Thursday, March 28, 2013

ಸುಂದರ ಅನುಭಾವ


ನನ್ನವಳು ಬಳಿ ಬಂದು ನಿಂತಾಗ....


ನಾ ಉಸಿರೆಳೆದ ಗಾಳಿಯಲಿ ಅವಳ ಸೌಗಂಧದ ಪರಿಮಳ,

ಮೈ ಮುರಿಯುತ್ತಾ ಕಣ್ಣು ಮುಚ್ಚಲು..,ನೀಲಾಗಸದಲ್ಲಿ ತೇಲಿದ ಅನುಭವ !

ಹಾರ ತೊಡಗಿತು ಒಲವಿನ ಹಕ್ಕಿ.., ಅವಳ ಮನದ ಆಗಸದ ಮುಡಿಗೇರಿ,

ಚಿಲಿಪಿಲಿ ಗುಟ್ಟುತಿರಲು...ನಾ ಸೇರ ಬಯಸುವೆ ಅವಳ ಹೃದಯದಲಿ..

ಬಿಗಿದು ಹಿಡಿದಿರುವೆ ನಾ ಸೇವಿಸಿದ ಗಾಳಿಯ, ನಿಶ್ವಾಸವ ಬಯಸಲೇ ಇಲ್ಲ ನನ್ನ ಹೃದಯ !!

Wednesday, March 27, 2013

ಹಣೆಬರಹ


ಹುಡುಗನೋಡನೆ ಇದ್ದ ಗೆಳತಿಯ ಕಂಡು

ಭಲೆ ಜೋಡಿ ಎಂದರು ಗೆಳೆಯರೆಲ್ಲಾ !

ಅಪ್ಪ ಅಮ್ಮಂದಿರ ಮಾತು ಮೀರಲಿಲ್ಲ..,

ಮದುವೆ ಆದ ಮೇಲೆ ಅವರಂತೆಯೇ....

ಅತ್ತ ಅವಳಿಗೆ ಸುಖವಿಲ್ಲ ,ಇತ್ತ ಇವನಿಗೂ ಖುಷಿಯಿಲ್ಲಾ !



***ಭಾವಪ್ರಿಯ***

ಭಾಗ್ಯವಲ್ಲದ ದೀಪ


ವರ ಸಿಗದೇ ದಿಕ್ಕೆಟ್ಟ ಕನ್ಯೆಗೆ,

                                        ಅಯಿತು ಒಂದು ಮದುವೆ !

ದರ್ಪ ಸೊಕ್ಕಿನಿಂದ ಮೆರೆದಳು,

                                         ಮುರಿಯಿತವಳ ಮದುವೆ !

ದೀಪ ಬೆಳಗಬೇಕಾದ ಕನ್ಯೆಗೆ,

                         " ಜೀವನ " ಸುಡುವ ಬೆಂಕಿ ಕೊನೆವರೆಗೆ !!

Tuesday, March 26, 2013

ಕೈ ಮಹಿಮೆ

" ಕೈ " ಮುಗಿಯುತ್ತಾ
ಬೇಡುವರು ವೋಟು ಹಾಕ್ರಿ..
ಗೆದ್ದ ಮೇಲೆ " ಕೈ" ಆಡಿಸಿ,
ಟಾಟಾ ಮಾಡುತ್ತಾ ಪರಾರಿ !

ಚುಟುಕ

ಪಾಲಿಗೆ ಬಂದದ್ದು
" ಪಂಚಾಮೃತ "
ಅಂದುಕೊಂಡಿದ್ದು.,
ನನ್ನ " ಭ್ರಮೆ "
ನನ್ನ ಬದುಕು ಬೆಳಗಲು
ಬಲಗಾಲಿಟ್ಟು ಬಂದಳು
" ಭೂರಮೆ "

ಸಮರಸ ಜೀವನ


ನನ್ನ ಮನವು ನುಡಿಸುತಿರಲು ಕೊಳಲು,
ಆಲಿಸುತ್ತಾ ಬಳಿ ಬಂದವಳು ಅವಳು !

ಹೃದಯ ಮಿಡಿತಕ್ಕೆ ಅವಳದೇ ತಾಳ,
ಅನುರಾಗದ ಅಲೆಗಳದೇ ಮೇಳ!

ಅವಳ ನೋಟಕೆ ನುಲಿದಿದೆ ನಯನ,
ನಮ್ಮಿಬ್ಬರದು ಪ್ರೀತಿಯ ಗಾಯನ!

ಜೀವ ಜೀವಗಳು ಬೆರೆಯುತಿರಲು,
ನಗೆಯು ಚಿಮ್ಮಿ ಹರೆಯುತಿದೆ ಹೊನಲು!

ಭಾವದ ರಾಗಗಳ ಸಮ್ಮಿಲನ,
ಹೂವು ಹಾಸುತಿದೆ ನವರಸದ ಜೀವನ !!

ಸೋತು-ಗೆದ್ದವ

ಆಗಲು ಹೊರಟಿದ್ದಳು, ಪ್ರೀತಿಯ ಮಡದಿ..

ರಕ್ತವ ಹರಿಸಿ, ಆದಳು ಕ್ರೂರಿ !

ಸಾಂತ್ವನ ಹೇಳಲು ಬಂದಳು ಗೆಳತಿ..

ತನಗರಿಯದೇ, ಗೆದ್ದಳು ಅವನ ಪ್ರೀತಿ !  
- ಭಾವದ ಸೆಲೆ : ಪ್ರೀತಿಯಿಂದ ಭಾವಪ್ರೀಯ

ಪ್ರೀತಿಯ ಬಣ್ಣ


ಮಸಿ ಹಚ್ಚಲು ಬಂದವಳು ಮಾಸಿ ಹೋದಳು

ಪ್ರೀತಿಯ ಬಣ್ಣದ ಉಡುಗೊರೆ ತಂದವಳು ಪ್ರಾಣ ಸಖಿಯಾದಳು.

ವಸಂತ


ಮತ್ತೆ ಚಿಗುರಿದೆ ಮಾಮರದ ಎಲೆ

ಮಾವು ಹೂವಿನ ಸೊಂಪು ಎಲ್ಲೆಡೆ

ಜೇನ ಹೀರಲು ಹುಳಗಳದ್ದೇ ಜಾತ್ರೆ

ತನ್ನ ಗೂಡ ಕಟ್ಟಲು ತುಂಬುತ್ತಿವೆ ಪಾತ್ರೆ

ಇರುವೆಗಳು ಮನೆ ಕಟ್ಟಿ ಬುಡಕೆ

ನಡೆದಿಹೆ ಸಾಲು ಸಾಲಾಗಿ ರಸವ ಹೀರೋಕೆ

ಹಕ್ಕಿಗಳು ಗೂಡು ಕಟ್ಟಿ, ಇಟ್ಟಿರುವವು ಮೊಟ್ಟೆ

ಕಾವು ನೀಡುತ, ಹಸಿದಿದೆ ತಾಯಿಯ ಹೊಟ್ಟೆ

ಪಿಳಿ ಪಿಳಿ ಹಾರುತ ಬರುತಿವೆ ಚಿಟ್ಟೆ

ಬಣ್ಣ ಬಣ್ಣದ ಪಂಕಗಳಿಂದ ಮರಕೆ ಹೊದೆಸಿಹವು ಬಟ್ಟೆ

ವಸಂತ ಬಂದು ಪಸರಿಸಿದೆ ಕಲರವ ಎಲ್ಲೆಡೆ

ಎಲ್ಲಾ ಜೀವ ಸಂಕುಲಕೂ ಸಂತೋಷದ ಹರುಷದ ಅಲೆ .

ಹನಿ

ನೋಡುತ್ತಿದ್ದರೆ.....,

ಜೀನ್ಸ ಪ್ಯಾಂಟಿನ ಹಿಂದಿನ ಗಮ್ಮತ್ತು !

ಜಪ್ಪೆಂದರೂ........,

ನಿಲ್ಲುವುದಿಲ್ಲಾ ಹುಡುಗರ ನಿಯತ್ತು !!

ಹಿತವಚನ



ಜೋಡಿ ಹೃದಯಗಳು ಕೂಡಿ ಬಾಳಿದಾಗಲೇ ಪ್ರೀತಿಯ ಅರಿವಾಗುವುದು.

ದೂರವಿರಿಸಿದರೇ ಪಾಠ ಕಲಿತು ಮರಳುತ್ತಾರೆ ಅನ್ನುವುದು ಅಪನಂಬಿಕೆ.

ಸ್ವಾಭಿಮಾನ /ಅಹಂಕಾರ


ಸ್ವಾಭಿಮಾನ - ತನ್ನ ನಿಷ್ಠೇ, ಪತಿಷ್ಠೆ, ಗೌರವಕ್ಕೆ ಧಕ್ಕೆ ಬರದ ಹಾಗೆ ವರ್ತಿಸುವುದಕ್ಕೆ ಸ್ವಾಭಿಮಾನಿ ಎನ್ನುತ್ತೇವೆ.

ಅಹಂಕಾರ - ತನ್ನ ಗುಣಗಳೇ ಮೇಲು, ತಾನು ನಡೆದುದ್ದೆ ಹಾದಿ, ನಾನು, ನನ್ನಿಂದ, ನನ್ನಿಂದಲೇ ಈ ಜಗವೆಲ್ಲಾ ಅಂದುಕೊಳ್ಳುವವರಿಗೆ ಅಹಂಕಾರಿ ಎನ್ನಬಹುದು.



ಅಹಂಕಾರಿಗಳು ಎಂದಿಗೂ ಸ್ವಾಭಿಮಾನಿಗಳು ಆಗಲಾರರು,  ಸ್ವಾಭಿಮಾನಿಗಳಿಗೆ ಅಹಂಕಾರದ ಅವಶ್ಯಕತೆಯೇ ಇರುವುದಿಲ್ಲ.



Saturday, March 23, 2013

ಆ ಕಾಲಕ್ಕೆ ಮತ್ತೆ ಮರಳಬೇಕೆನ್ನಿಸಿದೆ ...


ನಾ ಕಾಲಿಟ್ಟ ಈ ಜಗದ ಹೊಸದರಲ್ಲಿ.., ಅಳು ಅಳುತ್ತಾ ಬಂದದ್ದು...,
ನಿದ್ದೆ ಮಾಡದೇ ಇಡಿ ರಾತ್ರಿಯಲ್ಲಾ ಅಪ್ಪ ಅಮ್ಮನ ನಿದ್ದೆಗೆಡಿಸಿದ್ದು
ನಾ ತೆವಳುತ್ತಾ ಅಂಬೆಗಾಲಿಟ್ಟದ್ದು , ಗೊಡೆಯ ಹಿಡಿದು ಇಟ್ಟ ಮೊದಲ ಹೆಜ್ಜೆ
ಅಲ್ಲಿಗೆ ಶುರುವಾದ ಕಲರವದ ಆಟ., ನನ್ನ ಹಿಡಿಯಲಾಗದೇ ಸುಸ್ತಾದ ಅಮ್ಮ..
ಆಡು ಆಡುತ್ತಾ ತಲೆ ನೆಲಕಚ್ಚಿ ಹೌದಿಗೆ (ತೊಟ್ಟಿಗೆ) ಬಿದ್ದದ್ದು
ಗಾಬರಿಗೊಂಡ ಅಮ್ಮ ನನ್ನ ಪುಟ್ಟ ಕಾಲುಗಳ ಹಿಡಿದು ಮೇಲಕ್ಕೆ ಎತ್ತಿದ್ದು
ಮರಳಬೇಕೆನ್ನಿಸಿದೆ ಆ ಕಾಲಕ್ಕೆ ಮತ್ತೆ....

ಅಮ್ಮ ಕೈ ಹಿಡಿದು  ಅ ಆ ಇ ಈ ತಿದ್ದಿಸಿದ್ದು
ತೊಡೆ ಮೇಲೆ ಕೂಡಿಸಿಕೊಂಡು ಉಣ್ಣಿಸುತ್ತಿದ್ದದ್ದು
ಅಂಗಳವೆಲ್ಲಾ ಸಾರಿಸಿ ಆಡಲು ಜಗ ಮಾಡಿ ಕೊಟ್ಟಿದ್ದು
ಅಪ್ಪ ಕೊಡಿಸಿದ ಮೊದಲ ಸೈಕಲ್ಲು ತುಳಿಯುತ್ತಾ
ಕಛೇರಿಯಿಂದ ಮರಳಿದ ಅಪ್ಪನ ತೋಳಲಿ ಜಿಗಿದು ಸೇರಿದ್ದು
ಬಾರ್ ಬಾರ ಗುಬ್ಬಚ್ಚಿಯ ಹಾಡು, ಸುಖ ನಿದ್ದ್ರೆಗೆ ಜಾರಿಸುತ್ತಿತ್ತು
ಮರಳಬೇಕೆನ್ನಿಸಿದೆ ಆ ಕಾಲಕ್ಕೆ ಮತ್ತೆ....

ಬಾಲವಾಡಿಯಲ್ಲಿ ಹೊಸ ಗೆಳೆಯರ ಸೇರಿದ್ದು
ಲಲಿತಾ ಟೀಚರ ಅವರ ಹಾಸ್ಯಮಯ ಪಾಠಗಳು
ಗೆಳೆಯರ ಜುಟ್ಟು ಹಿಡಿದು ಜಗಳವಾಡಿದ್ದು
ಜೀವನದ ಪ್ರಥಮ ಪರೀಕ್ಷೆ ಬರೆದು, ಮುದುಡಿ ಮಾಡಿ, ಪಾಟಿಚೀಲದಲ್ಲಿ ತುರಿಕಿಕೊಂಡ ಉತ್ತರ ಪತ್ರಿಕೆ..
ನೋಡಿದ ಅಮ್ಮ.., ಲತ್ತಿಗುಣಿಯಲೇ ಬೆನ್ನಿಗೆ ಬಾರಿಸಿದ್ದು
ನೆನೆಸಿಕೊಂಡರೆ ಇನ್ನೂ ನೆನಪಿಗೆ ಬರುತ್ತವೆ ಆ ಬಾಸುಂಡೆಗಳು....
ಮರಳಬೇಕೆನ್ನಿಸಿದೆ ಆ ಕಾಲಕ್ಕೆ ಮತ್ತೆ....

ಸ್ವಲ್ಪ ದೊಡ್ಡವನಾಗುತ್ತಲೇ ಗಳಸಿಕೊಂಡ ಉಡಾಳ ಗೆಳೆಯರು
ಆಟಿಗೆಯ ಟ್ರಕ್ಕನ್ನು ತೊಳೆಯಲು ಹೊಳೆಗೆ ತರಳಿದ್ದು
ಮನೆಗೆ ಬಂದೊಡನೆ ಅಮ್ಮನಿಗೆ ಹೇಳಿ ಬಯಸಿಕೊಂಡಿದ್ದು
ಹುಳ ಹುಪ್ಪಡಿ ಹಾವುಗಳು ಇರುವಲ್ಲಿ ಏಕೆ ಹೋಗಿದ್ದೆ..?
ಅಲ್ಲಿ ಏನೂ ಕಾಣಲಿಲ್ಲ ಅಂತ ಉತ್ತರಿಸಿದ ಮುಗ್ಡತೆಯ ತುಂಟ ಉತ್ತರ..
ಯಲ್ಲಮ್ಮನ ಮಗ ಮಲ್ಲೆಷಿಯ ಜೊತೆ ಗೋಲಿ ಆಡಿದ್ದು..
ಮರಳಬೇಕೆನ್ನಿಸಿದೆ ಆ ಕಾಲಕ್ಕೆ ಮತ್ತೆ....

