ಮತ್ತೆ ಮರಳಿ ಬಾ ನನ್ನ ಬಾಲ್ಯವೆ..
ನಸುಕಿನಲ್ಲಿ ಅಮ್ಮನ ಕೂಗು...
ಸುನಿ... ಎದ್ದು ಮುಖತೊಳೆದು ಬಾರೋ !
ಚಹಾ ಕುಡಿಯುವಂತಿ...! ಹಾಸಿಗೆ ಇಂದ ಮೇಲೆದ್ದು
ಕಣ್ಣು ಉಜ್ಜುತಿದ್ದದ್ದು, ಮೈಯ್ಯ ಮುರಿತಿದ್ದದ್ದು .....
ಮತ್ತೆ ಮರಳಿ ಬರಲಿ ಆ ನನ್ನ ಬಾಲ್ಯ ..!
ಮಲೆನಾಡಿನ ಸುರಿಯೋ ಮಳೆಯಲ್ಲಿ
ರೈನ್ಕೋಟ್ ತೊಟ್ಟು , ಉದ್ದನೆಯ ಬೂಟುಗಳ ಹಾಕಿಕೊಂಡು
ಶಾಲೆಯತ್ತಕಡೆಯ ನಡುಗೆ...
ಹಾದಿಯಲ್ಲಿ ಪುಟಿಯುತಿದ್ದ ಮಳೆ ಹನಿಗಳು ಕರೆಯುವಂತೆ ನನ್ನ
ಮತ್ತೆ ಮರಳಿ ಬರಲಿ ಆ ನನ್ನ ಬಾಲ್ಯ...!
ಶಾಲೆಯ ಹಿಂಬದಿಯ ಕಾಡಿನಲ್ಲಿ..,
ನೆಲ್ಲಿಕಾಯಿಗಾಗಿ ಅಲೆದಾಟ.,
ನೆಲ್ಲಿಯ ಹೆಮ್ಮರವ ಹತ್ತಿದ ಹರ ಸಾಹಸ...
ಪಾಟಿಚೀಲದ ತುಂಬಿ ತಂದ ನೆಲ್ಲಿಕಾಯಿ, ತುಳಿಸಿ ಲಗ್ನವ ಆಚರಿಸಿದ ಸಂಭ್ರಮ ...
ಮತ್ತೆ ಮರಳಿ ಬರಲಿ ಆ ನನ್ನ ಬಾಲ್ಯ...!
ಬೇಸಿಗೆ ರಜೆಯ ಮೆರಗಿನ ಸ್ಪರ್ಶ
ಬಾಲ್ಯದ ಗೆಳತಿಯ ಜೊತೆ ಆಡಿದ ಹರುಷ
ಕೂಡಿ ನಲಿಯುತ ಕಳೆದ ಆ ಕ್ಷಣ..
ಅಲೆ ಅಲೆಯಾಗಿ ಮನಕೆ ಬಡಿಯುತಿದೆ ..,
ಮತ್ತೆ ಮರಳಿ ಬರಲಿ ಆ ನನ್ನ ಬಾಲ್ಯ...!
Subscribe to:
Post Comments (Atom)
ಸಾವಿಗೆ ಕಿವಿ ಕೊಟ್ಟಾಗ..!
ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...
-
ಕನ್ನಡಿಯೇ ಮನುಷ್ಯನ ಆತ್ಮೀಯ ಸ್ನೇಹಿತ! ನಾವು ನಕ್ಕರೆ ಕನ್ನಡಿಯೂ ನಕ್ಕು ನಗೆಯ ಹಂಚುವುದು ... ನಾವು ಅತ್ತರೆ , ಅದು ಕೂಡ ನಮ್ಮ ಜೊತೆಯಲೇ ಅಳುವುದು... ನಿನಂತೆಯೇ ನಾನು .....
-
ಹಸಿರು ಮಾನವನ ಜೀವದ ಉಸಿರು ಹಸಿರು ಇದ್ದಾರೆ ಭಾಗ್ಯ , ಹಸಿರು ತರುವುದು ಸೌಭಾಗ್ಯ ಹಸಿರು ಬೆರೆತಿರಲು ಜೀವನ , ಹಸಿರು ಬದುಕಿನ ಪಯಣ ಕಾಡು ಬೆಳೆದರೆ ನಾಡಿಗೆ ಮಳೆ , ಸೋನೆ ಗರ...
-
ಸಣ್ಣ ಕಂದಮ್ಮಗಳ ಹಸಿವು ಕರುಳ ಹಿಚುಕಿ ಹೊಸೆಯುವುದು ಕಣ್ಣ ಹನಿಗಳ ನೋವು ಮನವ ಹಿಂಡಿ ಕದಡುವುದು ಆಡುತ್ತಾ ಕಳೆಯಬೇಕಿದ್ದ ಬದುಕು ಬೀದಿಗಳಲ್ಲಿ ಅರಸಿದೆ ನೆರವು ...
No comments:
Post a Comment