(ಮುಂದೆವರೆದಿದೆ....) ಪೋಲಿಸು ಠಾಣೆಯಲ್ಲಿ ದೂರು ಕೊಟ್ಟು ವಿಜಯನಿಗೆ ಬೇಗ ಜೈಲಿಗೆ ಹಾಕಿ ಅಂತ ಹುಡುಗಿಯ ಮಾವ ಇನಸ್ಪೆಕ್ಟರ್ ಮೇಲೆ ಒಬ್ಬ ಪೋಲಿಸ್ ಗಳೆಯನಿಂದ ವತ್ತಾಯ ಪಡಿಸುತ್ತಾನೆ. ಬಹಳಷ್ಟು ಠಾಣೆಗಳಲ್ಲಿನ ಅಧಿಕಾರಿಗಳು ಸ್ವಲ್ಪ ಕಠೋರವಾಗಿಯೆ ಇರುತ್ತಾರೆ ಅನ್ನಬಹುದು.,ಆದರೆ ವಿಜಯನ ಪುಣ್ಯಾ ಏನೋ ಅಲ್ಲಿಯ ಅಧಿಕಾರಿ ನ್ಯಾಯವಾಗಿ ನಡೆದುಕೊಳ್ಳವನಾಗಿರುತ್ತಾನೆ. ಒಮ್ಮಿಂದೊಮ್ಮೆಲೆ ದುಡುಕದೆ, ವಿಜಯನನ್ನು ಪೋಲಿಸು ಠಾಣೆಗೆ ಸುಮ್ಮನೆ ಬಂದು ಭೆಟಿಯಾಗು ಅಂತ ಒಬ್ಬ ಕಾನ್ಸ್ಟೇಬಲ್ ಹತ್ತಿರ ಹೇಳಿ ಕಳಿಸುತ್ತಾನೆ. ವಿಜಯನಿಗೆ ಏನೂ ತಿಳಿಯುವುದಿಲ್ಲ, ಅಲ್ಲಾ ಪೋಲಿಸಿನವರು ತನ್ನನ್ನಾ ಏಕೆ ಕರಿಸಿಕೊಳ್ಳುತ್ತಾರೆ .? ಬಹುಶಃ ಅವರಿಗೆ ಎಲ್ಲೊ ತಪ್ಪು ಮಾಹಿತಿಯಿಂದ ನನ್ನ ಕರೆದಿದ್ದಾರೆ ಅಂದು ಕೊಳ್ಳುತ್ತಾನೆ., ಸರಿ ಹೋಗಿ ಬರೋಣ ಅಂದುಕೊಂಡು ಒಬ್ಬನೆ ಠಾಣೆಗೆ ಹೋಗುತ್ತಾನೆ. ವಿಜಯ ಪೋಲಿಸು ಠಾಣೆಗೆ ಹೋಗಿ ವಿಚಾರಿಸಿದರೆ ಅಲ್ಲಿ ಇನಸ್ಪೆಕ್ಟರ್ ಇರುವುದಿಲ್ಲ, ಸರಿ ಸ್ವಲ್ಪ ಸಮಯ ಕಾದರಾಯಿತು ಅಂದು ಕೊಂಡು ಕೂರುತ್ತಾನೆ, ಸ್ವಲ್ಪ ಹೊತ್ತಿನ ನಂತರ ಇನಸ್ಪೆಕ್ಟರ್ ಬರುತ್ತಾರೆ. ಒಳಗೆ ಹೋದವನೆ ಭೇಟಿಯಾಗಿ ಸರ್ ನನಗೆ ಬರಲು ಹೇಳಿದ್ದಿರಿ ಅಂತ ಗೊತ್ತಾಯಿತು ಅದಕ್ಕೆ ಬಂದೆ.., ಏನ್ ಸಮಾಚಾರ ಅಂತ ಕೇಳುತ್ತಾನೆ. ವಿಜಯ ಅಂದರೆ ನೀನೆನಾ ? ಹಾ ಹೌದು...! ಎಲ್ಲಿ ಕೆಲಸ ಮಾಡುತ್ತಿರುವೆ ? ವಿಜಯ ಹೀಗ್ ಹೀಗೆ ನಾನು ಒಂದು ಮಲ್ಟಿನ್ಯಾಷನಲ್ ಕಂಪನಿಯಲ್ಲಿ ಕೆಲಸ ಮಾಡುತ್ತೆನೆ ಅಂತ ಹೇಳಿದ. ನಿನ್ನ ಕುಟುಂಬದವರ ಬಗ್ಗೆ ಹೇಳು ಅಂದರು., ಅದಕ್ಕೆ ವಿಜಯಾ ತಂದೆ ನಿವ್ರುತ್ತ ಅಧಿಕಾರಿ,ತಾಯಿ ಹೌಸ್ ವೈಫ್ ಊರಲ್ಲೆ ಇರುತ್ತಾರೆ, ಇನ್ನೂ ಓದುತ್ತಿರುವ ತಮ್ಮಂದಿರು ಇದ್ದಾರೆ. ಸರಿ ನಿನ್ನ ಮದುವೆ ಆಗಿದ್ದು ಯಾವಾಗ...? ಅಂದಾಗ, ಇವರಿಗೆ ಇವೆಲ್ಲಾ ಏಕೆ ಬೇಕು, ಯಾವುದಕ್ಕೆ ಕರೆದಿದ್ದಾರೊ ಅದನ್ನೇ ಹೇಳುತ್ತಿಲ್ಲವಲ್ಲ ಅಂದುಕೊಳ್ಳುವಷ್ಟರಲ್ಲಿ..ನಿನ್ನ ಹೆಂಡತಿ ನಿನ್ನ ಮೇಲೆ ವರದಕ್ಷಿಣೆ ಕಿರುಗಳ ಹಾಗೆ ಅತ್ತೆ ಮಾವಂದರು,ತಮ್ಮಂದಿರು ಎಲ್ಲರೂ ಸೇರಿ ಕಿರುಗಳ ಕೊಡುತ್ತಾರೆ ಅಂತಾ ದೂರು ನೀಡಿದ್ದಾಳೆ ಇದಕ್ಕೆ ನೀನು ಏನು ಹೇಳುತ್ತಿಯ ? ಅಂದರು. ಇವನ ಹೆಂಡತಿ ಇಷ್ಟೊಂದು ಕೆಳಮಟ್ಟಕ್ಕೆ ಇಳಿಯುತ್ತಾಳೆ ಅಂತಾ ವಿಜಯ ಎಂದೆಂದಿಗೂ ಊಹಿಸಿರಲಿಲ್ಲ. ಸಾರ್ ಇವೆಲ್ಲಾ ಕಟ್ಟು ಕಥೆಗಳು, ನಾನು ಅವಳು ಬಿಟ್ಟರೆ ಇಲ್ಲಿ ಯಾರು ಕೂಡಾ ಇರುವುದಿಲ್ಲಾ., ಎಲ್ಲರೂ ನನ್ನ ತವರೂರಿನಲ್ಲೇ ಇರುತ್ತಾರೆ ಅಂದಕೂಡಲೇ ಇನಸ್ಪೆಕ್ಟರ್ ಅವರಿಗೆ, ಹುಡುಗಿ ಕಡೆ ಏನೋ ವಿಷಯವಿದೆ..ಅಂದುಕೊಳ್ಳುತ್ತಾರೆ. ಸರಿ ಆ ಹುಡುಗಿಯ ಜೊತೆಯಲ್ಲಿ ಒಬ್ಬ ಮನುಷ್ಯ ಬಂದಿದ್ದ ಅವನು ಯಾರು ಅಂತಾ ನಿನಗೆ ಗೊತ್ತೆ ? ಅವನ ಚೆಹರೆಯ ವಿವರ ಕೊಡುತ್ತ ಅಂದರು. ಅವನೇ ಸಾರ್ ನನ್ನ ಮದುವೆ ಜೀವನದಲ್ಲಿ ಬೆಂಕಿ ಹಚ್ಚಿದವನು ಅಂದ ವಿಜಯ.