Friday, December 13, 2013

ಸರ್ವಜ್ಞನ ವಚನಗಳು

ಅತ್ತಿ ಮರಕರಳಿಲ್ಲ ಕತ್ತೆಗಂ ಕೋಡಿಲ್ಲ


ಹತ್ತಿಯಾ ಹೊಲಕೆ ಗಿಳಿಯಿಲ್ಲ ಸೂಳೆಗಂ

ಸತ್ಯವಿಲ್ಲೆಂದ ಸರ್ವಜ್ಞ

(ತಾತ್ಪರ್ಯ : ಅತ್ತಿಯಮರದಲ್ಲಿ ಹೂಗಳು ಆಗುವದೇ ಇಲ್ಲ. ಕತ್ತೆಗೆ ಕೋಡುಗಳು ಇರುವದಿಲ್ಲ. ಹತ್ತಿಯ ಹೊಲದಲ್ಲಿ ಗಿಳಿಗಳು ಬರುವದಿಲ್ಲ.ಸೂಳೆಯಲ್ಲಿ ಸತ್ಯತನವೇ ಇರುವದಿಲ್ಲ)

Wednesday, December 11, 2013

ತಾಳಿ ಎಂದರೆ...

ಕೆಲವರಿಗೆ ,

ಅದು ಪವಿತ್ರ ಬಂಧನ

ಹೆಣ್ಣಿಗೆ ಭೂಷಣ

ಸೌಭಾಗ್ಯವತಿಯ ಆಭರಣ

ನಿತ್ಯವೂ ಕಣ್ಣಿಗೊತ್ತಿ ಅದನ್ನ

ದೇವರ ನೆನೆಯುವುದು ಮನ !

ಇನ್ನೂ ಕೆಲವರಿಗೆ,

ಒಂದು ಕುತ್ತಿಯಲಿ ತೂಗುವ ಸರ

ಪಡ್ಡೆ ಹೈಕಳ ದೂರವಿರಿಸುವ ದಾರ

ಸ್ವೇಚ್ಛಾಚಾರಕ್ಕೆ ಸಿಕ್ಕ ಪರಿಹಾರ

ಹಾದರವ ಮುಚ್ಚಿಡವ ಅಮೃತ ಸಾಗರ

ಆಧುನಿಕತೆ ಹೆಸರಲ್ಲಿ ನಡೆಸೊ ವ್ಯಭಿಚಾರ !!

ಮಧುರ ಕ್ಷಣಗಳು


ಕೇಶಗಳ ಮರೆಯಲ್ಲಿ ಅವಳ ನಗು

ಹಿಂತಿರುಗದೇ ನನ್ನರಸುವ ಅವಳ ಕಣ್ಣು

ಕೈಗಳಲ್ಲಿ ಸವರಿಸುತ್ತ ಅವಳ ಮಂಗುರುಳು

ನೆನ್ನೆ ಅವಳು ಕೊಟ್ಟ ಈ ಸವಿ ಕ್ಷಣಗಳು

ರಾತ್ರಿಯೆಲ್ಲಾ ನಿದಿರೆ ಬರದೇ ಕಾಡಿದವು !!

Monday, December 09, 2013

ಸುಮ್ -ಸುಮ್ನೆ

ನೋಡು ನೋಡುತ್ತಲೇ ನಿನ್ನ

ಹೃದಯಕ್ಕೆ ಹಾಕಿಬಿಟ್ಟಿಯಲ್ಲೇ ಕನ್ನ

ಲೂಟಿಯಾಗಿ ಹೋಯ್ತು ಮನ

ಎಷ್ಟೇ ಧನವಿದ್ದರೇನು ಚೆನ್ನ

ನಾನಾದೆನು ತೀರಾ ಬಡವ,

ನೀನಿಲ್ಲದೇ ಹೇಗೆ ಚಿನ್ನ ?

ಸಾಗಿಸಲಿ.. ಬಡಪಾಯಿಯ ಜೀವನ !!

Friday, December 06, 2013

ಅಂತ್ಯ

ಅವಳೊಂದು ಪೂರ್ಣಗೊಳ್ಳದ ಕಾವ್ಯ

ಸಾರ್ಥಕತೆಯ ಪಡೆಯದ ಅಧ್ಯಾಯ

ಗಂಡಿನ ಆಶ್ರಯ ತಿರ್ಸ್ಕರಿಸಿದ ವಿಧವೆ

ಅವಳ ಅಂತ್ಯ..., ಅನಾಥ ಶವವೇ !!

Tuesday, November 26, 2013

ಮೂಢ

ನಾರಿಯ ಒಲಿಸಲು ಹೊರಟವನು

ಹಾಕುವನು ಬಟ್ಟೆಗೆ ಇಸ್ತರಿ !

ತಿಳಿಯದ ಮೂಢ ಇವನು....

ಅವಳು ಒಲಿದರೆ, ಇವನ ಜೇಬಿಗೆ ಕತ್ತರಿ.!!

Wednesday, November 20, 2013

ಶ್ರೀಮಂತಿಕೆ

ಇಣುಕಿ ನೋಡದಿರಿ ಹುಡುಗಿಯರೇ
ಹುಡುಗನ ಶ್ರೀಮಂತಿಕೆ ಜೇಬಿನೊಳಗೆ..!
ನಿಜ ಪ್ರೀತಿಯ ಬಯಸಿದರೆ
ತಪ್ಪದೇ ಇಣುಕಿರಿ ಹೃದಯದೊಳಗೆ...!!

ಮೌನ ಪ್ರೀತಿ

ಕಣ್ಣ ನೋಟದಲ್ಲೇ ಆಕರ್ಶಿತರಾಗಿ
ನಿತ್ಯ ಭೇಟಿಯ ಸವಿಯು ತಾಕಿ
ಮೌನದಲ್ಲೇ ಪ್ರೀತಿ ಹುಟ್ಟಿ
ಭಾವನೆಗಳ ಬುತ್ತಿ ಕಟ್ಟಿ ,
ಬಿನ್ನಹಿಸಲಿಲ್ಲ ಇಬ್ಬರೂ, ವರುಷಗಳೇ ಕಳೆದರೂ
ಇನ್ನೂ ಅಚ್ಚಳಿಯಾಗಿಯೇ ಉಳಿದಿದೆ.. ಅವರ ಹೃದಯದೊಳು !!

ಅವನಿತ್ತ ಮುತ್ತು

ನಲ್ಲ, 
ನೀನಿತ್ತ ಮುತ್ತಿನಲ್ಲಿ ಏನಿತ್ತೋ ಗಮತ್ತು
ಆ ಕ್ಷಣವ ನೆನೆದರೆ ಇವತ್ತೂ
ಮತ್ತೆ ಮತ್ತೆ ಆ ಸಿಹಿಮುತ್ತು.., ಬೇಕೆನಿಸಿತು !!

Monday, November 11, 2013

ಕಾವ್ಯವಾಹಿನಿ

ಅವಳೊಬ್ಬ ಗುಪ್ತ ಅಭಿಮಾನಿ

ಆಲಿಸಿ ನನ್ನ ಕಾವ್ಯವಾಹಿನಿ

ಚೆಲ್ಲಿರುವಳು ನಗೆಮಲ್ಲಿಗೆಯ ಹನಿ

ಅವಳೇ ನನ್ನಕಾವ್ಯ.., ನಾ ಅವಳ ಪ್ರೇಮಿ !!

ವಿಪರ್ಯಾಸ

ಹೆಂಡತಿಯ ಹುಚ್ಚು ಹುಡುಗಾಟಕ್ಕೆ

ಗಂಡ ಹಾಕಿದ ಬ್ರೇಕು

ನಿಲ್ಲಲಿಲ್ಲ ಅವಳ ಸೊಕ್ಕು

ಹಳಿ ತಪ್ಪಿದ ಅವರ ಬದುಕು

ಮುನ್ನುಗ್ಗಿ ಹಾದಿ ತಪ್ಪಿತು !!

ಚಳಿ

ಆಹಾ..!! ಬಿಸುತಿಹುದು ತಂಪು ತಂಗಾಳಿ

ಸಣ್ಣದಾಗಿ ಶುರುವಾಗಿದೆ ಮಾಗಿಯ ಚಳಿ

ಕಳಚಿಬಿಡು ವಿರಹಗಳ ಸರಪಳಿ

ಓ ಪ್ರೀಯೆ ಈಗಲಾದರೂ..., ಕಂ (Come) ....ಬಳಿ !!

Wednesday, November 06, 2013

ಕಿಡಿನುಡಿ

ಗಂಡನಿಂದ, ಮುಕ್ತಿ ಸಿಕ್ಕ ಸೂಳೆಗೆ...
ರಾತ್ರಿ ಗೆಳೆಯನ ಸೇರುವ ಖುಶಿ !!

Sunday, November 03, 2013

ರಾಜ್ಯೋತ್ಸವ

ನವೆಂಬರ್ ತಿಂಗಳಿಗಷ್ಟೇ ಆಚರಿಸುವುದಿಲ್ಲ ನಾನು, ರಾಜ್ಯೋತ್ಸವ !
ನಿತ್ಯವೂ ಕುಣಿಯುತ್ತವೆ ಕನ್ನಡ ಪದಗಳು ನನ್ನ ಕೈ ಅಡಿಯಲ್ಲಿ
ಅದರಿಂದಲೇ ವರ್ಷ ಉದ್ದಕ್ಕೂ ಕನ್ನಡದ ನಿತ್ಯೋತ್ಸವ !!

ಜೀವನ ಜ್ಯೋತಿ

ನಾನು ನೀನು ಸೇರಿ ಜೋಡಿ ಬತ್ತಿ 
ನಮ್ಮಿಬ್ಬರ ಪ್ರೀತಿಯ ಚಿಲುಮೆ ಹೊತ್ತಿ
ಪರಿಮಳ ಹರಡಿವೆ ಎರಡು ಊದಬತ್ತಿ
ಬೆಳಗುತ್ತಿರಲಿ ನಮ್ಮ ಜೀವನ ಜ್ಯೋತಿ !!

ಜ್ಯೋತಿ

ನಿನ್ನ ಒಂದು ಕಿರು ನಗೆಯ ಪ್ರೀತಿ
ಬೆಳಗಿಸಿತು ನನ್ನ ಹೃದಯದ ಜ್ಯೋತಿ !!

Tuesday, October 29, 2013

ಎಂದೋ ಉದುರಿದ ಕಂಬನಿಗಳಿಗೆ ಬೆಲೆ ಬಂದೀತೆ ?

ಬಿದ್ದ ಕ್ಷಣವೆ ಅದು ಒಣಗಿ ಹಳಕುಪ್ಪಾಯಿತು

ಮಳೆ ಬಂದೊಡನೆ ಮತ್ತೆ ಕರಗಿ ಹೋಯ್ತು

ಹರಿದು ಭೂಮಿಯೊಳಗೆ ಸಮಾಧಿ ಸೇರಿತು ...

ಇನೆಲ್ಲಿಯ ಬೆಲೆ ಆ ಕಂಬನಿಗಳಿಗೆ...??


ದುಃಖ ಉಮ್ಮಳಿಸಿ ಬಂದ ಕಂಬನಿಗಳಲ್ಲ ಅವು..

ಕಪಟತನದಿಂದ ಗೆಲ್ಲಲು ಹೊರಟ ಮೊಸಳೆ ಕಣ್ಣೀರು

ಗಳಗಳನೆ ಸುರಿದೊಡೆ ಮನವು ಕರಗದು

ಗೀಳಲ್ಲ ಅದು, ಬರೀ ಟೊಳ್ಳು..ಇನ್ನೆಲ್ಲಿಯ ಬೆಲೆ ಆ ಕಂಬನಿಗಳಿಗೆ..??Friday, October 25, 2013

ಕಣ್ಣುಗಳು

ಮನಸು ಹೃದಯ ಹೇಳದ ಮಾತುಗಳ

ಸಣ್ಣ ಸನ್ನೆಯಲೇ ತೋರಿಸುವ ತುಂಟರು !!

Tuesday, October 22, 2013

THOUGHT FOR THE DAY

You cannot force anyone to love you. So just be you. Those who leave you because they are selective about what they want you to be like, never loved you. Never change for anyone because it never lasts. Be true Be real Be you. (courtesy : Internet)
ತಾಕತ್ತು

-------
ರಕ್ಕಸರನ್ನೂ,

ಮನುಷ್ಯರನ್ನಾಗಿಸುವುದು..

" ಪ್ರೀತಿ "

******
ರಕ್ಕಸಗಣ
---------
ಪ್ರೀತಿಯ ನೆಪ ಮಾಡಿ...,

ಮನುಷ್ಯರನ್ನು ವಂಚಿಸುವರು " ರಕ್ಕಸರು "

ಸ್ವಲ್ಪ ಹುಳಿ - ಸ್ವಲ್ಪ ಖಾರಾ

ಹುಡುಗರ ಹೃದಯವದು,

ಇಣುಕುವ ಕನ್ನಡಿಯಲ್ಲ !

ಇಣುಕಿ ನೋಡಿದಾಗಲೆಲ್ಲಾ..,

ನಿಮ್ಮದೇ ಬಿಂಭ ಕಾಣುವುದಿಲ್ಲ !!.

Friday, October 18, 2013

ಹೊಸ ಜನುಮ

ತಾಯ್ತನದ,


ಸುಖದ ಸುಪ್ಪತ್ತಿಗೆಯಲಿ..

ತೇಲುತಿದೆ ಅವಳ ನಗು...!

ಮನೆಯವರೆಲ್ಲರ,

ಸಂತೋಷಕ್ಕೆ ಕಾರಣ...

ನವ ಜನುಮವಿತ್ತ ಮಗು..!!

Thursday, October 17, 2013

ದ್ವಂದ್ವಾರ್ಥ

-------------------

ಕಣ್ಣು ತುಂಬಿ ಬರುತ್ತಿದೆ..

ಅವಳು ತೊರೆದು ಹೋದ ಕಾರಣಕ್ಕಲ್ಲ..,

ಅವಳು ಘಾಸಿ ಮಾಡಿ ಹೋದ ಮನಸ್ಸಿನ ಗಾಯಕ್ಕೆ !!

-------------------

ಕಣ್ಣು ತುಂಬಿ ಬರುತ್ತಿದೆ

ಯಾವುದೊ ಕಾರಣಕ್ಕೂ.. ದುಃಖವಲ್ಲ !

ವಿಶ್ರಮ ಕಾಣದ ಕಣ್ಣುಗಳಿಗೆ

ನಿದ್ದೆ, ಕಣ್ಣು ತುಂಬಿಕೊಂಡು ಬರುತ್ತಿದೆ.!!

==================

ಚುಟುಕ

ಕುಣಿತದಲ್ಲಿ


ಪ್ರಾವಿಣ್ಯತೆ ತೋರಿದ ಅವಳು,

ಭಾರಿ ಚೂಟಿ !

ಇಂದು,

ಪಾಕ ಪ್ರವೀಣೆ ಅಂತಾನೂ ತೋರಿಸಿದಳು,

ಅಡುಗೆಯ ರುಚಿ !!

Wednesday, October 16, 2013

ಶ್ರೀಮಂತ ಸಾಮ್ರಾಜ್ಯ


ವಿಜಯದಶಮಿಯಂದು

ನಮ್ಮ ನಗರ ವಿಜಯನಗರ ಸಾಮ್ರಾಜ್ಯ !

ಮಾರುಕಟ್ಟೆಯ ಬೀದಿ ಬೀದಿಗಳಲ್ಲಿ

ಬಿದ್ದಿತ್ತು ರಾಶಿ ರಾಶಿ ಬಂಗಾರದ ತ್ಯಾಜ್ಯ !!

Monday, October 14, 2013

ಪ್ರವಾಸ

ಮೂರು ವರುಷದ ನಂತರ
ಮತ್ತೆ ಕೂಡಿ ಬಂತು ಅವಸರ
ದೂರದ ಊರಿಗೆ ಪ್ರಯಾಣ
ಹಾರಬೇಕಿತ್ತು ಬಾನ ಎತ್ತರ
ಒಂದು ತರಹದ ಖುಶಿ, ಸಡಗರ
ತಲುಪಿ ಕಲಿಯುವುದ ಕಾತರ
ಒಂದೊಳ್ಳೇಯ ಅವಕಾಶ
ಬಿಡದೇ ಉಪಯೋಗಿಸಿದೆ ಸಮಯ
ಐಶಾರಾಮಿ ಜೀವನದ ಸಿಂಚನ
ದಿನಗಳೆದ ಕ್ಷಣಗಳೆಲ್ಲಾ ಮಧುರ !!

Saturday, October 12, 2013

ಗುಟ್ಟು

ಹೃದಯಕ್ಕೆ ಲಗ್ಗೆ ಇಡಲು..
ಬೇಕಿಲ್ಲಾ ಯಾವುದೇ ಹೆದ್ದಾರಿ.
ಪ್ರೀತಿ ನಿಜವಿದ್ದರೇ ಸಾಕು,
ಅದುವೇ ದೊಡ್ಡ ರಹದಾರಿ !!

Monday, October 07, 2013

ಸಮಾಧಿ

ಆ ಶರೀರಗಳಿಗೆ ಕೂಡಿ ಬಾಳುವ ಯೋಗವಿರಲಿಲ್ಲ

ಒಬ್ಬರನೊಬ್ಬರು ಒಪ್ಪುವ ತಿಳಿ ಇರಲಿಲ್ಲ

ನಂಬಿಕೆ ಉಳಿಸಿಕೊಂಡು ನಡೆದುಕೊಳ್ಳುವ ಪರಿ ಗೊತ್ತಿರಲಿಲ್ಲ

ಹೀಗಾಗಿ ಮತ್ತೊಂದು ಹೆಣ ಇಂದು ಸಮಾಧಿ ಸೇರಿತು !


ವಂಚನೆಯ ಗುರಿ ಇಟ್ಟುಕೊಂಡು, ನ್ಯಾಯವ ಮೆರೆಯಲಿಲ್ಲ

ಲೂಟಿ ಮಾಡುವ ದುಷ್ಟ ದರ್ಪ, ಶಿಷ್ಟ ರೀತಿಯೇ ಗೊತ್ತಿಲ್ಲ

ಒಳ್ಳೇಯ ತನದ ಆದರಿಸದ ದೇಹಗಳು, ಕೃತಜ್ಞತೆಯೇ ಗೊತ್ತಿರಲಿಲ್ಲ

ಹೀಗಾಗಿ ಮತ್ತೊಂದು ಹೆಣ ಇಂದು ಸಮಾಧಿ ಸೇರಿತು !

(ಇದು ಸಮಾಜದಲ್ಲಿ ಕಡಿದು ಬೀಳುವ ಸಂಬಂಧಗಳ ಹೆಣ ಸಮಾಧಿ ಸೇರಿದ ಕವನ !!)

ಹನಿ

ನಾ,

ಮಾಡದ ತಪ್ಪುಗಳಿಗೆ

ಅರಚುತ್ತಿದ್ದ ಅವಳ ತುಟಿಗಳೆಗೆ ..

ನನ್ನ ತುಟಿಗಳಿಂದ

ಜಡಿದೆ, ಬೀಗದ ಮುದ್ರೆ..!!

Thursday, October 03, 2013

" ಜೈ " ಲ ಬದುಕು

ಏಳು ತಲೆಮಾರುಗಳು ಕೂತು ತಿನ್ನುವಷ್ಟು ಸಂಪತ್ತು
ಮೋಸ ವಂಚನೆ ಮಾಡೋದು ಏಕೆ ಬೇಕಿತ್ತು
ಕೊಳ್ಳೆ ಹೊಡೆದು ಭೂ-ಗಣಿ ಸಂಪತ್ತು
ಯಾವ ಐಷಾರಾಮಿ ಜೀವನ ಕಾಣಬೇಕಿತ್ತು
ತಿಂದು ಹೊಟ್ಟೆ ತುಂಬಿಸಿಕೊಳ್ಳಲು ಅನ್ನವೇ ಬೇಕು
ವಂಚನೆಯ ಹಣ, ಹೊನ್ನು, ಸಂಪತ್ತು ತಂತಲ್ಲಾ ನಿನಗೆ ಆಪತ್ತು
ಜೈಲಿನ ಸೊಳ್ಳೆ ತಿಗಣೆಗಳ ಜೊತೆ ಸರಸಾಟ ಬೇಕಿತ್ತಾ..., ನಿನಗೆ ಈ ಬದುಕು...?

Thursday, September 26, 2013

ಹಿತವಚನ

ಹುಟ್ಟು ನನ್ನ ಕೈಯ್ಯಲಿಲ್ಲ

ಸಾವು ನನ್ನ ಕೈಯ್ಯಲಿಲ್ಲ

ಹುಟ್ಟು ಸಾವಿನ ನಡುವಿರುವ " ಬದುಕು " ಮಾತ್ರ ನನ್ನದು

ಅದಕ್ಕೆ ಅರ್ಥಪೂರ್ಣ ಬಣ್ಣ ತುಂಬುವ " ಗುರಿ " ಕೂಡ ನನ್ನದು

Tuesday, September 24, 2013

ಬ್ಯಾಡಗಿ ಖಾರಾ

ಓ ಲಂಗಾ ದಾವಣಿ ತೊಟ್ಟ ಬೆಡಗಿ

ಬಾರ.., ಸೊಂಟಕ್ಕ ಇಟ್ಟಗೊಂಡು ಗಡಗಿ

ನಿನ್ನ ನೋಡಾಕ ಕುಂತೀನಿ ಭಾವಿ ಕಟ್ಟೀಗ, ನಾ ಒರಗಿ !

ನೀ ಹೋಗ್ಲಾ ಮುಲ್ಲಾ ತಿರುಗಿ

ನಾ ಬ್ಯಾಡಗಿ ಖಾರಾ ಹುಡುಗಿ

ನೀ ನೋಡಾಕ ಹತ್ತಿದ್ರ ನನ್ನ, ಹಿಡಕೊಂಡು ಬರ್ತೀನಿ ಬಡಗಿ !

ಸಂಗೀತ ಕಛೇರಿ

ಪದೇ ಪದೇ ಇಣುಕಿ ನೋಡುತ್ತಿರುವಳು,

ಹೃದಯ ಬಾರಿಸುತ್ತಿರುವ ಡೊಳ್ಳನು !

ಅನುಸರಿಸಿ ಅದರ ರಾಗವ ಅವಳು,

ಮೆಲ್ಲಗೆ ನುಡಿಸುತ್ತಿರುವಳು ಕೊಳಲನು !

ನನ್ನ ಎದೆಯ ಡೊಳ್ಳು ಬಡಿತಕೆ...

ಅವಳ ಮನದ ಭಾವಗಳ ಕುಣಿತ..

ಇನ್ನೂ ಇಬ್ಬರ ಹೃದಯದಲಿ ಪ್ರೇಮದ ಏರಿಳಿತ..!

ಒಮ್ಮೆ ನನ್ನ ಡೊಳ್ಳಿನ ಹೊಡೆತ,

ಆಕಡೆಯಿಂದ ಅವಳ ಕೊಳಲ ನುಲಿತ..

ಶುರುವಾಗಿದೆ ನಮ್ಮ ಕಛೇರಿ..,ಆಲಿಸಿ ಬನ್ನಿ ನಮ್ಮ ಸಂಗೀತ !!