ಮಳೆಗಾಲದಲ್ಲಿ ಚತ್ರಿ ಹೊತ್ತು ಶಾಲೆಗೆ ಹೋಗುತ್ತಿದ್ದದ್ದು..
ರಸ್ತೆಯಲ್ಲಿ ಪುಟಿಯುತ್ತಿದ್ದ ಸಣ್ಣ ಸಣ್ಣ ಕಪ್ಪೆ ಕಂಡು ವಿಸ್ಮಯಗೊಂಡದ್ದು
ದಾರಿಯ ಉದ್ದಕ್ಕೂ ಹರಡಿದ ಬಳ್ಳಿಗಳಲ್ಲಿ ಬೋರಂಗಿ ಹಿಡಿದದ್ದು
ಕೇಜಿಗಟ್ಟಲೆ ಪಾಟಿಚೀಲ ಹೊತ್ತು ಸುಸ್ತಾಗಿ ಮನೆಗೆ ಮರಳಿದ್ದು
ಹಪ ಹಪಿಸುತ್ತ ಬಂದು ರೊಟ್ಟಿ ಬಡಿಯುತ್ತಿದ್ದ ಅಮ್ಮನ ಮುಂದೆ ನಿಂತು ಹಸಿವು ಅಂದಿದ್ದು
ಅಮ್ಮ ಮಾಡುತ್ತಿದ್ದ ಚವಳಿಕಾಯಿ ಪಲ್ಲ್ಯೆ  ಚಟ್ನಿ ಜೊತೆ ಊಟ ಸವೆದದ್ದು..
ಮರಳಬೇಕೆನ್ನಿಸಿದೆ ಆ ಕಾಲಕ್ಕೆ ಮತ್ತೆ....

ಶಾಲೆಯಲ್ಲಿ ಸಿಕ್ಕ ಬಾಲ್ಯದ ಮೊದ ಮೊದಲ ಗೆಳತಿ ನೀತಾ
ಯಾರೇ ಕಾಡಿಸಿದರೂ ಹೇಳು.., ನಾ ಹೊಡೆಯುವೆ ಅವರಿಗೆ ಅಂದದ್ದು..
ಶಾಲೆ ಬಿಟ್ಟೊಡನೆ ಕೈ ಕೈ ಹಿಡಿದು ಮನೆಗೆ ಮರಳುತ್ತಿದ್ದದ್ದು..
ಅಮ್ಮ ನಾ ಸುನಿಯೊಡನೆ ಊಟ ಮಾಡುವೆ ಅಂತ ಪೀಡಿಸುತ್ತಿದ್ದ ಗೆಳತಿ
ಇಬ್ಬರನ್ನೂ ಕೂಡಿಸಿ ಅಡುಗೆ ಬಡಿಸಿ, ನಂತರ ನಾಯಿ ಮರಿ ನಾಯಿ ಮರಿ ತಿಂಡಿ ಬೇಕೆ..? ಉಮಾ ಅಂಟಿ ಕಲಿಸಿಕೊಟ್ಟಿದ್ದ ಪದ್ಯ..
ನೆನಪುಗಳು ಇನ್ನೂ ಹಚ್ಚ ಹಸಿರಾಗಿದೆ ಎನ್ನ ಎದೆಯಲ್ಲಿ...
ಮರಳಬೇಕೆನ್ನಿಸಿದೆ ಆ ಕಾಲಕ್ಕೆ ಮತ್ತೆ....

***ಭಾವಪ್ರಿಯ***

ಪಾಶ್ಚಿಮಾತ್ಯ ಸಂಸ್ಕೃತಿ


ಇವರ ಮನ ಕಪ್ಪು,

ಮುಖ ಬೆಳ್ಳಗೆ ಕಾಣಲು ಮಾಡುತ್ತಾರೆ ಮೇಕಪ್ಪು !

ಕಣ್ಣಿಗೆ ಹಚ್ಚವರೆ ಕಾಡಿಗೆ,

ಕೊಡ ಹಿಡಕೊಂಡು ಹೊರೆಟಾರೆ ನೀರಿಗೆ !

ತುಟಿಗೆ ಬಣ್ಣ ಕೆಂಪು,

ಜೀನ್ಸ್ ಪ್ಯಾಂಟು ಧರೆಸಿ ನಡೆದರೆ ಎಲ್ಲರ ಕಣ್ಣ್ ತಂಪು!

ಯಾವ ಹಳ್ಳಿ ಹುಡಿಗಿಯೂ ಇಲ್ಲಾ ಕಮ್ಮಿ,

ಮದುವೆಗೂ ಮುಂಚೆನೆ ಆಗಿಹರು ಮಮ್ಮಿ !

Friday, March 22, 2013

ಹಿತವಚನ


ಸತ್ಯ ಕಹಿ ಎಂದು ಯಾವಾಗಲೂ ಸುಳ್ಳಿನ ಸಿಹಿಯನ್ನು ಉಣ್ಣಲು ಸಾಧ್ಯವಿಲ್ಲ.

ಸತ್ಯ ಕಠೋರ ಅನಿಸಿದರೂ ಅದಕ್ಕೆ ಜಯ, ಸುಳ್ಳಿನ ಕಂತೆಗೆ ಸಾಯೋ ಭಯ !

REACTION v/s RESPONSE

REACTION - IT IS A SUDDEN OR ABRUPT REPLY FOR A STATEMENT MADE WITHOUT GIVING A THOUGHT FOR THE STATEMENT OR QUESTION.

RESPONSE - IT IS A THOUGHTFUL REPLY CONVEYED TO THE STATEMENT OR QUESTION.

THE ONLY THING THAT DIFFERENTIATES THESE TWO ARE ONE IS " HARSH " AND OTHER IS " POLITE "  WAY OF ANSWERING TO ANY SITUATION.

THOUGHTS FOR THE DAY

* LIFE IS TOO SHORT TO SPEND TIME IN WASTING ON THINGS WHICH DO NOT PAY US EITHER PEACE OR PROSPERITY.


* PROLONGING FOR THE THINGS TO HAPPEN IN YOUR WAY IS JUST FOOLISHNESS, YOU WILL GROW OLD BUT THINGS REMAIN THE SAME.

ಶತಧಡ್ಡರು

ಎಲ್ಲಾ ಪಾಪ ಕರ್ಮಗಳನ್ನ ಮಾಡಿ
ಸುಳ್ಳಿನ ಕಂತೆ ಹೆಣೆದು ಮಾಡಿದರು ಮೋಡಿ
ತಮ್ಮ ತಪ್ಪುಗಳ ಮುಚ್ಚುವ ಕೆಡ್ದವನ್ನು ತೋಡಿ
ಹೇಸಿಗೆಯನ್ನಿಟ್ಟುಕೊಂಡು ನಾರುತಿಹುದು ಇವರ ನಾರಾ ನಾಡಿ
ದೇವರಿಗೆ ಮೊರೆ ಹೋಗುವರು ಇವರೆಂತಹ ಹೇಡಿ   ?

ಸ್ವಾತಂತ್ರ್ಯ V/s ಸ್ವೇಚ್ಛಾಚಾರ

ಸ್ವಾತಂತ್ರ್ಯ :  ಸರಿಯಾದ, ಸತ್ಯವಾದ, ನ್ಯಾಯವಾದ ಕಾರ್ಯಗಳನ್ನು ಮಾಡುವುದಕ್ಕೆ ಸಿಗಬೇಕಾದ ಮನ್ನಣೆ.

ಸ್ವೇಚ್ಛಾಚಾರ  :  ತಪ್ಪು ಒಪ್ಪುಗಳ ಪರಿವೆಯೇ ಇಲ್ಲದೇ ಮನ ಬಂದಂತೆ ಗೂಳಿಯ ಹಾಗೆ  ಹಠದಿಂದ ವರ್ತಿಸುವುದು. 

Thursday, March 21, 2013

ಮೂರ್ಖರು


ಬದುಕಿಗೊಂದು ಕನ್ನಡಿ, ಜೋಪಾನವಾಗಿಟ್ಟುಕೊಂಡರೆ ಕೈಪಿಡಿ,
ಕನ್ನಡಿಗೆ ಕಲ್ಲ ಹೊಡೆದು ಆ ಚೂರುಗಳಲ್ಲಿ ನಗುತಿರುವ ಮೋಹಿನಿ..!
ಕೂಡಿಸಲಾರದ ಸಂಬಂಧದ ಚೂರುಗಳು ಎಂಬ ಅರಿವಿದ್ದರೂ ,
ಕೂಡಿಸಿ ಕೂಡಿಸಿ ಎಂಬ ನಾಟಕವ ಆಡುವ ಮೂರ್ಖರು.

ಹನಿ

ಒಂದೇ ಒಂದು ಹುಡುಗಿಯೂ ಸಿಗದೆ, ಇನ್ನೂ ಕೆಲವರಿಗೆ ಬೇಜಾರು,

ಮೂರು ಹೆಂಡಿರ ಬಿಟ್ಟ ಗಂಡು, ನಾಲ್ಕನೆಯದಕ್ಕೆ ತಯ್ಯಾರು..!

THOUGHT FOR THE DAY

A PERSON WHO DOES NOT KNOW HOW TO BEHAVE PROPERLY OR REACT TO A PERSON’S QUESTION IS NOT WORTH BEING A “ FRIEND “

ಹಿತವಚನ


ಮಾತು ಮಾತಲ್ಲಿ ಅಸಹನೆ, ಮುಂಗೋಪುತನ ಕಾರುವವರು ಎಂದಿಗೂ ಒಳ್ಳೆಯ ಸ್ನೆಹಿತರು ಆಗಲು ಸಾಧ್ಯವಿಲ್ಲ !

Wednesday, March 20, 2013

ಶುಭ ಮುಂಜಾವು


ನಸುಕು ಕಳೆಯಿತು

ಬೆಳಕು ಹರೆಯಿತು

ಆಗಸದಲ್ಲಿ ನಗುತಾ ನಿಂತಾ ಆ ಸೂರ್ಯ

ಅವನ ಮೊಗ ಕಾಣುತ ಅರಳಿದಳು ಕುಸುಮೆ

ತೋಟದ ಎಲ್ಲೆಡೆ ಪರಿಮಳದ ಹಬ್ಬ

ದುಂಬಿ ಹಕ್ಕಿಗಳ ಕುಣಿತದ್ದೆ ಸದ್ದು

ಉಲ್ಲಾಸದಿ ಸಾಗಲಿ ಈ ದಿನ ನೀಡುತ್ತಾ ಮುದ್ದು.

Tuesday, March 19, 2013

ಸುಭಾಶಿತ


ನಮ್ಮ ಊರು, ನಮ್ಮ ಜನ ಹಚ್ಚಿಕೊಂಡಾಗ ಖುಶಿಗೆ ಪಾರವೇ ಇರುವುದಿಲ್ಲ .

ಅದೇ ನಮ್ಮ ಊರಿನವರು, ನಾವು ಬರಿ ಸಹಪಾಟಿಗಳು ಅಷ್ಟೇ ಅಂದಾಗ, ದುಃಖ ತಾಳುವುದೇ ಇಲ್ಲ.

Monday, March 18, 2013

ಹಿತವಚನ



ಹುಲಿ ದಾಳಿ ಮಾಡುವ ಮೊದಲು ಎರಡು ಹೆಜ್ಜೆ ಹಿಂಜರಿಯುತ್ತದೆ,ಅಷ್ಟ ಮಾತ್ರಕ್ಕೆ ಅದು ಹೆದರಿದೆ ಅಂತ ಅರ್ಥವಲ್ಲ.!

ಅದು ಎದುರಾಳಿಯ ಮುಂದಿನ ಹೆಜ್ಜೆ ಅರಿತು,ಮೇಲಬೀಳಲು ಹುಡುಕಿಕೊಂಡ ಒಂದು ತಂತ್ರ !
***ಭಾವಪ್ರಿಯ***

THOUGHT FOR THE DAY

THERE IS NOTHING LIKE " DEFEAT" IN ONE's LIFE.

THOSE ARE JUST FAILURES AND STEP STONES TO "SUCCESS"

***BHAVAPRIYA***

हितवचन


हम ज़िन्दगि से शिक्वा कैसे करे , ज़िन्दगितो जन्मसे हमारा साथ है,

उन लोगों से शिक्वा करके भी क्या फाईदा .., जो हमारे ज़िन्दगी को कभी अपना नहीं समझे !
 
***भावप्रिय***

Friday, March 15, 2013

THOUGHT FOR THE DAY

In the journey of LIFE , if you find thorns in your way, don't hesitate and step back, just keep walking, a little pain that you experience today may lead to a big happiness to keep yourself cheerful throughout your life.

ಹಿತವಚನ

ಜೊತೆಯಲ್ಲಿ ಬಾಳುವವರದು ಜನುಮ ಜನುಮದ ಅನುಬಂಧ

ದಿಕ್ಕೆಟ್ಟು ಬಾಳುವರದು ಹಿಂದಿನ ಜನುಮದ ಪಾಪ ಕರ್ಮಬಂಧ

ಸೋಲನುಂಡು, ಮೆಲೆದ್ದು ಜಯಿಸಲೆಂದೇ ಬಾಳುವವರದು ವಿಶ್ವಾಸ ಬಂಧ.  

Thursday, March 14, 2013

ಹಿತವಚನ

ಬದುಕುವುದಕ್ಕಾಗಿ ತಿನ್ನು , ತುನ್ನುವುದಕ್ಕಾಗಿಯೇ ಬದುಕಬೇಡ.
ಹೆಚ್ಚು ಅನಿಸಿದರೆ ಹಸಿದ ಹೊಟ್ಟೆಗಳಿಗೆ ಹಂಚು , ಆ ಹೊಟ್ಟೆಗಳೇ ನಿನಗೆ ಶುಭ ಹಾರೈಸುತ್ತವೆ.

Monday, March 11, 2013

ಹಿತವಚನ

ಬಡವನಾಗಿದ್ದರೂ ಸ್ವಾಭಿಮಾನಿ, ದುಡಿದು ತಿನ್ನುವನು ತನ್ನ ತೋಳ್ ಗಳ ನಂಬಿ.
ಚಿಕ್ಕ ಗೂಡಲ್ಲಿ ನೆಲೆಸಿದರೂ , ಖುಶಿಯ ಭಂಡಾರವ ಹೊತ್ತು ಮೆರೆವರು.
ಕೋಟಿ ಕೋಟಿ ಇದ್ದರೂ ಸಿರಿವಂತರಿಗೆ ಸಿಗದು ನೆಮ್ಮದಿ.
ಅರಮನೆಯಲ್ಲಿ ಮೆರೆದರೂ , ಕ್ಷಣ ಕ್ಷಣ ಖುಶಿಗಾಗಿ ಹಾತೊರೆಯುತಿಹರು.

