ಭುವಿಯೇ ನಿನಗೇಕಿ ಕೋಪ...?
ಯಾರ ಮೇಲೆ ಮುನಿಸಿಗೆ ಈ ನಿನ್ನ ಪರಿತಾಪ ...!
ಏಕೆ ತುಂಬಿದೆ ನಿನ್ನ ಘರ್ಭದಲ್ಲಿ ಇಷ್ಟೊಂದು ಜ್ವಾಲೆ ..?
ಯಾರ ನಾಷಕ್ಕಿದು ನಿನ್ನ ಈ ರುದ್ರಾವತಾರ ..
ಸಾಗರದಿಂದೆದ್ದು ನಗರಗಳ ಮುಳಿಗಿಸುವ ಪರಿ...
ಯಾರ ಪಾಪಕ್ಕೆ...ಈ ನಿನ್ನ ಕ್ರೋಧ..?
ನಿಲ್ಲಿಸು ನಿನ್ನ ಆರ್ಭಟ ...
ಜೀವ ಸಂಕುಲವಿದು ನಿನ್ನ ಹಠಕ್ಕೆ ತತ್ತರಿಸಿಹುದು ...
ಅಳಿದು ಉಳಿದವರ ಆಕ್ರಂದನ ಮುಗಿಲು ಮುಟ್ಟಿಹುದು...
ಅಕ್ಕ, ಅಣ್ಣ, ತಮ್ಮ ,ತಂಗಿ, ಅಪ್ಪ, ಅಮ್ಮಂದಿರ ಕಳೆದುಕೊಂಡವರ ಗೋಳು
ಕಂಡು ಕಂಡು ನಿಸ್ಸಹಾಯಕನಾಗಿ ಮೂಕ ಪ್ರೇಕ್ಷಕನಂತೆ
ಕೂತು ಕೂತಲ್ಲೇ ವ್ಯಥೆ ಪಡುವುದ ಬಿಟ್ಟು ಮತ್ತೇನೂ ಮಾಡಲಾಗದೆ..
ನಿನ್ನ ಬೇಡಿಕೊಂಬುವೇನು ....ಸಾಕು ನಿಲ್ಲಿಸು ನಿನ್ನ ವೈಪರಿತ್ಯ ...!
ನಿಲ್ಲಿಸು.. ನಿಲ್ಲಿಸು......ದಯಮಾಡಿ ನಿಲ್ಲಿಸಿ...!
ಶಾಂತ ಚಿತ್ತನಾಗು ಓ ಭುವಿಯೇ....!!!
(ಜಪಾನಿನ ಪ್ರಕೃತಿ ವೈಪರ್ಯಕ್ಕೆ ಜೀವ ತೆತ್ತ ನನ್ನ ಬಂಧು ಬಾಂಧವರಿಗೆ ಭಾವಪೂರ್ಣ ಶ್ರದ್ದಾಂಜಲಿ)
Thursday, March 17, 2011
Subscribe to:
Post Comments (Atom)
ಸಾವಿಗೆ ಕಿವಿ ಕೊಟ್ಟಾಗ..!
ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...
-
ಕನ್ನಡಿಯೇ ಮನುಷ್ಯನ ಆತ್ಮೀಯ ಸ್ನೇಹಿತ! ನಾವು ನಕ್ಕರೆ ಕನ್ನಡಿಯೂ ನಕ್ಕು ನಗೆಯ ಹಂಚುವುದು ... ನಾವು ಅತ್ತರೆ , ಅದು ಕೂಡ ನಮ್ಮ ಜೊತೆಯಲೇ ಅಳುವುದು... ನಿನಂತೆಯೇ ನಾನು .....
-
ಹಸಿರು ಮಾನವನ ಜೀವದ ಉಸಿರು ಹಸಿರು ಇದ್ದಾರೆ ಭಾಗ್ಯ , ಹಸಿರು ತರುವುದು ಸೌಭಾಗ್ಯ ಹಸಿರು ಬೆರೆತಿರಲು ಜೀವನ , ಹಸಿರು ಬದುಕಿನ ಪಯಣ ಕಾಡು ಬೆಳೆದರೆ ನಾಡಿಗೆ ಮಳೆ , ಸೋನೆ ಗರ...
-
ಸಣ್ಣ ಕಂದಮ್ಮಗಳ ಹಸಿವು ಕರುಳ ಹಿಚುಕಿ ಹೊಸೆಯುವುದು ಕಣ್ಣ ಹನಿಗಳ ನೋವು ಮನವ ಹಿಂಡಿ ಕದಡುವುದು ಆಡುತ್ತಾ ಕಳೆಯಬೇಕಿದ್ದ ಬದುಕು ಬೀದಿಗಳಲ್ಲಿ ಅರಸಿದೆ ನೆರವು ...
No comments:
Post a Comment