Posts

Showing posts from April, 2013

ಸಜ್ಜಾಗಿದೆ ಅರಮನೆ

ಭದ್ರ ಕೋಟೆಯ ಬುನಾದಿ

ಅಚ್ಚುಕಟ್ಟು ಮೈಕಟ್ಟು, ಬಲ ತೋಳಲಿ

ವಿಶಾಲವಾದ ಅಂತಃಪುರ

ಪ್ರಣಯ ಭರಿತ ಹೃದಯ

ತಂಗಾಳಿಯ ಸೂಸುವ ಬೃಂದಾವನ

ಶುದ್ದ ಗಾಳಿ ಬರಿತ ಕುಪ್ಪಸವನ

ಯೋಚನೆಗಳ ಸಾಗರದಿ ತೇಲಲು

ಮನವೆಂಬ ಆಗಸದಿ ಕವಿತೆ ಸಾಲು

ಜೀವವ ತಣಿಸಲು ಸಂಗೀತ ಗಾನ

ಮನೋರಂಜನೆಯ ನೀಡುವುದು ಅತೀ ಮಧುರ ಮೌನ

ಅಲಂಕಾರಗೊಂಡು ಸಜ್ಜಾಗಿದೆ ಅರಮನೆ,

ನಡೆಸಲು ರಾಜಕುಮಾರಿಯ ಆರಾಧನೆ !

ನೀ ಬಲು ದೂರ

ಹೇಳಬೇಕಿತ್ತು ನನಗೆ, ನೂರಾರು ಮಾತು

ಕೇಳದೇ ನೀ ಹೊರಟು ಹೋದದ್ದೇಕೆ..?

ನೀ ಬರುವೆ ಎಂದು, ದಾರಿ ಕೂಡ ಕಾಯಲಾರೆ..

ತೆರಳಿ ಬಿಟ್ಟೆ.. ನೀ ಬಾರದ ಊರಿಗೆ..!!

ಗಾಳಿ

ಸ್ನೇಹದಿಂದಿದ್ದರೆ.., ನಾನು ಶಶಿಯಂತೆ

                                          ನೀಡುವೆನು, ತಂಪು ಸೂಸುವ ತಂಗಾಳಿ..!

ಕೆಣಕಿದರೆ.., ನಾನು ಸೂರ್ಯನಂತೆ

                                          ಸುಡುವ ದುಸ್ವಪ್ನವಾಗುವೆ, ಸಿಡಿಸುತ್ತ ಬೆಂಕಿಯ ಬಿರುಗಾಳಿ !!

ಪಾಪಿಗಳು

ಬಯಸಿ ಬಯಸಿ ಹುಟ್ಟಿಸಿ,

ಪಡೆದರು..

" ಪಾಪುಗಳು "

ಅಕಸ್ಮಾತ್ಆಗಿ ಹುಟ್ಟಿಸಿದವರು,

ಜನ್ಮಕೊಟ್ಟ..

" ಪಾಪಿಗಳು "

ಪ್ರೇಮ ಪತ್ರ

======

ಅವನು ಬರೆದ,

ಮೊದಲ ಪ್ರೇಮ ಪತ್ರ ,

೧೨ ವರ್ಷಗಳ ಕೆಳಗೆ !

ಇವಳು ಇಂದಿಗೂ..,

ನಗುತಿರುವಳು....

ನೆನೆ-ನೆನೆದು.., ಒಳ ಒಳಗೆ !!

-----------

JUST THOUGHT

TREASURE WHAT YOU HAVE TODAY, DON'T DUPLICATE YOUR PAINS TO MAKE LIFE MISERABLE BY HOLDING ON FORGIVENESS.

ತ್ಯಾಗಿ

===
ಮನಸಲಿ ಪ್ರೀತಿಯ ಬೀಜ ಬಿತ್ತ ಬೇಡ
ಬೀಜ ಮೊಳೆತರೂ.. ಮಣ್ಣ ಒಳಗಡೇನೆ
ಆ ಹೂ ಅರಳುವುದು ಬೇರೆಯ ದುಂಬಿಗಳಿಗೇನೆ !

ಅವಳು

====
ಹೃದಯ ಬಡಿ ಬಡಿದು,
                              ಎಬ್ಬಿಸುತ್ತಿರುವಳು,
ಇನ್ನೂ.., ಪಾದಾರ್ಪಣೆ ಮಾಡದೇ....
                               ಎಲ್ಲಿ ಹೋದಳು..?

