Friday, November 23, 2018

ಲೋಲಕ ತೂಗು ಗಡಿಯಾರ

ಸಮಯವೀಗ ಲೋಲಕ ತೂಗು ಗಡಿಯಾರ
ಅತ್ತಿಂದಿತ್ತ... ಇತ್ತಿಂದತ್ತ ತೊಳಲಾಡುತಿರಲು
ಕಾಲವೂ ಸರಿಯುತಿದೆ...
ಗುರುತಿಲ್ಲ ದಿಸೆಯಿಲ್ಲದೆ...
ಸಾಗಿಹೋಗುತಿಹೆವು ಪರಿವೆಯೇ ಇಲ್ಲದೆ.
ಗುರಿಯೇ ಇಲ್ಲದ ದಾರಿ
ಮುಂದೇನಿದೆ ಅರಿಯದಾಗಿದೆ..
ಕಾಲ ಹೇಗೆ ಕಳೆಯುತಿದೆಯೋ
ಹಗಲುರಾತ್ರಿಗಳು ಅದಲುಬದಲು
ನಿತ್ಯವೂ ಅದೇ ತೊಳಲಾಟ
ಲೋಲಕ ತೂಗು ಗಡಿಯಾರ !!

Tuesday, November 20, 2018

ನಮ್ಮಯ ಕನ್ನಡ


ಮೊಗ್ಗರಳಿ ಹೂವಾಗಲಿ ಕನ್ನಡ
ಎಲ್ಲರ ಮನದ ಮಗುವಾಗಲಿ ಕನ್ನಡ !
-----------------------------------

ಬೀಸುತ್ತಿರಲಿ ಮಿಡಿತದ ಗಾಳಿ ತಂಪು
ಪಸರಿಸಲಿ ಎಲ್ಲೆಡೆ ಕನ್ನಡದ ಕಂಪು !

Monday, October 29, 2018

ನಿನ್ನಿಂದಲೇ ಒಲವೇ

ನಿನ್ನಿಂದಲೇ ಒಲವೇ
ಕನಸ್ಸಿಂದು ನನಸಾಗಿದೆ
ಕಪ್ಪು ಬಿಳಿಯ ಚಿತ್ರಕ್ಕಿಂದು
ಬಣ್ಣಗಳು ಬಳಿದಂತಿದೆ

ನಿನ್ನಿಂದಲೇ ಒಲವೇ
ಕೊರೆಯುವ ಚಳಿಗಿಂದು
ಸೂರ್ಯನ ತಾಪ ತಾಕಿದಂತಿದೆ
ಕರಿಯಾದ ದಾರಿಗಿಂದು
ಹಿಮದ ಹಾಸಿಗೆ ಹಾಸಿದಂತಿದೆ

ನಿನ್ನಿಂದಲೇ ಒಲವೇ
ಗ್ರಹಣ ಹಿಡಿದ ಸೂರ್ಯನಿಗೆ
ಬೆಳಕು ಹರಿದಂತಾಗಿದೆ
ಕತ್ತಲೆಯ ಕರಾಳರಾತ್ರಿಗೆ
ಮುಂಜಾವಿನ ಸೊಬಗು ಮೂಡಿದಂತಿದೆ

***ಭಾವಪ್ರಿಯ***


Friday, June 29, 2018

ವರ್ಷಧಾರೆ

ಸರ-ಸರನೆ ಹರಿದು
ಬರುತ್ತಿರುವ ವರ್ಷಧಾರೆಗೆ
ಬೇಲಿಯ ಕಟ್ಟಲಾದೀತೆ....?
ನೀರು ತುಂಬಿ
ಹರಿಯುವ ನದಿಯನು
ಹರಿಯುವುದನ್ನು ನಿಲ್ಲಿಸಲಾದೀತೆ....?
ಒಲಿದು ಬಂದ ವರ್ಷಧಾರೆಗೆ
ಆದರಿಸಲೇಬೇಕು ನಾವು....
ಪ್ರಾರ್ಥಿಸಿ ಅದಕೆ
ಹರಿಸಲು ನಮಗೆ..!!
***ಭಾವಪ್ರೀಯ***

