ಉತ್ತರ... ನೊಂದ ಗೆಳತಿ ಇವಳಿಗೆ ಬುದ್ದಿ ಹೇಳಲು ಹೋಗಿದ್ದು ತನ್ನ ತಪ್ಪು ,ಪಾಪ ಇವಳ ಗಂಡ ಇವಳ ಮೇಲೆ ಬೆಟ್ಟದಷ್ಟು  ಪ್ರೀತಿ ಇಟ್ಟುಕೊಂಡಿದ್ದ , ಈ ವಿಷಯಗಳು ಅವನಿಗೆ ತಿಳಿದರೆ  ನೊಂದುಕೊಳ್ಳುತ್ತಾನೆ ಅನ್ನುತ್ತಾ ಮರಗುತ್ತಾಳೆ. ಗೆಳತಿ ಮೂಕ ಪ್ರೆಕ್ಷಕಳಂತೆ ಆಫೀಸಿನಲ್ಲಿ ನಡೆಯುತ್ತಿರುವುದನ್ನು  ಗಮನಿಸುತ್ತಿರುತ್ತಾಳೆ. ಆ ಕೆಟ್ಟ ಹೆಂಗಸು ಅವನ ಜೊತೇನೆ  ಊಟ, ಚಾಹ  ಎಲ್ಲಾ , ಬೇಕೆಂದಾಗಲೆಲ್ಲಾ ಐಸ್ಕ್ರಿಮು ಕೊಡೆಸುವವ ಇವ .  " ಹೆಂಗಸರ ಬುದ್ದಿ ಮಣಕಾಲು ಕೆಳಗೆ " ಅನ್ನುವ ಗಾದೆ ಇಲ್ಲಿ ನಿಜವಾಗುತ್ತದೆ.  ಅದೊಂದು ದಿನ ಗಂಡ ಎಲ್ಲೋ ಹೊರಗೆ ಹೋಗಿ ಬರುತ್ತಿರುವಾಗ ಇವಳನ್ನು ಒಬ್ಬನ ಜೊತೆ ಇದ್ದುದ್ದನ್ನು ನೋಡುತ್ತಾನೆ. ದೂರದಲ್ಲಿ ನಿಂತು ಇವರ ಚಲನವಲನಗಳನ್ನ ವಿಕ್ಷಿಸುತ್ತಾನೆ , ಇತ್ತ ಗಂಡನ ಕಂಡರೂ ಆಶ್ಚರ್ಯ ಪಡದ ಇವಳು ಗಂಡನ ಹತ್ತಿರ ಕೈ ಮಾಡುತ್ತಾ ತನ್ನ ಬಾಯ್ ಫ಼್ರೆಂಡಿಗೆ ಏನೋ ಹೇಳುತ್ತಾಳೆ.. ಅಷ್ಟರಲ್ಲಿ ಅವಳ ಬಸ್ಸು ಬರುತ್ತದೆ ಅವನು ಅವಳನ್ನ ಬಸ್ಸು ಹತ್ತಿಸಿದ್ದೇ ಆಫೀಸಿನ ಹತ್ತಿರ ವೇಗವಾಗಿ ಓಡಲು ಪ್ರಾರಂಭಿಸುತ್ತಾನೆ ,ಆಕೆಯ ಗಂಡ ದೂರದಲ್ಲೆ ನಿಂತು ಇವನು  ಯಾರು, ಎಲ್ಲಿಗೆ ಹೋಗುತ್ತಿದ್ದಾನೆ ಅಂತ ಕುತೂಹಲದಿಂದ ನೋಡುತ್ತಾನೆ.  ವಿಜಯ ನೂರು ಪ್ರಶ್ನೆಗಳ  ಹೊತ್ತು  ಮನೆಗೆ  ಮರಳುತ್ತಾನೆ . ಅವನ ಮನಸಲ್ಲಿ ಎನೋ  ಕಸಿವಿಸಿ ..., ಯಾರವನು ? ಇಷ್ಟು ಬೇಗ ಮತ್ತೊಬ್ಬನ ಜೊತೆಯಲ್ಲಿ ಇವಳ ಸರಸ , ತಡೆಯಲಾಗದೆ ಅವಳ ಗೆಳತಿಯ ಮನೆಗೆ ಹೋಗಿ ಕೇಳಿಯೇ ಬಿಡುತ್ತಾನೆ .., ರೀ ಭಾಮಾ ಅವರೇ (  ಗೆಳತಿ ) ಇವತ್ತು ಇವಳೊಬ್ಬನ ಜೊತೆಯಲ್ಲಿ ಬಸ್ಸು ನಿಲ್ದಾಣದಲ್ಲಿ  