Thursday, September 29, 2011

ಒಂದು ಸಲಾ ಕಾಣಿಸು ಬಾರೆ




ಮುಂಜಾವಲ್ಲಿ ಎದ್ದು ಮುಖ ತೊಳೆಯುತ್ತ
ಕನ್ನಡಿಯನ್ನು ನೋಡುತ್ತಾ ನಿಂತಿತು ನನ್ನ ಚಿತ್ತ
ಎಲ್ಲೋ ಇರಬಹುದು ಅವಳು ...
ನನ್ನ ಹಾಗೆ ಕನ್ನಡಿಯ ಮುಂದೆ ನಿಂತು ಕಣ್ಣುಗಳ ಉಜ್ಜುತ್ತಾ...
ಮನದಲ್ಲಿ ಮೂಡಿದ ಮಂದಹಾಸ ಕರೆಯುತ್ತಿದೆ, ಒಂದು ಸಲಾ ಕಾಣಿಸು ಬಾರೆ ...!

ಸದ್ದು ಮಾಡದೆ ಬಂದೆ ನಿ..
ಗುದ್ದಿ ಗುದ್ದಿ ಎದೆಯೊಳಗೆ ಒಲುಮೆಯ ಹರಿಸುತ್ತಿರುವೆ
ಕಣ ಕಣ ಅಂಕಣಗಳಲ್ಲಿ ಚಲಿಸಿ
ಮಂಕು ಮಾಡಿ ನನ್ನ ಹೃದಯ
ಕ್ಷಣದಲ್ಲಿ ಮಾಯವಾಗಬೇಡ , ಒಂದು ಸಲಾ ಕಾಣಿಸು ಬಾರೆ...!

ದಣಿದೆನೆಂದು ಕಣ್ಣು ಮುಚ್ಚಿ ನಿದ್ರಿಸಿದೆನು
ಸ್ವಪ್ನದಲ್ಲಿ ಬಂದು ನಿದ್ದೆ ನಿ ಕೆಡಸುವೆಯೇನು ?
ಓಡಬೇಡ ನಿಲ್ಲು ಅಲ್ಲೇ... ಓ ನಲ್ಲೆ
ನಿನ್ನ ತುಂಟತನವ ಸಹಿಸಲು ನಾ ಒಲ್ಲೆ...
ಬಿಗಿದಪ್ಪುವೆ ಬಾರೆ ನಿನ್ನ , ಒಂದೇ ಒಂದು ಸಲಾ ಕಾಣಿಸು ಬಾರೆ..!

No comments:

ಸಾವಿಗೆ ಕಿವಿ ಕೊಟ್ಟಾಗ..!

ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...