Saturday, March 09, 2013

ಕಥೆ (ಎಲ್ಲ ಕಥೆಗಳ ಹಿಂದಿನ ಕಹಿ ಸತ್ಯಗಳು ) - 14

( ಮುಂದುವರೆದಿದೆ ..... ) " ಮದುವೆ " ಎಂಬ ಸಂಚಿನ ನಾಟಕ , ಈ ನಾಟಕಕ್ಕೆ ಸೂತ್ರ ಹಾಗು ಪಾತ್ರಧಾರಿಗಳು

ಹುಡುಗಿ : ಅತೀ ಆಸೆಯ ಹುಳು . ಹಣ ಐಶ್ವರ್ಯಕಕ್ಕಾಗಿ ಯಾರ ಜೊತೆಯಾದರೂ ಅಡ್ಜಸ್ಟ್ ಮಾಡಿಕೊಳ್ಳುವ ಕುತಂತ್ರ ಮೇಧಾವಿ . ತನ್ನ ಸೌಂದರ್ಯವನ್ನು ಬಂಡವಾಳವನ್ನಾಗಿಸಿ ಕೊಂಡವಳು.ಚಾಲಾಕಿ ,ಯಾವಗಲೂ ಮೇಕಪ್ಪು ಮಾಡಿಕೊಳ್ಳುತ್ತಾ ಹೊಸ ಹೊಸ ತಂತ್ರ ಹೂಡಿ ಹುಡುಗರ ಮೋಸ ಮಾಡುವ ಒಬ್ಬ ವಿದ್ಯಾವಂತ ಮೋಸಗಾರ್ತಿ .ಮದುವೆ ಎಂದರೆ ಇವಳಿಗೆ ಉಚಿತವಾಗಿ ಸಿಗುವ ಒಂದು ಗಂಡು ,ಇವಳ ಬೇಡಿಕೆಗಳನ್ನ ಇಡೇರಿಸುವ ಒಂದು ಪ್ರಾಣಿ. ಇವಳ ಸ್ವೆಛ್ಚಾಚಾರದ ಬದುಕಿಗೆ ಯಾವ ಗಂಡು ಅಡ್ಡಬರಬಾರದು. ಒಟ್ಟಿನಲ್ಲಿ ಕಾಲೇಜು ಮೆಟ್ಟಿಲು ಏರುವ ಮುಂಗಡವಾಗಿ ಎಲ್ಲಾ ಅನುಭವಿಸಿದವಳು.

ಮಾವ : ಒಬ್ಬ ಅಕ್ಕನ ಮಗಳನ್ನು ಮೋಹಿಸಿ ಅವಳು ಕೈ ಕೊಟ್ಟಾಗ ಮತ್ತೊಬ್ಬ ಮಗಳನ್ನು ನೇಮಕಕ್ಕೆ ಮದುವೆಯಾಗಿ ಕಥಾನಾಯಕಿ (ಹುಡುಗಿ)ಯನ್ನು ಅನುಭವಿಸುತ್ತಾ , ತನ್ನ ಕಣ್ಣ ಮುಚ್ಚಾಲೆ ಆಟವಾಡುವವ. ಹೃದಯಾಘಾತದ ನಾಟಕ ಮಾಡುತ್ತಾ , ತಲೆ ಹಿಡಿಯುವ ಕೆಲಸ ಮಾಡುವವ. ಎಲ್ಲಿ ಎಂಜಲು ಸಿಕ್ಕರೂ ನೆಕ್ಕುವ ನಾಯಿ.

ಜಿದ್ದಿಬಾಯಿ : ಹುಡುಗಿಯ ತಾಯಿ , ಮಗಳು ಮದುವೆ ಬೇಡವೆಂದರೂ ಬೆದರಿಸಿ ಹಣಗಳಿಸುವುದಕೋಸ್ಕರ ಸಂಚು ರಚಿಸಿದವಳು. ಇವಳು ಅಂದುಕೊಂಡಿದ್ದು ಮಾಡಲಿಕ್ಕೆ ಇವಳು ಕೂಡಾ ಎಲ್ಲರ ಜೊತೆ ಅಡ್ಜಸ್ಟ್ ಮಾಡಿಕೊಳ್ಳುತ್ತಾ ಸಮಯ ಸಾಧಿಸುವ ಸಮಯಸಾಧಕಿ. ತನ್ನ ಹಠಕ್ಕೊಸ್ಕರ ಹೆತ್ತ ಮಕ್ಕಳನ್ನು ಧಂದೆಗೆ ಬಳಿಸುವವಳು. ಇವಳ ಆಟಕ್ಕೆ ಒಬ್ಬ ಪೋಲಿಸು, ಒಬ್ಬ ಸಂಬಂಧಿ ರೌಡಿ. ಗಂಡ ಕಳೆದುಕೊಂಡ ಮುಂಡೆ ಸಿಕ್ಕ ಜನರನ್ನೆಲ್ಲಾ ಮಕ್ಕಳ ತಂದೆ ಎನ್ನುವಳು.

ಓದುಗರಿಗೆ ನೀತಿ : ಈ ಕಥೆಯಿಂದ ತಿಳಿದುಕೊಳ್ಳ ಬೇಕಾಗುವ ಸತ್ಯಗಳೆಂದರೆ , ಮದುವೆ ಮಾಡಿಕೊಳ್ಳುವ ಮುನ್ನ ಗಂಡಾಗಲಿ ಹೆಣ್ಣಾಗಲಿ ಅವರ ಮನೆಯ ಹಾಗು ಮನೆತನದ ಬಗ್ಗೆ ಕುಲಂಕುಶವಾಗಿ ತಿಳಿದುಕೊಳ್ಳಲು ಪ್ರಯತ್ನಿಸಿ , ಅನುಮಾನಗಳು ಉಂಟಾದಲ್ಲಿ ತಡೆದು ಸ್ವಲ್ಪ ಯೋಚಿಸಿ, ಆತುರತೆಯಲ್ಲಿ ಯಾವುದೇ ಸಂಬಂಧಗಳನ್ನು ಒಪ್ಪಿಕೊಳ್ಳಬೇಡಿ. ಎದುರಾಳಿಯ ಮಾತುಗಳು ನಂಬಲು ಸಾಧ್ಯವೋ ಇಲ್ಲವೋ , ಕಣ್ಣೀರು ಸುರಿಸಿ ಮೋಸ ಮಾಡುವವರು ಈ ಜಗದಲ್ಲಿ ಕಡಿಮೆ ಇಲ್ಲಾ , ಇಂತಹ ಸಮಾಜ ಘಾತಕ ಹುಳುಗಳಿಂದ ಎಚ್ಚರವಾಗಿರಿ. ಬಡವರು , ಗಂಡ ಸತ್ತವರು ಅನ್ನುವ ಕರುಣೆ ಇದ್ದಾರೆ ಭಿಕ್ಷೆ ಹಾಕಿ ಮುನ್ನಡೆಯಿರಿ. ಅನುಕಂಪ ಹೊತ್ತು ಎಂದಿಗೂ ಒಬ್ಬರ ಬಾಳು ಬೆಳಗಿಸಲು ಹೋಗಬೇಡಿ. ಈ ಕಥೆಯು ಎಲ್ಲ ವಿಜಯನಂತಹ ಮುಗ್ಧ ಜನರಿಗೆ ಒಂದು ಎಚ್ಚರಿಕೆಯ ಗಂಟೆ ಎಂತಿರಲಿ . ಇಷ್ಟು ದಿನ ಕಥೆಯನ್ನು ಚಾಚುತಪ್ಪದೆ ಆಲಿಸಿದ ತಮಗೆ ಹೃತ್ಪೂರ್ವಕ ಧನ್ಯವಾದಗಳು.



ಮತ್ತೆ ಒಂದು ಹೊಸ ಕಥೆಯೊಂದಿಗೆ ಬರುತ್ತೇನೆ ಅಲ್ಲಿಯವರೆಗೂ ಬ್ಲಾಗ್ ನ ಅನ್ಯ ಬರಹಗಳನ್ನ ಓದುತ್ತಾಯಿರಿ. 
      

Thursday, March 07, 2013

ಕಥೆ (ಎಲ್ಲ ಕಥೆಗಳ ಹಿಂದಿನ ಕಹಿ ಸತ್ಯಗಳು ) - 13

( ಮುಂದುವರೆದಿದೆ ..... ) ಕೆಲವೊಂದು ಸಾಮಜಿಕ ಕೆಟ್ಟು ಹುಳಗಳ ಅಟ್ಟಹಾಸ ಎಂದಿಗೂ ನಿಲ್ಲುವುದಿಲ್ಲ .., ಹಾಗೆಯೇ ನಮ್ಮ ವಿಜಯನ ಕಥೆಯಲ್ಲಿ ಕೂಡ ., ಎರಡು ತಿಂಗಳು ತನಕ ಈ ಹುಳಗಳು ಮನೆಯಲ್ಲೇ ಇದ್ದು ಮತ್ತೊಂದು ಕೆಟ್ಟ ಕೃತ್ಯಕ್ಕೆ ತಯ್ಯಾರಿ ನಡೆಸುತ್ತಾರೆ. ಮೊದಲೇ ದುಃಖ ಭರಿತನಾದ ವಿಜಯಾ ಆಫೀಸಿಗೆ ರಜೆ ಅಂತಾ ಮನೆಗೆ ಹೊರಡುತ್ತಾನೆ. ಹೆಣ್ಣಿನ ಮನೆಕಡೆಯವರು    ವಿಜಯನ ಸಂಬಂಧಿಕರನ್ನು ಸಂಪರ್ಕಿಸಿ  ಹೆಂಗಾದರೂ  ಮಾಡಿ ತಮ್ಮ ಮಗಳ ಹಾಗು ವಿಜಯನ ಜೀವನ ಸರಿ ಪಡಿಸೋಣ ಅಂತ ಒಪ್ಪಿಸಿ , ವಿಜಯನನ್ನು ಒಂದುಕಡೆ ಕರೆಸಿ ಆಮೇಲೆ ಎಲ್ಲಾ ವಿಷಯ ಇತ್ಯರ್ಥ ಮಾಡೋಣ ಅನ್ನುತ್ತಾರೆ , ಇವರ ಕುತಂತ್ರ ತಿಳಿಯದ ವಿಜಯನ ಸಂಬಂಧಿ ಒಂದು ಒಳ್ಳೆಯ ಕೆಲಸ ನನ್ನಿಂದ ಆಗಿಬಿಡಲಿ ಅಂದುಕೊಳ್ಳುತ್ತಾರೆ. ಹಾಗೆ ಒಂದು ಜಾಗ ಗುರುತು ಮಾಡಿ ಇಬ್ಬರ ಮನೆಕಡೆಯವರನ್ನ ಬರಲು ಹೇಳಿಕಳಿಸುತ್ತಾರೆ.  ಏನೋ ಸಂತೋಷ , ಮತ್ತೆ ಹೆಂಡತಿಯನ್ನು ಸೇರುತ್ತಾನೆ , ಇಬ್ಬರ ಸಂಕಸ್ಟಗಳು ಪರಿಹಾರವಾಗುತ್ತವೆ, ಮತ್ತೆ ಜೀವನ ದಾರಿಗೆ ಮರಳುತ್ತದೆ ಅಂತ  ಖುಶಿಪಡುತ್ತಾನೆ. ಆದರೆ ಅವನ ಹೆಂಡತಿಯ  ಕೆಟ್ಟ ಮಾವನ   ಕುತಂತ್ರ ವಿಜಯನಿಗೆ ತಿಳಿಯದೆ ಹೋಗಿತ್ತು.  ಸರಿ ವಿಜಯ, ವಿಜಯನ ತಂದೆ ಹಾಗು ತಮ್ಮಂದಿರು ಈ ಸಭೆಗೆ ಹೋಗುತ್ತಾರೆ , ಹುಡುಗನಿಗೆ ಒಬ್ಬನಿಗೆ ಕರಿಯಿರಿ ಅವನ ಹತ್ತಿರ ಮಾತಾಡೋಣ ಅಂತಾ ಹೇಳುತ್ತಾರೆ . ಹೆಣ್ಣಿನಕಡೆಯವರು ಪೂರ್ವ  ಸುಸಜ್ಜಿತವಾಗಿ ಗುಂಡಾಗಳನ್ನ ಕರೆದುಕೊಂಡು ಬಂದಿರುತ್ತಾರೆ , ಏನು ಇಲ್ಲಾ ಅಂದರೂ ೫೦ ಗುಂಡಾಗಳು , ರೌಡಿಗಳನ್ನ  ಕರೆಸಿರುತ್ತಾರೆ . ಓದುಗರೇ ನಿಮಗೆ ಹೆಣ್ಣೀನ ಮನೆಯವರು ಹೀಗೆ ಏಕೆ ಕರೆತಂದರು ಅಂತಾ ಊಹಿಸಬಲ್ಲಿರಾ ? ಈ ಸಭೆಯ ಉದ್ದೇಶ  ಯಾರಿಗಾದರೂ ತಿಳಿಯುತ್ತದೆ , ಇದಕ್ಕೆ ಹೆಣ್ಣು  ಅಂದರೆ ವಿಜಯನ ಪತ್ನಿ ಕೂಡಾ ಹೊರತಾಗಿರಲಿಲ್ಲ . ವಿಜಯನ ಕೆಟ್ಟ ಹೆಂಡತಿ ವಿಜಯ್ನನ್ನ ಕೊಲ್ಲಿಸುವ ಪ್ಲಾನು ಮಾಡಿಸಿಬಿಟ್ಟಿರುತ್ತಾಳೆ .  ಹುಡುಗ ೫0 ಜನರ ಮಧ್ಯದಲ್ಲಿ ಒಮ್ಮಿಂದೊಮ್ಮೆಲೆ  ವಿಜಯನನ್ನ ಹೊಡಿಯಲು ಶುರುಮಾಡುತ್ತಾರೆ. ವಿಜಯನ ಪತ್ನಿ ಮುಂದೆ ನಿಂತು ಹೊಡಿಯಿರಿ ಅವನನ್ನ ಅಂತಾ ಕೂಗುತ್ತಿರುತ್ತಾಳೆ , ಇವಳನ್ನ ಕಂಡ ವಿಜಯಾ ದಿಗ್ಬ್ರಾಂತನಾಗುತ್ತಾನೆ . ಇವಳು ನನ್ನ ಕೊಲೆಯ ಸಮಯ ನಿಗದಿ ಪಡಿಸಿದಳಾ ? ಏನೂ ತಿಳಿಯುವಷ್ಟರಲ್ಲಿ ವಿಜಯನ ಅಂಗಿಯನ್ನು ಹರೆದು , ಅವನ ಬಂಗಾರದ ಚೇನು , ಮೊಬೈಲು ಕೈಯ್ಯಲ್ಲಿಯ ಉಂಗುರಗಳು ಎಲ್ಲವನ್ನು ಕದ್ದುಕೊಳ್ಳುತ್ತಾರೆ , ಕಳ್ಳ ಕಧಿಮರ ಜೊತೆ ಸಂಬಂಧಗಳ ಇಟ್ಟು ಕೊಂಡವಳು ಇವಳು ಎಂತಹ ಹೆಣ್ಣು.. ? ಇವಳು ಹೆಣ್ಣೇನೆ ನಾ ಅಥವಾ ಹೆಮ್ಮಾರಿನಾ ? ಓದುಗರೇ ನೀವೇ ಯೋಚಿಸಿ .. ! ಸದ್ದು ಗದ್ದಲ ಕೇಳುತ್ತಲೇ ವಿಜಯನ ತಂದೆ ಹಾಗು ತಮ್ಮಂದರು ಸ್ಥಳಕ್ಕೆ ಧಾವಿಸುತ್ತಾರೆ. ವಿಜಯನ ಸುತ್ತುವರೆದ ಮಂದಿಯನೆಲ್ಲಾ ಹಿರಿಯ ತಮ್ಮ ಒಂದೇ ಏಟಿನಲ್ಲಿ ಚದಿರುಸುತ್ತಾನೆ , ಎಲ್ಲರೂ ವಿಜಯನನ್ನು ಬಿಟ್ಟು ಅವನನ್ನು ಹೊಡೆಯಲು ಶುರುವಿಟ್ಟ   ತಕ್ಷಣ ಅವನು ಎಲ್ಲರನ್ನು  ಒಂದೇ ಸಮನೆ ಎತ್ತಿ ಕೊಡವುತ್ತಾನೆ , ಇವನು ಒಬ್ಬ ಕುಸ್ತಿಪಟು ಇದ್ದಹಾಗೆ ಒಂದೇಸಮನೆ ಹತ್ತಾರು ಜನರನ್ನು ಹೊಡಿಯಬಲ್ಲವ , ಇವನದು ನೂರಾನೆಯ ಬಲ , ಇವನ ಅಬ್ಬರ ಕಂಡು ಎಲ್ಲರೂ  ಸುಮ್ಮನಾಗುತ್ತಾರೆ , ಅತ್ತ ಕಡೆ ಆ ಕೆಟ್ಟ ಹೆಣ್ಣಿನ ಅಕ್ಕ ವಿಜಯನ ಇನ್ನೊಬ್ಬ ತಮ್ಮನಿಗೆ ಹೊಡೆಯುತ್ತಿರುತ್ತಾಳೆ , ಅವನು ಕೂಡ ತನ್ನ ಶಕ್ತಿಯ ಗೂಡಿಸಿ ಅವಳ ಹೊಟ್ಟೆಗೆ ಒಂದು ಒದೆಯುತ್ತಾನೆ , ಗಂಡಸರ ಮೇಲೆ ದಾಳಿ ಮಾಡಲು ಬಂದ ಈ ಹೆಂಗಸು ಕೂಡಾ ಮಾದುವೆ ಆದವಳು,  ಲಜ್ಜಗೆಟ್ಟ ಜಲುಮ ಇವಳದು ಗಂಡನನ್ನು ಹತೋಟಿಯಲ್ಲಿತ್ತುಕೊಂಡು ಆಡಿಸುವ ಬೇವರ್ಸಿ ಇವಳು. ಇವರ ಬಳಗವೇ ರೌಡಿಗಳ ಅಡ್ಡ .  ಜಿದ್ದಿಬಾಯಿ ಇವಳ ತಾಯಿಯು ಈ ಗಲಾಟೆ ನಡೆಯುತ್ತಿರುವಾಗ  " ಹ್ಹಾ...ಹಾ ನಿಮಗೆಲ್ಲಾ ಇದು ಬೇಕಿತ್ತಾ " ಅಂತ ವ್ಯಂಗ್ಯ ಮಾಡುತ್ತಾಳೆ , ಮಗಳ ಜೀವನ ಹಾಳು ಆಗುತ್ತಿರುವುದು ಅನ್ನುವ ಪರಿವೆ ಇಲ್ಲದ ನಾಚ್ಚಿಗ್ಗೆಡು ಜಲುಮ ಗಂಡ ಸತ್ತ ಮುಂಡೆ , ಮಕ್ಕಳನ್ನ ಧಂಧೆಗೆ ಬಿಟ್ಟು ಹಣಗಳಿಸುವವಳು. ಮಧ್ಯಸ್ತಿಕೆ ವಹಿಸಿದವರಿಗೆ ನನ್ನ ಮಗಳು ಇವನ ಹತ್ತಿರ ಒಂದು ವರುಷ ಸಂಸಾರ ಮಾಡಿದ್ದಾಳೆ ಅದಕ್ಕೆ ಪರಿಹಾರ ಕೊಡಿಸಿ ಅಂತಾ ಹೇಳುತ್ತಾಳೆ .  ಗಂಡನ ಮನೆಯವರಿಗೆ ಹಾಗು ಗಂಡನಿಗೆ ಹೊಡೆದು ಪರಿಹಾರ ಕೇಳುವುದು ಎಲ್ಲಾದರೂ ಕೇಳಿದ್ದಿರಾ ಪ್ರೀಯ  ಓದುಗರೇ ? ಇದಕ್ಕೆ ಹೈ ಟೆಕ್  ಸೂಳೆಗಾರಿಕೆ ಅಂದರೆ ತಪ್ಪಾಗಲಾರದು ಅನ್ನುವುದು ನನ್ನ ಭಾವನೆ . ಹಣಕ್ಕಾಗಿಯೆ ಮದುವೆ ಆಗುವುದು , ಸಂಸಾರದ ನಾಟಕವಾಡುವುದು ಕೆಲವು ತಿಂಗಳ ನಂತರ ಮಗಳಿಗೆ ಜಗಳ ಮಾಡಿ ಓಡಿ  ಬರಲು ಹೇಳುವುದು . ಮನೆಗೆ ಬಂದ ಮೇಲೆ ಇವರ ಕುತಂತ್ರಗಳ ಹೂಡುವುದು.  ಇಂತಹ ಹೆಣ್ಣಿನ ಸಹವಾಸ ಮಾಡಿ, ಮದುವೆಯಾಗಿ  ಜೀವನ ಹಾಳು ಮಾಡಿಕೊಂಡು ಎಷ್ಟೋ  ವಿಜಯನಂತವರು ಇದ್ದಾರೆ . ಈ ಹುಡುಗರ  ತಪ್ಪಾದರೂ ಏನು ? ಕಷ್ಟಪಟ್ಟು ಕಲಿತು, ಅಪ್ಪ-ಅಮ್ಮ ನೋಡಿದ ಹುಡುಗಿಯ ಒಪ್ಪೊಕೊಂಡು ಮಾದುವೆ ಆದರೇ , ಇಂತಹ ಹೆಮ್ಮಾರಿಗಳಿಂದ ಹುಡುಗರು ಪಡುವ ಕಷ್ಟಗಳು ಹೇಳತೀರದ್ದು . ನಾಳಿನ ಸಂಚಿಕೆಯಲ್ಲಿ ಕಥೆಯ ಮುಖ್ಯ ಪಾತ್ರಾಧಾರಿಗಳು , ಇವರ ಒಳ ಸಂಚು ಹಾಗು ಇವರುಗಳ ವ್ಯಕ್ತಿತ್ವದ ಬಗ್ಗೆ ಸ್ವಲ್ಪ ಹೇಳುತ್ತೇನೆ.  (....... ಮುಂದುವರೆಯಲಿದೆ ) 