ನಿಂತಿದ್ದನ್ನು ನೋಡಿದೆ ನಿಮಗೆ ಗೊತ್ತೇ ಇರಬೇಕು ಯಾರು ಆ ಹುಡುಗ... ? ಭಾಮಾಗೆ  ಮಾತುಗಳೇ ಹೊರಡಲಿಲ್ಲ .., ವಿಜಯ ಅವರೇ ... " ಅವಳು ತುಂಬಾ ಮುಂದುವರೆದಿದ್ದಾಳೆ " ನಾವು ಗೆಳತಿಯರೆಲ್ಲರೂ ಅವಳು ಒಳ್ಳೆಯವಳು ಅಂತ ಅಂದುಕೊಂಡಿದ್ದಿವಿ , ಅವಳು ಇಂತಹ ಸಂಬಂಧಗಳನ್ನು ಇಟ್ಟುಕೊಂಡಿದ್ದಾಳೆ ಅನ್ನುವುದು ನಮಗೂ ಕೂಡ ತಿಳಿದಿರಲಿಲ್ಲ . ಅವಳಿಗೆ ನಿಮ್ಮ ಜೊತೆ ಸಂಸಾರ ಮಾಡಲು ಇಷ್ಟವಿಲ್ಲವಂತೆ , ಸುಮ್ಮನೆ ಅವಳನ್ನ ಬಿಟ್ಟು ಬಿಡಿ ಅಂತ ಹೇಳಿಬಿಡುತ್ತಾಳೆ , ಇಷ್ಟು ಬಿಟ್ಟರೆ ನಿಮಗೆ ಮತ್ತೇನೂ ನಾ  ಹೇಳಲಾರೆ ಎಂದು ಮೌನವಾಗುತ್ತಾಳೆ.  ವಿಜಯನಿಗೆ  ಅರಗಿಸಿಕೊಳ್ಳಲಾಗದ ವಿಷಯ .. ! ಹಿಂದೆ ಒಂದು ಸಾರಿ ಜಗಳದಲ್ಲಿ ಹೆಂಡತಿ  ಹೇಳಿದ ಮಾತುಗಳು  ನೆನಪಿಗೆ ಬರುತ್ತವೆ..... , ಗಂಡ ಹೆಂಡಿರ ನಡುವೆ ಜಗಳವಾದಾಗ ಗಂಡ ಅಂದು ಕಚೇರಿಯಿಂದ ತಡವಾಗಿ ಮನೆಗೆ ಬಂದಿರುತ್ತಾನೆ  , ತನ್ನ ಕಚೇರಿಯಲ್ಲಿ ನಾಟಕದ ಪ್ರಯುಕ್ತ , ಆ ನಾಟಕದಲ್ಲಿ ಹುಡುಗೆಯರು ಕೂಡ ಭಾಗವಹಿಸಿದ್ದರು ಅನ್ನೋ ಕಾರಣಕ್ಕೆ....  ಇವಳು " ನಾನು ಕೂಡ ಯಾವನನ  ಜೊತೆಯಲ್ಲಿ ಮಲಾಗಿ ಬರಲಾ ? " ಅಂತ ಹೇಳಿರುತ್ತಾಳೆ .  ಟಿವಿ ಚಾನಲ್ಲಿನಲ್ಲಿ  ಶುಸ್ಮಿತಾ ಸೇನ್ ಹಾಗು ಖುಶುಬು ನಟಿಮಣಿಯರು " SEX BEFORE MARRIAGE IS NOT CRIME " ಅಂದಿದ್ದಕ್ಕೆ ಇವಳ ಪ್ರತಿಕ್ರಿಯೆ.... " ಅಯ್ಯೋ ಇವೆಲ್ಲಾ ಕಾಮನ್ ಇವಾಗ " ಅಂದ ಮಾತುಗಳು ವಿಜಯನ್ನ ಇವಳು ಎಂತಹ ಕೆಟ್ಟ ಹೆಂಗಸು ಅನ್ನುವುದು ಗೋಚರಿಸತೊಡಗುತ್ತದೆ. ಅಯ್ಯೋ ಶಿವನೆ ..... ಯಾವ  ಪಾಪಕ್ಕಾಗಿ ನನಗೆ ಈ ಶಿಕ್ಷೆ ? ಅನ್ನುತ್ತಾ ತುಂಬಾ ನೊಂದುಕೊಳ್ಳುತ್ತಾನೆ . ಅತ್ತ ಹುಡುಗಿಯು ಮನೆಗೆ ಹೋಗಿ ತನ್ನ ತಪ್ಪುಗಳು ಮುಚ್ಚಿಕೊಳ್ಳಲು , ತನ್ನ ಗಂಡ ಆಫೀಸಿನ ಹತ್ತಿರ ಬಂದು ತನ್ನನ್ನ ಹಿಡಿದು ಎಳೆದ ಅಂತ ಹೇಳಿ , ಅದಕ್ಕೆ  ಅವನ ಮೇಲೆ ಪೋಲಿಸು ದೂರು ನೀಡಲು ಮುಂದಾಗುತ್ತಾಳೆ, ಇದಕ್ಕೆ ಕುಮ್ಮಕ್ಕು ಅವಳ ಮಾವ, ಅವಳ ತಾಯಿ .  ಆದರೆ ಇಲ್ಲಿ ಇವರ ಮನೆಯವರಿಗೆ ಇವಳ ಕಪಟ ಆಟಗಳು ತಿಳಿದಿರುವುದಿಲ್ಲ. ಒಂದು ಮಟ್ಟಿಗೆ ಇವಳ ಮಾವನಿಗೆ ಇವಳ ಬಗ್ಗೆ ಎಲ್ಲಾ ಮಾಹಿತಿಗಳು ಇರುತ್ತವೆ ಹಾಗು ಇವನು ಕೂಡ ಅವಳ ಕೃತ್ಯಗಳಿಗೆ ಸಹಾಯ ಹಸ್ತ ನೀಡುತ್ತಿರುತ್ತಾನೆ. ಮಾರನೆ ದಿನ ಬೆಳಿಗ್ಗೆ ಇವಳ ಮಾವ ಹಾಗು ಇವಳು  ಸೇರಿ  ಪೋಲಿಸು  ಠಾಣೆಯಲ್ಲಿ  ವಿಜಯನ ವಿರುದ್ದ ಸುಳ್ಳು ದೂರುಗಳನ್ನು ನೀಡುತ್ತಾರೆ , ಅವರ ದೂರಿನಲ್ಲಿ ಗಂಡ ಅವಳನ್ನು ಹೊಡಿದು ಬಡಿದು ಹಿಂಸಿಸುತ್ತಾನೆ , ವರದಕ್ಷಿಣೆ ಕಿರುಗಳ ಹಾಗು ಹುಡುಗನ ತಂದೆ ತಾಯಿ ತಮ್ಮಂದಿರ ಮೇಲೆ ಹಿಂಸೆಯ ಸುಳ್ಳು ದೂರು ನೀಡುತ್ತಾಳೆ. ಗಂಡನ ಜೊತೆ ಇವಳೊಬ್ಬಳೆ ಇದ್ದವಳು ಮನೆ ಮಂದಿಯ ಮೇಲೆಲ್ಲಾ ಮನಕೆ ತೋಚಿದಂತೆ ದೂರು ನೀಡುತ್ತಾಳೆ. ವಾಹ ಎಂತಹ ಹೆಂಗಸುರು ಇದ್ದಾರಪ್ಪಾ ಈ ಜಗದಲ್ಲಿ ಅಂತಾ ಅನ್ನಿಸುವುದಿಲ್ಲವೇ ಪ್ರೀಯ  ಓದುಗರೆ...  ?  ಪಾಪ ವಿಜಯನಂತಹ ಹುಡುಗರು ಇನ್ನೂ ಎಷ್ಟು ಇರುವರು ನಾ ಕಾಣೆ...!  ಕೆಟ್ಟ ಹೆಂಡತಿಯ ಕಟ್ಟಿಕೊಂಡ ವಿಜಯನ ಕಥೆ ಮುಂದೆ ಏನಾಗುತ್ತದೋ ಕಾದು  ನೋಡಿ. ( ಮುಂದುವರೆವುದು  ....... )

No comments:

ವರ್ಷಧಾರೆ

ಸರ-ಸರನೆ ಹರಿದು ಬರುತ್ತಿರುವ ವರ್ಷಧಾರೆಗೆ ಬೇಲಿಯ ಕಟ್ಟಲಾದೀತೆ....? ನೀರು ತುಂಬಿ ಹರಿಯುವ ನದಿಯನು ಹರಿಯುವುದನ್ನು ನಿಲ್ಲಿಸಲಾದೀತೆ....? ಒಲಿದು ಬಂದ...