ಮಣ್ಣು

--------
ನೀರೊರೆಯದೇ ಬತ್ತಿದೆ, ನನ್ನ ಕಣ್ಣು..

ಮನ ತೆರೆಯಲಿ ನಿನ್ನ ಒಳಗಣ್ಣು

ಹಚ್ಚು ಬಾರೆ, ಪ್ರೀತಿಯ ಬಣ್ಣವನು

ಈ ದೇಹ, ಸೇರುವ ಮೊದಲು ಮಣ್ಣು !

ಹಚ್ಚಿ ಬಿಡು ಬಣ್ಣವ ಹಚ್ಚಿಬಿಡು

Image
ಹಚ್ಚಿ ಬಿಡು ಬಣ್ಣವ ಹಚ್ಚಿಬಿಡು -------------------------
ತಾಯಿಯ ಗರ್ಭದಿ ಮೊಳೆತ ಭ್ರುಣವೇ ಬೇಗ ಬೇಗ ಬೆಳೆದು ಬಾ ನಿನ್ನ ಆಗಮನವ ಇದಿರು ನೋಡುತ್ತಿರುವ, ಆಸೆಯಿಂದ ಕಾದಿರುವರಿಗೆ ಖುಶಿ ಹಂಚಿ ಬಿಡು ಹಚ್ಚಿಬಿಡು ಬಣ್ಣವ ಹಚ್ಚಿಬಿಡು
ಭುತಾಯಿಯ ಒಡಲಲಿ ಅವಿತಿರುವ ಕಿಚ್ಚೇ ಕಾರ್ಮೋಡಗಳೇ ನೀರೆರೆದು ದುಮ್ಮಿಕ್ಕಿ ಬಿಡಿ ಜಗದ ಸೆಕೆ ಅಳಿಸಿ, ತಣಿಸು ಬಾ ಇಂದು ಹಸಿರ ಕೊಸರಿಬಿಡು, ಹರಿಸಿಬಿಡು, ಹಸಿರ ಪಸರಿಸಿಬಿಡು ಹಚ್ಚಿ ಬಿಡು ಬಣ್ಣವ ಹಚ್ಚಿಬಿಡು
ಹಗಲೊತ್ತು ಕೂಲಿ ಮಾಡಿ ಹೊಟ್ಟೆ ಹೊರೆಯುವವರ ಬೀದಿಯ ದೀಪದಲ್ಲಿಯೇ ಓ,ದಿ ಜಯಿಸಲೇ ಬೇಕು ಎನ್ನುವವರ ಹಠ ಹೊಸ ಹಾದಿಯ, ಸುದೀಪ ಬೆಳಗಲಿ ಅವರ ಬಾಳಲ್ಲಿ ಕಷ್ಟಪಟ್ಟು ಉತ್ತೀರ್ಣರಾದವರ, ಉದ್ಧರಿಸೋ ಶಿವನೆ ಹಚ್ಚಿ ಬಿಡು ಬಣ್ಣವ ಹಚ್ಚಿಬಿಡು
ದೇಶದ ಬೆನ್ನೆಲುಬಾದ ರೈತರ ಸೂರ್ಯನ ಬಿಸಿಲಲ್ಲಿ ಬೆಂದು ದುಡುವವರ ಅನ್ನವ ಬೆಳೆದು ಜನರ ಹೊಟ್ಟೆಯ ಭರಿಸುವವ ಕಣ್ಣೀರು ಹಾಕದಿರಲಿ, ಸಾವಿಗೆ ಶರಣಾಗದಿರಲಿ ಹಚ್ಚಿ ಬಿಡು ಬಣ್ಣವ ಹಚ್ಚಿಬಿಡು
ನಲ್ಲೆಗಾಗಿ ಪರಿತಪಿಸುವ ಪ್ರೇಮಿ ಹಠ ತೊಟ್ಟು ಶ್ರಮಿಸುತಿರುವವ ಜೀವನದ ಗುರಿ ತಲುಪಿ, ನಲ್ಲೆಯ ಪಡೆದೇ ತೀರಬೇಕೆನ್ನುವ ದಯಪಾಲಿಸೋ ಸುಖಮಯ ಜೀವನ ಹರನೇ ಹಚ್ಚಿ ಬಿಡು ಬಣ್ಣವ ಹಚ್ಚಿಬಿಡು