हितवचन

जो सच्छे प्यार करके खोया हो , वो प्यार करना कभी नहीं छोड़ता क्यूंकि भलेही उसको लोगों पर विश्वास उट जाए , लेकिन उसके प्यार पर आत्मविश्वास और तगडा हो जाता है।


ಹಿತ ವಚನ

ಉರಿಯುವ ಬೆಂಕಿಗೆ ತುಪ್ಪ ಸುರಿಯುವರಿಗಿಂತ , ಬೆಂಕಿ ಹೊತ್ತಿರುವುದು ನೋಡಿ ಸುಮ್ಮನೆ ಹೋಗುವರೇ ಲೇಸು .!


हितवचन

जो माणुस तुम्च प्यार आणि  विश्वास्च  हक्दार  नई अस्लतर ,
तेंना कदीही तेव्ड महत्व देणार नही पायिजे ,
क्युंकी तो कदी खरच प्यार समजणार नाही !


THOUGHT FOR THE DAY

SHOWING CARE AND LOVE TO A PERSON WHO NEVERS THINKS YOU AS HIS OWN,
IS JUST LIKE,
INVESTING MONEY IN A BANK WHICH DOES NOT PAY YOU INTEREST.

Wednesday, March 06, 2013

ಕಥೆ (ಎಲ್ಲ ಕಥೆಗಳ ಹಿಂದಿನ ಕಹಿ ಸತ್ಯಗಳು ) - 12


(ಮುಂದೆವರೆದಿದೆ....) ಪೋಲಿಸು ಠಾಣೆಯಲ್ಲಿ ದೂರು ಕೊಟ್ಟು ವಿಜಯನಿಗೆ ಬೇಗ ಜೈಲಿಗೆ ಹಾಕಿ ಅಂತ ಹುಡುಗಿಯ ಮಾವ ಇನಸ್ಪೆಕ್ಟರ್ ಮೇಲೆ ಒಬ್ಬ ಪೋಲಿಸ್ ಗಳೆಯನಿಂದ ವತ್ತಾಯ ಪಡಿಸುತ್ತಾನೆ. ಬಹಳಷ್ಟು ಠಾಣೆಗಳಲ್ಲಿನ ಅಧಿಕಾರಿಗಳು ಸ್ವಲ್ಪ ಕಠೋರವಾಗಿಯೆ ಇರುತ್ತಾರೆ ಅನ್ನಬಹುದು.,ಆದರೆ ವಿಜಯನ ಪುಣ್ಯಾ ಏನೋ ಅಲ್ಲಿಯ ಅಧಿಕಾರಿ ನ್ಯಾಯವಾಗಿ ನಡೆದುಕೊಳ್ಳವನಾಗಿರುತ್ತಾನೆ. ಒಮ್ಮಿಂದೊಮ್ಮೆಲೆ ದುಡುಕದೆ, ವಿಜಯನನ್ನು ಪೋಲಿಸು ಠಾಣೆಗೆ ಸುಮ್ಮನೆ ಬಂದು ಭೆಟಿಯಾಗು ಅಂತ ಒಬ್ಬ ಕಾನ್ಸ್ಟೇಬಲ್ ಹತ್ತಿರ ಹೇಳಿ ಕಳಿಸುತ್ತಾನೆ. ವಿಜಯನಿಗೆ ಏನೂ ತಿಳಿಯುವುದಿಲ್ಲ, ಅಲ್ಲಾ ಪೋಲಿಸಿನವರು ತನ್ನನ್ನಾ ಏಕೆ ಕರಿಸಿಕೊಳ್ಳುತ್ತಾರೆ .? ಬಹುಶಃ ಅವರಿಗೆ ಎಲ್ಲೊ ತಪ್ಪು ಮಾಹಿತಿಯಿಂದ ನನ್ನ ಕರೆದಿದ್ದಾರೆ ಅಂದು ಕೊಳ್ಳುತ್ತಾನೆ., ಸರಿ ಹೋಗಿ ಬರೋಣ ಅಂದುಕೊಂಡು ಒಬ್ಬನೆ ಠಾಣೆಗೆ ಹೋಗುತ್ತಾನೆ. ವಿಜಯ ಪೋಲಿಸು ಠಾಣೆಗೆ ಹೋಗಿ ವಿಚಾರಿಸಿದರೆ ಅಲ್ಲಿ ಇನಸ್ಪೆಕ್ಟರ್ ಇರುವುದಿಲ್ಲ, ಸರಿ ಸ್ವಲ್ಪ ಸಮಯ ಕಾದರಾಯಿತು ಅಂದು ಕೊಂಡು ಕೂರುತ್ತಾನೆ, ಸ್ವಲ್ಪ ಹೊತ್ತಿನ ನಂತರ ಇನಸ್ಪೆಕ್ಟರ್ ಬರುತ್ತಾರೆ. ಒಳಗೆ ಹೋದವನೆ ಭೇಟಿಯಾಗಿ ಸರ್ ನನಗೆ ಬರಲು ಹೇಳಿದ್ದಿರಿ ಅಂತ ಗೊತ್ತಾಯಿತು ಅದಕ್ಕೆ ಬಂದೆ.., ಏನ್ ಸಮಾಚಾರ ಅಂತ ಕೇಳುತ್ತಾನೆ. ವಿಜಯ ಅಂದರೆ ನೀನೆನಾ ? ಹಾ ಹೌದು...! ಎಲ್ಲಿ ಕೆಲಸ ಮಾಡುತ್ತಿರುವೆ ? ವಿಜಯ ಹೀಗ್ ಹೀಗೆ ನಾನು ಒಂದು ಮಲ್ಟಿನ್ಯಾಷನಲ್ ಕಂಪನಿಯಲ್ಲಿ ಕೆಲಸ ಮಾಡುತ್ತೆನೆ ಅಂತ ಹೇಳಿದ. ನಿನ್ನ ಕುಟುಂಬದವರ ಬಗ್ಗೆ ಹೇಳು ಅಂದರು., ಅದಕ್ಕೆ ವಿಜಯಾ ತಂದೆ ನಿವ್ರುತ್ತ ಅಧಿಕಾರಿ,ತಾಯಿ ಹೌಸ್ ವೈಫ್ ಊರಲ್ಲೆ ಇರುತ್ತಾರೆ, ಇನ್ನೂ ಓದುತ್ತಿರುವ ತಮ್ಮಂದಿರು ಇದ್ದಾರೆ. ಸರಿ ನಿನ್ನ ಮದುವೆ ಆಗಿದ್ದು ಯಾವಾಗ...? ಅಂದಾಗ, ಇವರಿಗೆ ಇವೆಲ್ಲಾ ಏಕೆ ಬೇಕು, ಯಾವುದಕ್ಕೆ ಕರೆದಿದ್ದಾರೊ ಅದನ್ನೇ ಹೇಳುತ್ತಿಲ್ಲವಲ್ಲ ಅಂದುಕೊಳ್ಳುವಷ್ಟರಲ್ಲಿ..ನಿನ್ನ ಹೆಂಡತಿ ನಿನ್ನ ಮೇಲೆ ವರದಕ್ಷಿಣೆ ಕಿರುಗಳ ಹಾಗೆ ಅತ್ತೆ ಮಾವಂದರು,ತಮ್ಮಂದಿರು ಎಲ್ಲರೂ ಸೇರಿ ಕಿರುಗಳ ಕೊಡುತ್ತಾರೆ ಅಂತಾ ದೂರು ನೀಡಿದ್ದಾಳೆ ಇದಕ್ಕೆ ನೀನು ಏನು ಹೇಳುತ್ತಿಯ ? ಅಂದರು. ಇವನ ಹೆಂಡತಿ ಇಷ್ಟೊಂದು ಕೆಳಮಟ್ಟಕ್ಕೆ ಇಳಿಯುತ್ತಾಳೆ ಅಂತಾ ವಿಜಯ ಎಂದೆಂದಿಗೂ ಊಹಿಸಿರಲಿಲ್ಲ. ಸಾರ್ ಇವೆಲ್ಲಾ ಕಟ್ಟು ಕಥೆಗಳು, ನಾನು ಅವಳು ಬಿಟ್ಟರೆ ಇಲ್ಲಿ ಯಾರು ಕೂಡಾ ಇರುವುದಿಲ್ಲಾ., ಎಲ್ಲರೂ ನನ್ನ ತವರೂರಿನಲ್ಲೇ ಇರುತ್ತಾರೆ ಅಂದಕೂಡಲೇ ಇನಸ್ಪೆಕ್ಟರ್ ಅವರಿಗೆ, ಹುಡುಗಿ ಕಡೆ ಏನೋ ವಿಷಯವಿದೆ..ಅಂದುಕೊಳ್ಳುತ್ತಾರೆ. ಸರಿ ಆ ಹುಡುಗಿಯ ಜೊತೆಯಲ್ಲಿ ಒಬ್ಬ ಮನುಷ್ಯ ಬಂದಿದ್ದ ಅವನು ಯಾರು ಅಂತಾ ನಿನಗೆ ಗೊತ್ತೆ ? ಅವನ ಚೆಹರೆಯ ವಿವರ ಕೊಡುತ್ತ ಅಂದರು. ಅವನೇ ಸಾರ್ ನನ್ನ ಮದುವೆ ಜೀವನದಲ್ಲಿ ಬೆಂಕಿ ಹಚ್ಚಿದವನು ಅಂದ ವಿಜಯ.ಅದಕ್ಕೆ ಇನಸ್ಪೆಕ್ಟರ್ ನನಗೂ ಕೂಡ ಅವನ ನೋಡಿದರೆ ಹಾಗೆ ಅನ್ನಿಸಿತು, ಅವನು ವತ್ತಾಯ ಮಾಡಿ ನಿನ್ನನ್ನ ಒಳಗೆ ತಳ್ಳಿ ಅಂತ ಹೇಳುತ್ತಿದ್ದನು ಮತ್ತೆ ಪದೆ ಪದೆ ಒಬ್ಬ ಹಿರಿಯ ಅಧಿಕಾರಿಗಳಿಂದ ಪೋನು ಕೂಡಾ ಮಾಡಿಸಿದ್ದನು. ನಿನ್ನ ಹೆಂಡತಿ ಹಾಗು ಅವನು ಜೋಡಿಯಾಗಿ ಬಂದಾಗಲೇ ನನಗೆ ಅನುಮಾನ ಮೂಡಿತ್ತು...ಅವರುಗಳು ಇಲ್ಲಿಗೆ ದೂರು ನೀಡಲು ಬಂದಾಗ ಅವಳು ಭರ್ಜರಿಯಾಗಿ ಮೇಕಪ್ ಮಾಡಿಕೊಂಡು ಲಿಪ್ ಸ್ಟಿಕ್ ಹಚ್ಚಿಕೊಂಡು ಬಂದದ್ದು ನೋಡಿಯೇ ಅವರು ಕೊಡುತ್ತಿರುವ ದೂರು ಸುಳ್ಳು ಎಂದು ಉಹಿಸಿದ್ದೆ. ಅದಲ್ಲದೆ ನಮ್ಮ ಪೇದೆ ಬಂದು ನಿಮ್ಮ ಅಕ್ಕ ಪಕ್ಕದ ಮನೆಯವರಿಗೆ ನಿಮ್ಮ ಬಗ್ಗೆ ಕೇಳಿದಾಗ ಒಳ್ಳೆಯ ಹುಡುಗ, ತಾವಾಯಿತು ತಮ್ಮ ಕೆಲಸವಾಯಿತು ಮತ್ತೆ ಯಾರ ತಂಟೆಗೂ ಹೋಗುವುದಿಲ್ಲ ಅಂತ ಹೇಳಿದ್ದರು. ನಿನ್ನ ಹೆಂಡತಿ ಬಗ್ಗೆ ಏನು ಹೇಳುತ್ತಿಯಾ ಅಂದಾಗ ವಿಜಯ, ಈ ಹಿ0ದೆ ದೇವಸ್ಥಾನದಲ್ಲಿ ನಡೆದ ವಿಷಯವನ್ನು ಹೇಳುತ್ತಾನೆ, ಅವಳ ನಡವಳಿಕೆ ಆಫೀಸಿನಲ್ಲಿ ಸರಿ ಇಲ್ಲಾ ಸಾರ್ ಅದಕ್ಕೆ ಅವಳಿಗೆ ಕೆಲಸಕ್ಕೆ ರಾಜಿನಾಮೆ ಕೊಟ್ಟು ಮನೆಯಲ್ಲಿ ಇರು ಅಂತ ಹೇಳಿದ್ದಕ್ಕೆ ಮನೆ ಬಿಟ್ಟು ಓಡಿಹೋಗಿದ್ದಾಳೆ. ಅವಳಿಗೆ ಅವಳ ತಾಯಿ ಹಾಗು ಅವಳ ಮಾವನ ಕುಮ್ಮಕ್ಕು ಕೂಡಾ ಇದೆ ಅಂತಾ ಹೇಳುತ್ತಾನೆ. ಸರಿ.., ನಿನ್ನ ಊಹೆ ಸರಿಯಾಗಿದೆ ಅವಳ ಬಗ್ಗೆನೂ ಕೂಡ ನಮ್ಮ ಪೇದೆ ವಿಷಯ ತಂದ್ದಿದ್ದಾನೆ, ಅವನು ಹೇಳಿದ ಪ್ರಕಾರ ಅವಳು ಸ್ವಲ್ಪ ಓವರ್ ಇದ್ದಾಳೆ, ಬರಿ ಗಂಡಸರ ಜೊತೆ ಒಡನಾಟ, ಮತ್ತು ಒಬ್ಬ ಸಹುಧ್ಯೊಗಿ ಕೂಡ ಬಹಳ ಸಲಿಗೆ ಇಂದ ಇರುತ್ತಳೆ ಅನ್ನುವುದು ಕೂಡಾ ತಿಳಿದುಬಂದಿದೆ. ಸರಿ ಬಿಡಪ್ಪ , ಅವರ ಮನೆಯವರು ಯಾರು ನಿನ್ನ ವಿಷಯಕ್ಕೆ ಬರಬಾರದ ಹಾಗೆ ನಾನು ತಾಕಿತ್ತು ಮಾಡಿ ಕಳಿಸುತ್ತೆನೆ, ನೀನು ಅವಳ ಕೂಡ ನೆಟ್ಟಗೆ ಜೀವನ ನಡೆಸಿಕೊಂಡು ಹೋಗುತ್ತಿಯಾ ಅಂತಾ ಕೇಳುತ್ತಾರೆ ?, ಅದಕ್ಕೆ ವಿಜಯ ಖುಶಿಯಿಂದ ಸಮ್ಮತಿ ಒಪ್ಪಿಸುತ್ತಾನೆ.