Friday, February 11, 2011
ಮೊದಲ ನೋಟದ ಪ್ರೀತಿ
ಮೊದಲ ದಿನ ಕಂಡೊಡನೆ ಚಿಗುರಿತು ಪ್ರೀತಿ
ಇವಳಿಗಾಗಿಯೇ ಕಾಯುತ್ತಿದ್ದೆನೋ ಅನ್ನೂ ರೀತಿ !
ಮನ ಮೆಚ್ಚಿತು ಇವಳ ಸೌಮ್ಯತನ,
ಹೃದಯ ಮುಟ್ಟಿತು ಇವಳ ಗುಣ !
ನಾನು ಇಷ್ಟ ಪಡುವುದೇ ಇಕೆಗೂ ಇಷ್ಟ,
ನನಗೆ ಬೇಡವೆಂಬುದು ಆಕೆಗದು ದೂರ !
ಸುಂದರ ಭವಿಷ್ಯ ಕಾಣುತಿಹುದು ಕಣ್ಣ ಮುಂದೆ,
ನನ್ನ ಮನಸ್ಸು ಸುತ್ತುತ್ತಿರುವುದು ಬರಿ ಅವಳ ಹಿಂದೆ !
ನಾಲಿಗೆಗೆ ಅವಳ ಹೆಸರು ಗುಣುಗುವುದೇ ರೋಮಾಂಚನ,
ಕಣ್ಣು ಅವಳ ಮುಖವ ನೆನೆಯಲು ನಡೆಸಿದೆ ನರ್ತನ !
ದಿನೇ ದಿನೇ ಹೆಚ್ಚುತ್ತಿರುವುದು ಬಯಕೆ,
ಇವಳೇ ಆಗಬೇಕು ನನ್ನಾಕೆ..!
Subscribe to:
Post Comments (Atom)
ಸಾವಿಗೆ ಕಿವಿ ಕೊಟ್ಟಾಗ..!
ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...
-
ಸಣ್ಣ ಕಂದಮ್ಮಗಳ ಹಸಿವು ಕರುಳ ಹಿಚುಕಿ ಹೊಸೆಯುವುದು ಕಣ್ಣ ಹನಿಗಳ ನೋವು ಮನವ ಹಿಂಡಿ ಕದಡುವುದು ಆಡುತ್ತಾ ಕಳೆಯಬೇಕಿದ್ದ ಬದುಕು ಬೀದಿಗಳಲ್ಲಿ ಅರಸಿದೆ ನೆರವು ...
-
ಕನ್ನಡಿಯೇ ಮನುಷ್ಯನ ಆತ್ಮೀಯ ಸ್ನೇಹಿತ! ನಾವು ನಕ್ಕರೆ ಕನ್ನಡಿಯೂ ನಕ್ಕು ನಗೆಯ ಹಂಚುವುದು ... ನಾವು ಅತ್ತರೆ , ಅದು ಕೂಡ ನಮ್ಮ ಜೊತೆಯಲೇ ಅಳುವುದು... ನಿನಂತೆಯೇ ನಾನು .....
-
ನಲ್ಲೆ, ತಂದು ಕೊಡಲೆ ನಿನಗೆ ಆ ಸಾಗರದಾಳದ ಮುತ್ತು .? ಅಂದನವನು.... ನಲ್ಲಾ, ಆ ಮುತ್ತಗಳ ಬೆಲೆ ಎಷ್ಟೇ ಇದ್ದರೂ .., ನೀ ನೀಡುವ ಪ್ರೀತಿಯ ಸಿಹಿ ಮುತ್ತಿಗೆ ಬೆಲೆ ಕಟ್ಟಲ...
No comments:
Post a Comment