ಅತಂತ್ರ

ಮತದಾರನಿಗಿಲ್ಲ ಮತ ಚಲಾಯಿಸುವ ಸ್ವಾತಂತ್ರ್ಯ

ಹೆಂಡ, ಹಣ ಹಂಚಿ ಹೂಡುತಿರುವರು ತಂತ್ರ

ಕೈಗೆ ಸಿಗದು, ಕಮಲಕೂ ಸಿಗದು, ಹೊತ್ತರೆ ಬತ್ತದ ತೆನೆ ಅವಳಿಗೂ ಸಿಗದು..., ಇವರುಗಳದ್ದೆಲ್ಲಾ ಹುಸಿ ಮಂತ್ರ

ಒಟ್ಟಿನಲ್ಲಿ ಈ ಸರಿಯ ಚುನಾವಣೆಗಳು ಅತಂತ್ರ

ಹಿತವಚನ

ಸೋಲು ಒಪ್ಪದವನಿಗೆ ಗೆಲುವು " ನಿಶ್ಚಿತ " ,  ಸೋಲು ಒಪ್ಪಿಕೊಂಡವನು ಸೋತಂತೆ !

ಮುತ್ತೈದೆ V/s ೫ ಮುತ್ತು ಸಾಕೆ ?

ಕುತ್ತಿಗೆಯಲ್ಲಿ ತಾಳಿ ಇದ್ದರೆನೇ ಭದ್ರತೆ

ಹಣೆ ಮೇಲೆ ಕುಂಕುಮ ರಾರಾಜಿಸಿದರೆ ಶೊಭಿತೆ

ಮೂಗ ಮೇಲೆ ಮೂಗುತಿ ಚಂದ

ಕಾಲುಗಳಿಗೆ ಉಂಗುರಗಳೇ ಅಂದ

ಮುಡಿಗೆ ಮಲ್ಲಿಗೆಯೇ ಹೆಚ್ಚಿಸುವುದು ಹೆಂಗಳೆಗೆ ಬಣ್ಣ

ಹಸಿರು ಗಾಜಿನ ಬಳಿಗಳೇ ಸೌಭಾಗ್ಯವತಿಯ ಲಕ್ಷಣ

ಪಂಚ ಮುತ್ತುಗಳ ಹೊತ್ತವಳೇ "ಮುತ್ತೈದೆ "



ಕುತ್ತಿಗೆಗೆ ತಾಳಿ ಬೇಡ, ಅದು ಕತ್ತಿಗೆ ಬಿಗಿಯುವ ಉರುಳ ಹಗ್ಗ

ಹಣೆಗೆ ಕುಂಕುಮವೇಕೆ ? ಅದು ಇವಳ ವೇಶಕ್ಕೆ ಒಪ್ಪುವುದಿಲ್ಲವಂತೆ

ಮೂಗುತಿ ಚುಚ್ಚಿಸಿಕೊಳ್ಳೋಳು ಹಳ್ಳೀ ಗುಗ್ಗು

ಮುಡಿಗೆ ಮಲ್ಲಿಗೆ ಇಡಲು, ಅವಳ ತಲೆ ಅಲ್ಲವಂತೆ ಹೂ ಕುಂಡಲ

ಬಳೆಗಳು ತೊಡಲು ಇವರ ಕೈಗಳೆಗೆ ಭಾರವಂತೆ

ಮುತ್ತುಗಳು ಯಾರೂ ಕೊಟ್ಟರು ಅವರಿಗೋಕೆ

ಮುತ್ತುಗಳ ಕೊಡಿಸುವವರ...ಇವಳು ಮನೆಯಾಕೆ..!

ಹಿತ ವಚನ

ಮಿತ್ಯದಿಂದಲೇ ಜೀವನ ನಡೆಸುವರು, ಒಮ್ಮೆ ಆ ಮಿತ್ಯವೇ ಅವರ ಅಂತ್ಯಕ್ಕೆ ನಾಂದಿಯಾಗುತ್ತದೆ.

Information that may help in Future for someone we care ( Courtesy : Internet)

The following is a letter written by a wife, after her husband's death in an accident.




"Few things I learnt after my husband's death:-



We always believe we will live forever. Bad things always happen to others.

...

Only when things hit us bang on your head you realize... Life is so unpredictable....



My husband was an IT guy. All techie. And I am a chartered accountant. Awesome combination you may think.