ಸ್ನೇಹ

ಅವನು ಮಾತನಾಡದೇ ಇದ್ದರೂ

ಕಾರಣಗಳು ಸಾಕಷ್ಟು ಇರಬಹುದು

ಅವನಿಗಿಲ್ಲಾ ಅವಳ ಮೇಲೆ ಮುನಿಸು !

ಮರೆತಿಲ್ಲಾ ಸ್ನೇಹ ತಂತಿ ಮುರಿದರೂ

ಕಾಣುತಿಹುದು ಅದರ ಕುರುಹು

ನೇತಾಡುತ್ತಿರುವ ಪ್ರಶಂಸೆಯ ತೂಗು !!

ನನ್ನ ಆತ್ಮೀಯ ಗೆಳೆಯ ಬೇಲೂರು ರಘುನಂದನ್ ರವರು ಬರೆದ ವಚನ..

ವಚನ - 211


ಕಟ್ಟು - ೩ಮುಡಿ ಬಿಟ್ಟವಳು ಮರ್ಯಾದೆ ಬಿಟ್ಟವಳು

ನುಡಿ ಬಿಟ್ಟವಳು ನಾಚಿಕೆಯಾ ಬಿಟ್ಟವಳು ...

ಪತಿಯ ಬಿಟ್ಟವಳು ಲೋಕದಲಿ ರಂಡೆ

ಪತಿಯ ನುಂಗಿ ಕೊಂಡವಳು ಮುಂಡೆ

ಭಾವನೆಯ ತೋರೆ ಲಜ್ಜೆಯನೇ ಬಿಟ್ಟವಳು

ಎಲ್ಲ ಬಿಟ್ಟವಳು ಕೊನೆಗೆ ಮೂರು ಬಿಟ್ಟವಳು

ಎಂದು ಮೊಟಕುವ ಮಂದಿ ನಾಲಿಗೆ ಸತ್ತವರು.

ಎಲ್ಲ ಬಿಟ್ಟವರು ಎನುವ ಇವರು ಏನೇನು ಜೊತೆಗೆ

ಕಟ್ಟಿಕೊಂಡು ಬಿಟ್ಟಿ ಮಾತುಗಳನಾಡುತಿರುವರು.

ನುಂಗಲಾಗದ ಕೆಮ್ಮು ಕಫ಼ ನೋವು ಬಾವು ಕೀವನ್ನು,

ಒಳಗಿಟ್ಟುಕೊಂಡು ಲಾಭವಿಲ್ಲ ಅಂತ ಸೊಟ್ಟ ಮನದಲ್ಲಿ,

ಬಿಟ್ಟವಳು ಬಿಟ್ಟವಳು ಅನ್ನುವ ಭಾವಿಲ್ಲದ ಬಾಯಿಗೆ

ನೀನೇ ಹೇಳಿಬಿಡಯ್ಯ ಶ್ವೇತಪ್ರಿಯ ಗುರುವೆ.-ಬೇಲೂರು ರಘುನಂದನ್

22.9.2013

Friday, September 20, 2013

ಆಪತ್ತು

ನಿದ್ದೆಯಿಂದ ಏಳಲಾಗುತ್ತಿಲ್ಲ
ಅವಳು ಕೊಟ್ಟ ಮತ್ತಿನ ಗಮ್ಮತ್ತು
ಕನಸುಗಳ ಸರ ಹೆಣೆಯುವುದೇ ನಿಲ್ಲುತ್ತಿಲ್ಲ
ಸಿಗದೇ ಹೋದರೆ ಅವಳು, ತಪ್ಪದು ಜೀವಕ್ಕೆ ಆಪತ್ತು !!

ಹನಿ

ನಲ್ಲೆ ನೀ ಮುಡಿದರೆ ಹೂವು ಮಲ್ಲಿಗೆ
ಪ್ರೀತಿ ಇಮ್ಮಡಿಸುವುದು ನಿನ್ನ ಅಂದಕೆ
ಮರುದಿನ ಆಶ್ಚರ್ಯ ಕಾದಿತ್ತು....
ಅವಳು ಮುಡಿದು ಬಂದಳು ದಾಸವಾಳ
ಕನಸ್ಸುಗಳು ಸುರಿದವು ಬೆವರಿನಂತೆ ದಳದಳ !

Tuesday, September 17, 2013

ಅರಿವು

ನಾ ಮೇಲು ( Male) , ನಾ ಮೇಲು.. ಅಂತಾ ಕುಣಿದಾಡಿದವಳಿಗೆ,


ಅವಳು ಒಂದು ಹೆಣ್ಣು ಅಂತಾ ತಿಳಿದದ್ದು...

ಅವಳೇ ಹರಿಸಿದ ಕಣ್ಣೀರು ಮೊಣಕಾಲೊರೆಗೆ ನಿಂತಾಗ !!

Monday, September 16, 2013

ಗ್ರಹಚಾರ

ವೇದಿಕೆಯಲ್ಲಿ ಹೆಜ್ಜೆಯ ಜೊತೆಗೆ ಹೆಜ್ಜೆ ಇಟ್ಟಳು ಗೆಳತಿ

ಅಸೂಯೆದಿಂದ ಕೆಂಗಣ್ಣು ಬಿಟ್ಟಳು ನಮ್ಮಾಕಿ

ಮನಿಗ ಬರ್ರಿ ಅಂದಳು... ನಿಮಗ ಗ್ರಹಚಾರ ಕಾದೇತಿ !!

ಸಿಹಿ - ಸಹಿ

ಅವನು ಕಳಿಸಿದ,

ಮೇಘ ಸಂದೇಶ

ಬಡಿಸಿಹುದು..

ಅವಳ ಮನಸಗೆ ಸಿಹಿ !

ಉತ್ತರವಾಗಿ,

ರವಾನಿಸಿದಳಾಕೆ...

ಪತ್ರ ಚುಂಬಿಸಿದ ಸಹಿ !!

Wednesday, September 11, 2013

ಪರದಾಟ

ರಾತ್ರಿಯಿಡೀ ಸುರಿದಿದೆ ಮಳೆ

ಬೆಳಿಗ್ಗೆ ಬೀದಿಗಳೆಲ್ಲಾ ಬಚ್ಚಲು ಮನೆ

ಕಾಂಕ್ರೀಟು ಕಾಡಿನಲ್ಲಿ ರಾಡಿಯ ಮೋಡಿ

ರಸ್ತೆ ಗುಂಡಿಗಳಲ್ಲಿ ಕೆಂಪು ನೀರಿನ ಕೋಡಿ

ಅಲ್ಲಲ್ಲಿ ನಿಂತಿವೆ ವಾಹನಗಳು ಕೆಟ್ಟು

ಅಪಘಾತಕ್ಕೆ ಜನರು ಅನುಭವಿಸವರೆ ಪೆಟ್ಟು

ಸುರಿದರೆ ಮಳೆ ರಸ್ತೆಗಳೆಲ್ಲಾ ಕೆರೆ

ಮನೆ ತಲುಪದೇ ಜನರು ಅಲ್ಲೇ ಸೆರೆ

ಗಟಾರು ಗುಂಡಿಗಳಿಲ್ಲದ ಈ ಅವ್ಯವಸ್ಠೆ

ಸಾಮಾನ್ಯ ಜನರ, ಕೇಳುವರ್ಯಾರು ಸಮಸ್ಯೆ !!

Thursday, September 05, 2013

ಅವಳ ಭಾವ

ನಲ್ಲ ,


ನಿನ್ನ ಮಾತುಗಳು ಸ್ವಾತಿ ಮುತ್ತಿನಂತೆ...!

ಮೌನವಾಗಿಯೇ ಆಲಿಸುತ್ತಿರುವೆ... ನೀ ನಿಲ್ಲಿಸದಿರು, ಮಾತುಗಳ ಮಳೆ !

ನಾ, ಹನಿಗಳ ತಂಪನು ಸವೆಯುತಿರುವೆ ಆ ಭೂರಮೆಯಂತೆ..!

Tuesday, September 03, 2013

ನೀಲ ಸಾಗರ

ಕಣ್ಣಲ್ಲೇ ಕಣ್ಣಿಟ್ಟು ನೋಡು ಗೆಳೆಯಾ


ಆ ನಿನ್ನ ನೀಲ ಸಾಗರದ ಆಳದಲ್ಲಿ ಮಿಂದು

ಖುಷಿಯಿಂದ ಕುಣಿಯುವುದು ನನ್ನ ಹೃದಯಾ !!

Monday, September 02, 2013

ಕುಣಿತಾ

ಗೆಳೆಯಾ, ನನ್ನ ನಡುವ ಬಳಸಿ ಗಟ್ಟಿಯಾಗಿ ತಬ್ಬಿ ಹಿಡಿದುಕೋ

ನಮ್ಮ ಕುಣಿತದಲ್ಲಿ ನಾ ಕಾಲ್ ಜಾರಿ ಬಿದ್ದೇನು...!

ಹೆದರಬೇಡ ಗೆಳತಿ, ನನ್ನ ತೋಳಲ್ಲಿ ನೀ ಜಿಗಿದು ಕುಳಿತುಕೋ

ನೀ ಬಿಡು ಎನ್ನುವ ತನಕ ನಾ ಕೆಳಗೇನೆ ಇಳಿಸೆನು...!!

ಪ್ರೀತಿ V/s ಹಣ

ಪ್ರೀತಿ,
ಎಂಬುದು ಮನಸ್ಸನ್ನು ಗೆಲ್ಲುವಂತಹ ಭಾವ , ಅತ್ಯಮೂಲ್ಯ

ಹಣ,
ಎಂಬುದು ಯಾರಾದರೂ ಗಳಿಸಬಹುದಾದ ವಸ್ತು ,


ಒಂದು ಪಕ್ಷ ಹಣವಿರದ್ದಿದ್ದರೂ ಜೀವಿಸಬಹುದು, ಆದರೆ ಪ್ರೀತಿ ಇರದಿರೆ ಜೀವನ ಶೂನ್ಯ !!

ಸುಭಾಷಿತ

ಅವನು,


ಜಗಕ್ಕೆಲ್ಲಾ ಸಮಾನ ಪ್ರೀತಿಯ ಹಂಚುವ ಸೂರ್ಯ !

ಅವನ ಪ್ರೀತಿಯ ಅರಿತು,

ಅದನ್ನು ಸನ್ಮಾನಿಸುವುದು ಅವರವರಿಗೆ ಬಿಟ್ಟಿದ್ದು !!

ನಿರ್ಲಕ್ಷ

ಎಳೆ ಎಳೆಯಾಗಿ

ಕಿತ್ತೆಸೆಯುತಿಹನು ಪಕಳೆಗಳ ಹಾರ !

ಅವಳ ನಿರ್ಲಕ್ಷಕ್ಕೆ

ನೀಡುತಿಹನು ಮೌನ ಉತ್ತರ !!


ಜಗಲಿ ದೀಪ

ನನ್ನ ಮನೆಯ ಜಗಲಿಯಲ್ಲಿ

ಹಚ್ಚಿಟ್ಟ ದೇವರ ದೀಪ

ನನ್ನ ಮನೆ ಅಲ್ಲದೇ...

ನೋಡುಗರ ಮನಸನ್ನೂ

ಪ್ರಕಾಶಿಸಿತು !!

Monday, August 26, 2013

ಮನಃಪೂರ್ವಕ ಮೆಚ್ಚಿದೆ !!

ಅವಳ ಅಂದ ಅವಳ ಚಂದ

ಅವಳ ಬಣ್ಣ ಅವಳ ಕಣ್ಣ

ಅವಳ ಕೋಮಲ ಮುಖದ ಚಂದವ..

ಮೆಚ್ಚಿದೆ, ಮೆಚ್ಚಿದೆ... ಮನಃಪೂರ್ವಕ ಮೆಚ್ಚಿದೆ !!


ಅವಳ ನಡೆಯ ಅವಳ ನುಡಿಯ

ಅವಳ ಗುಣವ ಅವಳ ಗಣವ

ಅವಳ ಭಯ ಭಕ್ತಿಯ ನಡುವಳಿಕೆಯ ಕಂಡು..

ಮೆಚ್ಚಿದೆ, ಮೆಚ್ಚಿದೆ... ಮನಃಪೂರ್ವಕ ಮೆಚ್ಚಿದೆ !!


ಅವಳ ಸೌಮ್ಯತೆ ಅವಳ ಚಾತುರ್ಯತೆ

ಅವಳ ಸೂಕ್ಷ್ಮತೆ ಅವಳ ಚಿಂತನೆ

ಅವಳ ಸಮಯ ಪ್ರಜ್ಞೆಯ ಹೆಜ್ಜೆಯ ಕಂಡು

ಮೆಚ್ಚಿದೆ, ಮೆಚ್ಚಿದೆ... ಮನಃಪೂರ್ವಕ ಮೆಚ್ಚಿದೆ !!


ಅವಳ ಕೌಶಲ್ಯ ಅವಳ ನಿಯಮ

ಅವಳ ಶಿಸ್ತು ಅವಳ ಒಣಪು

ಅವಳ ಪಾಕ ಪ್ರವೀಣತೆ ಉಲ್ಲಾಸಗೊಳಿಸಿತು

ಮೆಚ್ಚಿದೆ, ಮೆಚ್ಚಿದೆ... ಮನಃಪೂರ್ವಕ ಮೆಚ್ಚಿದೆ !!

Thursday, August 08, 2013

ಕಿಡಿನುಡಿ

ಕೊಲೆಗಡುಕರ ಕಲೆ ಮೆಚ್ಚುವುದು ಜಾಣತನವಲ್ಲ !!

ಹೊಸ ಗಾದೆ

ಕೊಲೆಗಾರನಿಗೆ,  ಶಿಲೆಯ ಮೇಲಿನ ಉಳಿ ಪೆಟ್ಟು ಭಯವಂತೆ !!

ಪ್ರೀತಿ

ಅವನು ಬಿಡುತ್ತಿದ್ದ ಕಣ್ಣ ಬಾಣಗಳು

ಸೀಳಿದ್ದವು ಅವಳ ಹೃದಯಾ

ಗಾಯದಿಂದ ಚಿಮ್ಮುತ್ತಿದ್ದ ಹನಿಗಳು

ಕೂಗುತ್ತಿದ್ದವು ಬಾ ಇನಿಯಾ.. ಬಾ ಇನಿಯಾ !!

ಕಿಲಾಡಿ

ಅವಳು ಸೊಗಿನಾಕಿ

ಮರಳು ಮಾಡಲು ಅಳುವ ಚಾಲಾಕಿ

ಒಮ್ಮೆ ಮೋಸ ಹೋದವಗೆ ತಿಳಿಯದೇ ಯಾರೀಕಿ ??

ಪಾಠ ಕಲಿತವ.... ಆಗಿಹನು, ಕಲಿಸುವ ಸೂಕ್ತ ಕಿಲಾಡಿ..!

THOUGHT FOR THE DAY

PEOPLE TRY TO HIDE THEIR BLUNDER BY JUST POINTING TO OTHERS ABOUT MISTAKES, BUT THEY FORGET THAT BLUNDERS ARE NEVER FORGIVEN.

ಕಿಡಿ ನುಡಿ

ಜನರು ತಮ್ಮ ಪ್ರಮಾದವನ್ನು ಮುಚ್ಚಿಡಲು ಬೇರೆಯವರತ್ತ ಕೈ ಮಾಡಿ ಬೆರಳುಗಳ ತೋರುವರು, ಆದರೆ ನೆನೆಪಿರಲಿ ಆ ಪ್ರಮಾದದ ಬಿಸಿ ಅವರಿಗೆ ತಟ್ಟದೇ ಹೋಗುವುದಿಲ್ಲ.

Wednesday, August 07, 2013

ಮನೆ ಇದು ನನ್ನ ಮನೆ

ಮನೆ ಇದು ನನ್ನ ಮನೆ


ಬರುವುದಾದರೆ ಮನ ಗೆದ್ದು ಬಾ

ಒಲವಿದ್ದರೆ..., ಒಲಿದು ಬಾ

ಜೊತೆಗೂಡಿ  ಬಾಳುವ ದೀಕ್ಷೆ ತೊಟ್ಟು ಬಾ


ನಟನೆಯ ಮುಖ ಹೊತ್ತವರ ನಾ ನಂಬುವುದಿಲ್ಲಾ

ಸಂಚಿನ ಆಟವಾಡಲು ಈ ಮನೆ ದುಷ್ಟ ಗೂಡಲ್ಲಾ

ನಿನ್ನನ್ನು ಆದರಿಸೊ ಪ್ರವಾಸಿಮನೆಯಲ್ಲಾ

ನನ್ನ ಮನೆ ಇದು ನನ್ನ ಮನೆ


ಕಳ್ಳ ಸುಳ್ಳ ನಪುಂಸಕರ ಜಾಡು

ಹುಟ್ಟಡಗಿಸಿ ಮಾಡುವೆ ನಾಯಿ ಪಾಡು

ಕೊಡವಿ ನಡೆದು ಬಿಡುವೆ, ಸಿಡಿದೆದ್ದು ಸುಟ್ಟು ಬಿಡುವೆ

ನನ್ನ ಮನೆ ಇದು ನನ್ನ ಮನೆ

Tuesday, August 06, 2013

ಬೆಳಕು

ನನ್ನ ಪ್ರೀತಿಯಲ್ಲಾ

ಎಣ್ಣೆಯಂತೆ ಧಾರೆ ಎರೆದು

ನಿನ್ನ ಒಡಲ ತುಂಬಿರುವೆ.!

ಸೇವಿಸಿ ಅನುಭವಿಸು ಅದನ್ನು..,

ಮೈಗೂಡಿಸಿಕೋ ನಿನ್ನೊಳು,

ದೀಪವಾಗಿ ಬೆಳಗಿಸು...

ನನ್ನ ಬಾಳನು..!

Monday, August 05, 2013

ಇದು ಖುಷಿ ಸುದ್ದಿಯಂತೆ

ಕನ್ನಡಿಗರೆಗೆಲ್ಲಾ ಸಿಹಿ ಸುದ್ದಿಯಂತೆ

ಕನ್ನಡ ಅಗ್ರಮಾನ್ಯ ಸ್ಥಾನಕ್ಕೆ ಏರಲಿದೆಯಂತೆ

ಅದು ಆಗಲು.. ಇನ್ನೂ ೩೦ ವರ್ಷ ಕಾಯಬೇಕಂತೆ !! :P

Friday, August 02, 2013

ದರ್ಬಾರು

ನನ್ನ ಹೃದಯದ ಸಾಮ್ರಾಜ್ಯದಲ್ಲಿ ಅವಳದೇ ದರ್ಬಾರು

ಅವಳೊಪ್ಪಿಗೆ ಇಲ್ಲದೆ ಹರಿದಾಡುವುದಿಲ್ಲ ನನ್ನುಸಿರು

ಅವಳ ಪ್ರೀತಿಯ ಬೆರೆಸಿ ನೆತ್ತರಲಿ ನಡೆಸುತಿರುವಳು ಕಾರ್ಬಾರು !!

Thursday, August 01, 2013

ಹುಂಡಿ

ಬೇಡ ಬೇಡವೆಂದರೂ
ತುಂಬುವುದು ತಿಮ್ಮಪ್ಪನ ಹುಂಡಿ
ಹಣ ಎಣಿಸುತ್ತಾ ಕೂತವರೆ
ಸಮಯವೇ ಇಲ್ಲಾ... ಕೆರೆದುಕೊಳ್ಳಲು " _ _ _ " 

Wednesday, July 31, 2013

THOUGHT FOR THE DAY

We Write, We Read, We comment, We Share, We Like, We Promote. It is a token of APPRECIATION that we admire someone's thoughts, someone's feelings, someone's virtue. Whenever YOU read something, Just acknowledge the writings, that is a great appreciation for the writer.

Tuesday, July 30, 2013

ಸದನದಲಿ ಸಿದ್ದು-ಗುದ್ದು

೧೬ ವರ್ಷ ಕೆಳಗೆ ಮುಖ್ಯಮಂತ್ರಿ ಅವಕಾಶವ ಕಿತ್ತುಕೊಂಡಿದ್ದಕ್ಕೆ ಬೀಗುತ್ತಿದ್ದ ಹೆಚ್ ಡಿ ಕೆ

ಸಿದ್ದು ನೀಡಿದ ಮಾತಿನ ಗುದ್ದಿಗೆ ಆದರು ಕಕ್ಕಾ ಬಿಕ್ಕಿ

ಆಗ ಮಾಡಿದ ತಂತ್ರ ಈಗ ನಡಿಯಲಿಲ್ಲಾ ಅಂತಾ ಅಳುತಿಹರು ಬಿಕ್ಕಿ ಬಿಕ್ಕಿ...!

ಟೆಕ್ಕಿ ಅವಾಂತರ

ನಗರಕ್ಕೆ ಕೆಲಸಕ್ಕಾಗಿ ಅರಸಿ ಬಂದ ಟೆಕ್ಕಿ
ಬಿಎಂಟಿಸಿಯ ಬಸ್ಸನ್ನು ಹತ್ತಿ
ಟಿಕೇಟು ಪಡೆಯಲು ಹೋಗಿ
ಕನ್ನಡದ ಪದಗಳು ತಿಳಿಯದಾಗಿ
ರೊಚ್ಚಿಗ್ಗೆದ್ದು ನಿರ್ವಾಹಕನ ಮೇಲೆ
ಧಳಿಸಿದಳು ಕಿವಿಯ ಹರಿಯುವಂತೆ
ತಾನು ಒಬ್ಬ ಪರೋಡಿ ಎಂದು ನಂಬಿ
ಕುಳಿತಿಹಳು ಜೈಲೊಳಗೆ ಎಣಿಸುತ್ತಾ ಕಂಬಿ.


http://kannada.oneindia.in/news/2013/07/30/karnataka-bangalore-accenture-techie-swati-nigam-assault-bmtc-conductor-manjaiah-076163.html

ಆ ತುಟಿಗಳು ನಗುವುದ ಮರೆತಿಲ್ಲ

ಸದಾ ಕುಣಿದಾಡುತ್ತಿತ್ತು ಅವಳ ತುಟಿಗಳಲಿ ನಗು
ಅವಳ ನಗು ಪುರಸ್ಕರಿಸಲೆಂದು ಹುಟ್ಟಿತ್ತೊಂದು ಮಗು
ತಾಯ್ತನವ ಅನುಭವಿಸುತ್ತಾ ಕನಸ್ಸುಗಳ ಮೊಳಕೆ ಒಡೆದಿತ್ತು
ಕೆಟ್ಟಗಾಲ...., ತುಟಿಗಳು ಬಿಗಿದು,ಕಣ್ಣುಗಳು ತುಂಬಿದವು
ಆ ನಗುವ ತಂದ ಮಗುವು ಇನ್ನಿಲ್ಲದಾಯಿತು
ಕರಳು ಕಿವುಚಿತು ....ಎಷ್ಟು ಕ್ರೂರಿ ಅಲ್ಲವೇ ವಿಧಿ..?
ಮಾಸಗಳು ಕಳೆದವು...
ಇನ್ನೂ ಸಹಾ ಕಾಣಬಲ್ಲೆವು ಅವಳ ತುಟಿಗಳಲಿ ಅದೇ ನಗು...
ಆದರೆ ನಮ್ಮ ಕರುಳೆ ಮತ್ತೆ ಕಿವುಚುತಿದೆ ಅವಳ ನಗುವ ಹಿಂದೆ ಇದ್ದ ನೋವ ಅರೆತು.! 

