Friday, February 04, 2011

ಆರಂಭ ..!


ಹೊಸ ಅನುಭವಕೆ ಇಂದು ಆರಂಭ..
ಆಡಿದ ಮಾತಿಗೆ ಎದಿರು ನೋಡುತ ...
ದಾರಿ ತೋರಿಸಿ ಅಂದಳು ನಸು ನಗುತ್ತ..!
ಬಾ ಎಂದು ಕರೆದುಕೊಂಡು ಹೊರಟೆ ..
ಅವಳ ಮೊಗಕೆ ಆ ನಗುವೇ ಚಂದ 
ಅಧರದ ಧ್ವನಿಗೆ ಮಹದಾನಂದ ...!
ಜೊತೆ ಜೊತೆಯಲಿ ...
ನಡೆದಿರುವ ಆ ಕ್ಷಣದಲಿ  ....
ನವೀನ ಭಾವಗಳ ಹೆಣೆಯುತಿರಲಿ ...!   
ಹೊಸ ಅನುಭವ ಸವೆಯಲು....
ಆ ಸಮಯವೇ ಸಾಲದು ಎಂದೂ..
ಮೂಡಲಿ ಅನುಕ್ಷಣ ಸವಿಯಾದ  ಬಂಧ ...!
ಕನಸಿನ ಮನೆಯ ಕಟ್ಟಲು...
ಪ್ರೀತಿ ಬಾಂಧವ್ಯ ಮುಟ್ಟಲು...
ನನಗೆ ನಿ ಅಣಿಯಾಗು.. ಜೊತೆಗೆ, ಹೆಜ್ಜೆ ಇಡಲು ...!!

No comments:

ಸಾವಿಗೆ ಕಿವಿ ಕೊಟ್ಟಾಗ..!

ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...