
ಮೌನ ಗೌರಿ ನಮ್ಮಾಕಿ
ಸೌಮ್ಯ ಗುಣ ಉಳ್ಳಕಿ
ನೆಲ ನೋಡ್ಕೋತ ಹೊಗೊಕಿ
ನೆಲ ನೋಡ್ಕೋತ ಬರಾಕಿ
ಸವಿನುಡಿಯ ಮುತ್ತ ಉದ್ರಿಸಾಕಿ
ಗಲ್ಲದ ಮ್ಯಾಗ ಒಂದು ಚಿಕ್ಕಿ
ಮ್ಯಾಲ ಗೂಡಾಗ ಬೆಳ್ಳಕ್ಕಿ
ಹುಬ್ಬು ಹರಿದಾವ ಕಣ್ಣ ಸವರಿ
ಮುಂಗುರುಳು ನಕ್ಕಾವ ಹಣಿ ಏರಿ
ಯಾವ ತಾರಿಗೂ ಜಗ್ಗದಾಕಿ
ಈಕಿ ಹಿಂಗಂತ ನಾ ಮೆಚ್ಚಿ
ಮನಸಾಗ ಹಾಡೈತಿ ಮೂಕ ಹಕ್ಕಿ.
No comments:
Post a Comment