Monday, March 28, 2011
ಓ ಹೆಣ್ಣೇ ಯಾಕೆ ನಿನಗೀ ಹಣದ ಮೇಲೆ ವ್ಯಾಮೋಹ ?
ಓ ಹೆಣ್ಣೇ ಯಾಕೆ ನಿನಗೀ ಹಣದ ಮೇಲೆ ವ್ಯಾಮೋಹ ?
ಹೊನ್ನು, ಐಶ್ವರ್ಯ, ಕಾಂಚಾಣ ಎಲ್ಲವೂ ಚಂಚಲ.
ಇಂದು ಅವನೊಡನೆ ನಾಳೆ ಮತ್ತೊಬ್ಬರೊಡನೆ !
ಪ್ರೀತಿಯ ಕುರುಡಾಗಿಸುವುದು ಕಾಂಚಾಣ,
ಮನದಲ್ಲಿರುವರನ್ನು ದೂರು ಮಾಡುವುದು ಹಣ.
ದ್ವೇಷ ರೋಷಕ್ಕೆ ಎಡೆ ಮಾಡುವುದು,
ಸಂಬಂಧ ಸೂತ್ರಗಳನ್ನು ಒಡೆಯುವುದು..
ಬೇಡ ಹೆಣ್ಣೇ ಇದರ ಮೇಲೆ ವ್ಯಾಮೋಹ..
ಪ್ರೀತಿ ಒಂದಿದ್ದರೆ ಬಾಳಲ್ಲಿ ,
ನಿ ಜಯಿಸಬಲ್ಲೆ ಇಡೀ ಜಗವನ್ನ !
ನಿನ್ನ ನಡೆ ನುಡಿಗಳೇ ಚಿನ್ನದಂತಿರಲಿ...
ನಿನ್ನ ವಾತ್ಸಲ್ಯವೇ ಈ ಭೂಮಿ ಮೇಲೆ ಶಾಶ್ವತವಾಗಲಿ..
ಕ್ಷಣಿಕ ಸುಖಕ್ಕಾಗಿ ಮಾರುಹೋಗದಿರು...
ನಿನ್ನ ನೆಚ್ಚಿಕೊಂಡವರು ನಿನ್ನ ಎಂದಿಗೂ ನೋಯಿಸಲಾರರು..
ಜೀವನವಿದು ಜೀವಿಸುವುದು ಒಂದೇ ಸಾರಿ ,
ಹೊನ್ನಿನ ಬಣ್ಣಗಳು ತುಂಬಲಿ ಬಾಳಿನ ಹರದಾರಿ ..!
Subscribe to:
Post Comments (Atom)
ಸಾವಿಗೆ ಕಿವಿ ಕೊಟ್ಟಾಗ..!
ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...
-
ಸಣ್ಣ ಕಂದಮ್ಮಗಳ ಹಸಿವು ಕರುಳ ಹಿಚುಕಿ ಹೊಸೆಯುವುದು ಕಣ್ಣ ಹನಿಗಳ ನೋವು ಮನವ ಹಿಂಡಿ ಕದಡುವುದು ಆಡುತ್ತಾ ಕಳೆಯಬೇಕಿದ್ದ ಬದುಕು ಬೀದಿಗಳಲ್ಲಿ ಅರಸಿದೆ ನೆರವು ...
-
ಕನ್ನಡಿಯೇ ಮನುಷ್ಯನ ಆತ್ಮೀಯ ಸ್ನೇಹಿತ! ನಾವು ನಕ್ಕರೆ ಕನ್ನಡಿಯೂ ನಕ್ಕು ನಗೆಯ ಹಂಚುವುದು ... ನಾವು ಅತ್ತರೆ , ಅದು ಕೂಡ ನಮ್ಮ ಜೊತೆಯಲೇ ಅಳುವುದು... ನಿನಂತೆಯೇ ನಾನು .....
-
ನಲ್ಲೆ, ತಂದು ಕೊಡಲೆ ನಿನಗೆ ಆ ಸಾಗರದಾಳದ ಮುತ್ತು .? ಅಂದನವನು.... ನಲ್ಲಾ, ಆ ಮುತ್ತಗಳ ಬೆಲೆ ಎಷ್ಟೇ ಇದ್ದರೂ .., ನೀ ನೀಡುವ ಪ್ರೀತಿಯ ಸಿಹಿ ಮುತ್ತಿಗೆ ಬೆಲೆ ಕಟ್ಟಲ...
No comments:
Post a Comment