ಕಥೆ (ಎಲ್ಲ ಕಥೆಗಳ ಹಿಂದಿನ ಕಹಿ ಸತ್ಯಗಳು ) - 14

( ಮುಂದುವರೆದಿದೆ ..... ) " ಮದುವೆ " ಎಂಬ ಸಂಚಿನ ನಾಟಕ , ಈ ನಾಟಕಕ್ಕೆ ಸೂತ್ರ ಹಾಗು ಪಾತ್ರಧಾರಿಗಳು

ಹುಡುಗಿ : ಅತೀ ಆಸೆಯ ಹುಳು . ಹಣ ಐಶ್ವರ್ಯಕಕ್ಕಾಗಿ ಯಾರ ಜೊತೆಯಾದರೂ ಅಡ್ಜಸ್ಟ್ ಮಾಡಿಕೊಳ್ಳುವ ಕುತಂತ್ರ ಮೇಧಾವಿ . ತನ್ನ ಸೌಂದರ್ಯವನ್ನು ಬಂಡವಾಳವನ್ನಾಗಿಸಿ ಕೊಂಡವಳು.ಚಾಲಾಕಿ ,ಯಾವಗಲೂ ಮೇಕಪ್ಪು ಮಾಡಿಕೊಳ್ಳುತ್ತಾ ಹೊಸ ಹೊಸ ತಂತ್ರ ಹೂಡಿ ಹುಡುಗರ ಮೋಸ ಮಾಡುವ ಒಬ್ಬ ವಿದ್ಯಾವಂತ ಮೋಸಗಾರ್ತಿ .ಮದುವೆ ಎಂದರೆ ಇವಳಿಗೆ ಉಚಿತವಾಗಿ ಸಿಗುವ ಒಂದು ಗಂಡು ,ಇವಳ ಬೇಡಿಕೆಗಳನ್ನ ಇಡೇರಿಸುವ ಒಂದು ಪ್ರಾಣಿ. ಇವಳ ಸ್ವೆಛ್ಚಾಚಾರದ ಬದುಕಿಗೆ ಯಾವ ಗಂಡು ಅಡ್ಡಬರಬಾರದು. ಒಟ್ಟಿನಲ್ಲಿ ಕಾಲೇಜು ಮೆಟ್ಟಿಲು ಏರುವ ಮುಂಗಡವಾಗಿ ಎಲ್ಲಾ ಅನುಭವಿಸಿದವಳು.

ಮಾವ : ಒಬ್ಬ ಅಕ್ಕನ ಮಗಳನ್ನು ಮೋಹಿಸಿ ಅವಳು ಕೈ ಕೊಟ್ಟಾಗ ಮತ್ತೊಬ್ಬ ಮಗಳನ್ನು ನೇಮಕಕ್ಕೆ ಮದುವೆಯಾಗಿ ಕಥಾನಾಯಕಿ (ಹುಡುಗಿ)ಯನ್ನು ಅನುಭವಿಸುತ್ತಾ , ತನ್ನ ಕಣ್ಣ ಮುಚ್ಚಾಲೆ ಆಟವಾಡುವವ. ಹೃದಯಾಘಾತದ ನಾಟಕ ಮಾಡುತ್ತಾ , ತಲೆ ಹಿಡಿಯುವ ಕೆಲಸ ಮಾಡುವವ. ಎಲ್ಲಿ ಎಂಜಲು ಸಿಕ್ಕರೂ ನೆಕ್ಕುವ ನಾಯಿ.

ಜಿದ್ದಿಬಾಯಿ : ಹುಡುಗಿಯ ತಾಯಿ , ಮಗಳು ಮದುವೆ ಬೇಡವೆಂದರೂ ಬೆದರಿಸಿ ಹಣಗಳಿಸುವುದಕೋಸ್ಕರ ಸಂಚು ರಚಿಸಿದವಳು. ಇವಳು ಅಂದುಕೊಂಡಿದ್ದು ಮಾಡಲಿಕ್ಕೆ ಇವಳು ಕೂಡಾ ಎಲ್ಲರ ಜೊತೆ ಅಡ್ಜಸ್ಟ್ ಮಾಡಿಕೊಳ್ಳುತ್ತಾ ಸಮಯ ಸಾಧಿಸುವ ಸಮಯಸಾಧಕಿ. ತನ್ನ ಹಠಕ್ಕೊಸ್ಕರ ಹೆತ್ತ ಮಕ್ಕಳನ್ನು ಧಂದೆಗೆ ಬಳಿಸುವವಳು. ಇವಳ ಆಟಕ್ಕೆ ಒಬ್ಬ ಪೋಲಿಸು, ಒಬ್ಬ ಸಂಬಂಧಿ ರೌಡಿ. ಗಂಡ ಕಳೆದುಕೊಂಡ ಮುಂಡೆ ಸಿಕ್ಕ ಜನರನ್ನೆಲ್ಲಾ ಮಕ್ಕಳ ತಂದೆ ಎನ್ನುವಳು.

