
ಮಧುರ, ಅತಿಮಧುರ ಪ್ರತಿ ಕ್ಷಣ
ನಿ ಜೊತೆ ನಡೆದರೆ ದಿನ ದಿನ,
ಬಯಸಿದೆ ಸನಿಹ ನನ್ನ ಮನ !
ನಿನ್ನ ಕೆನ್ನೆಯ ಮೇಲಿನ ಚುಕ್ಕಿ,
ಮಿಂಚಿ ಮಿನುಗುವ ಕಣ್ಣ ಹಕ್ಕಿ !
ಕೆಂಪು ತುಟಿಗಳು ನಕ್ಕರೆ,
ಮುತ್ತು ಪೋಣಿಸಿದ ಸಕ್ಕರೆ !
ನಿನ್ನ ಗಿಣಿಯ ಮೂಗು,
ಸಂಪಿಗೆಯ ಅಂದಕೆ ನಾ ತಲೆ ದೂಗು..
ನಿನ್ನ ಮೊಗವ ಕಂಡು ಹುಟ್ಟಿದೆ ಪ್ರೀತಿಯ ಕೂಗು !
ನನ್ನ ಹೃದಯ ಬಡಿತ ನಿಂತರೆ..
ಕಾರಣ ನೀನೆ ಆಗುವೆ, ನನ್ನ ಅಪ್ಸರೆ..!
No comments:
Post a Comment