ಚಳಿಗಾಲ

ಲೇಖನಿಗೂ ಇಂದು ತಟ್ಟಿದೆ,
                                    ಚಳಿಯ ತಂಪು
ಮರಗಟ್ಟಿರುವುದು ನನ್ನ,
                                    ಲೇಖನಿಯ ಇಂಕು !

ವಿರಹದ ಬೇಗೆ

ಹನ್ನೆರಡು ಗಂಟೆಗಳ ವಿರಹದ ಒಪ್ಪುಗೆಗೆ..
ಬಯಸುತ್ತಾಳೆ ಮಡದಿ ಬಿಗಿಬೆಚ್ಚನೇಯ ಅಪ್ಪುಗೆ !!

ಸಂಜೆಯ ಸೂರ್ಯ

ಹೊಸ್ತಿಲಲ್ಲಿ ನಿಂತು...
ದಿನವಿಡೀ ಕಾಯುವ ಕಣ್ಣುಗಳಿಗೆ,
ಸಂಜೆಯ ಸೂರ್ಯ,
ನೀಡುವನು ತುಟಿಗಳಿಗೆ ನಿರಾಳದನೆಗೆ !!

ಉಸಿರುಸಿರಲಿ ಕನ್ನಡ

ಕನ್ನಡವೇ ಹಗಲು
ಕನ್ನಡವೇ ಇರುಳು
ಕನ್ನಡವೇ ಎಲ್ಲಕ್ಕಿಂತ ಮಿಗಿಲು !

ಕನ್ನಡಿಗನ ಪಣ
ಕನ್ನಡವೇ ಪ್ರಾಣ
ಕನ್ನಡಿಗನೇ ಸಾರ್ವಭೌಮ !!

ಕನ್ನಡ

ನನ್ನ ಜಾತಿ ಕನ್ನಡ
ನನ್ನ ಧರ್ಮ ಕನ್ನಡ
ಕನ್ನಡವೇ ನನ್ನ ಮೆರಗು
ಕನ್ನಡವೇ ನನ್ನ ಕುರುಹು.

ನಿಮ್ಮ ಆಯ್ಕೆ.. ?

ಹಸಿದವರಿಗೆ ಅನ್ನ ಹಾಕಿ
ಬಡವರ ಬವಣೆಯ ನೀಗಿಸುವನೊಬ್ಬ

ರಾಜ್ಯವನ್ನು ಸುವರ್ಣವಾಗಿಸುವ ಸುವಿಚಾರಿ
ಪ್ರಜೆಗಳಿಂದ ಪ್ರಜೆಗಳಿಗಾಗಿ ದುಡಿಯುವನೊಬ್ಬ

ಬತ್ತ ಬಿತ್ತು ಬೆವರುಳಿಸಿದವ
ರೈತ ಬಾಂದವರ ಕಣ್ಣಾಗಿದವನೊಬ್ಬ

ವಿಧ್ಯಾವಂತರನ್ನು ಸುಳ್ಳಿನ ಸುಳಿಯಲ್ಲಿ ನೂಕಿ
ಕಾಣದ ಪ್ರಗತಿಯನ್ನು ಮಾಡಿದೆ., ಎಂದು ಮೂಢರನ್ನಾಗಿಸಿದವನೊಬ್ಬ
  

ಕನ್ನಡ ಕನ್ನಡ ಕನ್ನಡ,.............. ಕನ್ನಡ...!!!

ಅಚ್ಚ ಕನ್ನಡ
ಸ್ವಚ್ಚ ಕನ್ನಡ
ತನು ಕನ್ನಡ
ಮನ ಕನ್ನಡ
ಆಡು ಕನ್ನಡ
ಹಾಡು ಕನ್ನಡ
ಕುಣಿ ಕನ್ನಡ
ನಲಿ ಕನ್ನಡ
ಹಸಿರು ಕನ್ನಡ
ಉಸಿರು ಕನ್ನಡ
ನುಡಿ ಕನ್ನಡ
ನಡೆ ಕನ್ನಡ
ಬಳಿಸು ಕನ್ನಡ
ಉಳಿಸು ಕನ್ನಡ
ಹುಟ್ಟು ನಾಡು ಕನ್ನಡ
ಎದೆತಟ್ಟಿ ಹೇಳು ಕನ್ನಡ

ಆ ನಗೆಗೆ...ಯಾರದ್ದೋ ನೆನಪು ಕಾಡಿದಾಗ
ಯಾವದ್ದೋ ಖುಶಿ ಉಲ್ಬಣಿಸಿದಾಗ
ಎದೆಯಲ್ಲಿ ಪ್ರೀತಿ ಉಕ್ಕಿದಾಗ
ಮತ್ತೆ ಮತ್ತೆ ಆ ನೆನೆಪು ನೆನೆಸಿಕೊಂಡಾಗ.....
ಅಲ್ಲೇ ಹುಟ್ಟುವುದಲ್ಲವೆ.. ಅದುವೆ ಮುಗುಳು ನಗೆ. 

