Posts

Showing posts from October, 2008

ಚಳಿಯ ಜಳಕ

ಥಂಡಿಯ ಚಳಿಯಲ್ಲಿ ಬಿಸಿ ನೀರಿನ ಜಳಕ
ಮೈಯ್ಯ ಮೇಲೆ ಅರವಿ ಇಲ್ಲದೆ ನಡುಕ
ಕತ್ತಲೆಯ ಕಣ್ಣ ಅರಸಿ ಮೆತ್ತನೆಯ ತುಟಿಯ ಬಳಸಿ
ಎದೆಯ ದಿಬ್ಬಗಳ ಮೇಲಿಂದ ಹಾರಿ ಹೊಕ್ಕಳ ತಗ್ಗು ತುಂಬಿ
ಅಂಕು ಡೊಂಕು ನಾಜೂಕಿನ ಹರ ದಾರಿ ದಾಟಿ
ದಟ್ಟ ಕಾಡಿನ ತಗ್ಗು ಕಣಿವೆಯ ಮಾಚಿ
ಬಿಸಿಯ ಹನಿಗಳು ತನು ಸವರಿ ಜಾರಿವೆ
ಆ ಬಿಸಿ ಹನಿಗಳು ಮತ್ತಷ್ಟು ಕಾವೇರಿ ಹರೆದಿವೆ

ಹಿತ್ತಾಳೆಯ ಹಣತೆ

ಆಗಸಕ್ಕೆ ಸೂರ್ಯನ ಕಿರಣಗಳೇ ಚೆನ್ನ,ಧರೆಯ ಮೈಸಿರಿಗೆ ಹಸಿರು ಬಣ್ಣ,ತಂಪನೆಯ ಮುಂಜಾವಿಗೆ ಹಕ್ಕಿಯ ಕವನ,ದೀಪಾವಳಿಯ ಮುಸ್ಸಂಜೆಗೆ ದೀಪಳ ಹವನ,ಇಷ್ಟಪಟ್ಟು ಪಡೆದು ಕೊಂಡರೆ ಮನಸ್ಸುಗಳಿಗೆ ಭೂಷಣ,ಅಪರಂಜಿ ಮೆಟ್ಟಿ ಮಿಂಚಿನ ಮಾನಹರಣ,ಬೆಲೆಯ ಮೆಟ್ಟಿಲ ಹತ್ತಿ......... ಕೊಂಡಂತೆ,ಚಿನ್ನದ ದೀಪಗಳಿಗಿಂತ..., ಹಿತ್ತಾಳೆಯ ಹಣತೆಯೇ ಮೆರೆದಂತೆ .