
ಹಸಿರ ಮಲ್ಲಿಗೆಗೆ ತುಂಟ ಹೂ ನಗೆ ,
ಚೆಲುವಿನ ಅಂದಕೆ ಘಮ ಘಮ ಸಂಪಿಗೆ !
ಕಣ್ಣ ಅಂಚಿಗೆ ಕಾಡಿಗೆ ..
ತುಟಿಯ ಮೇಲೆ ಮಾತಿನ ಮಳಿಗೆ ..!
ಕಿವಿಯ ಅಂಚಿಗೆ ತೂಗುವ ತುಗೋಲೆ ...
ಕಂಡ ಮನವು ತೂಗಿದೆ ಉಯ್ಯಾಲೆ ...!
ಶಶಿಯ ವರ್ಣ ಕದ್ದ ಚೆಲುವೆ ...
ದೃಷ್ಟಿಯ ಬೊಟ್ಟು ಹಚ್ಚೆ.. ಕೆನ್ನೆಯ ತುದಿಗೆ ..!
ತಳಕುವ ಹಾದಿಯಲಿ ನಿನ್ನಯ ಓಟ
ಹುಡ್ಗರ ಕಂಗಳಿಗೆ ಹಬ್ಬದ ಊಟ
ಮುಂಜಾವಿನ ಬಾಗಿಲಿಗೆ ಪುಷ್ಪಗಳ ತೋರಣ
ದಕ್ಷಿಣ ಒಬ್ಬಟ್ಟಿಗೆ.. ಉತ್ತರದ ಹೂರಣ ..!
No comments:
Post a Comment