ಸರಿ ನಿಮ್ಮ ತಂದೆಗೆ ಇಲ್ಲಿಗೆ ಬರಲು ಹೇಳು, ಎಲ್ಲರೂ ಸಹ ಕೂತು ಚರ್ಚೆ ಮಾಡಿ ಒಂದು ಒಳ್ಳೆಯ ನಿರ್ಧಾರಕ್ಕೆ ಬರೋಣ ಅಂತ ಹೇಳಿ ವಿಜಯನನ್ನ ಬೀಳಕೊಡುತ್ತಾರೆ. ಸರಿ ಒಂದು ವಾರ ಬಿಟ್ಟು ಇಬ್ಬರ ಮನೆಯವರನ್ನ ಪೋಲಿಸು ಠಾಣೆಗೆ ಬರಲು ಹೇಳಿಕಳಿಸುತ್ತಾರೆ. ಇನಸ್ಪೆಕ್ಟರ್ ಇವರನ್ನ ಕುರಿತು ಎನು ನಿಮ್ಮ ಸಮಸ್ಯೆ ಇಲ್ಲಿ ಹೇಳಿ, ಇಬ್ಬರದು ಕೇಳಿ ನಾನು ಒಂದು ನಿರ್ಧಾರ ಹೇಳುತ್ತೆನೆ ಅಂತಾ ಹೇಳುತ್ತಾರೆ. ಗಂಡ ನನಗೆ ನೌಕರಿ ಬಿಡಲು ಹೇಳುತ್ತಿದ್ದಾನೆ ಅದಕ್ಕೆ ನಾನು ಒಪ್ಪುವುದಿಲ್ಲ, ನನಗೆ ನೌಕರಿ ಬಿಟ್ಟರೆ ತಲೆ ಕೆಟ್ಟು ಹೋಗುತ್ತದೆ ಅಂತ ಹೇಳುತ್ತಾಳೆ. ನಿನ್ನ ಗಂಡನಿಗೆ ನಿನ್ನ ದುಡುಮೆಯ ದುಡ್ಡು ಬೇಡವಂತೆ, ನೀನು ಮನೆಯಲ್ಲಿ ಇದ್ದುಕೊಂಡು ಸಂಸಾರವನ್ನು ನೋಡಿಕೊಂಡು ಹೋದರೆ ಸಾಕು ಅಂತಾ ಹೇಳುತ್ತಾನೆ. ನೀನು ಯಾರಿಕೋಸ್ಕರ ದುಡಿಯ ಬೇಕು ಅನ್ನುತ್ತಿಯ, ಅಂದರೆ ನನ್ನ ಫ್ಯಾಮಲಿ ಗೊಸ್ಕರ ಅನ್ನುತ್ತಾಳೆ ( ಅವಳ ಕಪಟ ಉತ್ತರವಿದು ಸ್ನೇಹಿತರೆ..ಅವಳಿಗೆ ತನ್ನ ಫ್ಯಾಮಲಿ ಅಂದರೆ ತನ್ನ ಅಮ್ಮ, ಮಾವ ಅವರೆಲ್ಲಾ ಅಷ್ಟೇ.) ಸರಿ ವಿಜಯಾ ನೀನು ಹೇಳಪ್ಪಾ ನೀನು ಏನಂತಿಯಾ, ಸಾರ್ ನಾನು ನಿಮಗೆ ಆಗಲೇ ಹೇಳಿದ ಹಾಗೆ ಇವಳ ಆಫಿಸೀನ ಚಟುವಟಿಕೆಗಳು ನನಗೆ ಹಿಡಿಸಿಲ್ಲ, ಇವಳಿಗೆ ಮನೆಯ ಬಗ್ಗೆ ನಮ್ಮ ಸಂಸಾರದ ಬಗ್ಗೆ ಕಿಂಚಿತ್ತು ಚಿಂತೆ ಇಲ್ಲ ಅದಕ್ಕೆ ಸ್ವಲ್ಪ ದಿನ ಇವಳು ಕೆಲಸ ಬಿಟ್ಟು ಇದ್ದರೆ ನಾನೇ ಮತ್ತೆ ಬೇಕೆನ್ನಿಸಿದಾಗ ಇವಳಿಗೆ ಕೆಲಸ ಕೊಡಿಸುತ್ತೆನೆ ಆ ತಾಕತ್ತು ನನ್ನಲ್ಲಿದೆ ಅನ್ನುತ್ತಾನೆ. ಇನಸ್ಪೆಕ್ಟರ್ ರವರು ಭೇಷ ವಿಜಯಾ...ಇವನು ಇಷ್ಟೆಲ್ಲಾ ಹೇಳುವಾಗ ಸುಮ್ಮನೆ ಒಪ್ಪೊಕೊಳ್ಳಮ್ಮ ನಿಮ್ಮ ಜೀವನ ಸುಖಾವಾಗಿರುತ್ತದೆ ಅಂದರು. ಏನೇ ಆಗಲಿ ನಾನಂತು ಕೆಲಸ ಬಿಡುವುದೇ ಇಲ್ಲಾ..ಅಂದಳು ಇನಸ್ಪೆಕ್ಟರ್ ಬೈದುದಕ್ಕೆ ಸರಿ ಬಿಡುತ್ತೆನೆ ಆದರೆ ಒಂದೆ ಸರಿ ಬಿಡಲು ಆಗುವುದಿಲ್ಲ ನನಗೆ ಸ್ವಲ್ಪ ಸಮಯ ಬೇಕು ಅನ್ನುತ್ತಾಳೆ, ಇವಳ ಕ್ರೂರ ಬುದ್ದಿ ತಿಳಿದಿದ್ದ ವಿಜಯ,ಅವಳು ಕೆಲಸ ಬಿಡದೆ ಇದು ಸರಿ ಹೋಗುವುದಿಲ್ಲ ಸರ್ ಅಂದ ಕೂಡಲೆ ಇನಸ್ಪೆಕ್ಟರ್ ಅವರಿಗೆ ಇವಳ ಆಫೀಸಿನ ರಾಸ ಲಿಲೆಗಳು ನ್ಯಾಪಕಕ್ಕೆ ಬರುತ್ತವೆ., ಸರಿ ವಿಜಯ ನಿನ್ನ ಹೆಂಡತಿ ನೀನು ೩೦೦೦೦ ಸಾವಿರ ಸಂಬಳ ತೆಗೆದು ಕೊಳ್ಳುತ್ತಿ ಅಂತಾ ಹೇಳಿದ್ದಾಳೆ ಹೌದಾ ಅಂತಾ ಕೇಳುತ್ತಾರೆ, ತಕ್ಷಣ್...., ಅಯ್ಯೋ ನಾನು ಹಾಗೆ ಹೇಳಿಯೇ ಇಲ್ಲಾ ಅಂತಾ ಇನಸ್ಪೆಕ್ಟರ್ ಅವರಿಗೆ ಬಾಯಿ ಬಡಿಯುತ್ತಾಳೆ, ಇದನ್ನು ಕಂಡ ಇನಸ್ಪೆಕ್ಟರ್ ಇವಳ ಹಾವು ನಾಲಿಗೆ ಬಗ್ಗೆ ವಿಜಯಾ ಹೇಳಿದ್ದು ನಿಜ ಅಂತಾ ಗೊತ್ತಾಗುತ್ತದೆ. ( ಅವಳು ಇನಸ್ಪೆಕ್ಟರ್ ಗೆ ಈ ವಿಷಯ ಹೇಳಿದ ಕಾರಣ, ನೀವು ಅವನ ಹತ್ತಿರ ದುಡ್ಡು ವಸೂಲಿ ಮಾಡಿ ಅಂತ ಹೇಳೊದಕ್ಕೆ ಈ ವಿಷಯ ತಿಳಿಸಿರುತ್ತಾಳೆ - ಕಪಟಿ ಹೆಂಗಸು - ಗಂಡನ ಜೊತೆಯಲ್ಲೆ ಇದ್ದು ಗಂಡನನ್ನೆ ಹಿಂದಿನಿಂದ ಚೂರಿ ಹಾಕುವ ಇವಳ ಬುದ್ದಿ ) ಇನಸ್ಪೆಕ್ಟರ್ ನಕ್ಕು ಸರಿ ಅವನ ಸಂಬಳದಲ್ಲಿ ಜಾಮ್ ಜಾಮ್ ಅಂತಾ ಜೀವನ ಮಾಡಬಹುದು, ಇಬ್ಬರು ನೋಡಲು ಸುಂದವಾಗಿದ್ದಿರಿ, ಮಕ್ಕಳು ಮಾಡಿ, ಕಾರು ತೊಗೊಳಿ, ದೊಡ್ಡ ಮನೆ ಕಟ್ಟಿಸಿ ಸುಖವಾಗಿ ಜೀವಿಸಿರಿ ಅಂತಾ ಹೇಳಿದರೂ ಇವಳು ಮಾತ್ರ ಒಪ್ಪುವುದೇ ಇಲ್ಲಾ...! ಇನಸ್ಪೆಕ್ಟರ್ ಇಷ್ಟೆಲ್ಲಾ ಹೇಳಿದರೂ ನೀನು ಒಪ್ಪುತ್ತಿಲ್ಲಾ ಅಂದರೆ... ಅಂದ ಕೂಡಲೆ ಅವಳು ಸಾರ್ ನಿಮ್ಮ ಕೂಡ ನಾನು ಸ್ವಲ್ಪ ಪರ್ಸನಲ್ ಆಗಿ ಮಾತಾಡಬೇಕು ಎಲ್ಲರನ್ನೂ ಹೊರಗೆ ಕಳಸಿ ಅಂತಾ ಹೇಳುತ್ತಾಳೆ, ಸರಿ ಸ್ವಲ್ಪ ಎಲ್ಲರೂ ಹೊರಗೆ ಇರಿ...ಅಂದ ಇನಸ್ಪೆಕ್ಟರ್....ಜೋರಾಗಿ ರೇಗಾಡುತ್ತಾ ಅವಳ ಮೇಲೆ....ನಾವೇನು ಇಲ್ಲಿ ಲಂಚ ತಿನ್ನಲು ಕೂಳಿತ್ತಿದ್ದಿವಾ ? ನನ್ನನ್ನ ನೀನು ಏನು ಅಂದುಕೊಂಡಿದ್ದಿಯಾ, ನಿನ್ನ ಜೀವನ ಹಾಳಾಗದಿರಲಿ ಅಂತಾ ನಾನು ಒಂದು ಗೂಡಿಸೊಣವೆಂದರೆ ನನಗೆ ಲಂಚದ ಆಮಿಷ ಒಡ್ಡುತ್ತಿರುವೆ...,ಹಾಳಾಗಿ ಹೋಗು ಇನ್ನು ಮೇಲೆ ನನ್ನ ಠಾಣೆಗೆ ಬರಬೇಡ ಅಂದ ಗದರಿಸಿ ಕಳಿಸುತ್ತಾರೆ. ನೋಡಿದಿರಾ ಓದುಗರೆ...ಹೆಂಗಸಿನ ಚಾಲಾಕುತನವ... ? ಇವಳ ಬುದ್ಧಿಗೆ ಇವಳು ಜಾಣೆ ಅನ್ನುತ್ತಿರೋ ಅಥಾವಾ ಕಿರಾತಕಿ ಅನ್ನುತ್ತಿರೋ ನಿಮಗೆ ಬಿಟ್ಟದ್ದು..! ಇಲ್ಲಿಗೆ ಇನಸ್ಪೆಕ್ಟರ್ ಒಂದು ನವ ಜೋಡಿಯನ್ನು ಮತ್ತೆ ಕೂಡಿಸುವ ಪ್ರಯತ್ನ ನೆಲಕಚ್ಚುತ್ತದೆ. ಅವಳು ಮತ್ತೆ ಅವರ ಜನರು ಹೊರ ನಡಿದ ಕೂಡಲೆ ವಿಜಯನ ಕುರಿತು, ಅವಳು ಹೆಮ್ಮಾರಿ ಇದ್ದಾಳಪ್ಪ, ನೀನು ಇವಳನ್ನ ಬಿಟ್ಟು ಬೇರೊಬ್ಬ ಒಳ್ಳೆಯ ಹುಡುಗಿಯನ್ನು ನೋಡಿ ಮದುವೆಯಾಗು..., ಅವಳು ಹಾಳಾಗಿ ಹೋಗುತ್ತಾಳೆ, ಅವಳ ಬಗ್ಗೆ ಮತ್ತೆ ತಲೆ ಕೊಡಿಸುವುದಕ್ಕೆ ಹೋಗ ಬೇಡ., ಅವಳು ಸಂಸಾರ ಮಾಡಲಿಕ್ಕೆ ಲಾಯಕ್ಕು ಇಲ್ಲಾ ಅಂತಾ ಹೇಳುತ್ತಾರೆ. ಇನಸ್ಪೆಕ್ಟರ್ ಅವರ ಮಾತು ಕೇಳಿದ ವಿಜಯ ಅವರ ಕಾಲಿಗೆಬಿದ್ದು ಬಿಡುತ್ತಾನೆ.., ನಿನಗೆ ಒಳ್ಳೆಯದಾಗಲಿ ಬೇಗ ಇವಳನ್ನ ಬಿಟ್ಟು ಒಂದು ಒಳ್ಳೆಯ ಹುಡುಗಿ ನೋಡಿ ಮದುವೆ ಮಾಡಿಕೊ, ಮದುವೆಗೆ ಕರಿ ನಾನು ಬರುತ್ತೆನೆ ಅಂತಾ ಹೇಳಿ ಕಳಿಸುತ್ತಾರೆ. ಇಂತಹ ಇನಸ್ಪೆಕ್ಟರ್ ಗಳೂ  ಇರುತ್ತಾರೆ ಅಂತಾ ತಿಳಿದು ವಿಜಯನಿಗೆ ಹಾಗು ಅವನ ಮನೆಯವರಿಗೆ ಸಂತೋಷವಾಗುತ್ತದೆ. ಇಲ್ಲಿಯ ಸಂದಾನ ಫಲಕಾರಿ ಯಾಗಲಿಲ್ಲ, ಹೆಣ್ಣಿನ ತಾಯಿ ಮಾವನ ಹಠ ಇಲ್ಲಿಗೆ ನಿಂತೀತೆ..? ವಿಜಯನ ಗೋಳು ಇಲ್ಲಿಗೆ ಮುಗೀತೆ ? ಅಥಾವಾ ಇವರ ಜೀವನ ಮತ್ತೆ ಸರಿಯಾದೀತೆ..? ಎಲ್ಲಾ ಊಹಾ ಪೋಹಗಳು ಹಾಗೆ ಇರಲಿ ಗೆಳೆಯರೆ...., ಮುಂದಿನ ಸಂಚಿಕೆಯಲ್ಲಿ ಮುಂದು ವರೆಸುತ್ತೆನೆ ಕಾದು ನೋಡಿ...........ಮುಂದುವರೆವುದು...)