Monday, July 29, 2013

ಹಿತನುಡಿ

ನಾವು ಪ್ರೀತಿಸುವ ವಸ್ತು ಅಥವಾ ಜೀವಿ ನಮ್ಮದಾಗ ಬೇಕೆಂದರೆ, ನಾವು ಯಾವುದೇ ತ್ಯಾಗಕ್ಕೂ ಸಿದ್ದವಿರಬೇಕು.
ಅದನ್ನು ಪಡೆಯಲೇ ಬೇಕೆಂದರೆ ತಕ್ಕ ಪರಿಶ್ರಮ ಪಡಬೇಕು, ಇಲ್ಲವಾದರೆ ಅದು ಬರಿ ಬೂಟಾಟಿಗೆ ಅನ್ನಿಸಿಕೊಳ್ಳುತ್ತದೆ.

ಬಾಣಅವಳು ಗಾಳಿಯಲ್ಲಿ

ಬಿಡುವ ಬಾಣಗಳು

ನನಗೆ ಏನೋ

ಅನ್ನುವುದು ನನ್ನ " ಭ್ರಮೆ "

ನಿನಗಲ್ಲಾ ನಲ್ಲಾ,ಅಂದಳವಳು..

ನಾ ಬಿಟ್ಟ ಬಾಣಗಳು, ಒಂದಾದರೂ ಚುಚ್ಚಲಿ

ನಿನ್ನ ಕಸಿದುಕೊಳ್ಳಲು ಪ್ರಯತ್ನಿಸುತ್ತಿರುವ..

ಆ " ಪ್ರೇಯಸಿಗೆ "

Saturday, July 27, 2013

ದೀಪಜ್ಯೋತಿ


ಪ್ರೀತಿಯ ದೀಪ ಹೊತ್ತಿಹುದು
ಎಣ್ಣೆಯ ಹುಯ್ಯಿದು ಸಲಹು
ಅಕ್ಕರೆಯ ಎರೆದು, ಪ್ರಕಾಶಿಸು !!

ಮನದ ಅಂಧಕಾರವ ದೂರಮಾಡು
ಪ್ರೀತಿಯ ಬೊಗಸೆಯಲ್ಲಿ ಹಿಡಿದು
ಜೀವಕೆ ಜೀವ ತುಂಬುವ ಜ್ಯೋತಿಯ ಪ್ರಜ್ವಲಿಸು !!

ನಂಬಿಹೆನು, ನೀ ಬಾಳ ಜ್ಯೋತಿ ಆಗುವಳೆಂದು
ಬೆಳಕ ತುಂಬುವೆ ನನ್ನ ಬಾಳಲಿ ಇಂದೆಂದೂ
ಮಾದರಿಯಾಗು ನೀ, ಪ್ರೀತಿಯ ಸಂಕೇತವೆಂದು !!

ಕಲ್ ಹೃದಯಾ

ಬಾರಿ ಬಾರಿ 
ಒಡೆಯುವುದು ಅವನ ಹೃದಯ..
ಕಾರಣ,
ಅದು ಒಂದು " ಕನ್ನಡಿ "
ಅವಳಿಗೆ ಅದು ತಾಪತ್ರೆಯೇ ಅಲ್ಲಾ..
ಏಕೆಂದರೆ,
ಅವಳ ಹೃದಯಾ " ಕಲ್ಲ" ಅಂಗಡಿ !!

Wednesday, July 24, 2013

Girls who are proud of their BEAUTY & Guys who dream to be Richer.....Should read this (Courtesy : Internet)

A reply from Richest Man  to a pretty girl seeking a rich husband
A young and pretty lady posted this on a popular forum:Title: What should I do to marry a rich guy?I'm going to be honest of what I'm going to say here.I'm 25 this year. I'm very pretty, have style and good taste. I wish to marry a guy with 100 crore annual salary or above.You might say that I'm greedy, but an annual salary 2 crore is considered only as middle class now days..My requirement is not high. Is there anyone in this forum who has an income of 100 crore annual salary? Are you all married?I wanted to ask: what should I do to marry rich persons like you?Among those I've dated, the richest is 50 crore annual income, and it seems that this is my upper limit.If someone is going to move into high cost residential area on the west of New York City Garden(?), 50 crore annual income is not enough.I'm here humbly to ask a few questions:

1) Where do most rich bachelors hang out? (Please list down the names and addresses of bars, restaurant, gym)

2) Which age group should I target?

3) Why most wives of the riches are only average-looking? I've met a few girls who don't have looks and are not interesting, but they are able to marry rich guys.4) How do you decide who can be your wife, and who can only be your girlfriend? (my target now is to get married)Ms. Unnamed .A philosophical reply from Richest Man -Dear Ms. Unnamed,

I have read your post with great interest. Guess there are lots of girls out there who have similar questions like yours. Please allow me to analyse your situation as a professional investor.My annual income is more than 100 crore, which meets your requirement, so I hope everyone believes that I'm not wasting time here.From the standpoint of a business person, it is a bad decision to marry you. The answer is very simple, so let me explain.Put the details aside, what you're trying to do is an exchange of "beauty" and "money" : Person A provides beauty, and Person B pays for it, fair and square.However, there's a deadly problem here, your beauty will fade, but my money will not be gone without any good reason. The fact is, my income might increase from year to year, but you can't be prettier year after year.Hence from the viewpoint of economics, I am an appreciation asset, and you are a depreciation asset. It's not just normal depreciation, but exponential depreciation. If that is your only asset, your value will be much worse 10 years later.By the terms we use in Wall Street, every trading has a position, dating with you is also a "trading position".

If the trade value dropped we will sell it and it is not a good idea to keep it for long term - same goes with the marriage that you wanted. It might be cruel to say this, but in order to make a wiser decision any assets with great depreciation value will be sold or "leased".Anyone with over 100 crore annual income is not a fool; we would only date you, but will not marry you. I would advice that you forget looking for any clues to marry a rich guy. And by the way, you could make yourself to become a rich person with 100 crore annual income.This has better chance than finding a rich fool.Hope this reply helps.signed,

RICHEST MAN

(Courtesy : Internet)

Monday, July 22, 2013

ಆಧುನಿಕ ಬ್ರಿಟೀಷರು !!

ಹೆಣ್ಣಿನಂತಿರುವ ಹೆಣ್ಣುಗಳೇ
ಮದುವೆ ಆದರೂ ತಾಳಿ ತೊಡದವರೇ
ಕಾಲಿ ಹಣೆಯ ಸತಿಗಳೇ
ಭಾರತದ ಸಂಸ್ಕೃತಿಯನ್ನು ಅಳಿಸುತ್ತಿರುವರೇ
ಬಿಟ್ಟು ತೊಲಗಿ..., ಬಿಟ್ಟು ತೊಲಗಿ, ಓ ಬ್ರಿಟೀಷರೇ..!

ನಮ್ಮ ತನವ ತುಚ್ಛವಾಗಿ ಕಾಣುವವರೇ
ನಾಡ ನುಡಿಯ ನಾಡದ ಪರಕೀಯರೇ
ಹಿರಿಯರ ಭಯ ಭಕ್ತಿ ಮರೆತವರೇ
ಭಾರತ ಮಾತೆಯ ಮರ್ಯಾದಿ ಕಳೆವವರೇ
ಬಿಟ್ಟು ತೊಲಗಿ..., ಬಿಟ್ಟು ತೊಲಗಿ ಓ ಬ್ರಿಟೀಷರೇ..!

ಹೆಣ್ಣಿನ ಪಾವಿತ್ರ್ಯ ತಿಳಿಯದೇ ವರ್ತಿಸುವವರೇ
ನಯ ನಾಜೂಕು ಮರೆತವರೇ
ಅಂಗ ಪ್ರದರ್ಶನ ಕಾರರೇ
ಸಮಾಜದ ಕೆಟ್ಟು ಹುಳಗಳೇ
ಬಿಟ್ಟು ತೊಲಗಿ..., ಬಿಟ್ಟು ತೊಲಗಿ, ಓ ಬ್ರಿಟೀಷರೇ..!

ಭಾರತ ಮಾತೆಯ ರಕ್ಷಿಸುವುದು ನಮ್ಮ ಕೈಯಲ್ಲಿದೆ
ನಮ್ಮ ದೇಶ ಉಳಿಸುವ ಭಾರ ನಮ್ಮ ಹೆಗಲ ಮೇಲಿದೆ
ನಮ್ಮ ಸಂಸ್ಕೃತಿಯ ಬೆಳೆಸುವ ಹೊಣೆ ನಮ್ಮದಾಗಿದೆ
ಧರ್ಮದೇಟು ಬೀಳುವ ಮೊದಲು ಬಿಟ್ಟು ತೊಲಗಿರೇ
ಬಿಟ್ಟು ತೊಲಗಿ..., ಬಿಟ್ಟು ತೊಲಗಿ, ಓ ಬ್ರಿಟೀಷರೇ..!

ಅಂದು - ಇಂದು

ಅಂದು,


ಹೆಂಗಳೆಯರು ಮುಡಿಯುತ್ತಿದ್ದರು "ಮಲ್ಲಿಗೆ"

ಘಮ ಘಮ ಸೂಸುವ ಸುವಾಸನೆಗೆ

ಹುಡುಗರು ಮರಳಾಗುತ್ತಿದ್ದರು "ಮೆಲ್ಲಗೆ"

ಇಂದು,

ಹೂಗಳು ಮುಡಿಯಲು ನಮ್ಮ ತಲೆ ಏನು ಪಾಟಾ ?

ಕೃತಕ ವಸ್ತುಗಳದ್ದೇ ಈಗ ಭರ್ಪೂರ್ ಆಟಾ

ನಿಮ್ಮ ಹಳೆಯ ಸಂಸ್ಕೃತಿಗೆ ನಾವು ಹೇಳೇವು ಟಾಟಾ !

THOUGHT FOR THE DAY

GOD GIVES EQUAL OPPORTUNITIES TO ALL, TO LEAD THEIR LIFE IN A MEANINGFULL WAY, BUT ONLY SOME PEOPLE GRAB THEM & SUCCEED.

Friday, July 19, 2013

ಶ್ವಾನಕ್ಕೂ ಚಪಲ


ಚೋಟು ಉಡುಗೆಯ ತೊಟ್ಟು,

ಕೈಯಲ್ಲಿ ಸಿಗರೇಟನ್ನು ಇಟ್ಟು,

ಧೂಮ್ರಮಾನ ಮಾಡಲು

ಹೊರಟ, ಮಹಿಳೆಯ ಬೆನ್ನತ್ತಿ...

ಹೊರಟಿತ್ತು, ಶ್ವಾನ ಕತ್ತು ಮೇಲೆತ್ತಿ !!

======ಭಾವಪ್ರಿಯಾ=======

ಇಂದು ಮುಂಜಾನೆ ಐ ಟಿ ಪಿ ಎಲ್ ನಲ್ಲಿ ಧೂಮ್ರಪಾನ ಜೋನಿನ ಹತ್ತಿರ ಕಂಡ ದೃಷ್ಯವನ್ನು ಆಧರಿಸಿ ಮೂಡಿಬಂದ ಕವನ.

ಬಣ್ಣ


ಕಣ್ಣಿಗೆ ಕಪ್ಪು ಬಣ್ಣ

ತುಟಿಗೆ ಕೆಂಪು ಬಣ್ಣ

ಮುಖಕ್ಕೂ ಬಣ್ಣ

ಉಗುರಿಗೂ ಬಣ್ಣ...

ಯಾವ ಬಣ್ಣವ ಮುಚ್ಚಲು...

ಹಚ್ಚುವಿರಿ ಇಷ್ಟೊಂದು ಬಣ್ಣ ?

Thursday, July 18, 2013

ಮೃತ್ಯುಪಾಷ

ಹಸಿವು ನೀಗಿಸುವ
ಮಧ್ಯಾನದೂಟ 
ಆಗಬೇಕಿತ್ತು
" ಅಕ್ಷಯಪಾತ್ರೆ "

ದುಷ್ಟರ ಕೃತ್ಯಕ್ಕೆ
ಬಲಿಯಾದ ಮಕ್ಕಳ
ಶೊಚನೀಯ
" ಯಮಯಾತ್ರೆ "
-------------
ಬಿಹಾರದ ಸರನ್‌ ಜಿಲ್ಲೆಯ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಮಧ್ಯಾಹ್ನದೂಟ ಸೇವಿಸಿ ಮೃತಪಟ್ಟ ಮಕ್ಕಳಿಗೆ ಕಂಬನಿಯುತ್ತ ಶ್ರದ್ದಾಂಜಲಿ. 

ಜೀವ ಜಲ


ಜೀವ ಜಲಕೆ ಇಂದು ಭಾರಿ ಖುಷಿ

ಪರದೇಶ ತೊರೆದು, ತವರಿಗೆ ಮರಳಿದ ಅಕಾಂಶಿ.

ಜೋರಾಗಿ ಸುರಿದು ಬರುತಿದೆ

ಒಮ್ಮೆ ಮಳೆ ಹನಿಯಾಗಿ

ಇನ್ನೊಮ್ಮೆ ಆಳಿಯ ಕಲ್ಲಾಗಿ

ತವರು ಮೆಟ್ಟಿದ ಖುಷಿಗೆ ಭೋರ್ಗರೆಯುತಿದೆ

ಹಳ್ಳ, ನದಿ, ಕಣಿವೆಗಳ ಸೇರಿ ಸಂಭ್ರಮಿಸುತಿದೆ

ತುಳುಕುತ್ತಾ ಚಲಿಸಿದೆ

ಆ ನದಿಯ ದಡಕೆ ಮುತ್ತಿಡುತ್ತಾ

ದಡದಲಿ ಇದ್ದ ಬಡ್ಡಿ, ಕಡ್ಡಿಗಳೆಲ್ಲಾ ಚಿಗಿಯುತಿದೆ

ಜಲಜೀವ ರಾಶಿ ಉತ್ತಿ ಬಿತ್ತಿ ನಲಿಯುತಿವೆ

ಎತ್ತರದ ಗುಡ್ಡದ ಅಡಿಯಿಂದ ಧುಮುಕಿ

ರುದ್ರ ರಮಣೀಯ ದೃಷ್ಯ ಜಲಪಾತಕೆ ಸೊಬಗು ನೀಡುತಿದೆ

ಏನು ಉಲ್ಲಾಸವೋ.., ಏನು ಸಂತೋಷವೋ..

ತವರ ಸೇರಿ, ತನ್ನ ಮನೆಗೆ ಹಸಿರು ಹಚ್ಚಿ ಕುಣಿದಿದೆ.

Wednesday, July 17, 2013

ಕನ್ಯೆಯ ಜೊತೆ ಮಾತುಕತೆ

ಹುಡುಗ ತಮ್ಮ ತಂದೆ ತಾಯಿ ಜೊತೆ ಹುಡುಗಿಯ ನೋಡಲು ಹೋಗುತ್ತಾನೆ. ಹುಡುಗ ಹುಡುಗಿಯ ಬಗ್ಗೆ ಸ್ವಲ್ಪ ಮಾತುಕತೆ. ಇಬ್ಬರ ಅಪ್ಪಾ ಅಮ್ಮಂದಿರು ಅವರುಗಳು ಮಾತಾಡಿಕೊಳ್ಳಲಿ ಅಂತಾ ಹೇಳಿ ಒಂದು ಕೋಣೆಯೊಳಗೆ ಕಳಿಸುತ್ತಾರೆ.
ಹುಡುಗ : ನಾನು ಅಭಿಯಂತರ ಒಳ್ಳೆಯ ನೌಕರಿಯಲ್ಲಿ ಇದ್ದೇನೆ. ಸಗಮವಾಗಿ ಜೀವನ ಸಾಗಿಸಬಲ್ಲವನಾಗಿದ್ದೇನೆ.
ನಾನು ಕೆಲವು ಪ್ರಶ್ನೆಗಳನ್ನು ಕೇಳಲು ಇಚ್ಚಿಸುತ್ತೇನೆ.., ಏನೂ ಮುಚ್ಚು ಮರೆ ಇಲ್ಲದೆನೆ ಉತ್ತರಿಸು ಅಂದಾ.
ಹುಡುಗ : ನೀನು ಪದವಿ ಮುಗಿಸಿದ್ದೀಯಾ ಇನ್ನೂ ಮುಂದೆ ಓದುವ ಆಸಕ್ತಿ ಇದೆಯಾ..?
ಹುಡುಗಿ :  YES, I'M INTERESTED.
ಹುಡುಗ : ನಿನಗೆ ಮದುವೆ ಆಗಲು ಈಗ ಇಷ್ಟವಿದೆಯಾ..?
ಹುಡುಗಿ : hmm.. YES...
ಹುಡುಗ : ನಿನಗೆ ಸೀರೆ ಉಡಲು ಬರುತ್ತದೆಯೆ ?
ಹುಡುಗಿ : NOT ACTUALLY..
ಹುಡುಗ : ನಿನಗೆ ಅಡುಗೆ ಬರುತ್ತದೆಯೆ ?
ಹುಡುಗಿ : ACTUALLY I DON'T LIKE HOME FOOD, SO I GO TO SHANTI SAGAR, MAATRU SAGAR, KFC, Mc DONALD.
ಹುಡುಗ : ನಿನಗೆ ಕೆಲಸ ಮಾಡಲು ಇಷ್ಟವಿದೆಯಾ ?
ಹುಡುಗಿ : YES.. I WOULD LOVE TO WORK, BECAUSE I CAN'T DEPEND ON YOU FOR ALL MY FANCIES AND DRESS THAT I SHOP REGULARLY.
ಹುಡುಗ : ನೀನು ದೇವರನ್ನು ನಂಬುತಿಯಾ/ದೇವಸ್ಥಾನಕ್ಕೆ ಭೇಟಿ ನೀಡುವ ಅಭಾಸವಿದೆಯಾ ?
ಹುಡುಗಿ : NO I USUALLY DONT PREFER SILENT PLACES, I WOULD LIKE TO GO TO MALLS,MULTIPLEX, SHOP AND SHOP , I LOVE SHOPPING.
ಹುಡುಗ : ನೀನು ಸಿನಿಮಾಗಳನ್ನು ನೋಡ್ತಿಯಾ ?
ಹುಡುಗಿ : YES I DO WATCH MOVIES, ESPECIALLY HOLLYWOOD MOVIES.
ಹುಡುಗ : ನೀನು ಹುಟ್ಟಿದ್ದು ಎಲ್ಲಿ ?
ಹುಡುಗಿ : I WAS BORN IN BANGALORE
ಹುಡುಗ : ನನ್ನ ಕಟ್ಟ ಕಡೇ ಪ್ರಶ್ನೆ " ನಿನಗೆ ಕನ್ನಡ ಓದಲು ಬರಿಯಲು ಮಾತನಾಡಲು ಬರುತ್ತಾ ?
ಹುಡುಗಿ : ACTUALLY I'M A KANNADIGA BUT I SPEAK LESS, I'M NOT SO FLUENT WITH READING AND WRITING.
ಹುಡುಗ : ಥೂ ನಿನ್ನ ಮೊಕಕ್ಕಿಷ್ಟು..............ನಾ ಕೇಳಿದ್ದ ಇಷ್ಟು ಗುಣಗಳಿಲ್ಲಾ ಅಂದ್ರ ನಡಿತಿತ್ತು ಆದರ,  ಕನ್ನಡ ನಾಡಿನಲ್ಲಿ ಹುಟ್ಟಿ, ಕಾವೇರಿ ನೀರ ಕುಡಿದು, ಕನ್ನಡಾ ಮಾತಾಡಾಕ, ಓದಾಕ ಬರಂಗಿಲ್ಲಾ ಅಂದ್ರ ನಿಮ್ಮ ಹಂತವರನ್ನು ಕಟ್ಟಗೊಂಡು ಯಾವ ಜೀವನಾ ಮಾಡ್ಯಾನ.ಹಾಳಾಗ್ ಹೋಗ್ರಿ......
ಹುಡುಗ ಹೊರ ಬಂದು ಅಪ್ಪಾ, ಅಮ್ಮಾ ನಡಿರಿ ಮನಿಗೆ ಹೋಗುಣು ಅಂದಾ ..! :)

