ಮುಂಜಾನೆಯ ಮಂಜಿನಲ್ಲಿ ನಡಿದು ಬರುತಿದ್ದಳು
ಮೆಲ್ಲ ಮೆಲ್ಲನೆ ಹೆಜ್ಜೆಯ ಮೇಲೆ ಹೆಜ್ಜೆಯನಿಡುತ್ತ
ದಿಟ್ಟ ಧ್ಯೇಯದಿ ಆತ್ಮವಿಶ್ವಾಸದಿ ಮುನ್ನುಗ್ಗುತಿದ್ದಳು
ಕಾಲ ಗೆಜ್ಜೆಯದು ಜ್ಹಲ್ ಜ್ಹಲ್ ಎಂದು ಗುಣುಗಿದ್ದವು
ಕಿವಿಯ ಜುಮುಕಿಗಳು ಅಲುಗಾಡಿ ಕುಣಿದಿದ್ದವು
ಬಳೆಗೆ ಬಳೆ ತಗುಲಿ ಗಂಟೆಗಳು ಮೊಳಗಿದಹಾಗೆ
ಅವಳ ಕಂಗಳ ತೇಜಸ್ಸು ಪ್ರಕಾಶ ಚೆಲ್ಲಿದ ಹಾಗೆ
ಅವಳು ನಡೆದು ಬಂದ ಹಾದಿಗೆ ಬೆಳಕು ಚೆಲ್ಲಿದೆ
ಹೀಗೆಂದು ವರ್ಣಿಸಲು ನಾನು ಅವಳಿಗಂದೆ
ನಿಮ್ಮ ಗೆಜ್ಜೆ ಸದ್ದು ನಮ್ಮನ್ನು ಕದಡಿದೆ ಎಂದೇ
ಅದಕ್ಕೆ ಅವಳು ಕಿವಿಗಳನ್ನ ಮುಚ್ಚಿಕೊಳ್ಳಿ ಎಂದಳು....!!!
***************************************
~ ಭಾವಪ್ರಿಯ ~
Subscribe to:
Post Comments (Atom)
ಸಾವಿಗೆ ಕಿವಿ ಕೊಟ್ಟಾಗ..!
ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...
-
ಕನ್ನಡಿಯೇ ಮನುಷ್ಯನ ಆತ್ಮೀಯ ಸ್ನೇಹಿತ! ನಾವು ನಕ್ಕರೆ ಕನ್ನಡಿಯೂ ನಕ್ಕು ನಗೆಯ ಹಂಚುವುದು ... ನಾವು ಅತ್ತರೆ , ಅದು ಕೂಡ ನಮ್ಮ ಜೊತೆಯಲೇ ಅಳುವುದು... ನಿನಂತೆಯೇ ನಾನು .....
-
ಹಸಿರು ಮಾನವನ ಜೀವದ ಉಸಿರು ಹಸಿರು ಇದ್ದಾರೆ ಭಾಗ್ಯ , ಹಸಿರು ತರುವುದು ಸೌಭಾಗ್ಯ ಹಸಿರು ಬೆರೆತಿರಲು ಜೀವನ , ಹಸಿರು ಬದುಕಿನ ಪಯಣ ಕಾಡು ಬೆಳೆದರೆ ನಾಡಿಗೆ ಮಳೆ , ಸೋನೆ ಗರ...
-
ಸಣ್ಣ ಕಂದಮ್ಮಗಳ ಹಸಿವು ಕರುಳ ಹಿಚುಕಿ ಹೊಸೆಯುವುದು ಕಣ್ಣ ಹನಿಗಳ ನೋವು ಮನವ ಹಿಂಡಿ ಕದಡುವುದು ಆಡುತ್ತಾ ಕಳೆಯಬೇಕಿದ್ದ ಬದುಕು ಬೀದಿಗಳಲ್ಲಿ ಅರಸಿದೆ ನೆರವು ...
No comments:
Post a Comment