ಓದುಗರಿಗೆ ನೀತಿ : ಈ ಕಥೆಯಿಂದ ತಿಳಿದುಕೊಳ್ಳ ಬೇಕಾಗುವ ಸತ್ಯಗಳೆಂದರೆ , ಮದುವೆ ಮಾಡಿಕೊಳ್ಳುವ ಮುನ್ನ ಗಂಡಾಗಲಿ ಹೆಣ್ಣಾಗಲಿ ಅವರ ಮನೆಯ ಹಾಗು ಮನೆತನದ ಬಗ್ಗೆ ಕುಲಂಕುಶವಾಗಿ ತಿಳಿದುಕೊಳ್ಳಲು ಪ್ರಯತ್ನಿಸಿ , ಅನುಮಾನಗಳು ಉಂಟಾದಲ್ಲಿ ತಡೆದು ಸ್ವಲ್ಪ ಯೋಚಿಸಿ, ಆತುರತೆಯಲ್ಲಿ ಯಾವುದೇ ಸಂಬಂಧಗಳನ್ನು ಒಪ್ಪಿಕೊಳ್ಳಬೇಡಿ. ಎದುರಾಳಿಯ ಮಾತುಗಳು ನಂಬಲು ಸಾಧ್ಯವೋ ಇಲ್ಲವೋ , ಕಣ್ಣೀರು ಸುರಿಸಿ ಮೋಸ ಮಾಡುವವರು ಈ ಜಗದಲ್ಲಿ ಕಡಿಮೆ ಇಲ್ಲಾ , ಇಂತಹ ಸಮಾಜ ಘಾತಕ ಹುಳುಗಳಿಂದ ಎಚ್ಚರವಾಗಿರಿ. ಬಡವರು , ಗಂಡ ಸತ್ತವರು ಅನ್ನುವ ಕರುಣೆ ಇದ್ದಾರೆ ಭಿಕ್ಷೆ ಹಾಕಿ ಮುನ್ನಡೆಯಿರಿ. ಅನುಕಂಪ ಹೊತ್ತು ಎಂದಿಗೂ ಒಬ್ಬರ ಬಾಳು ಬೆಳಗಿಸಲು ಹೋಗಬೇಡಿ. ಈ ಕಥೆಯು ಎಲ್ಲ ವಿಜಯನಂತಹ ಮುಗ್ಧ ಜನರಿಗೆ ಒಂದು ಎಚ್ಚರಿಕೆಯ ಗಂಟೆ ಎಂತಿರಲಿ . ಇಷ್ಟು ದಿನ ಕಥೆಯನ್ನು ಚಾಚುತಪ್ಪದೆ ಆಲಿಸಿದ ತಮಗೆ ಹೃತ್ಪೂರ್ವಕ ಧನ್ಯವಾದಗಳು.ಮತ್ತೆ ಒಂದು ಹೊಸ ಕಥೆಯೊಂದಿಗೆ ಬರುತ್ತೇನೆ ಅಲ್ಲಿಯವರೆಗೂ ಬ್ಲಾಗ್ ನ ಅನ್ಯ ಬರಹಗಳನ್ನ ಓದುತ್ತಾಯಿರಿ. 
      

No comments:

ವರ್ಷಧಾರೆ

ಸರ-ಸರನೆ ಹರಿದು ಬರುತ್ತಿರುವ ವರ್ಷಧಾರೆಗೆ ಬೇಲಿಯ ಕಟ್ಟಲಾದೀತೆ....? ನೀರು ತುಂಬಿ ಹರಿಯುವ ನದಿಯನು ಹರಿಯುವುದನ್ನು ನಿಲ್ಲಿಸಲಾದೀತೆ....? ಒಲಿದು ಬಂದ...