Techie guy so everything is on his laptop. His to do list. His e-bill and his bank statements in his email... He even maintained a folder which said IMPWDS wherein he stored all login id and passwords for all his online accounts. And even his laptop had a password. Techie guy so all the passwords were alpha-numeric with a special character not an easy one to crack. Office policy said passwords needed to be changed every 30 days. So every time I accessed his laptop I would realize it's a new password again. I would simply opt for asking him, 'What's the latest…

ಹನಿ

ಹುಡುಗರು ಏಕೆ ಬರೆಯುತ್ತಾರೋ ಹುಡುಗಿಯರ ಮೇಲೆ " ಕವನ "
ಏಕೆಂದರೆ,
ಅವರಿಗಿಷ್ಟ... ಸಂಗೀತಾಳ " ಗಾನ " ನೈನಾಳ " ನಯನ " ಭಾವನಾಳ " ಮನ " ಸ್ಪೂರ್ತಿಯ " ಯೌವನ "

ಸೀರೆ ಕಟ್ಟಿರುವೆ

ಗೆಳತಿ ನನ್ನ ನಿನ್ನ ಒಲವು ಶುರುವಾದದ್ದೇ ಗೊತ್ತಾಗಲಿಲ್ಲ

ಇನ್ನೂ ಕನಸುಗಳು ಕಟ್ಟುತ್ತಲೇ ಸರಿದಿದೆ ಸಮಯ

ಇನ್ನೂ ನಮ್ಮ ಆಶು ಭಾಷಣಗಳೇ ಮುಗಿಯಲಿಲ್ಲ

ಅಷ್ಟರಲ್ಲೇ ನಿಶ್ಚಯಿಸಿದ್ದಾರೆ ನಿನ್ನ ಮದುವೇನ

ಮಾಡುವುದಾದರೂ ಏನು ಹೇಳು ??

ನಾ ನಿನಗೆ ಬರೆಯುವ ಕವಿತೆಗಳು ಪುಟದಲ್ಲೇ ಉಳಿಯಬಾರದು ಎಂದು ಕಟ್ಟಿರುವೆ ಸೀರೆನಾ

ಹಾರುತಿದೆ ನೋಡು ನಿನ್ನ ಮನೆಯ ಬಾಲ್ಕನಿಯಲ್ಲಿ

ನನ್ನ ಕವಿತೆಯು ಮುಗಿಯುವ ಮುನ್ನ ಸರ ಸರನೆ ಜಾರಿ ಇಳಿ

ಕಾದಿರುವೆ ಕೆಳಗಡೆ ಮೆಘದೂತದಲಿ ನೀ ಬರುವ ದಾರಿಯಲಿ !

ಹಣ-ಹೆಣ

=====
ಅಧಿಕಾರದ ಆಸೆಗೆ ಚೆಲ್ಲುತ್ತಿರುವರು ಹಣ
ಗೆದ್ದು ಗಿಟ್ಟಿಸಿದವರು ಹೂಡುವರು ರಾಜ್ಯಧಾನಿಯಲ್ಲೇ ತಾಣ !
ವೋಟು ಕೊಟ್ಟು ಕೆಟ್ಟವರು ಬಿಸಿಲಲ್ಲಿ ರಣ ರಣ
ತಿರುಗಿ ಕೂಡ ನೋಡುವುದಿಲ್ಲಾ ಇವರು.., ಬಿದ್ದರೂ ಜನರ ಹೆಣ !!
----------------------------------------------------------

ಚುಟುಕು

ಭಾಗ್ಯವೇ ಇಲ್ಲದವಳ ಹೆಸರು " ಭಾಗ್ಯಲಕ್ಷ್ಮಿ "

ಅವಳ ಮಗಳು " ದೌರ್ಭಾಗ್ಯಲಕ್ಷ್ಮಿ "

ಚತುರತೆ

ಕಹಿ ಸವೆದ ನಾಲಿಗೆಗೆ .,
ವಿಷದ ಸೋಂಕು ತಿಳಿಯದೇ ಹೋದೀತೆ ?

