Sunday, February 27, 2011
ನಿರೀಕ್ಷಣೆ ...!
ಅಂತರಂಗ ಬಹಿರಂಗಗಳ ಸುಚಿಗೊಳಿಸಿ ,
ಮನಸಿನ ಬಾಗಿಲಿಗೆ ನಾ ಕಟ್ಟಿ ತೋರಣ !
ಹೃದಯವೆಂಬ ಗರ್ಭ ಗುಡಿಯಲ್ಲಿ ಕಾಣುವ ಆಸೆ ನನಗೆ,
ಪ್ರೀತಿಯಿಂದ ವಿನಯವಾದ ನನ್ನ ಆಹ್ವಾನ !
ಅಕ್ಕರೆ ಸಕ್ಕರೆಯ ರಕ್ತ ಚಲಿಸುವಂತೆ,
ಬರುವಂತಳಾಗು ನಿ ನನ್ನ ಹೃದಯ ಸಾಮ್ರಾಜ್ಯಕ್ಕೆ !
ಬೆಳ್ಳಿಯ ಆರತಿ ಹಿಡಿದು, ನಿನ್ನ ಆಗಮನವೇ ಎದಿರು ನೋಡುತಿರುವೆ..
ದೇವಿ ಇರದ ದೈವಿಸ್ಥಳದಲಿ ಪೂಜಾರಿಗೇನು ಕೆಲಸ ,
ನಿನ್ನ ಜಪಿಸದ ನನಗೆ ಜೀವವೆಲ್ಲ ನಿರಸ
ಕಾಯಿಸದಿರು ಭಕ್ತನನ್ನು ..
ಕಾಡಿಸದಿರು ಧರ್ಮ ಪಾಲಿಸುವವನ..
ನಿನ್ನ ಮನದ ಮುಗಿಲಿನ ಬಾಗಿಲು ತೆರೆಯೆ..!
Subscribe to:
Post Comments (Atom)
ಸಾವಿಗೆ ಕಿವಿ ಕೊಟ್ಟಾಗ..!
ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...
-
ಕನ್ನಡಿಯೇ ಮನುಷ್ಯನ ಆತ್ಮೀಯ ಸ್ನೇಹಿತ! ನಾವು ನಕ್ಕರೆ ಕನ್ನಡಿಯೂ ನಕ್ಕು ನಗೆಯ ಹಂಚುವುದು ... ನಾವು ಅತ್ತರೆ , ಅದು ಕೂಡ ನಮ್ಮ ಜೊತೆಯಲೇ ಅಳುವುದು... ನಿನಂತೆಯೇ ನಾನು .....
-
ಹಸಿರು ಮಾನವನ ಜೀವದ ಉಸಿರು ಹಸಿರು ಇದ್ದಾರೆ ಭಾಗ್ಯ , ಹಸಿರು ತರುವುದು ಸೌಭಾಗ್ಯ ಹಸಿರು ಬೆರೆತಿರಲು ಜೀವನ , ಹಸಿರು ಬದುಕಿನ ಪಯಣ ಕಾಡು ಬೆಳೆದರೆ ನಾಡಿಗೆ ಮಳೆ , ಸೋನೆ ಗರ...
-
ಸಣ್ಣ ಕಂದಮ್ಮಗಳ ಹಸಿವು ಕರುಳ ಹಿಚುಕಿ ಹೊಸೆಯುವುದು ಕಣ್ಣ ಹನಿಗಳ ನೋವು ಮನವ ಹಿಂಡಿ ಕದಡುವುದು ಆಡುತ್ತಾ ಕಳೆಯಬೇಕಿದ್ದ ಬದುಕು ಬೀದಿಗಳಲ್ಲಿ ಅರಸಿದೆ ನೆರವು ...
No comments:
Post a Comment