ಅದಕ್ಕೆ ಇನಸ್ಪೆಕ್ಟರ್ ನನಗೂ ಕೂಡ ಅವನ ನೋಡಿದರೆ ಹಾಗೆ ಅನ್ನಿಸಿತು, ಅವನು ವತ್ತಾಯ ಮಾಡಿ ನಿನ್ನನ್ನ ಒಳಗೆ ತಳ್ಳಿ ಅಂತ ಹೇಳುತ್ತಿದ್ದನು ಮತ್ತೆ ಪದೆ ಪದೆ ಒಬ್ಬ ಹಿರಿಯ ಅಧಿಕಾರಿಗಳಿಂದ ಪೋನು ಕೂಡಾ ಮಾಡಿಸಿದ್ದನು. ನಿನ್ನ ಹೆಂಡತಿ ಹಾಗು ಅವನು ಜೋಡಿಯಾಗಿ ಬಂದಾಗಲೇ ನನಗೆ ಅನುಮಾನ ಮೂಡಿತ್ತು...ಅವರುಗಳು ಇಲ್ಲಿಗೆ ದೂರು ನೀಡಲು ಬಂದಾಗ ಅವಳು ಭರ್ಜರಿಯಾಗಿ ಮೇಕಪ್ ಮಾಡಿಕೊಂಡು ಲಿಪ್ ಸ್ಟಿಕ್ ಹಚ್ಚಿಕೊಂಡು ಬಂದದ್ದು ನೋಡಿಯೇ ಅವರು ಕೊಡುತ್ತಿರುವ ದೂರು ಸುಳ್ಳು ಎಂದು ಉಹಿಸಿದ್ದೆ. ಅದಲ್ಲದೆ ನಮ್ಮ ಪೇದೆ ಬಂದು ನಿಮ್ಮ ಅಕ್ಕ ಪಕ್ಕದ ಮನೆಯವರಿಗೆ ನಿಮ್ಮ ಬಗ್ಗೆ ಕೇಳಿದಾಗ ಒಳ್ಳೆಯ ಹುಡುಗ, ತಾವಾಯಿತು ತಮ್ಮ ಕೆಲಸವಾಯಿತು ಮತ್ತೆ ಯಾರ ತಂಟೆಗೂ ಹೋಗುವುದಿಲ್ಲ ಅಂತ ಹೇಳಿದ್ದರು. ನಿನ್ನ ಹೆಂಡತಿ ಬಗ್ಗೆ ಏನು ಹೇಳುತ್ತಿಯಾ ಅಂದಾಗ ವಿಜಯ, ಈ ಹಿ0ದೆ ದೇವಸ್ಥಾನದಲ್ಲಿ ನಡೆದ ವಿಷಯವನ್ನು ಹೇಳುತ್ತಾನೆ, ಅವಳ ನಡವಳಿಕೆ ಆಫೀಸಿನಲ್ಲಿ ಸರಿ ಇಲ್ಲಾ ಸಾರ್ ಅದಕ್ಕೆ ಅವಳಿಗೆ ಕೆಲಸಕ್ಕೆ ರಾಜಿನಾಮೆ ಕೊಟ್ಟು ಮನೆಯಲ್ಲಿ ಇರು ಅಂತ ಹೇಳಿದ್ದಕ್ಕೆ ಮನೆ ಬಿಟ್ಟು ಓಡಿಹೋಗಿದ್ದಾಳೆ. ಅವಳಿಗೆ ಅವಳ ತಾಯಿ ಹಾಗು ಅವಳ ಮಾವನ ಕುಮ್ಮಕ್ಕು ಕೂಡಾ ಇದೆ ಅಂತಾ ಹೇಳುತ್ತಾನೆ. ಸರಿ.., ನಿನ್ನ ಊಹೆ ಸರಿಯಾಗಿದೆ ಅವಳ ಬಗ್ಗೆನೂ ಕೂಡ ನಮ್ಮ ಪೇದೆ ವಿಷಯ ತಂದ್ದಿದ್ದಾನೆ, ಅವನು ಹೇಳಿದ ಪ್ರಕಾರ ಅವಳು ಸ್ವಲ್ಪ ಓವರ್ ಇದ್ದಾಳೆ, ಬರಿ ಗಂಡಸರ ಜೊತೆ ಒಡನಾಟ, ಮತ್ತು ಒಬ್ಬ ಸಹುಧ್ಯೊಗಿ ಕೂಡ ಬಹಳ ಸಲಿಗೆ ಇಂದ ಇರುತ್ತಳೆ ಅನ್ನುವುದು ಕೂಡಾ ತಿಳಿದುಬಂದಿದೆ. ಸರಿ ಬಿಡಪ್ಪ , ಅವರ ಮನೆಯವರು ಯಾರು ನಿನ್ನ ವಿಷಯಕ್ಕೆ ಬರಬಾರದ ಹಾಗೆ ನಾನು ತಾಕಿತ್ತು ಮಾಡಿ ಕಳಿಸುತ್ತೆನೆ, ನೀನು ಅವಳ ಕೂಡ ನೆಟ್ಟಗೆ ಜೀವನ ನಡೆಸಿಕೊಂಡು ಹೋಗುತ್ತಿಯಾ ಅಂತಾ ಕೇಳುತ್ತಾರೆ ?, ಅದಕ್ಕೆ ವಿಜಯ ಖುಶಿಯಿಂದ ಸಮ್ಮತಿ ಒಪ್ಪಿಸುತ್ತಾನೆ.ಸರಿ ನಿಮ್ಮ ತಂದೆಗೆ ಇಲ್ಲಿಗೆ ಬರಲು ಹೇಳು, ಎಲ್ಲರೂ ಸಹ ಕೂತು ಚರ್ಚೆ ಮಾಡಿ ಒಂದು ಒಳ್ಳೆಯ ನಿರ್ಧಾರಕ್ಕೆ ಬರೋಣ ಅಂತ ಹೇಳಿ ವಿಜಯನನ್ನ ಬೀಳಕೊಡುತ್ತಾರೆ. ಸರಿ ಒಂದು ವಾರ ಬಿಟ್ಟು ಇಬ್ಬರ ಮನೆಯವರನ್ನ ಪೋಲಿಸು ಠಾಣೆಗೆ ಬರಲು ಹೇಳಿಕಳಿಸುತ್ತಾರೆ. ಇನಸ್ಪೆಕ್ಟರ್ ಇವರನ್ನ ಕುರಿತು ಎನು ನಿಮ್ಮ ಸಮಸ್ಯೆ ಇಲ್ಲಿ ಹೇಳಿ, ಇಬ್ಬರದು ಕೇಳಿ ನಾನು ಒಂದು ನಿರ್ಧಾರ ಹೇಳುತ್ತೆನೆ ಅಂತಾ ಹೇಳುತ್ತಾರೆ. ಗಂಡ ನನಗೆ ನೌಕರಿ ಬಿಡಲು ಹೇಳುತ್ತಿದ್ದಾನೆ ಅದಕ್ಕೆ ನಾನು ಒಪ್ಪುವುದಿಲ್ಲ, ನನಗೆ ನೌಕರಿ ಬಿಟ್ಟರೆ ತಲೆ ಕೆಟ್ಟು ಹೋಗುತ್ತದೆ ಅಂತ ಹೇಳುತ್ತಾಳೆ. ನಿನ್ನ ಗಂಡನಿಗೆ ನಿನ್ನ ದುಡುಮೆಯ ದುಡ್ಡು ಬೇಡವಂತೆ, ನೀನು ಮನೆಯಲ್ಲಿ ಇದ್ದುಕೊಂಡು ಸಂಸಾರವನ್ನು ನೋಡಿಕೊಂಡು ಹೋದರೆ ಸಾಕು ಅಂತಾ ಹೇಳುತ್ತಾನೆ. ನೀನು ಯಾರಿಕೋಸ್ಕರ ದುಡಿಯ ಬೇಕು ಅನ್ನುತ್ತಿಯ, ಅಂದರೆ ನನ್ನ ಫ್ಯಾಮಲಿ ಗೊಸ್ಕರ ಅನ್ನುತ್ತಾಳೆ ( ಅವಳ ಕಪಟ ಉತ್ತರವಿದು ಸ್ನೇಹಿತರೆ..