THOUGHT FOR THE DAY

REPENTANCE HAS NO  " VALUE "  ONCE THE MISTAKES TURN INTO " BLUNDERS "

ಬಾಳು ಬರಡು

ಮೈ ನೆರೆದಾಗ ಚಿಗುರೊಡೆದಿತ್ತು

ವಸಂತ ಹಸಿರು ಹಾಸಿದಾಗ ಕಂಕಣ ಭಾಗ್ಯತಂದಿತ್ತು

ಉತ್ತಿ ಬಿತ್ತಿ ಬೆಳೆದು ರೂಪಿಸಿಕೊ ನಿನ್ನ ಜೀವನದ ಹಾದಿ ಎಂದಿತ್ತು

ಸುಂದರ ಸರಳ ಜೀವನ ನಿನ್ನ ಕಣ್ಣಗಳಿಗೆ ಕಾಣದಾಯಿತು

ಮೆಟ್ಟಿ ನಡೆದು ಬಿಟ್ಟೆ., ತುಳಿಯುತ್ತಾ ಹಸಿರ ಹಾಸಿಗೆ

ಬರುಡಾಯಿತು ನೆಲ..,ಚಿಗುರದೇ ಒಂದೇ ಒಂದು ಗರಿಕೆ

ಹಳಿಸಿದ ಜೀವನ ಮರಳದು ಕೊನೆವರೆಗೂ..,

ಬಾಳು ಬರಡು.., ಎಂದೆಂದಿಗೂ ತುಂಬದು ನಿನ್ನ ಒಡಲು.



ಚಿಪ್ಪು

ಕೊನೆಯೇ ಇರದ ದುರ್ಜನರ ಕೆಟ್ಟ ಚಾಳಿಗೆ..

ಕರುಣಿಸುವನು ದೇವರು, " ಚಿಪ್ಪನ್ನು" ಅವರ ಪಾಲಿಗೆ !

ಕ್ರಿಕೇಟ್ ಅವಾಂತರ

ಕ್ರಿಕೇಟು ನೋಡಲು ಬಿಡೋಲ್ಲಾ

ಅನ್ನುತ್ತಾ ಅತ್ತೆ

ಮಾಡಿದಳು ಟಿವಿ ಆಫು...!

ಸೌಟು ಬಿಸಾಡಿದ ಸೊಸೆ..

ಅಡುಗೆಗೆ ರಜಾ ಇಂದು

ಅಂದಳು ತಲೆಕೆಟ್ಟು..!

" DREAMS DESTROYED "

DREAMS ARE ALWAYS " DESTROYED " WHEN YOU DON'T RESPECT OTHER'S !!

THOUGHT FOR THE DAY

" FEELING, BEHAVING & BELIEVING AS ONE AMONG THE FAMILY " MAKES A PERFECT MATCH.

PERFECT MATCH

SHE is simple, she is humble, she is what she is..yet she is just like him.

SHE loves his parents same as her own, SHE cares & respects one and everyone , SHE is what she is...yet she is just like him.

SHE finds happiness in his joy, SHE feels his beat in her heart, SHE is what she is..yet she is just like him.

SHE married him whole heartedly, SHE believes him as her destiny, SHE is what she is..yet she is just like him.

SHE feels he is one who fills her world, She believes the bond is really strong,The efforts are hers to make him n them all hers.SHE is what she is..yet she is just like him.

SHE feels herself among them and she makes them feel proud of her, SHE is what she is..yet she is just like him.

ಯುಗಾದಿ

ಯುಗ ಯುಗಗಳ ಯುಗಾದಿ ಮರಳಿ ಬಂದಿದೆ
ಹೊಸ ಚಿಗುರು, ಹೊಸ ನವಿರು ತೇಲಿ ಬರುತಿದೆ !

ಮಾವ ಬೇವು ಹೂವು ಅರಳಿ, ಸೌಗಂಧ ಬೀರಿದೆ
ಹಚ್ಚ ಹಸಿರ ಎಲೆಯ ಸವೆದು, ಕೋಗಿಲೆ ಹಾಡಿದೆ !

ಹಳೆಯ ಎಲೆಯು ಉದುರಿ, ಬೇವು ಚಿಗುರಿದೆ
ಸೂರ್ಯನ ಬಿಸಿಲ ಬೇಗ ಅಳಿಸಲು, ನೆರಳು ಹಾಸಿದೆ !

ಹರಿದು ಬರುತಿದೆ, ಹಸಿರು ಹರಿದು ಬರುತಿದೆ
ನವ ಮಾಸದಿ ನವ ವಸಂತ ಉಕ್ಕಿ ಪಸರಿದೆ !!

