
ನಿನ್ನ ಬಿಟ್ಟು ಬದುಕಲಾರೆ ಎನ್ನುತ್ತಿದ್ದಳು ಅಂದು ,......
ಅವನ ಜೊತೆ ಬದುಕಬಲ್ಲೆ ಎನ್ನುತ್ತಿವಳು ಇಂದು , ನಿನ್ನ ಕೊಂದು ..!
---ಭಾವಪ್ರಿಯ---
































ಕಳ್ಳನ ಮನಸ್ಸು ಹುಳ್ಳಹುಳ್ಳಗೆ
ಸುಳ್ಳನ ಅಳುಕು ತಪ್ಪು ಮುಚ್ಚುವವರೆಗೆ
ಸತ್ಯವ ಮರಿಸಲು ಅಳುವ ನಾಟಕ
ಸುಳ್ಳಿನ ನಷ್ಟ ತಪ್ಪಿಸಲು ಗೋಳಿಡುವ ನಾಟಕ
ಹರಿ ಇಲ್ಲದೆ ನಾಲಿಗೆ ರೋಜ್ಜಿನಂತೆ ಹರಿದಿರಲು
ಕ್ಷುಲ್ಲಕ ಜನರಿವರು ಮತಿಯೇ ಇಲ್ಲದೆ ಮಾತನಾಡಿಹರು
ಇವರಿವರ ಕುಡಿಗೆ ಕುತ್ತು ತರುವ ಇವರು
ಪ್ರೀತಿಯ ಅರಿಯದೆ ತೋರಿಕೆಯ ಅಭಿಮಾನ ತೋರಿಹರು
ಕೈಯಲಾಗದ ಇವರು ಅತ್ತು ಕರೆದು ಸಮಯವ ಸಾದಿಸಿಹರು
ಇವರ ಮಟ್ಟ ಇಲ್ಲಿಯವರೆಗೆ .... ನಾ ಕಾಣಿಸುವೆನು ದಾರಿ ಇವರಿಗೆ ಕೊನೆಯವರೆಗೆ ...!
ಆಗಸಕ್ಕೆ ಸೂರ್ಯನ ಕಿರಣಗಳೇ ಚೆನ್ನ,
ಧರೆಯ ಮೈಸಿರಿಗೆ ಹಸಿರು ಬಣ್ಣ,
ತಂಪನೆಯ ಮುಂಜಾವಿಗೆ ಹಕ್ಕಿಯ ಕವನ,
ದೀಪಾವಳಿಯ ಮುಸ್ಸಂಜೆಗೆ ದೀಪಳ ಹವನ,
ಇಷ್ಟಪಟ್ಟು ಪಡೆದು ಕೊಂಡರೆ ಮನಸ್ಸುಗಳಿಗೆ ಭೂಷಣ,
ಅಪರಂಜಿ ಮೆಟ್ಟಿ ಮಿಂಚಿನ ಮಾನಹರಣ,
ಬೆಲೆಯ ಮೆಟ್ಟಿಲ ಹತ್ತಿ......... ಕೊಂಡಂತೆ,
ಚಿನ್ನದ ದೀಪಗಳಿಗಿಂತ..., ಹಿತ್ತಾಳೆಯ ಹಣತೆಯೇ ಮೆರೆದಂತೆ .
ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...