ಅವಳಿಗೆ ತನ್ನ ಫ್ಯಾಮಲಿ ಅಂದರೆ ತನ್ನ ಅಮ್ಮ, ಮಾವ ಅವರೆಲ್ಲಾ ಅಷ್ಟೇ.) ಸರಿ ವಿಜಯಾ ನೀನು ಹೇಳಪ್ಪಾ ನೀನು ಏನಂತಿಯಾ, ಸಾರ್ ನಾನು ನಿಮಗೆ ಆಗಲೇ ಹೇಳಿದ ಹಾಗೆ ಇವಳ ಆಫಿಸೀನ ಚಟುವಟಿಕೆಗಳು ನನಗೆ ಹಿಡಿಸಿಲ್ಲ, ಇವಳಿಗೆ ಮನೆಯ ಬಗ್ಗೆ ನಮ್ಮ ಸಂಸಾರದ ಬಗ್ಗೆ ಕಿಂಚಿತ್ತು ಚಿಂತೆ ಇಲ್ಲ ಅದಕ್ಕೆ ಸ್ವಲ್ಪ ದಿನ ಇವಳು ಕೆಲಸ ಬಿಟ್ಟು ಇದ್ದರೆ ನಾನೇ ಮತ್ತೆ ಬೇಕೆನ್ನಿಸಿದಾಗ ಇವಳಿಗೆ ಕೆಲಸ ಕೊಡಿಸುತ್ತೆನೆ ಆ ತಾಕತ್ತು ನನ್ನಲ್ಲಿದೆ ಅನ್ನುತ್ತಾನೆ. ಇನಸ್ಪೆಕ್ಟರ್ ರವರು ಭೇಷ ವಿಜಯಾ...ಇವನು ಇಷ್ಟೆಲ್ಲಾ ಹೇಳುವಾಗ ಸುಮ್ಮನೆ ಒಪ್ಪೊಕೊಳ್ಳಮ್ಮ ನಿಮ್ಮ ಜೀವನ ಸುಖಾವಾಗಿರುತ್ತದೆ ಅಂದರು. ಏನೇ ಆಗಲಿ ನಾನಂತು ಕೆಲಸ ಬಿಡುವುದೇ ಇಲ್ಲಾ..ಅಂದಳು ಇನಸ್ಪೆಕ್ಟರ್ ಬೈದುದಕ್ಕೆ ಸರಿ ಬಿಡುತ್ತೆನೆ ಆದರೆ ಒಂದೆ ಸರಿ ಬಿಡಲು ಆಗುವುದಿಲ್ಲ ನನಗೆ ಸ್ವಲ್ಪ ಸಮಯ ಬೇಕು ಅನ್ನುತ್ತಾಳೆ, ಇವಳ ಕ್ರೂರ ಬುದ್ದಿ ತಿಳಿದಿದ್ದ ವಿಜಯ,ಅವಳು ಕೆಲಸ ಬಿಡದೆ ಇದು ಸರಿ ಹೋಗುವುದಿಲ್ಲ ಸರ್ ಅಂದ ಕೂಡಲೆ ಇನಸ್ಪೆಕ್ಟರ್ ಅವರಿಗೆ ಇವಳ ಆಫೀಸಿನ ರಾಸ ಲಿಲೆಗಳು ನ್ಯಾಪಕಕ್ಕೆ ಬರುತ್ತವೆ., ಸರಿ ವಿಜಯ ನಿನ್ನ ಹೆಂಡತಿ ನೀನು ೩೦೦೦೦ ಸಾವಿರ ಸಂಬಳ ತೆಗೆದು ಕೊಳ್ಳುತ್ತಿ ಅಂತಾ ಹೇಳಿದ್ದಾಳೆ ಹೌದಾ ಅಂತಾ ಕೇಳುತ್ತಾರೆ, ತಕ್ಷಣ್...., ಅಯ್ಯೋ ನಾನು ಹಾಗೆ ಹೇಳಿಯೇ ಇಲ್ಲಾ ಅಂತಾ ಇನಸ್ಪೆಕ್ಟರ್ ಅವರಿಗೆ ಬಾಯಿ ಬಡಿಯುತ್ತಾಳೆ, ಇದನ್ನು ಕಂಡ ಇನಸ್ಪೆಕ್ಟರ್ ಇವಳ ಹಾವು ನಾಲಿಗೆ ಬಗ್ಗೆ ವಿಜಯಾ ಹೇಳಿದ್ದು ನಿಜ ಅಂತಾ ಗೊತ್ತಾಗುತ್ತದೆ. ( ಅವಳು ಇನಸ್ಪೆಕ್ಟರ್ ಗೆ ಈ ವಿಷಯ ಹೇಳಿದ ಕಾರಣ, ನೀವು