Monday, March 14, 2011
ಬಿರುಗಾಳಿ...!!
ಮುಖ ಮನಸ್ಸಿನ ಕನ್ನಡಿ ಅಲ್ಲ,
ಕಣ್ಣು ಭಾವನೆಗಳ ಎಂದಿಗೂ ಹೇಳುವುದಿಲ್ಲ..!
ನಗೆಯ ಅಂಚು ಸಹಿ ಎಂಬ ಒಪ್ಪಿಗೆಯಲ್ಲ,
ನಿನ್ನ ಮೌನವ ಅರಿಯುವ ಚಾತುರ್ಯ ನನ್ನದಲ್ಲ ..!
ನಯನಗಳು ಕಲಿತರೆ ಮೂಡಿತು ಅಲ್ಲಿ ಆಕರ್ಷಣೆ,
ಮಾತು ಮೌನ ಬೆರೆತರೆ.., ಅಲ್ಲೇ ಪ್ರೇಮದ ಅರ್ಚನೆ ..!
ಕದ್ದು ಕದ್ದು ಎದ್ದು ಬಿದ್ದು ನೀ ನನ್ನ ಕಾಣೆ,
ನಿನ್ನ ಮುದ್ದು ಮೊಗವ ಕಾಣಲು ನಾ ಗೆದ್ದು ಬರುವೆ ನಿನ್ನಾಣೆ..!
ನಿನ್ನ ಮನದ ದುಗುಡವ ನಾ ಅರಿಯೆ ,
ಅಪರಿಚಿತನ ನಂಬುವುದು ಹೇಗೆ ಎಂಬುದು ನಿನ್ನಯ ಚಿಂತೆಯೇ ?
ಜೀವನದ ಕಹಿ ಉಂಡು, ನೊಂದು ಬೆಂದು ನಾ ಬಂದೆನೆ,
ನಿನ್ನ ಮನವ ಕಲುಕಿ ನಾ ಎಂದೂ ಮೋಸ ಮಾಡಲಾರೆನೆ..!
ವೇಳೆ ಎಂಬ ಚಕ್ರವ್ಯೂಹ ಎಳೆದು ನನ್ನ ಕದಡಿದೆ..
ಸುನಾಮಿ ಚಂಡಮಾರುತಕ್ಕೆ ತತ್ತರಿಸಿ ಜೀವ ಸಿಲುಕಿದೆ,
ಈಜಿ ಈಜಿ ಕಷ್ಠದಡವಿ ದಾಟಿ ನಾನು ಬರುತಿರುವೆ..
ದಡದಲ್ಲಿ ನಿನ್ನ ಕಂಡು ಮನವು ತೃಪ್ತಿಗೊಂಡಿದೆ..!
ಮುಂದಿನ ಹಾದಿ ಸುಗಮವಾಗಲಿ ಎಂದು ದೇವರ ಬೇಡಿದೆ
ಅದಕೆ ತಾನೇ ದಾರಿ ತೋರಲು ಇವಳನ್ನ, ನಿನಗೆ ಕಳಿಸಿದೆ
ಕಾಲವೇ ನಿನಗೆ ತಿಳಿಸಲಿ, ನಿನ್ನ ಮನವ ಒಲಿಸಲಿ
ನನ್ನ ಗುರಿಯು, ನಿನ್ನ ಗರಿಯೂ ಮೀಟಿ ಬಾಳು ಹಸನು ಆಗಲಿ ..!
Subscribe to:
Post Comments (Atom)
ಸಾವಿಗೆ ಕಿವಿ ಕೊಟ್ಟಾಗ..!
ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...
-
ಸಣ್ಣ ಕಂದಮ್ಮಗಳ ಹಸಿವು ಕರುಳ ಹಿಚುಕಿ ಹೊಸೆಯುವುದು ಕಣ್ಣ ಹನಿಗಳ ನೋವು ಮನವ ಹಿಂಡಿ ಕದಡುವುದು ಆಡುತ್ತಾ ಕಳೆಯಬೇಕಿದ್ದ ಬದುಕು ಬೀದಿಗಳಲ್ಲಿ ಅರಸಿದೆ ನೆರವು ...
-
ಕನ್ನಡಿಯೇ ಮನುಷ್ಯನ ಆತ್ಮೀಯ ಸ್ನೇಹಿತ! ನಾವು ನಕ್ಕರೆ ಕನ್ನಡಿಯೂ ನಕ್ಕು ನಗೆಯ ಹಂಚುವುದು ... ನಾವು ಅತ್ತರೆ , ಅದು ಕೂಡ ನಮ್ಮ ಜೊತೆಯಲೇ ಅಳುವುದು... ನಿನಂತೆಯೇ ನಾನು .....
-
ನಲ್ಲೆ, ತಂದು ಕೊಡಲೆ ನಿನಗೆ ಆ ಸಾಗರದಾಳದ ಮುತ್ತು .? ಅಂದನವನು.... ನಲ್ಲಾ, ಆ ಮುತ್ತಗಳ ಬೆಲೆ ಎಷ್ಟೇ ಇದ್ದರೂ .., ನೀ ನೀಡುವ ಪ್ರೀತಿಯ ಸಿಹಿ ಮುತ್ತಿಗೆ ಬೆಲೆ ಕಟ್ಟಲ...
No comments:
Post a Comment