Tuesday, March 08, 2011
ನಿನಗೂ ಹೀಗೆನಾ...?
ನೊರೆಂಟು ಮಾತಿವೆ ಮನದಲ್ಲಿ..
ಕೂಗುತಿರುವ ಹಕ್ಕಿಗಳ ಕಲರವದಂತೆ,
ಮಾತನಾಡುವ ದಾರಿ ಕಾಣದೆ, ಹೃದಯವೆಲ್ಲ ಚಿಲಿಪಿಲಿ...!
ಅದು ಯಾಕೋ ನಿನ್ನಲ್ಲೇ ತೋಡಿಕೊಳ್ಳುವ ತುಡಿತ ,
ನನ್ನ ನಿನ್ನ ಈ ಪರಿಚಯ, ಬಹುವರ್ಶದಿಂದ ಎಂಬಂತೆ..
ನನ್ನ ಮನಸ್ಸು ಮಾತನಾಡುತಿಹುದು ಎಲ್ಲೆ ಇರದಂತೆ ..
ನಿನಗೂನು ಹೀಗೆನಾ....?
ನಿ ಬರುವ ಹಾದಿಯಲಿ ನಾ ಅರಸಿ ಬಂದರೂ
ನಿನ್ನ ಕಾಣದೆ ಮೈಯಲ್ಲ ಪದರು ಪದರು..!
ನಿನ್ನ ನೋಟ ಕಂಡರೆ ಎದೆಗೆ ಬಾಣವಿಟ್ಟಂತೆ,
ನಿನ್ನ ನಗೆಯ ಅಲೆಯು ಹೊಸ ಮಳೆ ತಂದಂತೆ..
ನನ್ನ ಭಾವನೆಯ ಬೇಸಿಗೆ ಆರಿ.., ನಿನ್ನ ತಂಪು ಸುರಿದಂತೆ
ಮೈಯ್ಯ ನವಿರೇರಿಸುತಿರುವುದು ನಿನ್ನ ಚಲುವೋ ಇಲ್ಲ ನನ್ನ ಒಲವೋ..?
ನನಗಂತೂ ಹೀಗೆ....ನಿನಗೂ ಹೀಗೆನಾ ?
ಬಿಟ್ಟು ಬಿಡದಂಗೆ, ಪ್ರತಿ ಕ್ಷಣವೂ ನೆನೆಯುವೆ ನಿನ್ನ
ಒಂದು ಕ್ಷಣವೂ ನಿನ್ನ ಮರೆಯಲಾಗದೆ ಇನ್ನ
ಇರುಳು ಹನಿಯು ಕೊನೆಗೊಳ್ಳುವ ತನಕ..
ಮಂಜಿನ ಹನಿಯು ಮೂಡುವತನಕ..
ನಿದ್ದೆಯ ಸವಿ ಮಬ್ಬಿನಲ್ಲಿಯೂ ನಿನ್ನದೇ ಹಣತೆ..
ಪ್ರಜ್ವಲಿಸುತಿಹುದು ಬಾಳು ಬೆಳಗುವಂತೆ
ನನ್ನಲ್ಲಿಯೇ ಹೀಗೆ...ನಿನಗೂ ಹೀಗೆನಾ...?
ಹಿಂದೆಲ್ಲೋ ನಾವು ಸಂದಿಸಿದ ಹಾಗೆ..
ಜೊತೆಗೂಡಿ ಕಳೆದಂತೆ ಘಳಿಗೆ..
ನಮ್ಮಿಬ್ಬರ ಭಾವನೆಗಳ ಹಂಚಿಕೊಂಡಂತೆ..
ನಮ್ಮಿಬ್ಬರ ಸ್ವಭಾವಗಳ ಸಮ್ಮಿಲನವೇ ಅಪಾರ ..
ಪುಷ್ಪಗಳಿಂದ ಸಿಂಗರಿಸಿದ ಸ್ವರ್ಗದ ಹಾಗೆ...
ಮನೋಹರ ಬಾಳಿನ ದಾರಿಗೊಂದು ದಿನಚರಿ..
ಸೇರಿಕೊಂಡು ರೂಪಿಸಬಲ್ಲೆವು ಒಂದು ಸುಂದರ ಕನಸ್ಸಿನ ಐಸಿರಿ..
ಹೀಗನಿಸಿದೆ ನನಗೆ...ನಿನಗೂ ಹೀಗೆನಾ...?
********* ಭಾವಪ್ರಿಯ *********
Subscribe to:
Post Comments (Atom)
ಸಾವಿಗೆ ಕಿವಿ ಕೊಟ್ಟಾಗ..!
ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...
-
ಸಣ್ಣ ಕಂದಮ್ಮಗಳ ಹಸಿವು ಕರುಳ ಹಿಚುಕಿ ಹೊಸೆಯುವುದು ಕಣ್ಣ ಹನಿಗಳ ನೋವು ಮನವ ಹಿಂಡಿ ಕದಡುವುದು ಆಡುತ್ತಾ ಕಳೆಯಬೇಕಿದ್ದ ಬದುಕು ಬೀದಿಗಳಲ್ಲಿ ಅರಸಿದೆ ನೆರವು ...
-
ಕನ್ನಡಿಯೇ ಮನುಷ್ಯನ ಆತ್ಮೀಯ ಸ್ನೇಹಿತ! ನಾವು ನಕ್ಕರೆ ಕನ್ನಡಿಯೂ ನಕ್ಕು ನಗೆಯ ಹಂಚುವುದು ... ನಾವು ಅತ್ತರೆ , ಅದು ಕೂಡ ನಮ್ಮ ಜೊತೆಯಲೇ ಅಳುವುದು... ನಿನಂತೆಯೇ ನಾನು .....
-
ನಲ್ಲೆ, ತಂದು ಕೊಡಲೆ ನಿನಗೆ ಆ ಸಾಗರದಾಳದ ಮುತ್ತು .? ಅಂದನವನು.... ನಲ್ಲಾ, ಆ ಮುತ್ತಗಳ ಬೆಲೆ ಎಷ್ಟೇ ಇದ್ದರೂ .., ನೀ ನೀಡುವ ಪ್ರೀತಿಯ ಸಿಹಿ ಮುತ್ತಿಗೆ ಬೆಲೆ ಕಟ್ಟಲ...
No comments:
Post a Comment