ಅಮರ ಪ್ರೇಮಿಗಳು


 ಒಂದು ಜೋಡಿ ಪಾರಿವಾಳು ನಮ್ಮ ಮನೆಯ ಛಾವಣಿ ಮೇಲೆ ತಮ್ಮ ಸಂಸಾರ ನಡೆಸುತ್ತಿದ್ದವು. ಸಾಧಾರಣವಾಗಿ ಅವು ಪೈಪು ಅಥವಾ ಗಿಡ ಮರಗಳ ಪೊಟ್ರೇಗಳಲ್ಲಿ ವಾಸಿಸುತ್ತವೆ. ಅವುಗಳನ್ನು ಕಂಡು ಅಚ್ಚರಿಯು ಹಾಗು ಸಂತೋಷವೂ ಆಯಿತು. ಅವುಗಳ ಹತ್ತಿರ ಸುಳಿದಾಡಲು ಹೋದಾಗ ಒಂದು ಮಾತ್ರ ಹಾರಿ ಹೋಗುತ್ತಿತ್ತು, ಮತ್ತೊಂದು ಕುಂಟುತ್ತಾ ಸಾಗುತ್ತಿತ್ತು ಆದರೆ ಹಾರುತ್ತಿರಲಿಲ್ಲಾ. ಆಮೇಲೆ ನನಗೆ ತಿಳಿದ ವಿಷಯ, ಹೆಣ್ಣು ಪಾರಿವಾಳದ ರೆಕ್ಕೆಗೆ ಗಾಯವಾಗಿದ್ದರಿಂದ ಅದಕ್ಕೆ ಹಾರಲು ಸಾಧ್ಯವಾಗುತ್ತಿರಲಿಲ್ಲ. ಗಂಡು ಪಾರಿವಾಳ ಬೆಳಿಗ್ಗೆನೆ ಹೋಗಿ ಕಾಳು ಕಡಿಗಳನ್ನು ಹೆಕ್ಕಿ ತರುತ್ತಿತ್ತು. ನಾನು ಶಾಲೆಗೆ ಹೋಗುತ್ತಿದ್ದರಿಂದ ದಿನಾಲು ಇವಗಳನ್ನು ಕಾಣಲು ಆಗುತ್ತಿರಲಿಲ್ಲ. ರಜಾ ದಿನವದ ರವಿವಾರದಂದು ಬೆಳ್ಳಬೆಳಿಗ್ಗೆ ಆ ಪಾರಿವಾಳಗಳನ್ನು ನೋಡಲು ಹೋದೆ, ಅಲ್ಲೊಂದು ವಿಸ್ಮಯ ಕಾಣಿಸಿತು ನನಗೆ.ಗಂಡು ಪಾರಿವಾಳ ತನ್ನ ಚುಂಚಿನಿಂದಾ ಹೆಣ್ಣು ಪಾರಿವಾಳಕ್ಕೆ ಕಾಳು ಹಂಚಿಕೊಳ್ಳುತ್ತಿತ್ತು. ಇದನ್ನು ಕಂಡು ನನ್ನ ಮನಸ್ಸು ಕರಗಿ ಹೋಯಿತು. ಅಂದಿನಿಂದಾ ನಾನು ಆ ಪಾರಿವಾಳಗಳಿಗೆ ದಿನಾ ಒಂದು ಬಟ್ಟಲಲ್ಲಿ ಕಾಳು ಹಾಗು ಇನ್ನೊಂದು ಬಟ್ಟಲಲ್ಲಿ ನೀರು ಹಾಕಿ ಹೋಗುತ್ತಿದ್ದೆ. ಅವುಗಳ ಕಷ್ಟ ನೋಡಿ ನಾ ಮಾಡಿದ ಸಹಾಯ ಅಷ್ಟೇ. ಹೆಣ್ಣು ಪಾರಿವಾಳ ದಿನೆ ದಿನೆ ಸ್ವಲ್ಪ ಹಾರಲು ಪ್ರಯತ್ನಿಸುತ್ತಿತ್ತು ಆದರೆ ಸಾಧ್ಯಾವಾಗುತ್ತಿರಲಿಲ್ಲ. ಬಹುದಿನಗಳ ಕಾಲ ಅವುಗಳನ್ನು ನಾ ಭೇಟಿಯೆ ಆಗಲಿಲ್ಲಾ ಅಂತಾ ನೋಡಲು ಹೋದಾಗ.., ನನಗೆ ಕಂಡ ದೃಷ್ಯ ನನ್ನ ಕಣ್ಣುಗಳಲ್ಲಿ ಅಳು ತರಿಸಿ ಬಿಟ್ಟಿತು. ಹೆಣ್ಣು ಪಾರಿವಾಳ ಯಾವುದೋ ಕೆಟ್ಟ ಕಣ್ಣುಗಳಿಗೆ ಬಲಿಯಾಗಿತ್ತು. ಅಲ್ಲೆಲ್ಲಾ ಕೆಲವು ಪಾರಿವಾಳಗಳು ಸೇರಿದ್ದವು. ಒಂದು ಪಾರಿವಾಳ ಮಾತ್ರ ಅದರ ಹತ್ತಿರನೆ ಸುತ್ತುತ್ತಿತ್ತು. ಅರ್ಧ ಗಂಟೆ ಕಳೆದ ನಂತರ ಬೇರೆ ಎಲ್ಲಾ ಪಾರಿವಾಳಗಳು ಮಾಯವಾದವು.., ಆದರೆ ಆ ಒಂದು ಗಂಡು ಪಾರಿವಾಳ ಮಾತ್ರ ಗೋಡೆಯನೇರಿ ಮಡಿದ ಪಾರಿವಾಳವನ್ನು ನೋಡುತ್ತಾ ಕುಳಿತಿತ್ತು, ಅದರ ಕಣ್ಣುಗಳನ್ನು ನಾನು ಗಮನಿಸಿದಾಗ ಅವು ನೀರೊರೆಯುತ್ತಿದ್ದವು. ಅದರ ದುಃಖವ ಕಂಡು ನನ್ನ ಕಣ್ಣುಗಳಲ್ಲಿಯೂ ನೀರು ಹರಿಲಾರಂಭಿಸಿದವು. ಪ್ರಾಣಿ ಪಕ್ಷಿಗಳಲ್ಲಿಯೂ ಕೂಡಾ ಪ್ರೀತಿ, ವಾತ್ಸಲ್ಯಾ , ಗೆಳೆಯರು, ಸಂಬಂಧಿಕರು ಇರುತ್ತಾರೆ, ಅವರುಗಳು ಕೂಡಾ ಮನುಷ್ಯನ ತರಹವೇ ಎಲ್ಲವನ್ನೂ ಅನುಭವಿಸುತ್ತವೆ ಎಂದು ತಿಳಿಯಿತು. ಆ ಪಾರಿವಾಳಗಳ ಅಮರ ಪ್ರೇಮ, ಅವರ ಒಡನಾಟ ನನ್ನ ಮನವನ್ನು ಇಂದಿಗೂ ಅಚ್ಚರಿಯಾಗಿ ಉಳಿದಿದೆ.

ಕಿವಿ ಮಾತು

ನಾನು ಕಂಡ ಕನಸ್ಸುಗಳೆಲ್ಲಾ ಕಪ್ಪು ಬಿಳಿಯಂತೆ


ಅವುಗಳಿಗೆ ಬಣ್ಣ ಹಚ್ಚಬೇಕಾದವಳು ನೀನು..

ಅವು ನನ್ನವು ಅಂದುಕೊಂಡಾಗ ಮಾತ್ರ ಅದು ಸಾಧ್ಯ !

Tuesday, July 16, 2013

ಕಣ್ಣಾ ಮುಚ್ಚಾಲೆ

ಅವಳ ಭಾವನೆಗಳ ಅರಿಯಲೂ....
ಅವಳ ಮಾತುಗಳೂ ಕಮ್ಮಿ ಎನ್ನಿಸುತ್ತವೆ.
ಕಣ್ಣುಗಳಿದ್ದರೂ  ಕಾಣಲು ಕಷ್ಟ ಪಡುವೆನು..!
ಅವಳು ದೃಶ್ಠಿ ಹೀನಳಾದಳೂ
ಮನಸಿನ ಕಣ್ಣುಗಳಿಂದ..
ನನ್ನ ಎಲ್ಲಾ ಭಾವವ ಗುರುತಿಸುವಳು !!THOUGHT FOR THE DAY

People who judge others depends solely their own personal character.

Sunday, July 14, 2013

ನಗು-ನಗಿಸು

ನಾನು ನಗುವೆ, ನಗಿಸುವೆನು
ಆ ನಗುವಲ್ಲೆ ನಾ ದುಃಖವ ಮರೆವೆನು !
ನಗಿಸಿದರೂ, ನಿಮಗೆ ನಗು ಬರಲಿಲ್ಲವಾದರೆ
ನಿಮ್ಮ ದುಃಖಕ್ಕೆ ಕಾರಣ ನಾನಾಗಲಾರೆನು !!

ಇಣುಕುವುದೇಕೊ ಮಳೆರಾಯ ?

ಬಾರಪ್ಪಾ ಬಾರೋ ಮಳೆರಾಯ
ನಿನ್ನ ಸ್ವಾಗತ ಕೋರುವುದು ಜಗವೆಲ್ಲಾ
ಇಣುಕಿ ಇಣುಕಿ ನೋಡಿ ಮಾಯವಾಗುವೇಕೆ
ನೀನು ಬಂದರೆ ಖುಶಿಯೆ ನಮಗೆಲ್ಲಾ..!

ಸಂಭ್ರಮ

ಕುಣಿದಾಡುತ್ತಿವೆ ಸಂಭ್ರಮದಿಂದ...
ಅವಳ ಕೆನ್ನೆಯ ಮೇಲೆ...
ನಾ ಕೊಟ್ಟ ಮುತ್ತುಗಳು !!
ಕೊಟ್ಟವನು ನಾನೇ.,ಆದರೂ ಆ ಸಂಭ್ರಮ ನನ್ನದಲ್ಲ...
ಒಳಒಳಗೆ ಆನಂದಿಸಿದೆ ಮನವು
ಸ್ಪರ್ಷಿಸಿದ ಕ್ಷಣವ ನೆನೆ-ನೆನೆದು !!!

Saturday, July 13, 2013

ನಂಬಿಕೆ

ಅವಳ ಕೆಂದುಟಿ ಕಂಡಾಗಲೆಲ್ಲಾ..
ಆಗ ಬಯಸುವೆನು ನಾ ದುಂಬಿ..!
ಅವು ಅರಳುವ ಕ್ಷಣಕ್ಕಾಗಿ
ಕಾಯುವೆನು.., ನನ್ನ ಪ್ರೀತಿಯ ನಂಬಿ..!!

ರಸಿಕೊತ್ತಮ ನಲ್ಲಾ

ಕದ್ದು ಕದ್ದು 
ನೋಡಿದಾಗಲೆಲ್ಲಾ...
ಅವಳ ತುಟಿ, ಗಲ್ಲಾ....!
ಹಾಗೆ ಕದ್ದು ಮುಚ್ಚಿ,
ಕೊಟ್ಟೆಬಿಡಲೇ........
ಪ್ರೀತಿಯ ಅಚ್ಚು ಬೆಲ್ಲಾ..!!


Wednesday, July 10, 2013

THOUGHT FOR THE DAY

Love is a precious gift which is showered by one to other.
Reject it at the first instance , if you think that, you don't deserve it.

Tuesday, July 09, 2013

ನಿರ್ಜೀವ ಶರೀರ

ಹೊರಟಿಹುದು ಹೊತ್ತು ಹೂವುಗಳ ರಾಶಿ 
ಇದೇ ಕೊನೆಯದು ಅದರ ಪಯಣ !
ಒಳಒಳಗೆ ನಗುತ್ತಾ ಸಾಗಿಹುದು, ಅದಕ್ಕೆ ಖುಶಿ..
ಮುಗಿಸಿ ಹೊರಟೆ ಎಂದು..., ಇಹಲೋಕದ ಜೀವನ !! 

ಬಡವ Vs ಶ್ರೀಮಂತ

ಬಡವರಿಗೆ ಬರೆ
ಹೊಟ್ಟೆಯ ಮೇಲೆ !
ಶ್ರೀಮಂತರಿಗೆ ಹಚ್ಚೆ
ರಟ್ಟೆಯ ಮೇಲೆ !!

Monday, July 08, 2013

ಆಯ್ಕೆ ನಿಮ್ಮದೆ


ಅಚ್ಚು ಕಟ್ಟು ಸೀರೆಯ ಉಟ್ಟು ಬಂದರೆ

ಪೂಜಿಸುವರು, ಕೈ ಜೋಡಿಸಿ ನಮಿಸುವರು

ಹರಕು ಮುರುಕು ಬಟ್ಟೆಯ ತೊಟ್ಟು ಬಂದರೆ

ಬೀದಿಯ ತುಂಬಾ ಕೆಣಕುವ ಕಾಮುಕರು !

ನಿಸ್ವಾರ್ಥ


ಅವಳ ಸೌಗಂಧ,ಬಣ್ಣ ಜಗವೆಲ್ಲಾ ಮೆಚ್ಚಲಿ

ಅವಳು ಅರಳಿ ನಗುವುದ ಅಷ್ಟೇ ಬಯಸುವೆನು

ಅವಳು ಇಬ್ಬನಿಯಲ್ಲಿ ಮಿಂದು ನಲಿಯಲಿ

ಅವಳ ಸುಖವನ್ನೇ ನಾ ಬಯಸುವೆನು

ಅವಳ ಅಂದಕ್ಕಾಗಿ ನಾನು ಜನಿಸಿಲ್ಲ

ಅವಳ ಪ್ರೀತಿ ನನಗಷ್ಟೇ ಮೀಸಲಿರಲಿ ಎಂದು ಬಯಸುವುದಿಲ್ಲ

ಅವಳ ರಕ್ಷಣೆಯೇ ನನ್ನ ಹೊಣೆ

ನನ್ನ ಜೀವ ಅವಳಿಗೆ ಅರ್ಪಣೆ

ಕೊನೆಗೊಂದು ದಿನ ಬಾಡಿಹೋದರೂ ಅವಳು

ಅವಳ ನೆನಪಲ್ಲೇ ಬಿಸಿಲ ಬೇಗೆಗೆ ಒಣಗಿ ಮಡಿಯುವೆನು !ಅವಳು = ಹೂವು , ನಿಸ್ವಾರ್ಥಿ = ಮುಳ್ಳು

Sunday, July 07, 2013

ಒಲವಿನ ಕಾದಂಬರಿ - ಸಂಚಿಕೆ ೩

(ಬಹುದಿನಗಳಿಂದ ಬರಿಯಲು ಸಾಧ್ಯವಾಗಲಿಲ್ಲ ಕ್ಷಮೆ ಇರಲಿ ) ಮುಂದೆ ಓದಿ

ಮರುದಿನ ಕಾಲೇಜಿಗೆ ಬಂದ ರಾಜ್ ಗೆಳೆಯರ ಜೊತೆಯಲಿ ಚಹಾ ಕುಡಿಯಲಿಕ್ಕೆ ಎಂದು ಕ್ಯಾಂಟಿನಿಗೆ ಹೋಗಿರುತ್ತಾನೆ, ಈ ಕಡೆ ಗೀತಾ ಬಸ್ಸನ್ನು ಇಳಿಯುತ್ತಲೆ ರಾಜ್ ನನ್ನು ಹುಡುಕುತ್ತಾ ಹೊರಡುತ್ತಾಳೆ, ರಾಜ್ ಕ್ಲಾಸಿನಲ್ಲಿ ಇಲ್ಲಾ, ಬಹುಶಃ ಲೈಬ್ರರಿಯಲ್ಲಿ ಇರಬಹುದೇ..? ಬೇಗನೆ ಅಲ್ಲಿಗೆ ದೌಡಾಯಿಸುತ್ತಾಳೆ…ರಾಜ್ ಅಲ್ಲಿಯೂ ಇಲ್ಲಾ…ಎಲ್ಲಿ ಹೋದ ಇವ..? ಗೀತಾಳ ಮನದಲ್ಲಿ ಸ್ವಲ್ಪ ಕೋಪ ಬರುತ್ತೆ, ದಿನಾಲು ಕಾಲೇಜಿಗೆ ಕಾಲಿಟ್ಟ ಕೂಡಲೆ ಕಾಣುತ್ತಿದ್ದ ಇವನು., ಇಂದು ಕಾಲೇಜಿಗೆ ಬರಲೇ ಇಲ್ಲವೆ ಅಥವಾ ಇಲ್ಲಾ ಬೆರೆ ಯಾರದರೊಡನೆ ಎಲ್ಲಿಗಾದರೂ ಹೋದನೆ ಎಂಬ ಚಿಂತೆ ಕಾಡುವಷ್ಟರಲ್ಲಿ ರಾಜ್ ಗೆಳೆಯರೊಡನೆ ಕ್ಲಾಸಿನ ಹತ್ತಿರ ಬರುತ್ತಾನೆ, ಅವನನ್ನು ಕಂಡು ಗೀತಾಳಿಗೆ ಸ್ವಲ್ಪ ನಿರಾಳ ಉಂಟಾಗುತ್ತದೆ., ಆದರೂ ಅವಳ ಮೊಗದಲ್ಲಿ ಏನೋ ಕೋಪ ಅವನ ಮೇಲೆ, ಇದನ್ನು ಗಮನಿಸಿದ ರಾಜ್ ಗೆಳೆಯರೆಲ್ಲರಿಗೂ ಹೇಳಿ ಇವಳತ್ತ ಧಾವಿಸುತ್ತಾನೆ. ಏನಮ್ಮಾ ಇವತ್ತು ಏಕೋ ಕೋಪ ಬಂದ ಹಾಗಿದೆ ನಿನಗೆ ಏನ್ ಸಮಾಚಾರ..ಅದಕ್ಕೆ ಅವಳು ಮುನಿಸಿಕೊಂಡು, ಲೋ ಏನೂ ಇಲ್ಲಾ ಹೋಗೊ, ನಿನಗೇಕೆ ಹಾಗೆ ಅನಿಸಿತು ಎಂದು ಪ್ರತಿಯಾಗಿ ಪ್ರಶ್ನಿಸಿದಳು. ಏನೂ ಇಲ್ಲಾ ನಿನ್ನ ಮುಖದ ಭಾವನೆಗಳು ನನಗೆ ಪ್ರಶ್ನಿಸುವಂತೆ ಮಾಡಿತು..ಸರಿ ಸರಿ ಬೆಳ್ಬೆಳಿಗ್ಗೆ ಎಲ್ಲಿಗೆ ಹೋಗಿದ್ದೆ..?ಅಂದಳು…ಓಹೋ ಇದಕ್ಕೆ ಮೇಡಂ ಗರಂ ಆಗಿರೋದು, ಏನೂ ಇಲ್ಲಾ ಕಣೆ ಮನೆಯಲ್ಲಿ ತಡವಾಯ್ತು ಅಂತಾ ಚಹಾ ಕುಡಯದೇ ಬಂದೆ ಅದಕ್ಕೆ ಇಲ್ಲಿ ಗೆಳೆಯರ ಜೊತೆ ಹೋಗಿದ್ದೆ. ಅದೆಲ್ಲಾ ಸರಿ , ನೀನೇಕೆ ನನ್ನನ್ನು ಹುಡುಕುತ್ತಿದ್ದೆ ? ಏನೂ ಇಲ್ಲಾ ಕಣೋ ನನ್ನ ಗೆಳತಿಯೊಬ್ಬಳು ಬೈಕ್ ತನ್ನ ಗೆಳೆಯನೊಡನೆ ಸವಾರಿ ಮಾಡಿ ಬಂದಳು ಅವಳು ಎಷ್ಟು ಖುಶಿಯಾಗಿದ್ದಳು ಅಂದರೆ ಅದು ಹೇಳಲಿಕ್ಕೆ ಆಗುವುದಿಲ್ಲಾ. ಸರಿ ಅದಕ್ಕೆ ಈಗೇನು..? ಮತ್ತೆ ನನಗೂ ಕೂಡಾ ಬೈಕ್ ಅಂದ್ರೆ ತುಂಬಾ ಇಷ್ಟಾ , ನಾನು ಒಂದು ಸಾರಿನೂ ಬೈಕ್ ಹತ್ತಿಲ್ಲಾ ಕಣೋ….ಅಂದಳು. ಅದರ ಸವಾರಿ ಮಾಡಬೇಕು ಎನ್ನುವುದು ನನ್ನ ಬಹುದಿನದ ಆಸೆ, ಆದರೆ ಏನ್ ಮಾಡೋದು ನನ್ನ ಅಪ್ಪನ ಹತ್ತಿರ ಬೈಕ್ ಇಲ್ಲಾ. ಸರಿ ಸರಿ ಓದು ಮುಗಿಸಿ ಒಳ್ಳೆ ಕೆಲಸ ಸೇರಿಕೊಂಡು ಒಂದು ಹೊಸ ಬೈಕ್ ತೊಗೊ ಆಮೇಲೆ ಎಷ್ಟು ಬೇಕಾದರೂ ಹತ್ತಿಕೊಂಡು ಅಡ್ಡಾಡಬಹುದು ಎಂದ ರಾಜ್..ಗೀತಾ ಅಯ್ಯೋ ಇನ್ನೂ ಅಷ್ಟು ವರ್ಷ ಕಾಯಬೇಕಲ್ಲಾ ಅಂದಳು. ಕನಸ್ಸು ಕಂಡಿದ್ದು ಸಾಕು ನಡಿ ಕ್ಲಾಸಿಗೆ ಹೋಗೋಣ ಎಂದ. ಕ್ಲಾಸಿನಲ್ಲಿ ಇದ್ದದ್ದು ಇವಳೊಬ್ಬಳೆ ಹುಡುಗಿ, ಯಾವಾಗಲೂ ಒಬ್ಬಳೆ ಕೂಡುತ್ತಿದ್ದ ಗೀತಾಗೆ ಅವತ್ತು ಏನ್ ಅನಿಸಿತೋ ಗೊತ್ತಿಲ್ಲಾ.., ಪ್ರೋಫೆಸರ್ ಕ್ಲಾಸಿಗೆ ಕಾಲು ಇಡುತ್ತಿದ್ದ ಹಾಗೆ ಮೊದಲನೆ ಬೆಂಚು ಬಿಟ್ಟು ಬಂದು ರಾಜ್ ನ ಪಕ್ಕದಲ್ಲಿ ಕುಳಿತು ಬಿಡುತ್ತಾಳೆ. ಎಲ್ಲರಿಗೂ ಆಶ್ಚರ್ಯ…, ಪ್ರೋಫೆಸರ್ ಕೂಡಾ ಕ್ಲಾಸ್ ಮಾಡುವಾಗ ಇವರತ್ತ ನೋಡುತ್ತಿರುತ್ತಾರೆ, ರಾಜ್ ಕೇಳಿದ ಪ್ರಶ್ನೆಗೆ ಆಸಕ್ತಿಯಿಂದ ಉತ್ತರ ನೀಡುತ್ತಾರೆ. ಅಂದಿನಿಂದ ಅವಳ ಜಾಗ ರಾಜ್ ನ ಪಕ್ಕದಲ್ಲೇ ಫಿಕ್ಸ್ ಆಗುತ್ತದೆ. ಗೆಳೆಯರೆಲ್ಲರೂ ಆಡಿಕೊಳ್ಳಲು ಶುರು ಮಾಡುತ್ತಾರೆ, ಅದಕ್ಕೆ ರಾಜ್ ಅವಳ ನನ್ನ ಒಳ್ಳೆ ಸ್ನೇಹಿತೆ ಅಷ್ಟೇ, ಮಕ್ಕಳಾ ಬೇರೆನೂ ಇಲ್ಲಾ ಅಂತಾನೆ. ಅವಳ ಮೇಲೆ ಎಷ್ಟೋ ಅಭಿಮಾನ ಇಟ್ಟುಕೊಂಡವರಿಗೆ ದುಃಖವಾಗುತ್ತದೆ. ಅದರಲ್ಲೆ ಒಬ್ಬ ಹುಡುಗ ಇವಳಲ್ಲಿ ಬಹಳ ಆಸಕ್ತಿ ತೋರಿಸುತ್ತಿರುತ್ತಾನೆ, ಆದರೆ ಆ ವಿಷಯ ರಾಜ್ ಗೆ ತಿಳಿದಿರುವುದಿಲ್ಲಾ.
ಒಂದು ದಿನ ಪ್ರ್ಯಾಕ್ಟಿಕಲ್ ಕ್ಲಾಸ್ ನಡೆದಿರುತ್ತದೆ ಅದರಲ್ಲಿ ಕಬ್ಬಿಣ ಬಗ್ಗಿಸುವ ಕೆಲಸ. ಎಲ್ಲ ಹುಡುಗರು ತಮ್ಮ ತಮ್ಮ ಕೆಲಸ ಮುಗಿಸುವದರಲ್ಲಿ ತಲ್ಲೀನರಾಗಿರುತ್ತಾರೆ, ಆದರೆ ಗೀತಾ ಒಬ್ಬಳೇ ಹೇಗೆ ಮಾಡುವುದು ಅನ್ನುತ್ತಾ ಕುಳಿತಿರುತ್ತಾಳೆ. ಇನಸ್ಟ್ರಕಟರ್ ಬಂದು ಹಾ ಬೇಗ ಬೇಗ ಮಾಡಮ್ಮ ಅನ್ನುತ್ತಾರೆ…ಸಾರ್ ಒಬ್ಬಳೆ…ಹಾ ಹೌದು ನೀನೇ ಮಾಡಬೇಕು ಅಂದು ಚಹಾ ಕುಡಿಯಲು ಹೋಗುತ್ತಾರೆ. ಅಷ್ಟರಲ್ಲಿ ಇವೆಲ್ಲವನ್ನು ಗಮನಿಸುತ್ತಿದ್ದ ಆ ಹುಡುಗ ಇವಳ ಹತ್ತಿರ ಬಂದು , ನಾನು ನಿನಗೆ ಸಹಾಯ ಮಾಡುತ್ತೇನೆ ಎಂದ. ಗೀತಾಳಿಗೂ ಏನೋ ಸಂತೋಷವಾಯಿತು. ಸರಿ ಅಲ್ಲಿಗೆ ಅವಳಿಗೆ ಮತ್ತೊಬ್ಬ ಗೆಳೆಯನ ಪರಿಚಯ. ಅವನು ಇವಳ ಹತ್ತಿರ ಮಾತನಾಡುತ್ತ ಇವಳ ಮನೆಯ ಬಗ್ಗೆ ಅಣ್ಣ ತಮ್ಮಂದಿರ ಬಗ್ಗೆ ಕೇಳಿ ತಿಳಿದುಕೊಳ್ಳುತ್ತಾನೆ. ಮಾತು ಮಾತಿನಲ್ಲಿ ಅವಳ ಕೆಲಸ ಕೂಡಾ ಮಾಡಿಮುಗಿಸುತ್ತಾನೆ. ಮರುದಿನ ರಾಜ್ ನನ್ನು ಭೇಟಿ ಮಾಡಿ ಅವಳು ನಡೆದ ವಿಷಯವನ್ನು ಹೇಳುತ್ತಾಳೆ. ಓಹೋ ಪರ್ವಾಗಿಲ್ಲವೇ ನಿನಗೂ ಫ಼ಯ್ಯಾನು ಇದ್ದಾರೆ ಅಂತ ಗೊತ್ತಿರಲಿಲ್ಲ ಅಂತ ಜೋಕ್ ಮಾಡುತ್ತಾನೆ. ಇನ್ನು ರಾಜ್ ನ ವಿಚಾರ, ರಾಜ್ ಗೆ ಸಹಾಯ ಮಾಡಿದ ಗೆಳತಿ ಸುಮನಾ ಬಹಳ ದಿನಗಳಾದ ಮೇಲೆ ಭೇಟಿಯಾಗುತ್ತಾಳೆ. ಇವರುಗಳು ಬರೀ ಓದಿನ ಬಗ್ಗೆ ಅಷ್ಟೇ ಮಾತಾಡುತ್ತಿದ್ದರು. ಯಾವ ವಿಷಯಕ್ಕೆ ಯಾವ ಪುಸ್ತಕ ರೆಫರ್ ಮಾಡಬೇಕು, ಯಾವ ಪುಸ್ತಕದಲ್ಲಿ ಅರ್ಥ ಚೆನ್ನಾಗಿ ಕೊಟ್ಟಿದ್ದಾರೆ. ಆಗಾಗ ಗೀತಾ ರಾಜ್ ಗೆ ಸುಮನಾಳ ಹೆಸರು ಹಿಡಿದು ಕಾಡಿಸುವುದು. ಈ ಎಲ್ಲಾ ಸಂಗತಿಗಳು ನಡೆಯುತ್ತಿದ್ದಂತೆಯೇ ಮತ್ತೆ ಪರೀಕ್ಷೆಗಳು ಸಮೀಪಿಸುತ್ತವೆ. ಎಲ್ಲರೂ ತಯ್ಯಾರಿಯಲ್ಲಿ ತೊಡಗುತ್ತಾರೆ. ರಣರಣ ಬಿಸಿಲಲ್ಲಿ ಪರೀಕ್ಷೆ ಬರೆಯುವ ಕಸರತ್ತು ಯಾರಿಗೂ ಬೇಡಪ್ಪಾ ಅನಿಸುತ್ತಿತ್ತು ಆದರೆ ಏನು ಮಾಡುವುದು ಬರಿಯಲೇ ಬೇಕಲ್ಲವೆ.. ಒಂದು ತಿಂಗಳ ಕಾಲ ನಡೆದ ಪರೀಕ್ಷೆ ಅಂತ್ರು ಮುಗಿಯುತ್ತದೆ. ರಜಾ ದಿನಗಳು ಗೆಳೆಯರಲ್ಲಿ ಯಾರಿಗೂ ಭೇಟಿಯೇ ಇಲ್ಲಾ…ತಿಂಗಳ ಬಳಿಕ ಮತ್ತೆ ಕಾಲೇಜು ಶುರು.. ಹೊಸ ಸಿಲೆಬಸ್ಸು ಹೊಸ ಪುಸ್ತಕಗಳು ಹೊಸ ಉಪಕರ್ಣಗಳ ಹೊಂದಿಸಿಕೊಳ್ಳುವುದರಲ್ಲಿ ಮೊತ್ತೊಂದು ತಿಂಗಳು ಕಳೆದೇ ಹೋಯ್ತು. ರಿಜಲ್ಟ ಸಮಯ, ಈ ಸಾರಿ ರಾಜ್ ನ ಗೆಳತಿ ಸುಮನಾ ಡಿಸ್ಟಿಂಗಷನ್ ನಲ್ಲಿ ಪಾಸಾಗಿರುತ್ತಾಳೆ, ಅವಳ ಮಾರ್ಗ ದರ್ಶನ ಪಡೆದು ಅವನು ಕೂಡಾ ಒಳ್ಳೆಯ ಅಂಕ ಪಡೆದಿರುತ್ತಾನೆ. ಎಲ್ಲಾ ಗೆಳೆಯರು ಉತ್ತೀರ್ಣರಾಗಿ ಸಂಭ್ರಮಿಸುತ್ತಿರುತ್ತಾರೆ.., ಅಷ್ಟರಲ್ಲಿ ರಾಜ್ ಗೆ ಗೀತಾಳ ಬಗ್ಗೆ ತಲೆಗೆ ಬರುತ್ತದೆ, ಅಯ್ಯೊ ಅವಳಿಗೆ ನಾನು ಮಾತನಾಡಿಸಿಯೇ ಇಲ್ಲಾ ಅವಳು ಕೋಪಿಸಿಕೊಳ್ಳುತ್ತಾಳೆ ಅಂತಾ ಹುಡುಕಲಾರಂಭಿಸುತ್ತಾನೆ, ಎಲ್ಲಿ ನೋಡಿದರೂ ಅವಳು ಸಿಗುವುದಿಲ್ಲ…ಬೆಳಿಗ್ಗೆ ತಾನೆ ಅವಳನ್ನ ನೋಡಿದ್ದೆ ಆದರೆ ಈಗ ಎಲ್ಲಿಗೆ ಹೋದಳು..?? ಕಾಲೇಜೆಲ್ಲಾ ಹುಡುಕಾಡಿದರೂ ಅವಳ ಸುಳಿವಿಲ್ಲ. ಅವಳ ಗೆಳತಿಯೊಬ್ಬಳಿಗೆ ವಿಚಾರಿಸಲು…, ಇಲ್ಲಾ ರಾಜ್ ಅವಳು ಒoದು ವಿಷಯದಲ್ಲಿ ನಪಾಸಾಗಿದ್ದಾಳೆ ಆ ದುಃಖ ತಾಳಲಾರದೇ ಅವಳು ಮನೆಗೆ ಹೊರಟು ಹೋದಳು ಎಂದಳು. ಗೆಳತಿಯ ಬಗ್ಗೆ ಅರಿತು ಅವನಿಗೂ ಕೂಡಾ ದುಃಖವಾಗುತ್ತದೆ. ಅವಳಿಗೆ ಹೇಗೆ ಮಾತನಾಡಿಸುವುದು ಅಂತಾ ತಿಳಿಯದೇ ರಾಜ್ ಸುಮ್ಮನಾಗಿಬಿಡುತ್ತಾನೆ. ಅವಳು ಕಾಲೇಜಿಗೆ ಬಂದಾಗ ಮಾತನಾಡಿದರಾಯ್ತು ಅನ್ನುತ್ತಾ. ಆದರೆ ಅವಳು ವಾರದ ಮೇಲಾದರೂ ಕಾಲೇಜಿಗೆ ಬರುವುದಿಲ್ಲ. ಬೇಸರಗೊಂಡು ರಾಜ್ ಅವಳ ಮನೆಗೆ ಪೋನು ಮಾಡುತ್ತಾನೆ ಯಾರೂ ತೆಗೆಯುವುದಿಲ್ಲ. ಅರ್ಧ ಘಂಟೆ ಕಳೆದ ನಂತರ ಗೀತಾನೇ ಪೋನು ಮಾಡುತ್ತಾಳೆ. ಸಾರಿ ಕಣೋ ಇಷ್ಟೊಂದು ದಿನ ನಿನ್ನ ಹತ್ತಿರ ಮಾತನಾಡಲಿಲ್ಲ ಅಂದಳು, ಅದು ಇರ್ಲಿ ಬಿಡು ಏಕೆ ಹೀಗಾಯ್ತು ? ಎನೋ ಕಣೋ ನನ್ನ ತಲೆಗೆ ಕೆಲವೊಂದು ಸಾರಿ ಓದಿದ್ದು ಸೇರುವುದೇ ಇಲ್ಲಾ ಅನಿಸುತ್ತೆ. ಹೋಗ್ಲಿ ಬಿಡು ಮುಂದಿನ ಸಾರಿ ಕಟ್ಟಿ ಪಾಸು ಮಾಡಿಕೊಳ್ಳುತ್ತೇನೆ. ನಾಳಿನಿಂದ ಕಾಲೇಜಿಗೆ  ಬರುತ್ತೇನೆ ಅಲ್ಲೆ ಸಿಗುತ್ತೇನೆ, ಎಂದು ಕಾಲ್ ಕಟ್ಟ ಮಾಡುತ್ತಾಳೆ. (ಮುಂದುವರೆವುದು..)