ಸೂಚನೆ : ನಿಮ್ಮ ಅಭಿಪ್ರಾಯ, ತಕರಾರುಗಳನ್ನ ಅಪೇಕ್ಷಿಸುತ್ತೆನೆ, ಏನೇ ಇರಲಿ ನನಗೆ ಬರೆದು ಕಳಸಿ..., ಇನ್ನೂ ಕೆಲವೇ ಕಂತುಗಳಲ್ಲಿ ಈ ಕಥೆಯನ್ನ ಮುಗಿಸುತ್ತೆನೆ....ಧನ್ಯವಾದಗಳು.

THOUGHT FOR THE DAY

WHOLE WORLD SEEMS BEAUTIFULL ONLY WHEN THE EYES SEEING THAT WORLD ARE BEAUTIFULL.

ವೆಭಿಚಾರಿ

ಗಂಡನ ಬಿಟ್ಟ ಹೆಂಡತಿ,
ಪರ ಸತಿಗಳಿಗೆಲ್ಲಾ ಸವತಿ,
ಎನೇ ಗಳಿಸಿದರೇನು... ಅನ್ನಿಸಿಕೊಳ್ಳುವುದು ಮಾತ್ರ ವೆಭಿಚಾರಿ..!

ಹಿತವಚನ

ಸಾಲಾ ಸೋಲ ಮಾಡಿ ಐಶಾರಾಮಿ ಗಳಿಸಿದರೆ ಏನು ಬಂತು ,
ಎಷ್ಟಿದ್ದರೂ ಸಾಲ ಕೊಟ್ಟವನು ನಿನ್ನ ಅಂದ ನೋಡಿ ಬಿಟ್ಟಾನೆ ?

ಘರ್ವ

ತನ್ನಷ್ಟಕ್ಕೆ ತಾನೇ ಹೊಗಳಿಕೊಳ್ಳೊ  ತ್ರಿಪುರ ಸುಂದರಿ ,
ಕೆಲವೇ ವರುಷದಲ್ಲಿ ನೀನಾಗುವೆ ಪ್ರೀತಿಯ ಬೇಡುವ ಭಿಕಾರಿ !!

ಚುಟುಕ

ಮನುಷತ್ವಕ್ಕೆ, ಪ್ರೀತಿಗೆ ಬೆಲೆಕೊಡುವವರು ವಿರಳ
ಕಾಮ ಲೋಭದಲ್ಲೇ ಇವರ ಜೀವನ್ಮರಣ ..! 