ಮಂಗ

ತುಣಕು ಪುಣಕು ಜಿಗಿಯುತ್ತಿದೆ ಇಂಗು ತಿಂದ ಮಂಗ

ಪರಿವೇ ಇಲ್ಲ ಅದಕ್ಕೆ, ಬೆಳೆದಿರುವುದು ದುರ್ಜನರ ಸಂಗ

ಮಂಗನಿಂದ ಮಾನವ ಹಳೇದಾಯಿತು,ಇದು ಮಾನವನಂತಿರುವ ಮಂಗ

ಕಪಿಚೇಷ್ಟೆಗೆ ಸುಟ್ಟರು ಇದರ ಬಾಲವ, ಸಾವೇ ತಂದುಕೊಂಡಿತು ಮತಿ ಇಲ್ಲದ ಮಂಗ.

THOUGHT FOR THE DAY

love is a " divine thought " which can only be achieved with " deep feelings  and care " , not with " force or scare "

COLOURS OF LIFE

FIRST LOVE IS WONDERFUL,

SECOND LOVE IS BEAUTIFUL,

THIRD & LAST LOVE SHOULD BE FRUITFUL,

OTHERWISE LIFE WON'T BE  " WORTHFUL "




ಕೋತಿ

======
ಜನರ ಸೇವೆಗೆಂದು ನೆಪವೊಡ್ಡಿ
ಪಕ್ಷದಿಂದ ಪಕ್ಷಕ್ಕೆ ಹಾರುತ್ತಿದ್ದ  " ಕೋತಿ " (ನಟಿ)
ಇವಳನ್ನು ನಂಬಿ..
ವೊಟು ಹಾಕಿದರೇ ...
ಜನರೆದ್ದೆಲ್ಲಾ  " ಅದೋಗತಿ "
--------------------------

ಇದೊಂದು ದೇಶ ಸೇವೆನಾ..?

===============
ದೇಶ ಸೇವೆ,
ಎನ್ನುತ್ತಾ ಆಡುವರು  " ಕ್ರಿಕೇಟು "
ದೇಶಕ್ಕೆ ಆಗಲಿಲ್ಲ.,
ಇವರಿಂದ ಯಾವುದೇ " ಪ್ರಾಫ಼ಿಟ್ಟು "
ಬದಲಿಗೆ ತುಂಬುತ್ತಿವೆ.,
ಹಣದಿಂದ ಇವರುಗಳ " ಪಾಕೇಟು "
----------------------------------

आदत जो होचुकी है !

जो हमेशा तुम्हरिही ख़ुशी के बारे में सोचतेथे ..
तुम्हारी बेवफाई ने अच्छा सिला दिया ..
सोचना तो दूर्कि बात है ..
आज कल हम तुम्हे याद भी नहीं करते है ...
क्यूँ की  तुम्हारे बिना रहने की आदत जो होचुकी है।

हर पल तुम्हे फ़ूल की तरहा  चाहा था
जो तू काटा बनकर चुबी  ...
वो भवर का प्यार तुम्हे समज न आय ..
डूबी हुयी थी जो किसी ऐय्याशी में ...
किसीको चाहनेकि उम्मीद न रहा ..क्यूँ की  आदत जो होचुकी है।

साथ साथ चलनेका जो वादा किया था ..
छोटेसे घोस्लेकी सपने जो देखे थे ...
तुम्हे थो कदर ही  नहीं था उसके जस्बात का ..
पल भर में जो भिकार गए ..
किसी और का रस्ता क्यूँ देखे कोई ..आदत जो होचुकी है।

ಚಟ ಬಿಟ್ಟೀತೆ ಹಠ..?

=========== ಟೆನಶನ್ ಎಂದು ಸೇದಲಾರಂಭಿಸಿದ ಸಿಗರೇಟು..

ಶೋಕಿಯಾಗಿ ಪರಿವರ್ತನೆಗೊಂಡಿತು!

ಈಗ ಬಿಟ್ಟೆನೆಂದರೂ ಬಿಡಲಾಗುತ್ತಿಲ್ಲ..,

ಹೇಳುತಿಹುದು ಸಿಗರೇಟು..., ನೀನಿರದೇ ಹೇಗಿರಲಿ ನನ್ನ ನಲ್ಲ !
-----------------------------------------------------------------------------------------

ಸರ - " ಖಾರಾ "

============ ಚುನಾವಣೆಗೂ ಮುಂಚೆ ಎಲ್ಲ ಪಕ್ಷದವರು ಹೇಳುವರು.. ಬಹು ಮತ ಪಡೆದು, ರಚಿಸುವೆವು  " ಸರ್ಕಾರ " ಚುನಾವಣೆಯ ನಂತರ ಗುಸು ಗುಸು ಪಿಸು ಪಿಸು ಕಳ್ಳ ಸಭೆಗಳು... ಯಾರ ಜೊತೆ ಸೇರಿದರೆ.. ರಚಿಸಬಹುದು " ""” ಸಮ್ಮಿಶ್ರಸರ್ಕಾರ "