ಜಾತಿ ರಾಜ್ಯಕೀಯ

ಜಾತಿ ರಾಜ್ಯಕೀಯ ಮಾಡುತ್ತಾರೆ ಅಂತಾ ಭಾಷಣ ಹೊಡೆಯುತ್ತಿದ್ದ ರಾಜಕಾರಣಿ
ತನ್ನ ಪ್ರತಿಯೊಂದು ಮಾತಿನಲ್ಲೂ ತನ್ನ ಜಾತಿಯ ಪ್ರಸ್ತಾಪಿಸುತ್ತಿದ್ದ !!

ಜನನಾಯಕರೋ / ನಾಲಾಯಕರೋ??

ಅಪ್ಪನ ದುಡ್ಡಿನಲ್ಲಿಕೊಂಡನು
ಕೋಟಿ ಕೋಟಿ ಕೊಟ್ಟು
ದುಬಾರಿ ಕಾರು !
ಅಪ್ಪ ಸಲ್ಲಿಸಿದನು ಮನವಿ,
ಉಪಯೋಗಿಸಿದ್ದ ಕಾರು
ಬೇಡ ನನಗೆ,
ಕೊಡಿಸಿರಿ...
ನನಗೊಂದು ಹೊಸ ಕಾರು !

ಮಾಯ

ಅವಳ ಅಮ್ಮನಿಂದ ಬೈಯಿಸಿಕೊಂಡು ಅಳುತ್ತಾ ಹೆಚ್ಚುತ್ತಿದ್ದಳು ಇರುಳ್ಳಿ ಮೆಣಸಿನಕಾಯಿ
ಮಾತುಗಳು ಸಾಕಾಗಲಿಲ್ಲ ರಮಿಸಲು ಅವಳನ್ನು, ಗಲ್ಲಕ್ಕೆ ಮುತ್ತಿಟ್ಟು ಓಡಿ ,ದೂರ ನಿಂತು ನೋಡಿದೆ...
ನೆಲಕ್ಕೆ ಉರುಳಿದ ಹನಿಗಳಲ್ಲಿ ಅವಳ ನಿರಾಳ ನಗು,ಕಣ್ಣುಗಳಲ್ಲೂ ಕಣ್ಣೀರು ಮಂಗಮಾಯ !

ತಳಮಳ

ನಲ್ಲೆ ನಿನ್ನ ಮುಂಗುರುಳಿಗು ನನಗೂ ಒಂದೇ ಜಗಳ
ನಿನಗೆ ಮುತ್ತಿಡಲು ತರಬೇಕು ದಿನವೂ ಒಂದು ಮಲ್ಲಿಗೆ ಮಳ
ಆ ಮುಂಗುರುಳು ಉಚಿತವಾಗಿ ಮುತ್ತಿಕ್ಕುವುದ ಕಂಡು ನನ್ನೆದೆಗೆ ತಳಮಳ !

Friday, July 05, 2013

ಸಮ್ಮತಿ

ಕದ್ದು ಕದ್ದು ನೋಡುತ್ತಿದ್ದ ಕಣ್ಣುಗಳ ಕಂಡು..

ಕಣ್ಣ ಮಿಟುಕಿಸಿ ರವಾನಿಸಿದ ಸಂದೇಶವ.

ನಾಚುತ್ತಿದ್ದ ಕಣ್ಣುಗಳ ಅರಳಿಸಿ..

ನಸು ನಗೆಯ ಚೆಲ್ಲಿ , ಸಮ್ಮತಿಸಿದಳು !

ವಿರಸ


=======

ದಿನ ದಿನ ಇದಿರು ಬದಿರು ಆದರೂ

ಅಲ್ಲಿ ಮಾತುಗಳಿಲ್ಲ

ಕಣ್ಣು ಕಣ್ಣು ಕಲಿತರೂ

ಯಾವ ಸನ್ನೆಯೂ ಅಲ್ಲಿಲ್ಲ

ಅವನ ನಿರೀಕ್ಷೆ ಸುಳ್ಳಾದರೂ

ಅವಳಿಗೆ ಏನಾಗಿದೆ ಅಂತಾ ತಿಳಿಯಲಿಲ್ಲಿ

ಅವನ ಗೆಳೆತನ ಇವಳಿಗೆ ಬೇಕಿಲ್ಲ

ಇವಳ ಸ್ನೇಹದ ಅವಶ್ಯಕತೆ ಅವನಿಗೂ ಇಲ್ಲ !!

--------------------------------

Friday, June 28, 2013

ಅವಳು ಬರಬಹುದೇ ?


===================

ಕತ್ತಲಲ್ಲಿ ಮೂಡಿದ ರೆಖಾ ಚಿತ್ರಗಳು

ಕತ್ತಲೆಯ ಕಪ್ಪು ಹಚ್ಚಿ ವಿಲೀನವಾಗುವ ಮೊಡಗಳು

ಇರುಳ ತಂಪು ಸವರುತ್ತ ಬೀಸುವ ಸೌಮ್ಯ ಗಾಳಿ

ವರ್ಷಾ ಸುರಿಬಹುದೇ ಇಂದು ರಾತ್ರಿ ಇಡೀ..!

Thursday, June 27, 2013

THOUGHT FOR THE DAY

BEAUTY DIMINISHES WHEN YOU ADD YEARS TO YOUR LIFE WHEREAS THE CHARACTER DOES NOT. 

ತುಮುಲ ಮನ


=======

ಶಬ್ದಕೋಶದಂತೆ ನನ್ನ ಮನ

ಅರ್ಥಗಳ ಹರಿವು ತುಂಬಿದ ವನ !

ಅಲ್ಲಿಲ್ಲಿ ಅಲೆಯಬೇಡ ಹುಡುಕುತ್ತಾ ಸಾಂತ್ವನ..

ಕೋಶದ ಪುಟಗಳನ್ನು ತಿರುವಿ ಹಾಕೋಣ,

ಪಡೆಯಬಲ್ಲೆವು ನಾವು ಹಸನು ಬಾಳಿನ ಜೀವನ !!

--------------------------------------------

Wednesday, June 26, 2013

ಗೆಳೆತನದ ನೌಕೆ

================
ಗೆಳೆತನದ ಮೇಲೆ ನಂಬಿಕೆ ಇಟ್ಟಿದ್ದು ಸುಳ್ಳಾಯಿತು 

ನೌಕೆಯ ಉಳಿಸುವ ಪ್ರಯತ್ನವೆಲ್ಲಾ ವ್ಯರ್ಥವಾಯಿತು

ಅದು ಯಾರ ದೃಷ್ಠಿ ತಾಕಿತೋ..ತೇಲದೆ ನೌಕೆ ಮುಳುಗಿಹೋಯಿತು !! 

ಸೋಲು- ಗೆಲುವು

==============

ನಮ್ಮಿಬ್ಬರ ಸಂವಾದದಲ್ಲಿ ಸೋತದ್ದು ನಾನೆ..

ಉತ್ತರಿಸಲಾಗದೇ ಸಹಿ ಹಾಕೆದೆ ಅವಳ ತುಟಿಗಳಿಗೆ..! 

ಜನಸೇವೆ

============

ಜನತೆಯ ಸೇವೆ ಮಾಡಲು,

ಸಚಿವರಿಗೆ ಬೇಕಂತೆ........ ಐಷಾರಾಮಿ ಕಾರುಗಳು !

ಕಾಲಿಗೆ ಚಪ್ಪಲಿಗಳು ಕೂಡಾ ಇರದೇ,

ಸಾಗುವರು ನಮ್ಮ ಜನತಾ ಜನಾರ್ಧನರು !!

-------------------------------------

ಸೌಮ್ಯ ಸಾರ


=======
ಮನೋಜನ ಸತಿ

ವಿನಮ್ರ ಗುಣವತಿ

ನುಡಿಗಳು ಇತಿ

ನಡೆಯಲ್ಲಿ ಸುಮತಿ

ಇವಳು ಮನೆಯ ಆರತಿ !

ಸೌಮ್ಯಾತನಯ

ಬಲು ವಿನಯ

ನಗು ಅನನ್ಯ

ಪ್ರೀತಿಯ ಮನನ

ಮನೆ ನಂದಾನವನ !!
--------------------Tuesday, June 25, 2013

ಕಾಡಿಗೆ ಮಹಿಮೆ


========

ಕಣ್ಣಿಗೆ ಕಾಡಿಗೆ

ತೀಡಿದ ಮಾರವ್ವ !

ಹುಡುಗರು ಹೆದರಿ,

ಕೂಗುತಿರುವರು... ದೆವ್ವಾ...ದೆವ್ವಾ !

--------------------------------

ಹಿತವಚನ - ಮೇಲು V/s ಕೀಳು

ಮೇಲು - ನಾವು ದುಃಖದಲಿದ್ದಾಗಲೂ, ಅನ್ಯರ ಸಂತೋಷದಲ್ಲಿ ಪಾಲುಗೊಂಡು ಅವರಲ್ಲಿ ಒಬ್ಬರಾಗಿ ವರ್ತಿಸುವುದು.


ಕೀಳು - ನಮ್ಮ ಸುಖಕ್ಕಾಗಿ ಅನ್ಯರ ಸುಖ ಕಿತ್ತುಕೊಂಡು ಆನಂದಿಸುವುದು.

THOUGHT FOR THE DAY

FEELING HAPPY FOR OTHERS AND BEING ONE AMONG THEM MAKES YOUR CHARACTER RICHER AND RICHEST, INSPITE OF YOUR TONES OF WORRIES.

ಮತ್ತೆ


ಏಕೋ ಇಂದು..

ಮನವು ಕುಲುಕಿ

ಕುಣಿಯುತಿದೆ ಹೃದಯ !

ಮತ್ತೆ ಬೇಕೆನ್ನಿಸಿದೆಯೋ ಅದಕ್ಕೆ...?

ಪ್ರೀತಿ, ಪ್ರೇಮ, ಪ್ರಣಯ !

ಮಮತೆ

ದಿನೆ ದಿನೆ ಉಕ್ಕಿದೆ, ಅವಳ ಮೊಗದಲ್ಲಿ ಮಮತೆಯ ನಗು..

ಇನ್ನು ಕೆಲವೇ ದಿನಗಳಲ್ಲಿ ಆಡಲಿದೆ, ಅವಳ ಮಡಿಲಲ್ಲಿ ಪುಟ್ಟ ಮಗು !


Saturday, June 22, 2013

ಜೀವನ

ಜೀವನ : " ಕಾಲಿ ಹಾಳೆಯ ಮೇಲೆ ಮೂಡಿಸಬಹುದಾದ ಅರ್ಥಪೂರ್ಣ ಸಾಲುಗಳು "

ಹನಿ ಹನಿ ಪ್ರೇಮ್ ಕಹಾನಿ

============
ಹನಿ ಹನಿ ಬೀಳುತ್ತಲೆ ಶುರುವಾಯ್ತು ಪ್ರೇಮ್ ಕಹಾನಿ

ಹನಿ ಒಡೆಯುತ್ತಲೇ ಭೂಮಿಗೆ ತುಂಬಿ ಬಂತು ಜವಾನಿ

ಅವನ ಪ್ರೇಮ ಎಷ್ಟು ಚಂದ ಚಟ ಪಟ ಎನ್ನುತಿದೆ ಅವನ ದ್ವನಿ 

ಮುದ ನೀಡುತ್ತಾ ಅವಳ ಹೃದಯಕ್ಕೆ ,ಮನದಲಿ ಬಿತ್ತಿದನು ಪ್ರೀತಿಯ ಗಣಿ

ಹಸಿರು ಬಸಿರಾದ ಭುವಿಗೆ ಹೂವ, ಲತೆ, ಬಳ್ಳಿಗಳ ಆರೈಕೆ !

--------------------------------------------------

Thursday, June 20, 2013

ಕಿಡಿ ನುಡಿ

ಮೋಸದಿಂದ ಉಪಾಯ ಮಾಡಿ ದಾಳಿ ಮಾಡುವರು ಕ್ರೌರ್ಯ ಮೆರೆವವರು  " ಹೇಡಿಗಳು "

ಯಾವುದೇ ಜಾಗದಲ್ಲೂ,  ಎಲ್ಲಾ ಸಮಯದಲ್ಲೂ ಆತ್ಮ ರಕ್ಷಣೆಗೆ ದಾಳಿ ಮಾಡಬಲ್ಲವರು ಕೆಚ್ಚೆದೆಯ " ಧೈರ್ಯವಂತರು " 

THOUGHT FOR THE DAY


I BELIEVE people blindly, since I have faith on my decisions . But it is the responsiblity of the person to make my belief TRUE & I'm cautious enough to observe that silently.

Monday, June 17, 2013

ವಿಷಕನ್ಯೆ

ಬಳಕುತ್ತಾ ನಡೆವ, ಬಾಹ್ಯ ಸೌಂದರ್ಯಕ್ಕೆ ಮೋಹಗೊಂಡು ವರಿಸಿದ ಕನ್ಯೆ

ಅವಳು ಪೊರೆ ಬಿಟ್ಟಾಗಲೇ ತಿಳಿದಿತ್ತು... ಅವಳೊಂದು " ವಿಷಕನ್ಯೆ"

ಸಂಚು

ಮುಗ್ಧ ಜನರನ್ನು ಮೋಸ ಮಾಡಲೆಂದೇ ಹೂಡಿದ್ದರು ದುರ್ಜನರು ಸಂಚು,

ಮುಗ್ಢರನ್ನು ಸೃಶ್ಟಿಸಿದ ಭಗವಂತನಿಗೆ ಕಾಣಿಸದೇ ಇವರ ಹೊಂಚು,

ಗುಡುಗಿದ, ಸಿಡಿದೆದ್ದ ಮುಕ್ಕಣ್ಣ... ಸುಟ್ಟು ಬೂದಿಯಾದರು ದುರ್ಜನರು.., ಅವರ ಮೇಲೆ ಬಿದ್ದಾಗ ಮಿಂಚು !