Tuesday, March 05, 2013

ಕಥೆ (ಎಲ್ಲ ಕಥೆಗಳ ಹಿಂದಿನ ಕಹಿ ಸತ್ಯಗಳು ) - 11

(ಮುಂದೆವರೆದಿದೆ....... )  ಗಂಡನ ಮನೆಯಿಂದ   ತಾಳಿ ಎಸೆದು ಬಂದ ಹೆಂಗಸಿಗೆ ಎನೋ ಸಂತೋಷ , ಅಂತು ಇಂತು ಗಂಡನ ಮನೆಯಿಂದ ತಪ್ಪಿಸಿಗೊಂಡು ಬಂದೆ, ಇನ್ನು ಮುಂದೆ ನನ್ನ ಯಾರು ಏನೂ  ಕೇಳುವುದಿಲ್ಲ ಅನ್ನುವ ಸಂತಸ ಅವಳಿಗೆ. ಮರುದಿನದಿಂದಲೇ ಇವಳ ಬಾಯ್ ಫ಼್ರೆಂಡ ಇವಳನ್ನ ತನ್ನ ಬೈಕಿನ ಮೇಲೆ ಆಫಿಸಿಗೆ ಕರೆತರುತ್ತಾನೆ. ಅವನು ಸಹ ಅವಳದೇ ಆಫಿಸಿನಲ್ಲಿ ಕೆಲಸ ಮಾಡುತ್ತಿರುತ್ತಾನೆ.  ಇವರಿಬ್ಬರ ಒಡನಾಟ ತುಂಬಾ ಜೋರಾಗಿ ಶುರುವಾಗುತ್ತದೆ. ಆಫೀಸಿನ ಸಹುದ್ದ್ಯೋಗಿಗಳು ಮುಂಚೆ ಇವರು ಬರಿ ಸ್ನೇಹಿತರು ಅಂದು ಕೊಂಡಿರುತ್ತಾರೆ , ಇವಳು ಗಂಡನ ಬಿಟ್ಟು   ಬಂದವಳು ಅನ್ನುವುದು ಅವಳ ಗೆಳತಿಯ ಹೊರೆತು ಯಾರಿಗೂ ತಿಳಿದಿರುವುದಿಲ್ಲ . ಇವಳ ನಡೆವಳಿಕೆ ನೋಡಿದ ಗೆಳತಿ ನೀನು ಮಾಡುತ್ತಿರುವುದು ತಪ್ಪು ... ಹೀಗೆ ಮದುವೆಯಾದ ನೀನು ಬೇರೆಯವರೊಂದಿಗೆ ಸಲಿಗೆಯಿಂದ ಇರುವುದು  ತಪ್ಪು  ಅಂದಿದ್ದಕ್ಕೆ ..., ನೀನ್ಯಾವಳೆ  ಕೇಳೋದಕ್ಕೆ ? ನಾನು ಏನ್ಬೇಕಾದರೂ ಮಾಡಿಕೊಳ್ಳುತ್ತೇನೆ ನಿನಗ್ಯಾಕೆ ಅವೆಲ್ಲಾ ಅಂತ ಗದರಿಸಿ ಬಿಡುತ್ತಾಳೆ . ಇವಳ ಕಷ್ಟಗಳಿಗೆಲ್ಲ ಸ್ಪಂದಿಸಿದ ಗೆಳತಿಗೆ ಕಥಾ ನಾಯಕಿ ಕೊಟ್ಟ ಉತ್ತರ... ನೊಂದ ಗೆಳತಿ ಇವಳಿಗೆ ಬುದ್ದಿ ಹೇಳಲು ಹೋಗಿದ್ದು ತನ್ನ ತಪ್ಪು ,ಪಾಪ ಇವಳ ಗಂಡ ಇವಳ ಮೇಲೆ ಬೆಟ್ಟದಷ್ಟು  ಪ್ರೀತಿ ಇಟ್ಟುಕೊಂಡಿದ್ದ , ಈ ವಿಷಯಗಳು ಅವನಿಗೆ ತಿಳಿದರೆ  ನೊಂದುಕೊಳ್ಳುತ್ತಾನೆ ಅನ್ನುತ್ತಾ ಮರಗುತ್ತಾಳೆ. ಗೆಳತಿ ಮೂಕ ಪ್ರೆಕ್ಷಕಳಂತೆ ಆಫೀಸಿನಲ್ಲಿ ನಡೆಯುತ್ತಿರುವುದನ್ನು  ಗಮನಿಸುತ್ತಿರುತ್ತಾಳೆ. ಆ ಕೆಟ್ಟ ಹೆಂಗಸು ಅವನ ಜೊತೇನೆ  ಊಟ, ಚಾಹ  ಎಲ್ಲಾ , ಬೇಕೆಂದಾಗಲೆಲ್ಲಾ ಐಸ್ಕ್ರಿಮು ಕೊಡೆಸುವವ ಇವ .  " ಹೆಂಗಸರ ಬುದ್ದಿ ಮಣಕಾಲು ಕೆಳಗೆ " ಅನ್ನುವ ಗಾದೆ ಇಲ್ಲಿ ನಿಜವಾಗುತ್ತದೆ.  ಅದೊಂದು ದಿನ ಗಂಡ ಎಲ್ಲೋ ಹೊರಗೆ ಹೋಗಿ ಬರುತ್ತಿರುವಾಗ ಇವಳನ್ನು ಒಬ್ಬನ ಜೊತೆ ಇದ್ದುದ್ದನ್ನು ನೋಡುತ್ತಾನೆ. ದೂರದಲ್ಲಿ ನಿಂತು ಇವರ ಚಲನವಲನಗಳನ್ನ ವಿಕ್ಷಿಸುತ್ತಾನೆ , ಇತ್ತ ಗಂಡನ ಕಂಡರೂ ಆಶ್ಚರ್ಯ ಪಡದ ಇವಳು ಗಂಡನ ಹತ್ತಿರ ಕೈ ಮಾಡುತ್ತಾ ತನ್ನ ಬಾಯ್ ಫ಼್ರೆಂಡಿಗೆ ಏನೋ ಹೇಳುತ್ತಾಳೆ.. ಅಷ್ಟರಲ್ಲಿ ಅವಳ ಬಸ್ಸು ಬರುತ್ತದೆ ಅವನು ಅವಳನ್ನ ಬಸ್ಸು ಹತ್ತಿಸಿದ್ದೇ ಆಫೀಸಿನ ಹತ್ತಿರ ವೇಗವಾಗಿ ಓಡಲು ಪ್ರಾರಂಭಿಸುತ್ತಾನೆ ,ಆಕೆಯ ಗಂಡ ದೂರದಲ್ಲೆ ನಿಂತು ಇವನು  ಯಾರು, ಎಲ್ಲಿಗೆ ಹೋಗುತ್ತಿದ್ದಾನೆ ಅಂತ ಕುತೂಹಲದಿಂದ ನೋಡುತ್ತಾನೆ.  ವಿಜಯ ನೂರು ಪ್ರಶ್ನೆಗಳ  ಹೊತ್ತು  ಮನೆಗೆ  ಮರಳುತ್ತಾನೆ . ಅವನ ಮನಸಲ್ಲಿ ಎನೋ  ಕಸಿವಿಸಿ ..., ಯಾರವನು ? ಇಷ್ಟು ಬೇಗ ಮತ್ತೊಬ್ಬನ ಜೊತೆಯಲ್ಲಿ ಇವಳ ಸರಸ , ತಡೆಯಲಾಗದೆ ಅವಳ ಗೆಳತಿಯ ಮನೆಗೆ ಹೋಗಿ ಕೇಳಿಯೇ ಬಿಡುತ್ತಾನೆ .., ರೀ ಭಾಮಾ ಅವರೇ (  ಗೆಳತಿ ) ಇವತ್ತು ಇವಳೊಬ್ಬನ ಜೊತೆಯಲ್ಲಿ ಬಸ್ಸು ನಿಲ್ದಾಣದಲ್ಲಿ  ನಿಂತಿದ್ದನ್ನು ನೋಡಿದೆ ನಿಮಗೆ ಗೊತ್ತೇ ಇರಬೇಕು ಯಾರು ಆ ಹುಡುಗ... ? ಭಾಮಾಗೆ  ಮಾತುಗಳೇ ಹೊರಡಲಿಲ್ಲ .., ವಿಜಯ ಅವರೇ ... " ಅವಳು ತುಂಬಾ ಮುಂದುವರೆದಿದ್ದಾಳೆ " ನಾವು ಗೆಳತಿಯರೆಲ್ಲರೂ ಅವಳು ಒಳ್ಳೆಯವಳು ಅಂತ ಅಂದುಕೊಂಡಿದ್ದಿವಿ , ಅವಳು ಇಂತಹ ಸಂಬಂಧಗಳನ್ನು ಇಟ್ಟುಕೊಂಡಿದ್ದಾಳೆ ಅನ್ನುವುದು ನಮಗೂ ಕೂಡ ತಿಳಿದಿರಲಿಲ್ಲ . ಅವಳಿಗೆ ನಿಮ್ಮ ಜೊತೆ ಸಂಸಾರ ಮಾಡಲು ಇಷ್ಟವಿಲ್ಲವಂತೆ , ಸುಮ್ಮನೆ ಅವಳನ್ನ ಬಿಟ್ಟು ಬಿಡಿ ಅಂತ ಹೇಳಿಬಿಡುತ್ತಾಳೆ , ಇಷ್ಟು ಬಿಟ್ಟರೆ ನಿಮಗೆ ಮತ್ತೇನೂ ನಾ  ಹೇಳಲಾರೆ ಎಂದು ಮೌನವಾಗುತ್ತಾಳೆ.  ವಿಜಯನಿಗೆ  ಅರಗಿಸಿಕೊಳ್ಳಲಾಗದ ವಿಷಯ .. ! ಹಿಂದೆ ಒಂದು ಸಾರಿ ಜಗಳದಲ್ಲಿ ಹೆಂಡತಿ  ಹೇಳಿದ ಮಾತುಗಳು  ನೆನಪಿಗೆ ಬರುತ್ತವೆ..... , ಗಂಡ ಹೆಂಡಿರ ನಡುವೆ ಜಗಳವಾದಾಗ ಗಂಡ ಅಂದು ಕಚೇರಿಯಿಂದ ತಡವಾಗಿ ಮನೆಗೆ ಬಂದಿರುತ್ತಾನೆ  , ತನ್ನ ಕಚೇರಿಯಲ್ಲಿ ನಾಟಕದ ಪ್ರಯುಕ್ತ , ಆ ನಾಟಕದಲ್ಲಿ ಹುಡುಗೆಯರು ಕೂಡ ಭಾಗವಹಿಸಿದ್ದರು ಅನ್ನೋ ಕಾರಣಕ್ಕೆ....  ಇವಳು " ನಾನು ಕೂಡ ಯಾವನನ  ಜೊತೆಯಲ್ಲಿ ಮಲಾಗಿ ಬರಲಾ ? " ಅಂತ ಹೇಳಿರುತ್ತಾಳೆ .  ಟಿವಿ ಚಾನಲ್ಲಿನಲ್ಲಿ  ಶುಸ್ಮಿತಾ ಸೇನ್ ಹಾಗು ಖುಶುಬು ನಟಿಮಣಿಯರು " SEX BEFORE MARRIAGE IS NOT CRIME " ಅಂದಿದ್ದಕ್ಕೆ ಇವಳ ಪ್ರತಿಕ್ರಿಯೆ.... " ಅಯ್ಯೋ ಇವೆಲ್ಲಾ ಕಾಮನ್ ಇವಾಗ " ಅಂದ ಮಾತುಗಳು ವಿಜಯನ್ನ ಇವಳು ಎಂತಹ ಕೆಟ್ಟ ಹೆಂಗಸು ಅನ್ನುವುದು ಗೋಚರಿಸತೊಡಗುತ್ತದೆ. ಅಯ್ಯೋ ಶಿವನೆ ..... ಯಾವ  ಪಾಪಕ್ಕಾಗಿ ನನಗೆ ಈ ಶಿಕ್ಷೆ ? ಅನ್ನುತ್ತಾ ತುಂಬಾ ನೊಂದುಕೊಳ್ಳುತ್ತಾನೆ . ಅತ್ತ ಹುಡುಗಿಯು ಮನೆಗೆ ಹೋಗಿ ತನ್ನ ತಪ್ಪುಗಳು ಮುಚ್ಚಿಕೊಳ್ಳಲು , ತನ್ನ ಗಂಡ ಆಫೀಸಿನ ಹತ್ತಿರ ಬಂದು ತನ್ನನ್ನ ಹಿಡಿದು ಎಳೆದ ಅಂತ ಹೇಳಿ , ಅದಕ್ಕೆ  ಅವನ ಮೇಲೆ ಪೋಲಿಸು ದೂರು ನೀಡಲು ಮುಂದಾಗುತ್ತಾಳೆ, ಇದಕ್ಕೆ ಕುಮ್ಮಕ್ಕು ಅವಳ ಮಾವ, ಅವಳ ತಾಯಿ .  ಆದರೆ ಇಲ್ಲಿ ಇವರ ಮನೆಯವರಿಗೆ ಇವಳ ಕಪಟ ಆಟಗಳು ತಿಳಿದಿರುವುದಿಲ್ಲ. ಒಂದು ಮಟ್ಟಿಗೆ ಇವಳ ಮಾವನಿಗೆ ಇವಳ ಬಗ್ಗೆ ಎಲ್ಲಾ ಮಾಹಿತಿಗಳು ಇರುತ್ತವೆ ಹಾಗು ಇವನು ಕೂಡ ಅವಳ ಕೃತ್ಯಗಳಿಗೆ ಸಹಾಯ ಹಸ್ತ ನೀಡುತ್ತಿರುತ್ತಾನೆ. ಮಾರನೆ ದಿನ ಬೆಳಿಗ್ಗೆ ಇವಳ ಮಾವ ಹಾಗು ಇವಳು  ಸೇರಿ  ಪೋಲಿಸು  ಠಾಣೆಯಲ್ಲಿ  ವಿಜಯನ ವಿರುದ್ದ ಸುಳ್ಳು ದೂರುಗಳನ್ನು ನೀಡುತ್ತಾರೆ , ಅವರ ದೂರಿನಲ್ಲಿ ಗಂಡ ಅವಳನ್ನು ಹೊಡಿದು ಬಡಿದು ಹಿಂಸಿಸುತ್ತಾನೆ , ವರದಕ್ಷಿಣೆ ಕಿರುಗಳ ಹಾಗು ಹುಡುಗನ ತಂದೆ ತಾಯಿ ತಮ್ಮಂದಿರ ಮೇಲೆ ಹಿಂಸೆಯ ಸುಳ್ಳು ದೂರು ನೀಡುತ್ತಾಳೆ. ಗಂಡನ ಜೊತೆ ಇವಳೊಬ್ಬಳೆ ಇದ್ದವಳು ಮನೆ ಮಂದಿಯ ಮೇಲೆಲ್ಲಾ ಮನಕೆ ತೋಚಿದಂತೆ ದೂರು ನೀಡುತ್ತಾಳೆ. ವಾಹ ಎಂತಹ ಹೆಂಗಸುರು ಇದ್ದಾರಪ್ಪಾ ಈ ಜಗದಲ್ಲಿ ಅಂತಾ ಅನ್ನಿಸುವುದಿಲ್ಲವೇ ಪ್ರೀಯ  ಓದುಗರೆ...  ?  ಪಾಪ ವಿಜಯನಂತಹ ಹುಡುಗರು ಇನ್ನೂ ಎಷ್ಟು ಇರುವರು ನಾ ಕಾಣೆ...!  ಕೆಟ್ಟ ಹೆಂಡತಿಯ ಕಟ್ಟಿಕೊಂಡ ವಿಜಯನ ಕಥೆ ಮುಂದೆ ಏನಾಗುತ್ತದೋ ಕಾದು  ನೋಡಿ. ( ಮುಂದುವರೆವುದು  ....... )

ವೇಶ್ಯೆ

ಗಂಡನಿಗೆ ವೇಶ್ಯೆಯ ಸಹವಾಸ ಮಾಡಿದ್ದಿರಾ ಅಂತ ಕೇಳಿದ ಹೆಂಗಸು ...,
ತನ್ನ ಮಾತುಗಳಲ್ಲೇ ...., ತಾನೂ  ಒಬ್ಬ ವೇಶ್ಯೆ ಅಂತ ಬಿಂಭಿಸಿದ್ದಳು ....!!

हित वचन



दियाचे अंत कदि निकट आवर्तात तरी दिया जोरात खूप उजाळा हुयील !

पण ये त्यांची जीत नाही तो अस्तंगत होयील असा सुचना आहे !

ಹಿತ ವಚನ


" ಧರ್ಮೊ ರಕ್ಷತಿ ರಕ್ಷಿತಃ "

ಯಾರು ಧರ್ಮವನ್ನು ಪಾಲಿಸುತ್ತಾರೊ ಅವರಿಗೆ ಧರ್ಮವೇ ರಕ್ಷಿಸುತ್ತದೆ.

ಈ ಜಗದಲ್ಲಿ ಎಂದಿಗೂ ಅಧರ್ಮಕ್ಕೆ ಜಯ ದೊರೆತಿಲ್ಲ , ಅಧರ್ಮ ಎಂದಿಗೂ ಜಯಿಸುವುದಿಲ್ಲ.

हित वचन


इंसान कित्नाही बुरा क्यूँ ना हो , भगवन उसे गलती सुदारने के लिए एक फरिश्ता भेजता है।

लेकिन वो लोग अपनी गलती सुदारे  बगैर फरीस्थों को भी अपने कर्मों से दुख पोहुचाते है।

मौका तो एक ही बार मिलता है। जो सुदर गए वोह सुदार्जाते है , और जो नहीं सुदर्ते उनको खुद भगवन भी नहीं बचा सकता है।

THOUGHT FOR THE DAY

MISTAKES CAN BE FORGIVEN, WHEN THEY JUST HAPPEN UNKNOWINGLY..!
BUT,
NOT WHEN THEY ARE DONE  " INTENTIONALLY "

