
ಮುಪ್ಪಿನಲಿ ಮಂಕಾಗಿ
ಮಕ್ಕಳ ಪ್ರಿತಿಗಾಗಿ ಹಂಬಲಿಸಿ
ದೂರದ ಊರಿಗೆ ಹೋದ ಮಕ್ಕಳ ನೆನೆಯುತ
ವಿರಹದೇ ಕಳೆಯುತಿವೆ ಮುಪ್ಪಿನ ದಿನಗಳು ...!
ಹಾರುವದ ಕಲಿತ ಮರಿಹಕ್ಕಿ
ಹೊಸದೊಂದು ಗೂಡ ಕಟ್ಟಿ
ಅದರ ಪೋಷಣೆಯಲಿ
ತವರ ಗೂಡ ಮರೆತಿಹರು...
ತವರೂರ ಗೂಡದು
ಕಣ್ಣು ಮುಚ್ಚದೆ ಕಾದಿಹುದು...
ಮರಳಿ ಬರಲಿ ಮರಿಹಕ್ಕಿಗಳು....ಕಿಚಿ ಪಿಚಿ ಶಬ್ದ ಮಾಡುತ .
ನಿಮ್ಮಯ ದಾರಿಯನ್ನೇ ಇದಿರು ನೋಡುತಿಹುದು...
ಮುಪ್ಪಿನಾವಸ್ಥೆಯಲಿ
ಮೊಮ್ಮಕ್ಕಳ ಜೊತೆ ಆಡುವಂತಾಗಿ
ಮಕ್ಕಳ ನಗುವಲ್ಲೇ ನಲಿವು ಕಾಣಲು
ಹವಣಿಸುತ ಕರೆದಿಹರು .....ಮರಳಿ ಬಾ ಗೂಡಿಗೆ,
ಮರಳಿ ಬಾ...!!!
No comments:
Post a Comment