ನೀತಿ

ಪರರ ಹಾಸಿಗೆಯಲ್ಲಿ ಮುಳ್ಳನಿಟ್ಟು ಆನಂದಿಸಿದವರು .., ತಮ್ಮ ಹಾಸಿಗೆಯಲ್ಲಿ ಮುಳ್ಳ ಕಂಡಾಗ ಹೌಹಾರಿದರು. 

ಪ್ರೀತಿ

ಅವನು ಬರೆದ ಪ್ರೇಮ ಪತ್ರಗಳೆಲ್ಲಾ ವ್ಯರ್ಥ
ಏಕೆಂದರೆ,
ಅವಳಿಗೆ ತಿಳಿಯಲೇ ಇಲ್ಲ ಪ್ರೀತಿಯ ಅರ್ಥ !!

Friday, June 14, 2013

ಸೂಳೆಯ ಕನಸ್ಸು


ಮದುವೆಯಾದ ವರ್ಷದಲ್ಲೇ ಗಂಡನ್ನು ತೊರೆದು

ತನ್ನ ಹಸಿ ಚಟಕ್ಕೆ ಮೊರೆಹೊಗಿ ಮೆರೆದು

ಬೆನ್ನ ಹತ್ತಿಹಳು ತನ್ನ ವಿಚಿತ್ರ ಕನಸ್ಸುಗಳ

ನೆಪಕ್ಕೆ ಮಾತ್ರ ಕುತ್ತಿಗೆಗೆ ತಾಳಿ ಕಟ್ಟಿ

ಸಿಕ್ಕ ಸಿಕ್ಕ ಗಂಡಸರೊಂದಿಗೆ ತೀರಿಸಿಕೊಳ್ಳುತ್ತ ಚಟ

ಬೃಹತ್ ನಗರದ ಐಷಾರಾಮಿ ಜೀವನ

ಆ ನಗರದಲ್ಲೊಂದು ದೊಡ್ಡ ಬಂಗಲೆ

ತನ್ನ ಚಟಗಳಿಗೆ ಹಣ ಹರಿಸಬಲ್ಲ ಒಂದು ಗಂಡು

ಹಣದ ವ್ಯಾಮೋಹ ಹತ್ತಿದ ಧನಪಿಶಾಚಿ

ಸಮಾಜದ ಕೆಟ್ಟ ಹುಳುಗಳು ಇವು

ಜಗವ ಕೆಡಿಸುತ್ತಿರುವ ಸೂಳೆಗಳು..  ಬರಬಾರದೇ ಇವರಿಗೆ ಬೇಗ ಸಾವು.

ಹಿತವಚನ

ಕನಸ್ಸು ಕಾಣುವುದು ಒಳ್ಳೆಯದೇ.. , ಅವುಗಳನ್ನು  ಪೂರ್ಣಗೊಳಿಸಲು ನಿಮ್ಮ ಸತತ ಪರಿಶ್ರಮದಿಂದ ಪ್ರಯತ್ನಿಸಿ.

Wednesday, June 12, 2013

ಕಣ್ಣ ಹನಿ

ಸಹಸ್ರ ಹೂವುಗಳ ವೃಷ್ಟಿ ಹರಿದರೂ...


ಒಂದೇ ಒಂದು ಮುಳ್ಳು ಚುಚ್ಚಿದರೂ...

ಕಣ್ಣು ಒದ್ದೆ ಆಗುವುದು ಮಾತ್ರ  ತಪ್ಪುವುದಿಲ್ಲ ...

ಕಾರಣ,

ಮೊದಲನೆಯದು ಆನಂದ ಭಾಷ್ಪ.

ಎರಡನೆಯದು ಒಳ ನೋವು...!!

Monday, June 10, 2013

THOUGHT FOR THE DAY

Human beings have turned so lazy now a days that they dont have time to do good to others but have lots to dirty ideas to destroy many.

TOUCH

The feel of your Touch


Spreads fragnance in my body

Moment I'm awake rubbing my eyes

the glimpse of your happiness gives me more relief

Saturday, June 08, 2013

THOUGHT FOR THE DAY

I don't have any expectations from LIFE, But I would offer many expectations to LIFE.

Thursday, June 06, 2013

ಹೊಸ ವಿನ್ಯಾಸ=========

ಅವಳ ಹೊಸ ವಿನ್ಯಾಸ ಮೂಡಿಸಿತು ಬೆರಗು

ಬಡಿದಂತಾಯಿತು ಸೂಕ್ಷ್ಮ ಹೃದಯಳಿಗೆ ಸಿಡಿಲು

ಮತ್ತೇರಿಸುತಿದೆ ಬಿನ್ನಾಣಗಿತ್ತಿಯ ಮೆರಗು

ಕೈಗೆಟುಕದ ಹುಡುಗರಿಗೆಲ್ಲಾ ತಪ್ಪದು ಕೊರಗು .

--------ಭಾವಪ್ರಿಯಾ----------

THOUGHT FOR THE DAY

I WAS NEVER ALONE NOR WILL I BE .... BECAUSE ITS ME, WHO HAS TO REACH MY DESTINY WITH ALL MY OWN.

वोह कोई और ही हैमेरे हर सुभह को ख़ूबसूरत बनानेवाली

नए आशावों से पल पल को भरनेवाली , वोह कोई और ही है !

जिसके बातें मुझे अपना पन का एहसास दिलाती है

जिसिकी हर सास से प्यार उभर उभर आती है , वोह कोई और ही है !

उसकी एक मुस्कान से हर फूल खिलते है

उसकी अनंत देखभाल से जो बाग़ में ख़ुशी खिल जाती है , वोह कोई और ही है !

मेरे जीवन में रंग भरनेवाली जो, तू तो कभी थिही नहीं

मेरे आंगन को हरा भरा करनेवाली , वोह कोई और ही है !

Thursday, May 30, 2013

ಕಳಂಕಿತೆ

ಕಳಂಕ ಹೊತ್ತು ಮನೆ ಬಿಟ್ಟು ನಡೆದವಳು
ತಾನು ಕಳಂಕಿತಳಲ್ಲಾ ಅನ್ನುವದ ನಿರೂಪಿಸಲೇ ಇಲ್ಲಾ
ಏಕೆಂದರೆ, ಅವಳ ಅಂತರಂಗ ಕೂಡಾ ಅವಳು ಕಳಂಕಿತೆ  ಅಂತಾ ಸಾರಿ ಸಾರಿ ಹೇಳುತ್ತಿತ್ತು.

Monday, May 27, 2013

ಕಿಡಿ ನುಡಿ


ಕೊಬ್ಬು ಮೈಯೊಳಗೆ ಬೆಳೆದರೆ ಪರವಾಗಿಲ್ಲಾ  (ಸ್ವಂತ ವಿಚಾರ)

ಆದರೆ,

ನಿಮ್ಮ ನಡೆ ನುಡಿಗಳನ್ನು ಕೊಬ್ಬಿನಿಂದ ಪೋಶಿಸಬೇಡಿರಿ.  (ಪರರರಿಗೂ ತಟ್ಟುವ ವಿಚಾರ)

"ಪಾದರಕ್ಷೆ "


ನಡೆದು ನಡೆದು ನೋವನುಂಡ ಕಾಲುಗಳಿಗೆ ಸವೆದ ಚಪ್ಪಲಿಗಳು

ಸೊಲುಗಳು ಕತ್ತರಿಸಿದರೂ ಕಾರ್ಯ ಸ್ಥಗಿತಗೊಳಿಸಲಿಲ್ಲ ಅವುಗಳು

"ಪಾದರಕ್ಷೆ " ತನ್ನ ಹೆಸರಿಗೆ ಕುಂದು ಬಾರದೆ ರಕ್ಷಿಸಿದ ಪಾದುಕೆಗಳು

ಹೊಸ ಸೊಲುಗಳ ಹಚ್ಚಿ ಬಿಟ್ಟೊಡನೆ ಮತ್ತೆ ಆ ರಕ್ಷೆಗಳಿಗೆ ಹೊಸ ಜೀವನ ಶುರು !

Friday, May 24, 2013

ಹಿತ ವಚನ

ತಿಳಿಯದೇ ತಪ್ಪು ಮಾಡಿ ಅದಕ್ಕೆ ಕ್ಷಮಾರ್ಪಣೆ ಕೇಳುವವರಿಗೆ ಕ್ಷಮಿಸಬಹುದು .... ಅದರೆ ತಿಳಿದು ತಿಳಿದು ತಪ್ಪು ಮಾಡಿ ಸೋಗು ಮಾಡವರನ್ನು ಎಂದಿಗೂ ನಂಬಬಾರದು ಹಾಗೆ ಕ್ಷಮಿಸೂಬಾರದು !!  

Thursday, May 23, 2013

ಗಂಡ ಹೆಂಡತಿ ಜಗಳ...


ನೆನ್ನೆ ವರ್ಷಧಾರೆ ಸುರಿಸಿದವಳು ಎಲ್ಲಿರುವಳು ಎಂದು ನೋಡಲು ಆಗಸದೆಡೆಗೆ

ಬಿದ್ದು ಬಿದ್ದು ನಗುತಿದ್ದ ಚಂದ್ರ ಅಂದ, ಮುನಿಸಿಕೊಂಡ ಹೆಂಡತಿಯ ರಮಿಸದೇ ಕೂಡುವ ಗಂಡು ನಾನಲ್ಲ !!

***ಭಾವಪ್ರಿಯಾ***

THOUGHT FOR THE DAY

EXPRESS YOURSELF WITHOUT RELUCTANCE, THOUGH YOU MAY NOT FIND SOLUTIONS TO THE PROBLEMS BUT ATLEAST YOU WILL GET SOME RELIEF FOR YOUR PAINS.