ಬಡ್ತಿ

====
ವರ್ಷ ಪೂರ್ತಿ
ಮೈ ಬಗ್ಗಿಸಿ ದುಡಿದರೂ
ಸಿಗುವುದಿಲ್ಲ ಸಂಬಳದಲ್ಲಿ
" ಬಡ್ತಿ “
ಕೆಲಸವೇ ಮಾಡದೇ
ಬಕೀಟು ಹಿಡಿಯುತ್ತಾ
ಮಂಕು ಬೂದಿ
ಎರಚಿದವನಿಗೇ
ಲಕ್ಷ ಲಕ್ಷ
" ಪ್ರಾಪ್ತಿ "
--------------

ಜನುಮ ದಿನ

Image
ಒಲವಿಗೆ ಒಲವೇ ಶೃಂಗಾರ,

ಬಾಳಿಗೆ, ಪ್ರೀತಿಯೇ ಆಧಾರ!

ಪ್ರೀತಿಸುವ ಜೀವಗಳಿಗೆ ನಗುವೇ ಮಂದಾರ,

ಹರುಷ ತುಂಬಲಿ ನಿನ್ನ ಬಾಳಲ್ಲಿ ಅಪಾರ !

ನೀ ಮನೆಯನು ಬೆಳಗಲು ಜನಿಸಿದ ಈ ದಿನ,

ಎಲ್ಲರಲ್ಲೂ ನೀಡುತ್ತಾ ಸಾಗು ನೀ ಹೊಸ ಚೇತನ !

ನೀತಿ

=====
ಸ್ನಾತಕೊತರ ಪದವಿ ಪಡೆದರೇನು..? 

ಸರಿ ತಪ್ಪು ಅರಿಯದವಳಿಗೆ !

ಓದಿದ ಜ್ಞಾನವು ಕಲಸಕ್ಕೆ ಬಾರದು..

ಸಾಮಾನ್ಯ ಜ್ಞಾನವಿಲ್ಲದವಳಿಗೆ.!!
-------------------------

ಬುದ್ಧಿವಂತಿಕೆ

ಒಬ್ಬರ ಮನೆ ಬೆಳಗೋ ದೀಪ
ಇನ್ನೊಬ್ಬರ ಮನೆ ಸುಡಬಹುದಾದರೆ
ಅದನ್ನು ನಂದಿಸುವುದೇ ಬುದ್ಧಿವಂತಿಕೆಯಲ್ಲವೇ ?

ದೀಪ ಉರಿಯುತಿದೆ ನೋಡ..!

ಬೆಳಕು ಚೆಲ್ಲುವುದ ಬಿಟ್ಟು
ಕ್ರೂರ ಬುದ್ಧಿಯ ಮೆಟ್ಟು
ಸೊಕ್ಕು ತುಂಬಿಕೊಂಡು ಮೈಯ್ಯಿಗೆ…, ಉರಿಯುತಿದೆ ನೋಡ

ಕಾಲದ ಜ್ಞಾನವಿಲ್ಲ ಅದಕೆ
ಮನವು ಹೊಲಸು ತುಂಬಿದ ಮಡಿಕೆ
ಕೆಸರಲ್ಲಿ ಬಿದ್ದು ಒದ್ದಾಡುತಿಹುದು…, ಉರಿಯುತಿದೆ ನೋಡ

ಅವಿವೇಕಿ, ಅಹಂಕಾರವ ಮೆರೆಯುತ
ಬೂಟಾಟಿಕೆಯ ನಾಟಕವಾಡುತ
ಇದರ ಅಬ್ಬರ ಎಣ್ಣೆ ಮುಗಿಯುವವರೆಗೆ.., ಉರಿಯುತಿದೆ ನೋಡ

ಪಾಪದ ಕೊಡ ತುಂಬಿ
ಬತ್ತಿಯೇ ಬತ್ತುತ ಬಾಡಿ
ಆ ಉರಿಯೇ ಸುಟ್ಟಿದೆ ಅದರ ಹುಟ್ಟು…ದೀಪ ಉರಿದಿದೆ ನೋಡ

ಧಘ ಧಘ ಉರಿದೊಡನೆ
ಅಳಿದುಳಿದು ನಶಿಸಿತು
ಕೆಟ್ಟು ಕರಕಲಾಯಿತು ನೋಡ… ದೀಪ ಉರಿದಿದೆ ನೋಡ

***ಭಾವಪ್ರಿಯ***

THOUGHT FOR THE DAY

Our " Birth " on this earth is for a purpose. Do a good work, love, help, care & be with someone to lead a fruitful life.


