ನಲ್ಲ ನಿನ್ನ ಬಾಹುಗಳಲಿ ಒರೆಗಿಸಿಕೋ ಎನ್ನ ಅಂದಳು  ನಲ್ಲೆ  


ಪ್ರೀತಿಯಿಂದ ಎದೆಗೊತ್ತಿದೆ ಅವಳ ಮೊಗವ, ಚುಚ್ಚಿತು ಅವಳ ಕಿವಿ ಓಲೆ

ತಿಳಿಯದೇ  ಆದ ತಪ್ಪು ಎಂದು ಊಹಿಸಿ , ಕ್ಷಮಿಸಿ ಮುನ್ನಡೆದೆ

ಅಂದು ಚುಚ್ಚಿದವಳು ...ಇಂದು ಇರಿದಿರಿದು ಮಾಡಿಹಳು  ನನ್ನ ಕೊಲೆ .

ಪ್ರೀತಿ


ಇಣುಕಿ ನೋಡು ಹೃದಯದ ಕಿಟಕಿ

ಬೆಚ್ಚಗೆ ಮಲಗಿಹುದು ಪುಟ್ಟ ಪ್ರೀತಿಯ ಹಕ್ಕಿ

ಕಣ್ಣುಗಳ ತೆರೆದು ಪಿಳಿ ಪಿಳಿ

ಅವಿತಿರುವುದು ಗೂಡ ಮರೆಯಲಿ

ಜಗದ ಪರಿವಿಲ್ಲದ ಅದಕೆ

ನವ ಕನಸುಗಳದೇ ಭರಾಟೆ

ರೆಕ್ಕೆಗಳ ಬಿಚ್ಚಿ ಪಟ ಪಟನೆ

ಹಾರಿ ಸೇರಬೇಕೆನ್ನುವ ಒಲವಿನ ಅರಮನೆ . 

ಹೊಸದು

ಬದಲಾದ ವಸಂತ ಈ ವರುಷ ಹೊಸದು ಈ ಬದುಕು ಹೊಸದು ಹೊಸದೊಂದು ಕಟ್ಟಿ ಕನಸ್ಸು ಬೆಳಕಿನೆಡೆಗೆ ಸಾಗುವ ಹುರುಪು ನನ್ನದು !