ಮುಂಗಾರು


ನೀಲಿ ರಂಗಿನ ಸೀರೆ
ಬಂಗಾರದ ಜರದ ಧಾರೆ
ಮೈಮೇಲೆ ಹೊದ್ದ ಬಾಲೆ
ಮನವ ಕದ್ದಳು ಚಲುವೆ
ಒಲವು ಚಿಗುರಿತು ಅಲ್ಲೆ
ಎದೆಯಲ್ಲಿ ಇನ್ಮೇಲೆ...
ಶುರು ಮುಂಗಾರು ಮಳೆ !!
----ಭಾವಪ್ರೀಯ----

ಅವಳ ಮುಂಗುರುಳು

ಪ್ರೀಯೇ ನಿನ್ನ ಮುಂಗುರುಳು
ಹಣೆಯ ಮುತ್ತಿಕ್ಕುವ ರೀತಿ..!
ಆಗಬಯಸುವೆ ಆ ಮುಂಗುರುಳು
ಸದಾ ಜೊತೆಗಿದ್ದು, ಹರಿಸುವೆ ಪ್ರೀತಿ !!

ಕಿವಿ ಮಾತು

ಗಂಡ ಹೆಂಡಿರ ಜಗಳ
ಇಬ್ಬರೂ ಒಂದಾಗುವ ತನಕ
ಇಬ್ಬರಿಗೂ ಒಂದಾಗುವ ತನಕ !!

ನಾ....ನಿನ್ನ..!!


ನೀ ಸಿಡುಕಿ ನಿಂತರೇ ನಾ ಅಪ್ಪುವೆನು
ನೀ ಮೌನತಾಳಿದರೇ ನಾ ಮಾತು ಮೆರೆವೆನು
ನೀ ಕೋಪವಿತ್ತರೇ ನಾ ಪ್ರೀತಿಸುವೆನು
ನೀ ದೂರುವ ದಡವಾದರೂ ನಾ ನಿನ್ನ ಬಿಡೆನು
ಸಮುದ್ರದ ಅಲೆಗಳಂತೆ.., ಮತ್ತೆ ಮತ್ತೆ ನಿನ್ನನ್ನೇ ಮುತ್ತುವೆನು !!

ಹಿಮದ ನೆನಪು

ಬಿಸಿಲ ಬೆಳಕಿನಲ್ಲೂ ನಡುಗುವ ಚಳಿ,
ಮಣ್ಣು ಕಾಣುವುದಿಲ್ಲ, ಬರೀ ಹಿಟ್ಟು ಚೆಲ್ಲಿದ ನೆಲ..
ಇಡೀ ಊರೆಲ್ಲಾ ಶುಭ್ರ ಬಿಳಿ ವರ್ಣಮಯ..
ಮೊದಲ ಹಿಮ ನೆನಪು ಎಂದೆಂದಿಗೂ ಚಿರನೂತನ..!

ಆಶಯ


ಚಳಿಗಾಲಕ್ಕೆ ಹೋಗುವ ಅವಸರ
ಅದಕ್ಕೆ ಮಾಯವಾದ ಬಹುಬೇಗ ಸರಸರ
ಬೇಸಿಗೆಯೂ ಬೇಗ ಕಳೆಯಲಿ..
ಮೇಘ ಕವಿದು ಬಹುಬೇಗ ಮಳೆಗರೆಯಲಿ
ಸಂತಸದೀ ಮತ್ತೆ ಕಾವೇರಿ ತುಂಬಿ ಹರಿಯಲಿ.

ವರ್ಷಧಾರೆ

ಸರ-ಸರನೆ ಹರಿದು ಬರುತ್ತಿರುವ ವರ್ಷಧಾರೆಗೆ ಬೇಲಿಯ ಕಟ್ಟಲಾದೀತೆ....? ನೀರು ತುಂಬಿ ಹರಿಯುವ ನದಿಯನು ಹರಿಯುವುದನ್ನು ನಿಲ್ಲಿಸಲಾದೀತೆ....? ಒಲಿದು ಬಂದ...