Don't make life " Misery " by hurting, killing, cunning, robbing someone to lead a selfish, egoistic life.

ಮುನಿಸು

ನಲ್ಲೆ, ನಿನ್ನ ನಗುವಿಗಿಂತ ನಿನ್ನ ಮುನಿಸು ನನಗಿಷ್ಟ...

ಏಕೆಂದರೆ,

ಆ ಮುನಿಸೇ ಹೇಳುತಿಹುದು ನೀ ನನ್ನ ಬಹಳ ಪ್ರೀತಿಸುತ್ತಿ ಅಂತ !

"ವಿ" ಕೋಪ

ಸಣ್ಣ ಪುಟ್ಟ ವಿಷಯಕ್ಕೆ ಏಕೆ ಈ ಕೋಪ ?

ಬಸವಳಿದ ಜೀವವದು ಹೋಗಲಿ ಬಿಡು ಪಾಪ.!

ಕೆಂಗಣ್ಣು ಬಿಡಬೇಡ ಹಾಕ ಬೇಡ ಶಾಪ.,

ಮುನಿಸನ್ನು ಮಾರಿ ಬಿಡು, ಏನೇ ಇರಲಿ ಲೋಪ !

ತಡ ಮಾಡದೇ ಸೇರು ಬಾ.. ಬಿಟ್ಟು ನಿನ್ನ ಹಠ..,

ತೆರೆದಿಟ್ಟಿರುವೆ ನನ್ನ ಮನಸ್ಸಿನ ಕಪಾಟ.!

ಚುಟುಕ

ಹೊನ್ನ ರಾಶಿಯ ಉತ್ತಿ, ಬಿತ್ತವ ಕುಬೇರ
                                                       " ಮೈಲಾರ "

ನಾಮವನಿಟ್ಟು ಚಂಬಿನ ಮೇಲೆ, ನಡೆದವ
                                                        " ತಿಮ್ಮಪ್ಪ "


ಸಂತಸ

ಬಿಸಿಲಿನ ಬೇಗೆಗೆ ಬೆಂದು ಹೋಗಿದ್ದ ಜನ


ಮಳೆಯ ಹನಿಗಳ ಕಂಡು ಹಿಗ್ಗಿತು ಮನ

ಭುವಿಗೆ ಹನಿ ಬಂದು ಚುಂಬಿಸಿದಕ್ಕೆ ಸಂತಸ

ಮನು ಕುಲಕ್ಕೆ ತಂಪೆರೆದಕ್ಕೆ ಸಂತಸ

ಕೆರೆಗೆ ಒಡಲು ತುಂಬಿದಕ್ಕೆ ಸಂತಸ

ಜಾನುವಾರುಗಳಿಗೆ ಹಸಿರು ಚಿಗಿಯುವುದಕ್ಕೆ ಸಂತಸ

ವನ್ಯ ರಾಷಿಗೆ ಬೆಳೆಯುವೆ ಎಂಬ ಸಂತಸ

ಮಳೆಯೇ ನೀ ಬಂದರೆ ಯಾರಿಗಿಲ್ಲ ಹೇಳು ಸಂತಸ...?

THOUGHT FOR THE DAY

TIME may wash away the rivalities within friends , But it cannot change BAD to good on a faded relationship.

ಹಿತವಚನ

ಜೀವನದ ಅತ್ಯಮೂಲ್ಯ ಕ್ಷಣಗಳನ್ನ ಪ್ರೀತಿ ಪಾತ್ರರೊಂದಿಗೆ ಕಳೆಯಿರಿ,  ಆದರೆ ಪ್ರೀತಿ ಪಾತ್ರರಿಗೋಸ್ಕರ ಬೇರೆಯವರ ಜೀವನ ಹಾಳು ಮಾಡದಿರಿ.

THOUGHT FOR THE DAY

" ADJUST " & " COMPRAMISE " ARE THE TWO faces of a coin which play a important role in a SUCCESSFULL relationship