ಅವನ ಹತ್ತಿರ ದುಡ್ಡು ವಸೂಲಿ ಮಾಡಿ ಅಂತ ಹೇಳೊದಕ್ಕೆ ಈ ವಿಷಯ ತಿಳಿಸಿರುತ್ತಾಳೆ - ಕಪಟಿ ಹೆಂಗಸು - ಗಂಡನ ಜೊತೆಯಲ್ಲೆ ಇದ್ದು ಗಂಡನನ್ನೆ ಹಿಂದಿನಿಂದ ಚೂರಿ ಹಾಕುವ ಇವಳ ಬುದ್ದಿ ) ಇನಸ್ಪೆಕ್ಟರ್ ನಕ್ಕು ಸರಿ ಅವನ ಸಂಬಳದಲ್ಲಿ ಜಾಮ್ ಜಾಮ್ ಅಂತಾ ಜೀವನ ಮಾಡಬಹುದು, ಇಬ್ಬರು ನೋಡಲು ಸುಂದವಾಗಿದ್ದಿರಿ, ಮಕ್ಕಳು ಮಾಡಿ, ಕಾರು ತೊಗೊಳಿ, ದೊಡ್ಡ ಮನೆ ಕಟ್ಟಿಸಿ ಸುಖವಾಗಿ ಜೀವಿಸಿರಿ ಅಂತಾ ಹೇಳಿದರೂ ಇವಳು ಮಾತ್ರ ಒಪ್ಪುವುದೇ ಇಲ್ಲಾ...! ಇನಸ್ಪೆಕ್ಟರ್ ಇಷ್ಟೆಲ್ಲಾ ಹೇಳಿದರೂ ನೀನು ಒಪ್ಪುತ್ತಿಲ್ಲಾ ಅಂದರೆ... ಅಂದ ಕೂಡಲೆ ಅವಳು ಸಾರ್ ನಿಮ್ಮ ಕೂಡ ನಾನು ಸ್ವಲ್ಪ ಪರ್ಸನಲ್ ಆಗಿ ಮಾತಾಡಬೇಕು ಎಲ್ಲರನ್ನೂ ಹೊರಗೆ ಕಳಸಿ ಅಂತಾ ಹೇಳುತ್ತಾಳೆ, ಸರಿ ಸ್ವಲ್ಪ ಎಲ್ಲರೂ ಹೊರಗೆ ಇರಿ...ಅಂದ ಇನಸ್ಪೆಕ್ಟರ್....ಜೋರಾಗಿ ರೇಗಾಡುತ್ತಾ ಅವಳ ಮೇಲೆ....ನಾವೇನು ಇಲ್ಲಿ ಲಂಚ ತಿನ್ನಲು ಕೂಳಿತ್ತಿದ್ದಿವಾ ? ನನ್ನನ್ನ ನೀನು ಏನು ಅಂದುಕೊಂಡಿದ್ದಿಯಾ, ನಿನ್ನ ಜೀವನ ಹಾಳಾಗದಿರಲಿ ಅಂತಾ ನಾನು ಒಂದು ಗೂಡಿಸೊಣವೆಂದರೆ ನನಗೆ ಲಂಚದ ಆಮಿಷ ಒಡ್ಡುತ್ತಿರುವೆ...,ಹಾಳಾಗಿ ಹೋಗು ಇನ್ನು ಮೇಲೆ ನನ್ನ ಠಾಣೆಗೆ ಬರಬೇಡ ಅಂದ ಗದರಿಸಿ ಕಳಿಸುತ್ತಾರೆ. ನೋಡಿದಿರಾ ಓದುಗರೆ...