Wednesday, May 22, 2013

ಒಲವಿನ ಕಾದಂಬರಿ ಸಂಚಿಕೆ - ೨


ಒಂದು ವರ್ಷದ ಓದು ಮುಗಿದೇ ಹೋಯ್ತು, ಆ ಒಂದು ವರ್ಷದಲ್ಲೆ ರಾಜ್ಗೆ ಏರಿಳಿತದ ಅನುಭವ ಕೂಡಾ ಆಯ್ತು. ಜೀವನ ಹಾಗೆ ತಾನೆ ಏರಿಳಿತಗಳ ಪ್ರಯಾಣ. ಗೆಳೆಯರ ನಡುವೆ ಹೆಚ್ಚು ಒಡನಾಟ, ಎಲ್ಲರೂ ಕೂಡಿಕೊಂಡು ಕಾಲೇಜಿನ ಜೀವನವನ್ನು ಸಂತೋಷದ ಕ್ಷಣಗಳಿಂದ ಕಳೆಯುತ್ತಿದ್ದರು. ಸಾಮಾನ್ಯವಾಗಿ ಹುಡುಗೀಯರಿಗೆ ಓದೊ ಹುಚ್ಚು.., ಹುಡುಗರದು ಲೈಫ್ ಎಂಜಾಯ್ ಮಾಡುವ ತವಕ, ಅದಕ್ಕೆ ಹುಡುಗರು ಹಾದಿ ತಪ್ಪುವುದು , ಇಲ್ಲಾ ಯಾವುದೊ ಒಂದು ಚಟಕ್ಕೆ ಬಲಿಯಾಗುವುದು , ಇಲ್ಲಾ ಪ್ರೀತಿಯಲ್ಲಿ ಬಿದ್ದು ಓದುವುದ ಮರೆತು ಅತ್ಯಮೂಲ್ಯ ಸಮಯವನ್ನು ಹಾಳು ಮಾಡಿಕೊಳ್ಳುವುದು. ಇವೆಲ್ಲಾ ಹುಡುಗಿಯರ ಜೀವನದಲ್ಲಿ ಆಗುವುದಿಲ್ಲಾ ಅಂತೇನೂ ಇಲ್ಲಾ, ಅಲ್ಲಿಯೂ ಆಗುತ್ತವೆ ಆದರೆ ಕಡಿಮೆ ಪ್ರಮಾಣದಲ್ಲಿ. ಸರಿ ರಾಜ್ ಸ್ವಲ್ಪ ಜಾಗರುಕನಾಗುತ್ತಾನೆ, ಮೊದಲನೆ ವರ್ಷದ ಸ್ಥಿತಿ ಮತ್ತೆ ಬರಬಾರದು ಅಂದುಕೊಂಡು ಶ್ರದ್ದೆಯಿಂದ ವಿಧ್ಯಾಭ್ಯಾಸ ಮಾಡುತ್ತಿರುತ್ತಾನೆ. ಕ್ಲಾಸಿನ ಪರೀಕ್ಷೆಗಳಲ್ಲಿ ಒಳ್ಳೆಯ ಅಂಕ ಪಡೆದು ಮುನ್ನುಗ್ಗುತ್ತಿರುತ್ತಾನೆ. ಈ ಸಮಯದಲ್ಲಿ ತನ್ನದೇ ಕ್ಲಾಸಿನವಳಾದ ಗೀತಾಳ ಪರಿಚಯವಾಗುತ್ತದೆ. ಗೀತಾ ಸ್ವಲ್ಪ ಸುಂದರಿ, ಶ್ವೆತ ವರ್ಣ, ಅಚ್ಚುಕಟ್ಟು ಮೈಕಟ್ಟು ಧಾರ್ಮಿಕ ಹಾಗು ಒಳ್ಳೆಯ ಮನೆತನದವಳಾಗಿರುತ್ತಾಳೆ. ಸ್ವಚ್ಚ ಮನಸು ಅವಳದು, ನೇರ ಹಾಗು ದಿಟ್ಟ ಸ್ವಭಾವದವಳು. ಒಂದೇ ಕ್ಲಾಸಿನಲ್ಲಿ ಓದುತ್ತಾರೆ ಅಂದರೆ ಗೆಳೆತನ ಇರಲೇಬೇಕಲ್ಲವೆ ಅನ್ನುತ್ತಾ ನಮ್ಮ ರಾಜ್ ನೆ ಮೊದಲ ಬಾರಿಗೆ ಅವಳಿಗೆ ತನ್ನ ಪರಿಚಯ ನೀಡಿ ಅವಳನ್ನು ಪರಿಚಯ ಮಾಡಿಕೊಂಡಿರುತ್ತಾನೆ. ಮೊದಲ ದಿನ ಮೆಷ್ಟ್ರುಗೆ ಕಾಯುತ್ತಾ ಎಲ್ಲರೂ ಹೊರಗೆ ನಿಂತಾಗ ಗೀತಾ ಒಬ್ಬಳೇ ದೂರದಲ್ಲಿ ನಿಂತು ಹುಡುಗರು ಏನ್ ಮಾಡುತ್ತಾರೆ, ಎಲ್ಲಿಗೆ ಹೋಗುತ್ತಾರೆ , ಯಾರ ಪರಿಚಯವೂ ಇಲ್ಲ ಹೇಗೆ ನಾನು ಮಾತನಾಡಿಸಲಿ, ಯಾರಿಗೆ ಮಾತನಾಡಿಸಲಿ ಅನ್ನೋ ದುಗಡದಿಂದ ಇದ್ದಾಗ ನಮ್ಮ ರಾಜ್ ಸೂಕ್ಷ್ಮವಾಗಿ ಗಮನಿಸಿ ಅವಳ ಸಹಾಯಕ್ಕಾಗಿ ನಿಲ್ಲುತ್ತಾನೆ. ಹಾಯ್ ನಾನು ರಾಜ್….ನಿಮ್ಮ ಹೆಸರು….ಅವಳು ಹೆಲೋ ನನ್ನ ಹೆಸರು ಗೀತಾ ನಿಮ್ಮ ಕ್ಲಾಸಿನವಳೆ….ಹಾ ಗೊತ್ತು ನಿಮ್ಮನ್ನ ಮೊದಲನೆ ವರ್ಷ ಗಮನಿಸಿದ್ದೆ ಆದರೆ ನೀವು ನಮ್ಮ ಕ್ಲಾಸಿನವರು ಅಂತಾ ತಿಳಿದಿರಲಿಲ್ಲ ಅನ್ನುತ್ತಾನೆ. ಗೀತಾಗೆ ಅಂತೂ ಒಬ್ಬ ಗೆಳೆಯ ಸಿಕ್ಕಾ ಅನ್ನುವ ಖುಷಿಯಾಗುತ್ತದೆ. ಹೀಗೆ ಹಾಯ್ ಬಾಯ್ ಅನ್ನುತ್ತಾ ಒಂದು ವಾರ ಕಳೆಯುತ್ತದೆ. ಒಂದು ದಿನ ಗೀತಾ ಕ್ಲಾಸ್ ಮಿಸ್ ಮಾಡಿಕೊಂಡಿರುತ್ತಾಳೆ ಅಂದಿನದ ನೋಟ್ಸ ಬೇಕಿತ್ತು ಅಂತಾ ರಾಜ್ಗೆ ಕೇಳುತ್ತಾಳೆ…, ಅದಕ್ಕೆ ರಾಜ್ ಸರಿ ನಾಳೆ ತಂದು ಕೊಡುತ್ತೇನೆ ಅಂತಾ ಹೇಳಿ ಹೊರಡ ಬೇಕು ಅನ್ನುವಷ್ಟರಲ್ಲಿ…ಗೀತಾ ಅವನನ್ನು ಕೂಗಿ ನಿಮ್ಮ ಕಾಂಟ್ಯಾಕ್ಟ ಮಾಡಲು ನಂಬರ್ ಏನಾದರು ಇದೆನಾ ಅಂತಾ ಕೇಳುತ್ತಾಳೆ. ರಾಜ್ ಹಾ ಇದೆ ಮನೆಯ ಲ್ಯಾಂಡಲೈನ್ ನಂಬರ್ ಆಗಬಹುದೇ..? ಓಹೋ ಪರವಾಗಿಲ್ಲಾ..ಕೊಡಿ ಅಂತಾ ಹೇಳಿ ತೊಗೊಳುತ್ತಾಳೆ. ಮತ್ತೆ ದಿನಗಳು ಎಂದಿನಂತೆ ಸಾಗುತ್ತವೆ. ಕೆಲವು ದಿನಗಳ ನಂತರ ರಾಜ್ ಮನೆಗೆ ಒಂದು ದೂರವಾಣಿ ಕರೆ ಬರುತ್ತದೆ. ರಾಜ್ ನ ತಂದೆ ಆ ಕರೆಯನ್ನು ಸ್ವಿಕರಿಸುತ್ತಾರೆ…, ಆದರೆ ಆಕಡೆಯಿಂದಾ ಯಾವುದೇ ಧ್ವನಿ ಕೇಳಿ ಬರುವುದಿಲ್ಲ. ಒಂದೆರೆಡು ಬಾರಿ ಹೀಗೆಯೇ ಆಗುತ್ತದೆ.., ಅದಕ್ಕೆ ರಾಜ್ ನ ತಂದೆ ಪೋನನ್ನು ತೆಗೆದು ಇಟ್ಟುಬಿಡುತ್ತಾರೆ. ರಾಜ್ ಕೂಡ ಈ ಕರೆಯ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ.  ಇತ್ತ ಕಾಲೇಜಿನಲ್ಲಿ ಎರಡು ಮೂರ ದಿನದ ವರೆಗೆ ಗೀತಾ ಹಾಗು ರಾಜ್ ನ ಮಾತು ಕಥೆಗಳು ಆಗಿರುವುದಿಲ್ಲ. ರಾಜ್ ಲೈಬ್ರರಿಗೆ ಹೋಗಿ ಯಾವುದೋ ಪುಸ್ತಕವನ್ನು ಹುಡುಕುತ್ತಿರುತ್ತಾನೆ ಅಷ್ಟರಲ್ಲಿ ಗೀತಾ ಕೂಡಾ ಅಲ್ಲಿಗೆ ಬರುತ್ತಾಳೆ..ದೂರದಲ್ಲಿ ನಿಂತು ರಾಜನನ್ನು ನೋಡಿ ಮಂದಹಾಸ ನೀಡುತ್ತಿರುತ್ತಾಳೆ..ಅವಳಿಗೆ ಏನೋ ಹೇಳುವುದಿರಬೇಕು ಅದಕ್ಕೆ ಹಾಗೆ ಮಾಡುತ್ತಿದ್ದಾಳೆ ಅಂದುಕೊಂಡು ರಾಜ್ ಅವಳಬಳಿ ಹೋಗಿ ಏನ್ ವಿಷಯ ಅಂತಾ ವಿಚಾರಿಸುತ್ತಾನೆ…ಅವಳು ಏನು ಇಲ್ಲಾ ನಿನಗೆ ಒಂದು ವಿಷಯ ಹೇಳಬೇಕಿತ್ತು..ಅಂದಳು., ರಾಜ್ ಸರಿ ಹೇಳು ಅಂದನು…ಸ್ವಲ್ಪಾ ತಡಿ ನೀನೆನಾದರೂ ನಮ್ಮ ಮನೆಗೆ ಕರೆ ಮಾಡಿದ್ದಿಯಾ ಅಂತಾ ಕೇಳಲು ದೊಡ್ಡ ನಗೆ ಬೀರಿ ಹೌದು ನಾನೆ ಮಾಡಿದ್ದು…, ಅದು ಯಾರದೊ ಮನೆಗೆ ಹೋಗಿರಬೇಕು ಅಂದುಕೊಂಡು ಇಟ್ಟೆ, ಮತ್ತೆ ಮಾಡಿದರೂ ಯಾರೋ ದೊಡ್ಡವರ ಧ್ವನಿ ಕೇಳಿದಂತಾಯಿತು ಅದಕ್ಕೆ ಇಟ್ಟುಬಿಟ್ಟೆ.. ಹೌದು ನೀನು ಏಕೆ ಕರೆ ತೊಗೊಳಲಿಲ್ಲಾ..? ಅಂತಾ ಕೇಳುತ್ತಾಳೆ.. ನನಗೆ ನಮ್ಮ ಮನೆಯಲ್ಲಿ ಯಾವುದೇ ಕರೆಗಳು ಬರುವುದಿಲ್ಲಾ ಅದಕ್ಕೆ ನಾನು ಅದರ ಗೋಜಿಗೆ ಹೋಗುವುದಿಲ್ಲಾ ಅನ್ನುತ್ತಾನೆ ರಾಜ್. ಸರಿ ನನ್ನ ತಂದೆ ಕರೆ ಸ್ವಿಕರಿಸಿದಾಗ ಮಾತನಾಡಬೇಕಿತ್ತು ಅವರಿಗೆ ಕೇಳಿದ್ದರೆ ನನಗೆ ಕರೆಯುತ್ತಿದ್ದರು ಹಾಗೆಕೆ ಮಾಡಿದೆ ಎಂದು ರಾಜ್ ಪ್ರಶ್ನಿಸಿದ ಅದಕ್ಕ ನಿಮ್ಮ ತಂದೆ ನನಗೆ ಬೈಯ್ಯಬಹುದು ಎಂದು ಭಯಗೊಂಡು ಇಟ್ಟುಬಿಟ್ಟೆ ಅಂದಳು. ಸರಿ, ಇನ್ನೊಂದು ಸರಿ ನಿನ್ನ ಪರಿಚಯ ಹೇಳಿ ರಾಜ್ ಬೇಕಿತ್ತು ಅಂತಾ ಹೇಳು ಅವರು ಏನು ಬೈಯ್ಯುವುದಿಲ್ಲಾ ಅಂತಾನೆ.  ಮತ್ತೆರಡು ದಿನದ ನಂತರ ಕರೆ ಮಾಡಿ ಅಂಟಿ ನಾನು ಗೀತಾ ಸ್ವಲ್ಪ ರಾಜ್ ಇದ್ದರೆ ಕೊಡ್ತೀರಾ ಅಂದಳು. ರಾಜ್ ನ ಅಮ್ಮ ರಾಜ್ ನಿನ್ನ ಗೆಳತಿ ಅಂತೆ ಯಾರೋ ಕರೆ ಮಾಡಿದ್ದಾರೆ ನೋಡಪ್ಪಾ….ರಾಜ್ ಕರೆಯನ್ನು ಸ್ವಿಕರಿಸುತ್ತಾನೆ. ಎಯ್ ನಾನು ಕಣೋ ಗೀತಾ….ನಾಳೆ ಬರಬೇಕಾದಾಗ ಪ್ರ್ಯಾಕ್ಟಿಕಲ್ ಪುಸ್ತಕ ತೊಗೊಂಡು ಬಾ, ನಾನು ಕಾಪಿ ಮಾಡಿಕೊಡ್ತೀನಿ ಅಂದಳೆ…ಆಯ್ತು..ಮತ್ತೆ ಏನ್ ಸಮಾಚಾರ…? ಏನೂ ಇಲ್ಲಾ ಮನೆಲಿ ಬೊರ ಆಗ್ತಾ ಇತ್ತು.., ಸರಿ ನಿನ್ನ ಹತ್ರ ಮಾತಾಡೋಣ ಅಂದು ಕೊಂಡು ಪೋನು ಮಾಡಿದೆ ಹಾಗೆ ನೋಟ್ಸ ಕೂಡಾ ಬೇಕಿತ್ತು ಅಲ್ಲಾ.. ಹಾಗೆ ಮಾಡಿದೆ. ಹೌದು ನಿಮ್ಮ ಮನೆಲಿ ಹುಡುಗಿ ಪೋನ್ ಮಾಡಿದರೆ ಏನು ಅನ್ನುವುದಿಲ್ವಾ..? ರಾಜ್ ಅದಕ್ಕೆ ಅರೆ ಏನು ಅನ್ನಬೇಕು ನಾನು ಒಳ್ಳೆಯ ಹುಡುಗ ಅಂತಾ ನಮ್ಮ ಮನೆಯವರಿಗೆ ಗೊತ್ತು ಅದಕ್ಕೆ ಏನು ಅನ್ನುವುದಿಲ್ಲಾ…ಆದರೆ ನೀನು ಅಂದು ಕರೆ ಮಾಡಿ ಮಾತನಾಡದೇ ಇದ್ದಾಗ ನನ್ನ ಮೇಲೆನೆ ಅನುಮಾನ ಬಂದಿತ್ತೇನೊ ನನ್ನ ಅಪ್ಪನಿಗೆ, ಅದಕ್ಕೆ ನಿನ್ನ ಬಗ್ಗೆ ಎಲ್ಲಾ ಹೇಳಿದ್ದೇನೆ, ಮುಂದಿನ ಬಾರಿ ಕರೆ ಮಾಡಿದರೆ ನಿನ್ನ ಹೆಸರು ಹೇಳು ಅವರು ಏನೂ ಅನ್ನುವುದಿಲ್ಲಾ ಅವರು ಕೂಡಾ ನಿನಗೆ ಚೆನ್ನಾಗಿ ಮಾತನಾಡಿಸುತ್ತಾರೆ.ಸರಿ ಸರಿ ಕಣೋ ನಮ್ಮ ಅಮ್ಮ ಕೂಡ ಬರಬಹುದು ಅಡುಗೆ ಮಾಡಿರು ಅಂತಾ ಹೇಳಿದ್ದ್ರು ನಾನು ಹೊರಡುತ್ತೇನೆ…ಅರೆ ನಿನಗೆ ಅಡುಗೆ ಮಾಡಲಿಕ್ಕೆ ಬರುತ್ತಾ…ಅಂತಾ  ರಾಜ್ ಕೇಳಲು ಹ್ಮು ಬರುತ್ತೆ ಹುಡುಗಿ ಅಲ್ವಾ ಕಲಿಲೇ ಬೇಕು ಮುಂದೆ ಕಷ್ಟ ಆಗಬಾರದು ನೋಡು…ಅದಕ್ಕೆ. ಸರಿ ಸರಿ ನಾಳೆ ಕಾಲೇಜಿನಲ್ಲಿ ಸಿಗೋಣ. ಬಾಯ್ ಅಂತಾ ಹೇಳು ಇಡುತ್ತಾಳೆ. ಗೀತಾಳಿಗೆ ರಾಜ್ ಒಬ್ಬನೆ ಒಳ್ಳೆಯ ಸ್ನೇಹಿತ ಆಗಿ ಬಿಡುತ್ತಾನೆ. ದಿನೆ ದಿನೆ ಇವರ ಗೆಳೆತನ ಬಹಳ ಘಾಡವಾಗುತ್ತದೆ. ಒಂದು ದಿನ ರಾಜ್ ತನ್ನ ಎಲ್ಲಾ ಗೆಳೆಯ ಗೆಳತಿಯರೊಡನೆ ಕಾಲೇಜಿಗೆ ಬರುತ್ತಿರಿವಾಗ ಗೀತಾ ಇವನನ್ನು ನೋಡುತ್ತಾಳೆ…ಸ್ವಾರ್ತಥೆ ಇರಬಹುದು….ಯಾರು ಅವರೆಲ್ಲಾ ನಿನ್ನ ಗೆಳೆಯರೇ…??? ರಾಜ್ ಹೌದು ಗೆಳೆಯರು…..ಗೀತಾ ಮತ್ತೆ ಕೆಲ ಹುಡುಗೀಯರು ಕೂಡಾ ಇದ್ದರು….ಓಹೋ ಅವರಾ ಹೌದು ನಮ್ಮ ಊರಿನವರೆ ಎಲ್ಲರೂ….ಬಾ ಅವರಿಗೆ ಭೇಟಿ ಮಾಡಿಸುತ್ತೇನೆ ಅಂದನು ರಾಜ್.. ಇವನು ಮೋಹನ , ಪವನ್ ಮತ್ತೆ ಮಂಜು…ಎಲ್ಲರಿಗೂ ಹಾಯ್…… ಮತ್ತೆ ಇವಳು ಸ್ಮಿತಾ , ಕಾವ್ಯಾ, ಕವನ , ನಯನಾ..ನಯನಾ ನನ್ನ ಬಾಲ್ಯದ ಗೆಳತಿ…ಮತ್ತೊಬ್ಬಳು “ಸುಮನಾ”
ಸುಮನಾ ಮಂದಹಾಸ ಬೀರುತ್ತಾಳೆ. ಗೀತಾಗೆ ಮನದಲ್ಲಿ ಏನೋ ಪ್ರಶ್ನೆ ಮೂಡಿತು ಆದರೆ ಸುಮ್ಮನಾದಳು. ಎಲ್ಲರೂ ಕ್ಲಾಸಿಗೆ ತೆರಳುತ್ತಾರೆ. ಗೀತಾ ಬಿಡುವಿನಲ್ಲಿ, ಲೋ ರಾಜ್ ನಿನಗೆ ಇಷ್ಟೊಂದು ಗೆಳೆಯರು ಇದ್ದಾರಂತಾ ಏಕೆ ನೀನು ಮೊದಲೇ ಹೇಳಲಿಲ್ಲ…? ಅಯ್ಯೊ ಸಂದರ್ಭ ಬಂದಿರಲಿಲ್ಲ ಅದಕ್ಕೆ ಹೇಳಿರಲಿಲ್ಲ…ಅದಕ್ಕೇನಾಯ್ತು ಈಗ…ಏನು ಇಲ್ಲಾ ಹೋಗೋ…ಸರಿ ಇನ್ನೂ ಒಂದು ಗಂಟೆ ಯಾವ ಕ್ಲಾಸು ಇಲ್ಲಾ ನಾನು ಲೇಡಿಜ್ ರೂಮಿಗೆ ಹೋಗಿ ರೆಸ್ಟು ತೊಗೊತೀನಿ ಅಂತಾ ಹೇಳಿ ನಿರ್ಗಮಿಸುತ್ತಾಳೆ. ರಾಜ್ ಒಬ್ಬನೆ ಇದ್ದಾಗ ಆಕಡೆಯಿಂದ ಸುಮನಾ ಬರುತ್ತಾಳೆ…ಹಾಯ್ ರಾಜ್ ನಾನು ಲೈಬ್ರರಿಗೆ ಹೋಗ್ತಾ ಇದ್ದೇನೆ ಸ್ವಲ್ಪ ಪುಸ್ತಕ ಹುಡುಕುವುದರಲ್ಲಿ ಸಹಾಯ ಮಾಡುತ್ತೀಯಾ….ಹ್ಮು ಸರಿ ನಡಿ ಹೋಗೋಣ ಅಂದ ರಾಜ್. ಇಬ್ಬರು ಒಂದೊಂದು ಪುಸ್ತಕ ಹಿಡಿದು ಓದಲು ಕೂರುತ್ತಾರೆ. ಕೆಲ ಸಮಯ ಕಳೆದ ನಂತರ ಗೀತಾ ಕೂಡಾ ಲೈಬ್ರರಿಗೆ ಬರುತ್ತಾಳೆ.., ಇಬ್ಬರೂ ಕೂಳಿತದ್ದನ್ನು ಕಂಡು ಕಾಣದೆ ಇರುವ ಹಾಗೆ ನಡೆದು ಬಿಡುತ್ತಾಳೆ. ಇದನ್ನು ಗಮನಿಸಿದ ಸುಮನಾ ನೋಡೊ ನಿನ್ನ ಫ್ರೇಂಡು ಹೋಗ್ತಾ ಇದ್ದಾಳೆ ಅಂದಳು…ಸುಮ್ಮನೆ ಕೂತಕೊಂಡು ಓದಿಕೊ ಬರೀ ಕಾಲ್ ಎಳಿಯೋದೆ ನಿನ್ನ ಕೆಲಸ ಅಂದ. ಎಲ್ಲೋ ಗೀತಾಗೆ ಜಲಸ್ಸಿ ಅಂತಾರಲ್ಲಾ ಅದು ಶುರುವಾಗಿತ್ತು ಅನ್ನಿಸುತ್ತೆ. ಮರುದಿನ ಬಂದವಳೆ ಲೋ ರಾಜ್ ಏನಪ್ಪಾ ಸುಮನಾ ಜೊತೆ ನೆನ್ನೆ ಕಂಬಾಯಿನ್ ಸ್ಟಡಿ ನಡೆದಾಗಿತ್ತು ಅಂದಳು…ಹೌದು…ನೀನು ಯಾವಾಗ ನೋಡಿದೆ…? ಮತ್ತೆ ಯಾಕೆ ಅಲ್ಲಿ ಬರಲಿಲ್ಲಾ..? ಅಂದ ರಾಜ್….ಸುಮ್ನೆ ಯಾಕೆ ಡಿಸ್ಟರ್ಬ್ ಮಾಡೋದು ಅಂತಾ ಬರಲಿಲ್ಲಾ…! ಏನೋಪಾ ನೀವು ಹುಡುಗಿರನ್ನ ಅರ್ಥ ಮಾಡಿಕೊಳ್ಳುವುದೇ ಕಷ್ಟ….! ಸರಿ ನಡಿ ಕ್ಲಾಸಿಗೆ ಹೋಗೋಣ…ಇಬ್ಬರೂ ಕ್ಲಾಸಿಗೆ ಹೋಗುತ್ತಾರೆ. ಕ್ಲಾಸ ಮುಗಿದು ಹೊರ ಬರುತ್ತಾರೆ…, ಲೋ ನಾನು ಇವತ್ತು ಊಟದ ಡಬ್ಬಿ ತಂದಿಲ್ಲಾ ನಾನು ಒಬ್ಬಳೆ ಇದ್ದೀನಿ…..ಒಹೋ ಹೌದಾ ಯಾಕೆ….ಅಮ್ಮಂಗೆ ಹುಷಾರಿರಲಿಲ್ಲಾ ಅದಕ್ಕೆ ಕಟ್ಟಿ ಕೊಡಲಿಲ್ಲ…..ಸರಿ ಬಾ ಹಾಗಾದರೆ ನನ್ನ ಜೊತೆ ಊಟಕ್ಕೆ…ಅಯ್ಯಿ ಬೇಡಪ್ಪಾ ನಿನ್ನ ಮೆಸ್ಸಿನಲ್ಲಿ ಬರೀ ಹುಡುಗರೆ ಇರುತ್ತಾರೇನೋ…ಇಲ್ಲಾ ಬಾರಮ್ಮ ಎಲ್ಲರೂ ಇರುತ್ತಾರೆ ಅಲ್ಲಿ…ಮನಸ್ಸಿನಲ್ಲಿ ಹೋಗಬೇಕು ಅಂತಾ ಇದ್ದರೂ ಸುಮ್ಮನೆ ಬೇಡ ಅನ್ನುವುದು ರಾಜ್ ಮನದಲ್ಲೇ ಅಂದುಕೊಳ್ಳುತ್ತಾನೆ. ದಿನಾ ಇಲ್ಲೇ ಊಟಾ ಮಾಡ್ತೀಯಾ.. ಊಟಾ ತುಂಬಾನೆ ಚೆನ್ನಾಗಿದೆ, ನನಗೂ ದಿನಾ ಇಲ್ಲೇ ಬರಬೇಕು ಅನ್ನಿಸುತ್ತೆ. ಓಹೋ…..ಹಾಗೆ……ಸರಿ ಸರಿ ನಿಮ್ಮ ಅಮ್ಮನಿಗೆ ಹೇಳಿ ಬಿಡು ನಾನು ಕಾಲೇಜಿನಲ್ಲೇ ಊಟ ಮಾಡುತ್ತೇನೆ ಅಂತಾ ಅಂದನು…ಗೀತಾ ಹಾಗೇನಾದರೂ ಹೇಳಿದರೆ ಅಮ್ಮಾ ಬೈತಾರೆ ಅವರಿಗೆ ನಾನು ಹೊರಗಡೆ ಏನಾದರೂ ತಿಂದರೆ ಇಷ್ಟವಾಗುವುದಿಲ್ಲ ಅಂದಳು. ಸರಿ ಬಿಡಮ್ಮ..
ನಡಿ ಕ್ಲಾಸಿಗೆ ಹೋಗೋಣ. ರಣ ರಣ ಬಿಸಿಲು ಅದರಲ್ಲಿ ಆ ನಮ್ಮ ಮ್ಯಾನೇಜ್ ಮ್ಯಂಟ ಮೇಷ್ಟ್ರು , ಹೊಟ್ಟೆ ತುಂಬಿದೆ ಇನ್ನೂ ನಾವು ಲಕ್ಚರ್ ಕೇಳಿದಹಂಗೆ…??? ದಿನ ಮುಕ್ತಾಯ……! (ಮುಂದುವರೆವುದು..)

Thought for the day

When people seem to be stressed or angry , leave them alone for few span expecting things to be alright by sometime later.

Monday, May 20, 2013

ಮಳೆ ಗೆಳತಿ

ನಿನ್ನ ಆಗಮನವ ಸ್ವಾಗತಿಸುತಿಹರು ಗುಡುಗುಡುಗಿ
ಕ್ಷಣ ಕ್ಷಣ ನಡುವೆ ನಗೆಮೊಲ್ಲೆ ಚಲ್ಲಿದೆ ಮಿಂಚು
ಧರೆ ಬಾಯ್ ಬಿರಿದು ನಿನ್ನ ಆಹ್ವಾನಿಸಿಹಳು
ನಿನ್ನ ಅಕ್ಕರೆಯ ಸಿಂಚನ ಮೈಗೆ ಸೊಕಿ 
ವಾತಾವರ್ಣ ತಂಪಾಗುತಿದೆ... ಜೀವ ಸಂಕುಲವೆಲ್ಲವೂ ನಿರಾಳ !!