Monday, March 04, 2013

ಕಥೆ ( ಎಲ್ಲ ಕಥೆಗಳ ಹಿಂದಿನ ಕಹಿ ಸತ್ಯಗಳು) - 10

ಮುಂದುವರೆದಿದೆ....) ಹೇಗೊ ಮತ್ತೆ ಮನೆಗೆ ಬಂದಳು ಮುಂದೆ ಹೊಂದಿಕೊಂಡು ಹೋಗುತ್ತಾಳೆ ಎಂದು ಭಾವಿಸಿದ್ದ ವಿಜಯ. ಆದರೆ, ಅವಳ ಮನಸಲ್ಲಿ ಬೇರೆಯೇ ಇತ್ತು. ಅವಳ ವರ್ತನೆಗಳು ಬರಿ ಅನುಮಾನಗಳನ್ನ ಊಂಟು ಮಾಡುತ್ತಿದ್ದವು..ಕದ್ದು ಮುಚ್ಚಿ ಬಚ್ಚಲ ಮನೆಯಲ್ಲಿ ಯಾರದೊ ಹತ್ತಿರ ಮಾತನಾಡುತ್ತಿದ್ದಳು.,ಏನೋ ನಡೆಯುತ್ತಿತ್ತು...ಏನು ಅನ್ನುವುದು ಅವನಿಗೆ ತಿಳಿಯುತ್ತಿರಲಿಲ್ಲ..ಇವಳ ವಿಜಯನ ಜೊತೆ ಮತ್ತೆ ಸರಿಯಿಲ್ಲ ಏನೋ ಕುತಂತ್ರ ನಡೆಸುತ್ತಿದ್ದಳು. ಏನೂ ತಿಳಿಯದಾದಾಗ ವಿಜಯ ಅವಳ ಗೆಳತಿಯ ಸಹಾಯ ಪಡೆಯಲು ನಿರ್ಧರಿಸುತ್ತಾನೆ. ಅವರ ಮನೆಗೆ ತೆರಳಿ ನೀವು ಬಂದು ಸ್ವಲ್ಪ ಇವಳಿಗೆ ಬುದ್ಧಿ ಹೇಳಿ.., ಇವಳು ಬದುಕಬೇಕಾದದ್ದು ಗಂಡನ ಜೊತೆಯಲಿ, ಇಬ್ಬರು ಒಬ್ಬರಿಗೊಬ್ಬರು ಆಸರೆಯಾಗಿರಬೇಕು ಗಂಡನ ಗೌರವ ಪ್ರತಿಷ್ಠೆಯೆ ಇವಳ ಪ್ರಧಾನ್ಯತೆ ಆಗಿರಬೇಕು ಹಾಗೆಯೇ ಗಂಡನು ಕೂಡ ಹೆಂಡತಿಯ ಬೇಕು ಬೇಡಗಳನ್ನು ತಿಳಿದು ಅರಿತು ಬಾಳಬೇಕು. ಅವರುಗಳು ಕೂಡ ಸರಿ ನಿಮ್ಮ ಜೀವನ ನಮ್ಮ ಮಧ್ಯಸ್ತಿಕೆಯಿಂದ ಸರಿ ಹೋಗುವುದು ಅಂದರೆ ನಾವು ಬರುತ್ತಿವಿ ಅನ್ನುತ್ತಾರೆ. ಸಂಜೆ ಆರು ಗಂಟೆಗೆ ಸರಿಯಾಗಿ ಅವಳ ಗೆಳತಿ ಮತ್ತು ಗಂಡ ಮನೆಗೆ ಬರುತ್ತಾರೆ. ಗೆಳತಿಯೊಡನೆ ಕುಶಲ ಸಮಾಚಾರವಾಗುತ್ತದೆ. ವಿಜಯನ ಕುರಿತು ಎನ್ ವಿಜಯರವರೆ ಏನ್ ಸಮಾಚಾರ..ಅಂತಾ ಮಾತುಗಳು ಶುರುಮಾಡುತ್ತಾರೆ, ಅದಕ್ಕೆ ವಿಜಯನು... ನೋಡಿ ನೀವು ತಿಳಿದ್ದಿದ್ದವರಿದ್ದಿರಿ ಇವಳು ಮಾಡಿದ್ದು ಸರಿಯೇ ನೀವೇ ಹೇಳಿ...ನಾನು ಮನೆಯಲ್ಲಿ ಇರದಾಗ ಇವಳು ಮನೆ ಬಿಟ್ಟು ಹೋದಳು,ಎಲ್ಲಿಗಾದರೂ ಹೋಗಬೇಕಾದಾಗ ಹೇಳಿ ಹೋಗ ಬೇಕೊ ಬೇಡವೊ ನೀವೇ ಹೇಳಿ..ಯಾವಾಗಲೂ ನೋಡಿದರು ಪೋನಿನಲ್ಲಿ ಮಾತನಾಡುತ್ತನೆ ಇರುತ್ತಾಳೆ,ಹೋಗುವ ಮೊದಲು ಗಂಡನಿಗೆ ಒಂದು ಪೋನು ಮಾಡಬಹುದಿತ್ತಲ್ಲ..., ಕೇಳಿ ಇವಳು ಮಾಡಿದಳಾ ಅಂತ....ಇಷ್ಟು ಮಾತುಗಳು ಆಗುತ್ತಿದ್ದರೂ ಇವಳ ಅಡುಗೆ ಮನೆಯಲ್ಲಿ ಸುಮ್ಮನೆ ಕುಳಿತಿರುತ್ತಾಳೆ.., ನೋಡಿ ಇಲ್ಲಿ ನೀವು ಬಂದ್ದಿದ್ದಿರಾ, ನಾವು ನಮ್ಮ ಸಂಸಾರದ ಬಗ್ಗೆ ಮಾತನಾಡುತ್ತಿದ್ದೇವೆ ಇವಳಿಗೆ ಸ್ವಲ್ಪನಾದರೂ ಚಿಂತೆ ಇದೆಯೆ..? ಯಾವಾಗಲೂ ನನ್ನ ಫ್ಯಾಮಲಿ ನನ್ನ ಜನ ಅಂತ ಇರ್ತಾಳೆ, ಹಾಗದರೆ ಇವಳಿಗೆ ಅವರ ಬಗ್ಗೆನೆ ಚಂತಿಸುವುದಿತ್ತೆಂದರೆ ಮದುವೆ ಏಕೆ ಬೇಕಿತ್ತು, ನನ್ನ ಗೌರವ, ಪ್ರತಿಷ್ಟೆ ಬಗ್ಗೆ ಇವಳಿಗೆ ಕಿಂಚಿತ್ತು ಚಂತೆಯಿಲ್ಲ, ಹೀಗಿದ್ದರೆ ಸಂಸಾರ ನಡೆದೀತಾ ? ಸರಿ ವಿಜಯ ಅವರೆ ಈಗ ಏನ್ ಆಗಿದೆ ಅದನ್ನ ಮರೆತು ಬಿಡೋಣ,ನೀವು ಕೂಡ ಮರೆತು ಬಿಡಿ.., ನಮ್ಮನ್ನ ಗೌರವವಿಟ್ಟು ಕರೆದಿದ್ದೀರಿ ಹಾಗೆ ನಾವು ಬಂದಿದ್ದೀವಿ ಮುಂದೆ ಹೇಗಿರಬಹುದು ಅನ್ನೊ ಯೋಚನೆ ಮಾಡೊಣ ಅಂತ ಹೇಳುತ್ತಾಳೆ ಗೆಳತಿ..ನೋಡೆ ( ವಿಜಯನ ಪತ್ನಿಯತ್ತ ನೋಡುತ್ತಾ..) ನಿಮ್ಮ ಯಜಮಾನರು ತುಂಬಾ ಒಳ್ಳೆಯವರು, ನಿನ್ನ ಮೇಲೆ ತುಂಬಾನೆ ಜೀವ ಇಟ್ಟುಕೊಂಡಿದ್ದಾರೆ, ಅವರು ಹೇಗೆ ಹೇಳುತ್ತಾರೆ ಹಾಗೆ ಕೇಳಿಕೊಂಡು ಹೋಗು, ನಿನಗೇನೆ ಸಮಸ್ಯವಿದ್ದರೆ ನಿನ್ನ ಯಜಮಾನರ ಹತ್ತಿರ ಹೇಳಿಕೊ ಪದೆ ಪದೆ ನಿನ್ನ ಮನೆಯವರನ್ನ ನಿಮ್ಮ ಜಗಳದಲ್ಲಿ ತರಬೇಡ..,ನೀನು ಈಗಾಗಲೇ ಕೆಲವು ವಿಷಯಗಳನ್ನ ಹೇಳಿ ಅವರುಗಳು ಇವರ ದೊಡ್ಡವ್ವನವರಿಗೆ ಹೇಳಿದ್ದು ನಿನ್ನ ಯಜಮಾನರಿಗೆ ಬೇಸರ ಉಂಟು ಮಾಡಿದೆ ಇಂತಹ ಘಟನೆಗಳು ಮತ್ತೆ ಆಗದ ಹಾಗೆ ನೋಡಿಕೊ, ನಿಜ ಹೇಳಬೇಕೆಂದರೆ ನಿಮ್ಮ ಮನೆಯವರಿಂದ ಸ್ವಲ್ಪದಿನ ದೂರವಿರು, ಗಂಡನ ನೆಚ್ಚಿನ ಹೆಂಡತಿಯಾಗಲು ಪ್ರಯತ್ನಿಸು, ಅವನ ಪ್ರೀತಿ ವಿಶ್ವಾಸ ಗಳಿಸು ಬೆರೆಯರ ಬಗ್ಗೆ ಚಿಂತಿಸುವುದು ನಿನ್ನ ಕಾಯಗವಲ್ಲ,ಅವರವರ ಸಂಸಾರ ಅವರೇ ನೋಡಿಕೊಳ್ಳಬೇಕು. ಇಷ್ಟೆಲ್ಲಾ ಹೇಳಿದರು ಅವಳು ಒಂದು ಮಾತಿಗೂ ಸರಿ ಅಂತ ಹೇಳಲೇ ಇಲ್ಲ, ನನಗೆ ನಮ್ಮ ಮನೆಯವರನ್ನ ಬಿಟ್ಟು ಬದುಕಲು ಆಗುವುದಿಲ್ಲ ಅವರೇ ನನಗೆಲ್ಲಾ....ಅಂತಾ ಹೇಳುತ್ತಾಳೆ ಈ ಮಾತುಗಳನ್ನ ಕೇಳಿದ ಗಂಡನಿಗೆ ತಲೆಗೆ ಏರುತ್ತದೆ...ನೋಡಿರಿ ಇವಳ ಗರ್ವ...ಹೇಗೆ ಹೇಳುತ್ತಾಳೆ ಅಂತಾ, ಇವಳಿಗೆ ಗಂಡ ಇದ್ದರು ಸತ್ತರೂ ಏನು ಫರಕ್ ಬೀಳುವುದಿಲ್ಲ ಅಂತ ಹೇಗೆ ಹೇಳುತ್ತಾಳೆ ನೋಡಿ ಅಂದನು...ಪಾಪ ಅವರು ತಾನೆ ಏನು ಹೇಳ್ಯಾರು...ನೀನು ಹಿಂಗೆ ಆಡಿದರೆ ಸರಿ ಹೋಗುವುದಿಲ್ಲ, ನಿಮ್ಮ ಇಬ್ಬರ ಮನೆಕಡೆಯವರನ್ನ ಕೂಡಿಸಿ ಮಾತನಾಡಿ ಅಂತ ಹೇಳುತ್ತಾರೆ, ವಿಜಯನ ಹೆಂಡತಿ ಆಯ್ತು ನಾನು ಕರೆಸುತ್ತೇನೆ ಆದರೆ ನಾನು ಇವತ್ತು ಇಲ್ಲಿ ಇರುವುದಿಲ್ಲ...,ಏಕೆಂದರೆ ನನಗೆ ಇವನ ಮೇಲೆ ಭರವಸೆ ಇಲ್ಲ..ನಾನು ಇಲ್ಲೆ ಇದ್ದರೆ ನಾನೆ ಏನಾದರೂ ಮಾಡಿಕೊಳ್ಳಬಹುದು ಅಂತ ಧಮಕಿ ಹಾಕುತ್ತಾಳೆ.ಹಾಗಿದ್ದರೆ ಹೊರಬಿದ್ದು ಹೋಗು ಅಂತ ಹೇಳುತ್ತಾನೆ,ಅದಕ್ಕೆ ಅವಳು ನಗಲಾರಂಭಿಸುತ್ತಾಳೆ, ಇದನ್ನು ಕಂಡ ಗಂಡನಿಗೆ ಇನ್ನಷ್ಟು ರೇಗಿ ಹೋಗುತ್ತದೆ, ಸಿಟ್ಟು ತಾಳಲಾರದೆ ಒಂದು ಕೆನ್ನೆಗೆ ಬಾರಿಸುತ್ತಾನೆ...ಇವಳು ತನ್ನ ಮಾವನಿಗೆ ಎಲ್ಲಾ ತಯ್ಯಾರಿ ಮಾಡಿಕೊಳ್ಳಿ ಅಂತಾ ಪೋನು ಮಾಡಿ ಗಂಡನ ಮುಂದೆನೆ ಹೇಳುತ್ತಾಳೆ. ಇವಳು ಏನು ಹೇಳಿದಳು ಅನ್ನುವುದು ವಿಜಯನಿಗೆ ತಿಳಿಯದೇ ಹೋಯಿತು. ಅವತ್ತು ಅವಳು ತನ್ನ ತಾಳಿಯ ಬಿಚ್ಚಿ ಎಸೆದು ತನ್ನ ಕಪಟಿ ಮಾವನ ಮನೆಗೆ ಮತ್ತೆ ಮರಳುತ್ತಾಳೆ, ಹೋಗುವ ಮುನ್ನ, ತನ್ನ ಎಲ್ಲಾ ಸಾಮಾನುಗಳನ್ನು ತೆಗೆದುಕೊಂಡು ಹೋಗುತ್ತಾಳೆ, ಮುಂದೆ ವಾಪಸ್ಸು ಬರಬಾರದು ಎಂದುಕೊಂಡು... ಇವಳನ್ನ ಕರೆದು ಕೊಂಡು ಹೋಗಲಲು ಇವನ ಮಾವ ಇವಳ ಗೆಳತಿಯ ಮನೆಗೆ ಬಂದು ಕಾಯುತ್ತಿರುತ್ತಾನೆ. ಹೋಗುವ ಮುನ್ನ, ಇವನಿಗೆ ಒಂದು ಗತಿ ಕಾಣಿಸುತ್ತೇನೆ ಅಂತಾ ಹೇಳಿ ಹೋಗಿರುತ್ತಾನೆ, ಆದರೆ ಈ ವಿಷಯ ವಿಜಯನಿಗೆ ತಿಳಿದಿರುವುದಿಲ್ಲ...ಮತ್ತೆ ಎರಡು ತಿಂಗಳುವರೆಗೆ ಇವರಿಬ್ಬರ ನಡುವೆ ಯಾವುದೇ ಮಾತುಗಳು ನಡೆಯುವುದೇ ಇಲ್ಲ...ಹೀಗೆಯೇ ಸಂಬಂಧಗಳು ಹಳಿಸಿ ಹೋಗಲಾರಂಭಿಸಿದವು....ಹೆಣ್ಣಿನ ಮನೆಯವರು ಇದನ್ನ ಹೀಗೆ ಬಿಡಬಾರದು ಬೇಗ ಮಾತನಾಡಿ ಬೆಗೆ ಹರಿಸಬೇಕು ಅನ್ನುವ ಗೋಜಿಗೆ ಹೋಗುವುದಿಲ್ಲ.., ಸುಮ್ಮನೆ ಮನೆಯೊಳಗೆ ಇಟ್ಟುಕೊಂಡು ಅವಳ ಸಂಬಳವನ್ನು ಉಡಾಯಿಸುತ್ತಾ ಮಜಾ ಮಾಡುತ್ತಿರುತ್ತಾರೆ. ಗಂಡ ತಾನೆ ಹೆಂಡತಿಯ ಬಿಡಲಾರದೇ ಓಡಿ ಬರುವನು ಎಂದುಕೊಂಡು..... ಇವಳು ಮಾತ್ರ ತನಗೆ ಏನೂ ಆಗಿಲ್ಲ ಅನ್ನುವ ಹಾಗೆ ತನ್ನ ಮನೆಯವರ ಜೊತೆ ಸುಖವಾಗಿ ಇರಲಾರಂಭಿಸುತ್ತಾಳೆ.. ಯಾರಾದರೂ ಇಂತಹ ಮನೆಯವರನ್ನ ಹಾಗು ಗಂಡನನ್ನ ಬಿಟ್ಟು ತವರಿನಲ್ಲಿ ಕುಳಿತವರನ್ನ...ನೋಡಿದ್ದೀರಾ ಗೆಳೆಯರೆ...ಇವರ ಮದುವೆಯ ಹಿಂದಿನ ಉದ್ದೇಶ ಇನ್ನು ಮೇಲೆ ತಿಳಿಯುತ್ತದೆ.... ಈ ಮಧ್ಯದಲ್ಲಿ ಇವಳ ಆಫೀಸು ಲಿಲೆಗಳು ಶುರುವಾಗುತ್ತವೆ..... ಒಂದು ಮದುವೆ ಆದ ಹೆಂಗಸ್ಸು ಯಾವ ಮಟ್ಟಕ್ಕೆ ಇಳಿಬಹುದು ಅನ್ನುವುದು ಕಾದು ನೋಡಿ......(ಮುಂದುವರೆವುದು...)

Friday, March 01, 2013



ಸೌಂದರ್ಯತೆ

ಸೌಂದರ್ಯತೆ  ಎಂದಿಗೂ ಮುಖದಲ್ಲಿ ಬಿಂಭಿಸುವುದಿಲ್ಲ

ಅದು ಮನುಷ್ಯನ ಒಳ್ಳೆಯ ಗುಣ, ಕ್ರಿಯೆ,ಹಾಗು ಕರ್ಮಗಳಿಂದ ಗೋಚರಿಸುತ್ತದೆ. 
                                                                                                                       - ಭಾವಪಪ್ರಿಯ
खूबसूरती

खूबसूरती कभी भी शकल से नहीं पहचानी जाती है ..
जो अपने अच्छे काम और क्रिया  से जाने जाते है वोही सबसे  बडे खुबसूरत होते है !
                                                                                                                            - भावप्रिय
BEAUTY

BEAUTY IS NEVER JUDGED ON THE FACE
RATHER,
PEOPLE  ARE ADMIRED BY THE BEAUTY OF  THEIR HEART & BY GOOD DEEDS.
                                                                                                                         - Bhavapriya

THOUGHT FOR THE DAY


SOMETIMES WHILE DIGGING FOR GOLD, WE END UP WITH SCRAP IRON WHICH ARE HARD TO DIGEST

BUT, THESE ARE " THE LEARNINGS OF LIFE ".

BECAUSE GOD WANTS YOU TO DIG MORE DEEP & DEEPER WHERE U END UP WITH DIAMONDS,

THEN HE SMILES & SAYS " THATS WHAT YOU REALLY DESERVE "

ಕೊನೆಯೇ ಇಲ್ಲ

ನಿನ್ನ ಕಳ್ಳ ಹೆಜ್ಜೆಗಳ ಅರಿವು ನನಗುಂಟು,


ನಿನ್ನ ಕಾಮನ ಆಸೆಗಳಿಗೆ ಕೊನೆಯೇ ಇಲ್ಲ !

ಏಳ್ ಏಳು ಜನಮವವಿತ್ತರೂ ನೀ,

ನಿನ್ನ ಲಜ್ಜೆ ಜೀವಕೆ ಕೊನೆಯೇ ಇಲ್ಲ !

ಹಿತವಚನ

ಸಾವಿರ ಜನರ ರಕ್ತ ಕುಡಿದರೂ ನೀ ...ನಿನ್ನ ಸಾವು ಒಂದು ಚಪ್ಪಾಳೆಯಲ್ಲೇ..!

ಎಷ್ಟೇ ಜನರ ಲೂಟಿ ಮಾಡು ನೀ....ನಿನ್ನ ಕುತಂತ್ರ ಸ್ವಪ್ನ ಪಡೆಯುವುದಿಲ್ಲೆ..!

ಸಾವಿಗೆ ಕಿವಿ ಕೊಟ್ಟಾಗ..!

ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...