ಸೀರೆ ಉಟ್ಟ ನಾರಿ ಈಗ ಸಮಾಜದಿಂದ ಪರಾರಿ
ಕಳೆದುಕೊಂಡರು ಆ ಗೌರವ, ಹೆಣ್ಣಿಗೆ ಇದ್ದ ಸ್ಥಾನ ಮಾನ.!
ಲಂಗ ದಾವಣಿ ಎಲ್ಲಾ ಮಂಗ ಮಾಯ,
ಬಿಗಿಯುವ ಟಿ-ಶರಟುಗಳು ಅಪ್ಪಿಕೊಳ್ಳುವ ಜೀನ್ಸು,
ನಾಚಿಕೆ ಮರ್ಯಾದೆಗಳ ಮೆಟ್ಟಿ ಹೊರಟರೋ !
ಹಣೆಯ ಬೊಟ್ಟು ಮಾಯವಾಯಿತು
ತುಟಿಗೆ ಬಣ್ಣ ಬಂದು ಸೇರಿತು !
ಮೊಗದ ಸೊಗಸ್ಸು ಕಣ್ಣ ಮರೆಯಾಯಿತು
ಕೃತಕ ಸೌದರ್ಯ ರಾರಾಜಿಸಿತು !
ಮುಡಿಯ ಮಲ್ಲಿಗೆ ಕಾಣದಾಯಿತು
ಹೈ ಹೀಲ್ಸ ಮೆಟ್ಟಿ , ಇಟ್ಟ ಹೆಜ್ಜೆಯು ನಡಿಗೆಯಾಯಿತು !
ಹೆಣ್ಣಿನ ಅಂದ ಸಿರೆಯೋಳಗಿದ್ದಾಗ ಇತ್ತು ಚಂದ,
ಇತ್ತು ನಮ್ಮಲ್ಲಿಯೂ ಪೂಜ್ಯ ಭಾವನೆಯ ಬಂದ
ಭಾರತಿಯ ನಾರಿ ಈಗ ವಿದೇಶಿ ಸಂಸ್ಕೃತಿಯ ರೂವಾರಿ..!
Subscribe to:
Post Comments (Atom)
ಸಾವಿಗೆ ಕಿವಿ ಕೊಟ್ಟಾಗ..!
ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...
-
ಸಣ್ಣ ಕಂದಮ್ಮಗಳ ಹಸಿವು ಕರುಳ ಹಿಚುಕಿ ಹೊಸೆಯುವುದು ಕಣ್ಣ ಹನಿಗಳ ನೋವು ಮನವ ಹಿಂಡಿ ಕದಡುವುದು ಆಡುತ್ತಾ ಕಳೆಯಬೇಕಿದ್ದ ಬದುಕು ಬೀದಿಗಳಲ್ಲಿ ಅರಸಿದೆ ನೆರವು ...
-
ಕನ್ನಡಿಯೇ ಮನುಷ್ಯನ ಆತ್ಮೀಯ ಸ್ನೇಹಿತ! ನಾವು ನಕ್ಕರೆ ಕನ್ನಡಿಯೂ ನಕ್ಕು ನಗೆಯ ಹಂಚುವುದು ... ನಾವು ಅತ್ತರೆ , ಅದು ಕೂಡ ನಮ್ಮ ಜೊತೆಯಲೇ ಅಳುವುದು... ನಿನಂತೆಯೇ ನಾನು .....
-
ನಲ್ಲೆ, ತಂದು ಕೊಡಲೆ ನಿನಗೆ ಆ ಸಾಗರದಾಳದ ಮುತ್ತು .? ಅಂದನವನು.... ನಲ್ಲಾ, ಆ ಮುತ್ತಗಳ ಬೆಲೆ ಎಷ್ಟೇ ಇದ್ದರೂ .., ನೀ ನೀಡುವ ಪ್ರೀತಿಯ ಸಿಹಿ ಮುತ್ತಿಗೆ ಬೆಲೆ ಕಟ್ಟಲ...
1 comment:
Suuuperb aagidhe
Post a Comment