ಒಲವಿನ ಕಾದಂಬರಿ - ಸಂಚಿಕೆ ೧


ನಾಯಕ : ರಾಜ್        ಗೆಳೆಯರು : ಮೊಹನ , ಪವನ , ಮಂಜು
ನಾಯಕಿ : ಸುಮನಾ      ಗೆಳೆಯರು : ಸ್ಮಿತಾ , ಕಾವ್ಯಾ, ಕವನ , ನಯನಾ , ಗೀತಾ
 ಸನ್ ೧೯೮೦ ಇಸವಿಯ ಕಥೆ ಇದು..,ನಾಯಕ ರಾಜ್ ಒಬ್ಬ ಪ್ರತಿಭಾವಂತ, ಸುಸಂಸ್ಕೃತ, ಸ್ವಲ್ಪ ನಾಚಿಗೆ ಸ್ವಭಾವದ, ಒಳ್ಳೆಯ ಮನೆತನದ ಹುಡುಗ. ತಂದೆ ಅರೆಸರ್ಕಾರಿ ನೌಕರಿ ಅಧಿಕಾರಿ , ತಾಯಿ ಒಬ್ಬ ಅಧ್ಯಾಪಕಿ. ಮಗನಿಗೆ ಶಿಸ್ತಿನಿಂದ ಬೆಳೆಸುವಲ್ಲಿ ಇಬ್ಬರ ಪಾತ್ರವೂ ದೊಡ್ಡದು. ರಾಜ್ ಶಾಲಾ ಅಭಾಸ ಮುಗಿಸಿದ ನಂತರ ದೂರದ ಊರಿನಲ್ಲಿ ಪಿ ಯು ಸಿ ಮುಗಿಸಿ ಉತ್ತಮ ಅಂಕ ಪಡೆದು ಮುಂದಿನ ಅಭಾಸಕ್ಕೆ ಯಾವ ಕಾಲೇಜು ಸೇರಿಕೊಳ್ಳಬೇಕು ಅನ್ನುವ ಚಿಂತೆಯಲ್ಲಿ ತೊಡಗಿರುತ್ತಾನೆ. ಅಷ್ಟರಲ್ಲಿ ಇವನಿಗೆ ಒಂದು ಒಳ್ಳೆಯ ಕಾಲೇಜಿನಿಂದ ಸಂದರ್ಶನಕ್ಕೆ ಆಹ್ವಾನ ಬರುತ್ತದೆ. ಸಂತಸಗೊಂಡ ರಾಜ್ ಎಲ್ಲ ತರಹದ ತೈಯ್ಯಾರಿ ಮಾಡಿಕೊಂಡು ನಿಗದಿತ ದಿನದಂದು ಕಾಲೇಜಿಗೆ ಹೊರಡಲು ಸಜ್ಜಾಗುತ್ತಾನೆ. ಅಪ್ಪ ಅಮ್ಮನ ಆಶಿರ್ವಾದ ಪಡೆದು, ದೇವರಿಗೆ ನಮಸ್ಕಾರ ಮಾಡಿ ಹೊರಡುತ್ತಾನೆ. ಕಾಲೇಜಿನ ಆವರ್ಣ ನೋಡುತ್ತಿದ್ದಂತೆಯೇ ಏನೋ ಖುಶಿ ಏನೋ ಉಲ್ಲಾಸ. ಮುಖ್ಯ ಅಧಿಕಾರಿಗಳ ಕಚೇರಿಯ ಹೊರಗೆ ಸರದಿಗಾಗಿ ಕಾಯುತ್ತಿರುವ ಹುಡುಗರನ್ನು ಕಂಡು ತಾನೂ ಅಲ್ಲೆ ತನ್ನ ಸರದಿಗಾಗಿ ಕಾಯುತ್ತಾ ನಿಲ್ಲುತ್ತಾನೆ. ಬರುವ ಹೋಗುವ ಹುಡುಗರ ನೋಡುತ್ತಾ ಅವರ ಮುಖದ ಭಾವನೆಗಳನ್ನು ಆಲಿಸುತ್ತಾನೆ, ಕೆಲವರು ಖುಶಿಯಿಂದ ಹೊರ ಬರುತ್ತಿದ್ದರೆ ಕೆಲವರು ಪೇಚು ಮುಖ ಧರಿಸಿ ಹೊರಬರುತ್ತಿದ್ದರು. ಕೊನೆಗೆ ರಾಜ್ ನ ಸರದಿ ಬಂತು. ರಾಜ್ ಒಳ್ಳೆಯ ಅಂಕ ಪಡೆದುದರಿಂದ ಪ್ರವೇಶ ಸುಲಭವಾಗಿ ದೊರೆಯಿತು. ಎಲ್ಲಾ ಕಚೇರಿಯ ಕಾರ್ಯಗಳನ್ನು ಮುಗಿಸಿ ಮನೆಗೆ ಹಿಂತಿರುಗುತ್ತಾನೆ. ಅಪ್ಪ ಅಮ್ಮನಿಗೆ ಸುದ್ದಿ ಕೇಳಿ ತುಂಬಾ ಸಂತೋಷವಾಗುತ್ತದೆ. ಒಬ್ಬನೆ ಮಗ ದೂರವಿದ್ದು ಕಲಿತದ್ದು ಸಾಕು ಪದವಿಯಾದರೂ ನಮ್ಮ ಹತ್ತಿರದಲ್ಲೇ ಇದ್ದು ಕಲಿಯಲಿ ಅನ್ನುವ ಆಸೆ ಅವರದಾಗಿತ್ತು.
ಹೊಸ ಕನಸ್ಸು , ಹೊಸ ಜನ , ಹೊಸ ಧೇಯ ಓದಿ ದೊಡ್ಡ ಪದವೀಧರನಾಗುವ ಹುಮ್ಮಸ್ಸು. ಕಾಲೇಜಿನ ದಿನಗಳೆ ಹಾಗೆ ದಿನವೂ ಹೊಸ ಹೊಸ ಅನುಭವಗಳು. ಕಾಲೇಜಿನ ಮೊದಲ ದಿನ, ಯಾರ ಗುರುತು ಪರಿಚಯವಿಲ್ಲ ಕಾರಣ ಇವನು ಓದಿದ್ದು ಬೇರೆ ಊರಿನಲ್ಲಿ. ಮೊದಲನೆ ದಿನವಾದುದ್ದರಿಂದ ಬೇಗನೆ ಎದ್ದು, ನಿತ್ಯ ಕರ್ಮಗಳನ್ನು ಮುಗಿಸಿ, ದೇವರ ಪೂಜೆ ಮಾಡಿ, ಅಪ್ಪಾ ಅಮ್ಮಂದಿರಿಗೆ ನಮಿಸಿ ಬಸ್ ತಂಗುದಾಣದೆಡೆಗೆ ಹೊರಡುತ್ತಾನೆ. ತಂಗುದಾಣದಲ್ಲಿ ಎಷ್ಟೋ ಹುಡುಗ ಹುಡುಗಿಯರು ಬಸ್ಸಿಗಾಗಿ ಕಾಯುತ್ತಿರುತ್ತಾರೆ. ಒಮ್ಮೆ ಎಲ್ಲರೆಡೆಗೆ ಕಣ್ಣಾಯಿಸಿ ಖಾಲಿ ದಾರಿಯೆಡೆಗೆ ಮುಖ ಮಾಡಿ ಕಾಯುತ್ತಾ ನಿಲ್ಲುತ್ತಾನೆ. ಕೆಲ ಸಮಯದ ನಂತರ ನೀಲಿ ಬಿಳಿ ಬಣ್ಣದ ಬಸ್ಸು ಬಂದು ತಂಗುದಾಣವನ್ನು ತಲುಪುತ್ತದೆ. ಬಸ್ಸನ್ನು ಏರಿ ಅರ್ಧ ಗಂಟೆಯಲ್ಲಿ ತನ್ನ ಕಾಲೇಜನ್ನು ತಲುಪುತ್ತಾನೆ. ತನ್ನ ಜೊತೆ ಮತ್ತೆ ಕೆಲ ಹುಡುಗ ಹುಡುಗಿಯರು ಅದೇ ಕಾಲೇಜಿಗೆ ಹೋಗಲು ಇಳಿಯುತ್ತಾರೆ.
ಕಾಲೇಜಿಗೆ ಹತ್ತಿರ ಬರುತ್ತಿದ್ದಂತೆಯೆ ಒಬ್ಬ ಹುಡುಗ ರಾಜ್ ನ ಬಳಿ ಬಂದು., ನೀನು ಹೊಸ ವಿಧ್ಯಾರ್ಥಿನಾ ಅಂತಾ ಕೇಳುತ್ತಾನೆ, ಅದಕ್ಕೆ ಹೌದು ಅನ್ನುತ್ತಾನೆ. ಸರಿ ಕಾಲೇಜು ಮುಗಿದ ಮೇಲೆ ಸಿಗೋಣ ಎಂದು ಹೊರಟು ಹೋಗುತ್ತಾನೆ. ನೋಟಿಸ್ ಬೋರ್ಡನ್ನು ನೋಡಿ ತನ್ನ ತರಗತಿಯ ಮಾಹಿತಿ ಪಡೆದು ಕ್ಲಾಸಿನತ್ತ ಹೊರಡುತ್ತಾನೆ. ವ್ಹಾಎಂತಹ ದೊಡ್ಡ ಕೋಣೆ…, ಗೋಡೆಯ ಮಧ್ಯ ಭಾಗದಲ್ಲಿ ಬಿಳಿಯ ಗಾಜಿನ ಬೋರ್ಡು ( ಬಹುತೇಕ ಕಾಲೇಜುಗಳಲ್ಲಿ ಈಗ ಗಾಜಿನ ಬೋರ್ಡನ್ನು ಬಳಸುತ್ತಾರೆ, ಶಾಲೆಯಲ್ಲಿ ಕಪ್ಪು ಬೋರ್ಡನ್ನು ನೋಡಿ ಅಭಾಸ ಅಲ್ಲವೇ ) ಮಿರ ಮಿರ ಮಿನುಗುವ ಚ್ವಕ್ಕವಾದ ಬೆಂಚುಗಳು, ದೊಡ್ಡ ದೊಡ್ಡ ಕಿಟಕಿಗಳು, ಕಿಟಕಿಯಿಂದ ಕಾಣುವ ವಿಶಾಲವಾದ ಕ್ರೀಡಾಂಗಣ. ರಾಜ್ ಒಂದು ವಿಸ್ಮಯ ಜಗತ್ತಿಗೆ ಕಾಲಿಟ್ಟ ಅನುಭಾವವಾಯಿತು. ಕಾಲೇಜು ಜೀವನದ ಮೊದಲ ಕ್ಲಾಸು…, ಬಿಳಿ ಅಂಗಿ ಬಿಳಿ ಪ್ಯಾಂಟು ಧರಿಸಿ ಕೈಯಲ್ಲಿ ಒಂದು ಪುಸ್ತಕ, ಮಾರ್ಕರ್ ಹಾಗು ಡಸ್ಟರ್ ಹಿಡಿದ ವ್ಯಕ್ತಿ ಕ್ಲಾಸನ್ನು ಪ್ರವೇಶಿಸುತ್ತಾನೆ. ರಾಜ್ ಇವನು ಬಹುಶಃ ಪಿವನ್ ಇರಬೇಕು ಲಕ್ಚರರ್ ಅವರ ಸಾಮಗ್ರಿಗಳನ್ನು ಇಡಲು ಬಂದಿರಬಹುದು ಅಂದುಕೊಳ್ಳುತ್ತಾನೆ. ಎಲ್ಲರೂ ಎದ್ದು ನಿಲ್ಲುತ್ತಾರೆ….ಕೂತುಕೊಳ್ಳಿ ವಿಧ್ಯಾರ್ಥಿಗಳೇ ಎಂದಾಗ ರಾಜ್ ಗೆ ಅಚ್ಚರಿ ಅರೆಇವರು ಲಕ್ಚರರಾ …? ಲಕ್ಚರರ್ ತಮ್ಮ ಪರಿಚಯ ಹೇಳಿ ತಾವು ಗಣಿತ ಹೇಳಿಕೊಡುವವರು ಅಂತಾ ಹೇಳುತ್ತಾರೆ.. ಓಹೋ ಇವರೇ ಆ ಸ್ಟ್ರಿಕ್ಟ ಮೇಷ್ಟ್ರು ಹುಡುಗರು ಆಡಿಕೊಳ್ಳುತ್ತಿದ್ದವರುಅಬ್ಬಾ ಸ್ವಲ್ಪ ಹುಷಾರ್ ಆಗಿರಬೇಕು. ತದ ನಂತರ ಒಬ್ಬರಾದ ಮೇಲೆ ಒಬ್ಬರು ಬಂದು ಎಲ್ಲರ ಪರಿಚಯ ಪಡೆದು ಮುಂದಿನ ದಿನದಿಂದ ಪಾಠ ಶುರುಮಾಡುತ್ತೇವೆ ಅಂತಾ ಹೇಳಿ ಹೊರಡುತ್ತಾರೆ. ಮೊದಲನೆ ದಿನ ಪರಿಚಯದೊಂದಿಗೆ ಮುಗಿಯುತ್ತದೆ. ರಾಜ್ ಗೆ ಒಂದು ತರದ ನಿರಾಳ ಹಾಗು ಉತ್ಸುಕತೆ. ಮನೆಗೆ ಹೊರಟ ರಾಜ್ ಗೆ ಬೆಳಿಗ್ಗೆ ಮಾತನಾಡಿದ ಹುಡುಗ ತನ್ನ ಮತ್ತಿಬ್ಬರ ಗೆಳೆಯರೊಂದಿಗೆ ಬಂದು ಇವನನ್ನ ತಡವುತ್ತಾನೆ. ನೋಡಪ್ಪಾ ನಾವು ಈ ಕಾಲೇಜಿನ ಸೀನಿಯರ್ಗಳು ದಿನ ನಾವು ಕಂಡಾಗ ನಮಸ್ಕರಿಸಬೇಕು ತಿಳಿತಾ..ಅಂದರು. ರಾಜ್ ಗೆ ಇದೆಲ್ಲಾ ಹೊಸ ಅನುಭವ. ಸರಿ ಅಂತ ಹೇಳುತ್ತಾನೆ, ಕೆಲವು ಕೀಟಲೆ ಪ್ರಶ್ನೆಗಳನ್ನ ಕೇಳಿ ಅವನನ್ನ ಕಾಡಿಸುತ್ತಾರೆ. ತಂಗುದಾಣ ತಲುಪುತ್ತಿದ್ದಂತೆ ಬಸ್ಸು ಬರುತ್ತದೆ.ಅಂದಿನ ಕಥೆ ಅಲ್ಲಿಗೆ ಮುಕ್ತಾಯವಾಯಿತುಮರುದಿನ ಮತ್ತೆ ರಾಜ್ ಕಾಲೇಜಿಗೆ ಹೊರಡುತ್ತಾನೆಮತ್ತೆ ಅವೇ ಹುಡುಗರು ಇವನನ್ನ ಕಾಡಿಸಲು ಶುರುವಿಡುತ್ತಾರೆ…, ರಾಜ್ ಗೆ ರೇಗಿ ಹೋಗುತ್ತದೆ.. ಅವರಿಗೆ ತಿರುಗಿ ಹೇಳುತ್ತಾನೆ, ನೀವುಗಳು ನನಗೆ ಹೀಗೆಯೇ ತೊಂದರೆ ಕೊಡುತ್ತಿದ್ದರೆ ನಾನು ಕಾಲೇಜಿನ ಪ್ರಿನ್ಸಿಪಾಲರಿಗೆ ದೂರು ನೀಡುತ್ತೇನೆ, ಸುಮ್ಮನೆ ನಿಮ್ಮ ಪಾಡಿಗೆ ನೀವು ಇದ್ದುಬಿಡಿ ಇಲ್ಲಾ ಪರಿಣಾಮ ನೆಟ್ಟಗಾಗುವುದಿಲ್ಲ ಅಂದು ಬಿಡುತ್ತಾನೆ. ಇವನ ಮಾತು ಕೇಳಿ ಹುಡುಗರು ಸ್ವಲ್ಪ ಭಯ ಭೀತರಾಗುತ್ತಾರೆ. ಓಹೋ ಇವನ ತಂದೆ ವಿದ್ಯುತ್ ಅಧಿಕಾರಿ ಇವನನ್ನು ಮುಟ್ಟಿದರೇ ಶಾಕ್ ಹೊಡೆಯುತ್ತೆ ಅನ್ನುತ್ತಾ ವ್ಯಂಗ್ಯವಾಡುತ್ತಾರೆ. ಮರುದಿನ ದಿಂದ ಎಲ್ಲರು ಇವನ ಗೆಳೆಯರಾಗುತ್ತಾರೆ. ಇಲ್ಲಿಗೆ ರಾಜ್ ಗೆ ಸ್ವಲ್ಪ ಗೆಳೆಯರ ಪರಿಚಯವಾಯಿತು. ಕ್ಲಾಸಿನಲ್ಲಿ ಪಕ್ಕದಲ್ಲಿ ಕೂತುಕೊಳ್ಳುವರ ಜೊತೆ ಕೂಡ ಇವನ ಗೆಳೆತನ ಶುರುವಾಗುತ್ತದೆ. ದಿನಗಳು ಕಳೆದಂತೆ ಮೊಹನ , ಪವನ , ಮಂಜು ಅವರೊಂದಿಗೆ ತುಂಬಾ ನಿಕಟ ಗೆಳೆತನ ಬೆಳೆಯುತ್ತದೆ. ಜೊತೆ ಜೊತೆಯಲೇ ಚಾಹ, ಊಟ, ಪಾಠ . ಕಾಲೇಜು ಅಂದ ಮೇಲೆ ಹುಡುಗಯರ ಕೂಡಾ ಇರ್ತಾರಲ್ವಾಹಾಗೆ ನಮ್ಮ ರಾಜ್ ಗೆ ಒಬ್ಬ ಹುಡುಗಿಯ ಪರಿಚಯವಾಗುತ್ತದೆ, ಅವಳ ಹೆಸರು ನಯನಾ. ಇವಳ ಕೂಡ ಮಾತನಾಡುತ್ತ ರಾಜ್ ಗೆ ಒಂದು ವಿಶಯ ತಿಳಿಯುತ್ತದೆ ಅದೇನೆಂದರೆ ಚಿಕ್ಕವರಿದ್ದಗಲೇ ನಯನಾ ಹಾಗು ರಾಜ್ ಒಂದೆ ಶಾಲೆಯಲ್ಲಿ ಎಲ್ ಕೇಜಿ ಓದಿರುತ್ತಾರೆ. ೧೮ ವರ್ಷಗಳ ಹಿಂದೆ ನೋಡಿದ ಮುಖ ಹೇಗೆ ತಾನೆ ನೆನೆಪಿರಬೇಕು ಅಲ್ಲವೇ ? ಈ ವಿಷಯ ತಿಳಿಯುತ್ತಲೇ ಇವರ ಸ್ನೇಹ ಇನ್ನೂ ಘಾಡವಾಗುತ್ತದೆ. ರಾಜ್ ತನ್ನ ಗೆಳೆಯರಾದ ಮೊಹನ , ಪವನ , ಮಂಜು ಇವರನ್ನು ನಯನಾಳಿಗೆ ಪರಿಚಯಿಸುತ್ತಾನೆ. ಹಾಗೆ ನಯನಾ ಕೂಡ ತನ್ನ ಗೆಳತಿಯರಾದ ಸ್ಮಿತಾ, ಕಾವ್ಯಾ, ಕವನ ಹಾಗು ಸುಮನಾ ಳನ್ನು ಪರಿಚಯಿಸುತ್ತಾಳೆ. ಇಲ್ಲಿಗೆ ಕಾಲೇಜಿನ ಬಣ್ಣ ಬಣ್ಣದ ಬದುಕಿಗೆ ಕಾಲಿಟ್ಟ ಗೆಳೆಯ ಗೆಳತಿಯರು ಹೀಗೆ ಒಂದು ಗೂಡುತ್ತಾರೆ ಹಾಗು ಒಂದು ಒಳ್ಳೆಯ ಸ್ನೇಹಲೋಕ  ಶೃಷ್ಟಿಯಾಗುತ್ತದೆಹುಡುಗ ಹುಡುಗಿಯರೆಲ್ಲರೂ ಒಳ್ಳೆಯ ಅಂಕ ಪಡೆದವರಾಗಿರುತ್ತಾರೆ. ಇವರೆಲ್ಲರೂ ಬೆರೆ ಬೆರೆ ವರ್ಗದಲ್ಲಿ ಅಭಾಸ ಮಾಡುತ್ತಿರುತ್ತಾರೆ. ಇಷ್ಟರಲ್ಲಿ ನಾಯಕ ರಾಜ್ ಗೆ ಮತ್ತೊಬ್ಬ ಹುಡುಗಿ ತನ್ನದೇ ಕ್ಲಾಸಿನವಳಾದ ಗೀತಾ ಜೊತೆ ಸ್ನೇಹವಾಗುತ್ತದೆ. ಕಾಲೇಜಿಗೆ ಕಾಲಿಟ್ಟು ೬ ಮಾಸಗಳು ಕಳೆದಿರುವುದಿಲ್ಲ ಮೊದಲನೆ ಸೆಮಿಷ್ಟರ್ ಪರೀಕ್ಷೆಗಳು ಬರುತ್ತವೆ. ಎಲ್ಲರೂ ಅಭಾಸದ ತಯ್ಯಾರಿಯಲ್ಲಿ ಮುಳುಗುತ್ತಾರೆ. ಒಂದು ತಿಂಗಳುಗಳ ಕಾಲ ಪರೀಕ್ಷೆ ನಡೆಯುತ್ತದೆ. ಮತ್ತೆ ಯಥಾವತ್ತಾಗಿ ಕ್ಲಾಸುಗಳು ಪ್ರಾರಂಭವಾಗುತ್ತವೆ. ಮತ್ತ ಗೆಳೆಯರ ಮಾತುಗಳು,ಹಾಸ್ಯ, ತುಂಟತನ ಸಾಮಾನ್ಯವಾಗಿ ನಡೆಯುತ್ತಿರುತ್ತವೆ. ಎಲ್ಲರ ಜೀವನದಲ್ಲಿ ಒಂದು ಟರ್ನಿಂಗ್ ಪಾಯಿಂಟ ಬರುತ್ತದೆ ಅಂತೆ ಹಾಗೆ ಮೊದಲನೆಯ ಸೆಮಿಷ್ಟರ್ ರಿಜಲ್ಟಗಳು ಬರುತ್ತವೆ. ಕೆಲವರಿಗೆ ಖುಶಿ ಕೆಲವರಿಗೆ ದುಃಖ. ನಮ್ಮ ನಾಯಕ ರಾಜ್ ಗೆ ಆಶ್ಚರ್ಯ್ ಕಾದಿತ್ತುಇಲ್ಲಿತನಕ ಒಳ್ಳೆಯ ಶೇಣಿಯಲ್ಲಿ ಅಂಕ ಪಡೆಯುತ್ತಿದ್ದವನು ಒಮ್ಮಿಂದೊಮ್ಮೆಲೆ ಎರಡು ವಿಷಯದಲ್ಲಿ ನಪಾಸಾಗಿರುತ್ತಾನೆ. ದುಃಖದಲ್ಲಿ ಮುಳುಗಿದ ರಾಜ್ ಮಂಕಾಗಿ ಬಿಡುತ್ತಾನೆ. ಅವನಿಗೆ ತನ್ನ ಆತ್ಮಸ್ಥೈರ್ಯ ಕುಗ್ಗಿದಂತಾಗುತ್ತದೆ. ಕಾಲೇಜಿನಲ್ಲಿ ಕೂಡ ಒಬ್ಬೊಬ್ಬನೆ ಇರಲು ಪ್ರಾರಂಭಿಸುತ್ತಾನೆ. ಒಮ್ಮಿಂದೊಮ್ಮೆಲೆ ಇಂತಹ ಆಘಾತವಾಗುವದು ಅಂತ ಕನಸು ಮನಸ್ಸಿನಲ್ಲೂ ನೆನೆಸಿರಲಿಲ್ಲ. ಗೆಳೆಯ ಗೆಳತಿಯರೆಲ್ಲಾ ತೇರ್ಗಡೆಯಾಗಿರುತ್ತಾರೆ. ಯಾವಾಗಲೂ ಇವನ ನಗು ಮುಖವ ನೋಡಿದವರು ಇವನ ಪೇಚು ಮುಖ ಕಂಡು ಮರಗುತ್ತಾರೆ. ಇಂತಹ ಸಮಯದಲ್ಲಿ ಧರ್ಯ ಹೇಳಲು ಸುಮನಾ ಮುಂದಾಗುತ್ತಾಳೆ. ಅವನ ಸ್ವಭಾವವನ್ನು ಅರಿತ ಸುಮನಾ , ಅವನನ್ನು ಹೋಗಿ ಭೇಟಿಯಾಗುತ್ತಾಳೆ..ಅವನನ್ನು ಕುರಿತು., ನೋಡು ರಾಜ್ ಹೀಗೆ ಆಯ್ತು ಅಂತ ತಲೆ ಕೆಡೆಸಿಕೊಳ್ಳುವುದರಲ್ಲಿ ಏನೂ ಫಲವಿಲ್ಲ, ಆಗಿದ್ದುದನ್ನು ಹೇಗೆ ಸರಿಪಡಿಸಿಕೊಳ್ಳಬೇಕು ಅಂತಾ ವಿಚಾರ ಮಾಡು. ಮುಂದಿನ ಪರೀಕ್ಷೆಯಲ್ಲಿ ಸರಿಯಾಗಿ ಮಾಡಿ ಒಳ್ಳೆಯ ಅಂಕ ಪಡೆದರಾಯಿತು, ಅದಕ್ಕೆ ಬೇಕಾದ ಸಹಾಯ ನಾನು ಮಾಡುತ್ತೇನೆ ಅಂತಾ ಸಹಾಯ ಹಸ್ತ ಚಾಚುತ್ತಾಳೆ. ರಾಜ್ ಗೆ ಅವಳ ಮುಂದೆ ಮುಜುಗರ…. ಆದರೂ ಸ್ವಲ್ಪ ಸುದಾರಿಸಿಕೊಂಡು.., ಸುಮನಾ ನೀನು ಹೇಳುವುದರಲ್ಲಿ ನಿಜಾಂಷವಿದೆ. ನನಗೆ ಗಣಿತವೆಂದರೆ ಭಯವಾಗುತ್ತದೆ, ಆ ವಿಷಯದ ಬಗ್ಗೆ ಸ್ವಲ್ಪ ಸಹಾಯ ಮಾಡಿದರೆ ನಾನು ಬೇರೆಯ ವಿಷಯಗಳನ್ನು ಓದಿಕೊಳ್ಳುತ್ತೇನೆ ಅನ್ನುತ್ತಾನೆ. ಸುಮನಾ ತನ್ನ ಎಲ್ಲಾ ಗಣಿತ ಸಂಬಂಧಿಸಿದ ನೋಟ್ಸು ಪುಸ್ತಕಗಳನ್ನು ಕೊಟ್ಟು ಶುಭ ಹಾರೈಸುತ್ತಾಳೆ. ಅಂದಿನಿಂದ ರಾಜ್ ಗೆ ಸುಮನಾಳ ಕಂಡರೆ ಗೌರವ. ಅವರ ಗೆಳೆತನ ದಿನೆ ದಿನೆ ಗಾಢವಾಗುತ್ತದೆ. ಈ ತಯ್ಯಾರಿಯಲ್ಲಿ ಮತ್ತೊಂದು ಸೆಮಿಷ್ಟರ್ ಪರೀಕ್ಷೆ ಬಂದೆ ಬಿಡುತ್ತದೆ. ಪೂರ್ಣ ಸಿದ್ದಥೆ ಮಾಡಿಕೊಂಡು ರಾಜ್ ಪರೀಕ್ಷೆಗೆ ಹಾಜರಾಗುತ್ತಾನೆ. ಪೇಪರುಗಳು ಚೆನ್ನಾಗಿ ಮಾಡಿದ್ದರೂ ಅವನಲ್ಲಿ ಹಳೆಯ ರಿಜಲ್ಟನ ಕಪ್ಪು ಛಾಯೆ ಇನ್ನೂ ಹೋಗಿರಲಿಲ್ಲ. ಕೊನೆಗೆ ಒಂದು ದಿನ ಏನೂ ಮುನ್ಸೂಚನೆ ಇಲ್ಲದೆ ರಿಜಲ್ಟು ಬಂದಿರುತ್ತದೆ. ಕಾಲೇಜಿಗೆ ಕಾಲು ಇಡುತ್ತಿದ್ದಂತೆಯೆ ಸುಮನಾ ಎಲ್ಲಿಂದಲೋ ಓಡಿ ಬಂದು ನೀನು ಒಳ್ಳೆಯ ಅಂಕ ಪಡೆದು ಉತ್ತೀರ್ಣನಾಗಿದ್ದಿಯಾ ಅಂತ ಹೇಳುತ್ತಾಳೆ. ರಾಜ್ ಗೆ ಇನ್ನಿಲ್ಲದ ಸಂತೋಷವಾಗುತ್ತದೆ. ಮೊದಲು ತಂದೆ ತಾಯಿಗೆ ಪೋನು ಮಾಡಿ ವಿಷಯ ತಿಳಿಸುತ್ತಾನೆ ಅವರು ಕೂಡಾ ಹರ್ಷ ವ್ಯಕ್ತ ಪಡಿಸುತ್ತಾರೆ. ಸುಮನಾ ನೋಡು ನಾನು ಹೇಳಿರಲಿಲ್ಲವಾ ನೀನು ಮಾಡೇತೀರುತ್ತಿ ಅಂತಾ….ಸರಿ ಈಗ ನಡಿ ನಮಗೆಲ್ಲಾ ಚಹಾ ಪಾರ್ಟಿ ಕೊಡು ಅಂತಾ ಕರೆಯುತ್ತಾಳೆ. ಗೆಳೆಯ ಗೆಳತಿಯರೆಲ್ಲಾರೂ ಕೂಡಿಕೊಂಡು ಕಾಲೇಜಿನ ಕ್ಯಾಂಟೀನಿಗೆ ಹೊರಡುತ್ತಾರೆ. (ಮುಂದುವರೆವುದು ….)