Monday, May 07, 2018

ಕನ್ನಡ ಕೊಲೆಗಡಕರು

ಬೇಂದ್ರೆ ಅಜ್ಜಾ ನಿನ್ನ ಕವನ
ವಾಚಿಸಿ ಖುಶಿ ಪಟ್ಟಿದ್ದೆ ನಾನು...
ಮತಿಗೆಟ್ಟ ರಾಜಕೀಯದವರು
ವಾಚಿಸಿ ನಿಮ್ಮ ಕವನವ ಅವಮಾನಿಸುತಿಹರು
ಕನ್ನಡ ಬಾರದ ಒಬ್ಬ ಮೂರ್ಖ
ತಾನು ಕನ್ನಡಿಗ ಎನ್ನುತಿಹನು
ಮತದ ಭಿಕ್ಷೆಗಾಗಿ ನಿಮ್ಮ ಕವನವ
ಹರಕು ಮುರುಕು ಮಾಡಿ ಹಾಡಿದನು
ಕೂಗಿ ಕೂಗಿ ಹೇಳಿದನು...
ಹುಚ್ಚು ಮಂಗ್ಯಾ ಹಂತವನು
ದೇಶಾನ ಆಳೊ ನೆಪದಾಗ
ನನ್ನ ಕನ್ನಡವನ್ನೇ ಕೊಂದನು...!

Friday, February 02, 2018

ಸುಗ್ಗಿ ಬಂತು ಸುಗ್ಗಿ


ರೈತನ ದುಡಿಮೆಗೆ
ಪುರ್ಸ್ಕಾರದ ಸುಗ್ಗಿ
ಹೊಲವ ಊಳಿದ ಎತ್ತುಗಳಿಗೆ
ಅಲಂಕರಿಸಿ ಮೆರವಣಿಗೆಯ ಸುಗ್ಗಿ
ಹಸಿರು ಪಸರಿಸಿದ ಪೈರಿಗೆ
ಕಾಳು ನವಿರೆರಿದ ಸುಗ್ಗಿ
ಶ್ರಮಪಟ್ಟ ಮನುಜನ ಬೆವರಿಗೆ
ಫಲ ತಂದಂತ ಸುಗ್ಗಿ
ಚಳಿಗೆ ಮರಗಿದ ಬೆಳೆಗೆ
ಕ್ರಾಂತಿಯ ಸೂರ್ಯನ ಸುಗ್ಗಿ
ಆಚರಿಸುವ ಬಾರಾ ಸುಗ್ಗಿ
ಸವೆದು ಸಿಹಿ ಹುಗ್ಗಿ

ಸುಗ್ಗಿ ಬಂತು ಸುಗ್ಗಿ

ಅವಳು ನನ್ನೋಳಗೆ..


ನನ್ನ ಹೃದಯದ ಹಣೆತೆಗೆ
ಅವಳೇ ಬೆಳಗುವ ದೀಪ
ನನ್ನ ಬಾಳ ಹಾಡಿಗೆ
ಅವಳದೇ ಪದಗಳ ಸ್ವರೂಪ
ನನ್ನ ಬಳಲಿದ ಕಣ್ಣುಗಳಿಗೆ
ಅವಳದೇ ನಿರಾಳದ ಲೇಪ
ನನ್ನ ಮನದ ಕಾರಂಜಿಗೆ
ಅವಳ ಪ್ರೀತಿಯೇ ಪ್ರೇರಕ
ನನ್ನ ಮಿಡಿವ ಚಿತ್ತಕೆ
ಅವಳ ಚಿಲಿಮೆಯೇ ಅನುರಾಗ
ಬಯಸಿದಂತೆ ಪಡೆದಿರುವೆ
ಕರುಣಿಸಿದಾತನು ಭಗವಂತ
ಇನ್ನೂ ಏನನ್ನೂ ನಾ ಒಲ್ಲೆ

ನನ್ನ ಮನೆ ಈಗ ಬೃಂದಾವನ 

Friday, January 12, 2018

ಹೊಸದು

ಬದಲಾದ ವಸಂತ
ಈ ವರುಷ ಹೊಸದು
ಈ ಬದುಕು ಹೊಸದು
ಹೊಸದೊಂದು ಕಟ್ಟಿ ಕನಸ್ಸು
ಬೆಳಕಿನೆಡೆಗೆ ಸಾಗುವ ಹುರುಪು ನನ್ನದು !

Wednesday, January 03, 2018

ಮೂಢೆ

ಅವಳಿಗೇಕೋ ಅನುಮಾನ
ದೊರೆತಿರುವ ಪ್ರೀತಿ ವಿರಳ..
ಅವಳಿನ್ನೂ ಮೂಢೆ,
ಅರೆತಿಲ್ಲವಳು ಅವನ ಪ್ರೀತಿಯ ಆಳ !!

Tuesday, January 02, 2018

ಚುಟುಕ

ನಾ ಏನೇ ಹೇಳಿದರೂ
ಅಂತಾಳ ನಾ ಒಲ್ಲೇ,... ನಾ ಒಲ್ಲೇ..!
ಬಯಸದೇ ನೀಡುವಳು
ಕೆನ್ನೆಯ ಮೇಲೆ ನಗುವ ಮೊಲ್ಲೆ..!!

ಸಾವಿಗೆ ಕಿವಿ ಕೊಟ್ಟಾಗ..!

ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...