ಹೆಂಗಸಿನ ಚಾಲಾಕುತನವ... ? ಇವಳ ಬುದ್ಧಿಗೆ ಇವಳು ಜಾಣೆ ಅನ್ನುತ್ತಿರೋ ಅಥಾವಾ ಕಿರಾತಕಿ ಅನ್ನುತ್ತಿರೋ ನಿಮಗೆ ಬಿಟ್ಟದ್ದು..! ಇಲ್ಲಿಗೆ ಇನಸ್ಪೆಕ್ಟರ್ ಒಂದು ನವ ಜೋಡಿಯನ್ನು ಮತ್ತೆ ಕೂಡಿಸುವ ಪ್ರಯತ್ನ ನೆಲಕಚ್ಚುತ್ತದೆ. ಅವಳು ಮತ್ತೆ ಅವರ ಜನರು ಹೊರ ನಡಿದ ಕೂಡಲೆ ವಿಜಯನ ಕುರಿತು, ಅವಳು ಹೆಮ್ಮಾರಿ ಇದ್ದಾಳಪ್ಪ, ನೀನು ಇವಳನ್ನ ಬಿಟ್ಟು ಬೇರೊಬ್ಬ ಒಳ್ಳೆಯ ಹುಡುಗಿಯನ್ನು ನೋಡಿ ಮದುವೆಯಾಗು..., ಅವಳು ಹಾಳಾಗಿ ಹೋಗುತ್ತಾಳೆ, ಅವಳ ಬಗ್ಗೆ ಮತ್ತೆ ತಲೆ ಕೊಡಿಸುವುದಕ್ಕೆ ಹೋಗ ಬೇಡ., ಅವಳು ಸಂಸಾರ ಮಾಡಲಿಕ್ಕೆ ಲಾಯಕ್ಕು ಇಲ್ಲಾ ಅಂತಾ ಹೇಳುತ್ತಾರೆ. ಇನಸ್ಪೆಕ್ಟರ್ ಅವರ ಮಾತು ಕೇಳಿದ ವಿಜಯ ಅವರ ಕಾಲಿಗೆಬಿದ್ದು ಬಿಡುತ್ತಾನೆ.., ನಿನಗೆ ಒಳ್ಳೆಯದಾಗಲಿ ಬೇಗ ಇವಳನ್ನ ಬಿಟ್ಟು ಒಂದು ಒಳ್ಳೆಯ ಹುಡುಗಿ ನೋಡಿ ಮದುವೆ ಮಾಡಿಕೊ, ಮದುವೆಗೆ ಕರಿ ನಾನು ಬರುತ್ತೆನೆ ಅಂತಾ ಹೇಳಿ ಕಳಿಸುತ್ತಾರೆ. ಇಂತಹ ಇನಸ್ಪೆಕ್ಟರ್ ಗಳೂ ಇರುತ್ತಾರೆ ಅಂತಾ ತಿಳಿದು ವಿಜಯನಿಗೆ ಹಾಗು ಅವನ ಮನೆಯವರಿಗೆ ಸಂತೋಷವಾಗುತ್ತದೆ. ಇಲ್ಲಿಯ ಸಂದಾನ ಫಲಕಾರಿ ಯಾಗಲಿಲ್ಲ, ಹೆಣ್ಣಿನ ತಾಯಿ ಮಾವನ ಹಠ ಇಲ್ಲಿಗೆ ನಿಂತೀತೆ..? ವಿಜಯನ ಗೋಳು ಇಲ್ಲಿಗೆ ಮುಗೀತೆ ? ಅಥಾವಾ ಇವರ ಜೀವನ ಮತ್ತೆ ಸರಿಯಾದೀತೆ..? ಎಲ್ಲಾ ಊಹಾ ಪೋಹಗಳು ಹಾಗೆ ಇರಲಿ ಗೆಳೆಯರೆ...., ಮುಂದಿನ ಸಂಚಿಕೆಯಲ್ಲಿ ಮುಂದು ವರೆಸುತ್ತೆನೆ ಕಾದು ನೋಡಿ...........ಮುಂದುವರೆವುದು...)
ಸೂಚನೆ : ನಿಮ್ಮ ಅಭಿಪ್ರಾಯ, ತಕರಾರುಗಳನ್ನ ಅಪೇಕ್ಷಿಸುತ್ತೆನೆ, ಏನೇ ಇರಲಿ ನನಗೆ ಬರೆದು ಕಳಸಿ..., ಇನ್ನೂ ಕೆಲವೇ ಕಂತುಗಳಲ್ಲಿ ಈ ಕಥೆಯನ್ನ ಮುಗಿಸುತ್ತೆನೆ....ಧನ್ಯವಾದಗಳು.