Wednesday, June 10, 2009

ನಮ್ಮ ಧಾರವಾಡದ ಮಳಿ ....!

ನಮ್ಮ ಧಾರವಾಡದಾಗ ಬಂದ್ರ ಮಳಿ
ಊರ ಓಣಿಗಲೆಲ್ಲ ತುಂಬಿದ ಹೊಳಿ
ಸಂತಿ ಭಟ್ಯಾಗ ರೋಜ್ಜಿನ ತಳಿ
ಮೈಯ್ಯ ನಡಗಿಸುವ ತಂಪು ಚಳಿ
ಬೀಸಿ ಹೊರಟೈತಿ ತಣ್ಣನೆ ಗಾಳಿ
ನಮ್ಮ ಹೆದ್ದಾರಿಯಾಗ ಬಿದ್ದಾವ ಮರ ಚಿಗುರಿ
ಭರ್ ಎಂದು ಹೋದಾಗ ಮೊಟರ್ ಗಾಡಿ
ತೂರಿ ಸಿಡಿದೈತಿ ದೂರ ರಾಡಿ
ಜಿಟಿ ಜಿಟಿ ಮಳ್ಯಾಗ ನೆನಕೊಂಡು ಹೊರಟಾರ
ಬೆನ್ನಮ್ಯಾಗ ಪಾಟಿ ಚೀಲ ಹೊತ್ತ ಸಾಲಿ ಹುಡುಗೂರು
ಧಾರವಾಡ ಸೀಮಿ ರೈತ ,ಕುಣಿ ಕುಣಿದು ಜಿಗ್ದಾನ
ಹೊಲವ ಊಳಿ ಬೀಜ ಬಿತ್ತುವ ,ಕೆಲಸದಾಗ ಮುಳ್ಗ್ಯಾನ ..!
-ಭಾವಪ್ರಿಯ

No comments:

ಸಾವಿಗೆ ಕಿವಿ ಕೊಟ್ಟಾಗ..!

ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...