ಒಲವಿನ ಕಾದಂಬರಿ - ಸಂಚಿಕೆ ೩

(ಬಹುದಿನಗಳಿಂದ ಬರಿಯಲು ಸಾಧ್ಯವಾಗಲಿಲ್ಲ ಕ್ಷಮೆ ಇರಲಿ ) ಮುಂದೆ ಓದಿ

ಮರುದಿನ ಕಾಲೇಜಿಗೆ ಬಂದ ರಾಜ್ ಗೆಳೆಯರ ಜೊತೆಯಲಿ ಚಹಾ ಕುಡಿಯಲಿಕ್ಕೆ ಎಂದು ಕ್ಯಾಂಟಿನಿಗೆ ಹೋಗಿರುತ್ತಾನೆ, ಈ ಕಡೆ ಗೀತಾ ಬಸ್ಸನ್ನು ಇಳಿಯುತ್ತಲೆ ರಾಜ್ ನನ್ನು ಹುಡುಕುತ್ತಾ ಹೊರಡುತ್ತಾಳೆ, ರಾಜ್ ಕ್ಲಾಸಿನಲ್ಲಿ ಇಲ್ಲಾ, ಬಹುಶಃ ಲೈಬ್ರರಿಯಲ್ಲಿ ಇರಬಹುದೇ..? ಬೇಗನೆ ಅಲ್ಲಿಗೆ ದೌಡಾಯಿಸುತ್ತಾಳೆ…ರಾಜ್ ಅಲ್ಲಿಯೂ ಇಲ್ಲಾ…ಎಲ್ಲಿ ಹೋದ ಇವ..? ಗೀತಾಳ ಮನದಲ್ಲಿ ಸ್ವಲ್ಪ ಕೋಪ ಬರುತ್ತೆ, ದಿನಾಲು ಕಾಲೇಜಿಗೆ ಕಾಲಿಟ್ಟ ಕೂಡಲೆ ಕಾಣುತ್ತಿದ್ದ ಇವನು., ಇಂದು ಕಾಲೇಜಿಗೆ ಬರಲೇ ಇಲ್ಲವೆ ಅಥವಾ ಇಲ್ಲಾ ಬೆರೆ ಯಾರದರೊಡನೆ ಎಲ್ಲಿಗಾದರೂ ಹೋದನೆ ಎಂಬ ಚಿಂತೆ ಕಾಡುವಷ್ಟರಲ್ಲಿ ರಾಜ್ ಗೆಳೆಯರೊಡನೆ ಕ್ಲಾಸಿನ ಹತ್ತಿರ ಬರುತ್ತಾನೆ, ಅವನನ್ನು ಕಂಡು ಗೀತಾಳಿಗೆ ಸ್ವಲ್ಪ ನಿರಾಳ ಉಂಟಾಗುತ್ತದೆ., ಆದರೂ ಅವಳ ಮೊಗದಲ್ಲಿ ಏನೋ ಕೋಪ ಅವನ ಮೇಲೆ, ಇದನ್ನು ಗಮನಿಸಿದ ರಾಜ್ ಗೆಳೆಯರೆಲ್ಲರಿಗೂ ಹೇಳಿ ಇವಳತ್ತ ಧಾವಿಸುತ್ತಾನೆ. ಏನಮ್ಮಾ ಇವತ್ತು ಏಕೋ ಕೋಪ ಬಂದ ಹಾಗಿದೆ ನಿನಗೆ ಏನ್ ಸಮಾಚಾರ..ಅದಕ್ಕೆ ಅವಳು ಮುನಿಸಿಕೊಂಡು, ಲೋ ಏನೂ ಇಲ್ಲಾ ಹೋಗೊ, ನಿನಗೇಕೆ ಹಾಗೆ ಅನಿಸಿತು ಎಂದು ಪ್ರತಿಯಾಗಿ ಪ್ರಶ್ನಿಸಿದಳು. ಏನೂ ಇಲ್ಲಾ ನಿನ್ನ ಮುಖದ ಭಾವನೆಗಳು ನನಗೆ ಪ್ರಶ್ನಿಸುವಂತೆ ಮಾಡಿತು..ಸರಿ ಸರಿ ಬೆಳ್ಬೆಳಿಗ್ಗೆ ಎಲ್ಲಿಗೆ ಹೋಗಿದ್ದೆ..?ಅಂದಳು…ಓಹೋ ಇದಕ್ಕೆ ಮೇಡಂ ಗರಂ ಆಗಿರೋದು, ಏನೂ ಇಲ್ಲಾ ಕಣೆ ಮನೆಯಲ್ಲಿ ತಡವಾಯ್ತು ಅಂತಾ ಚಹಾ ಕುಡಯದೇ ಬಂದೆ ಅದಕ್ಕೆ ಇಲ್ಲಿ ಗೆಳೆಯರ ಜೊತೆ ಹೋಗಿದ್ದೆ. ಅದೆಲ್ಲಾ ಸರಿ , ನೀನೇಕೆ ನನ್ನನ್ನು ಹುಡುಕುತ್ತಿದ್ದೆ ? ಏನೂ ಇಲ್ಲಾ ಕಣೋ ನನ್ನ ಗೆಳತಿಯೊಬ್ಬಳು ಬೈಕ್ ತನ್ನ ಗೆಳೆಯನೊಡನೆ ಸವಾರಿ ಮಾಡಿ ಬಂದಳು ಅವಳು ಎಷ್ಟು ಖುಶಿಯಾಗಿದ್ದಳು ಅಂದರೆ ಅದು ಹೇಳಲಿಕ್ಕೆ ಆಗುವುದಿಲ್ಲಾ. ಸರಿ ಅದಕ್ಕೆ ಈಗೇನು..? ಮತ್ತೆ ನನಗೂ ಕೂಡಾ ಬೈಕ್ ಅಂದ್ರೆ ತುಂಬಾ ಇಷ್ಟಾ , ನಾನು ಒಂದು ಸಾರಿನೂ ಬೈಕ್ ಹತ್ತಿಲ್ಲಾ ಕಣೋ….ಅಂದಳು. ಅದರ ಸವಾರಿ ಮಾಡಬೇಕು ಎನ್ನುವುದು ನನ್ನ ಬಹುದಿನದ ಆಸೆ, ಆದರೆ ಏನ್ ಮಾಡೋದು ನನ್ನ ಅಪ್ಪನ ಹತ್ತಿರ ಬೈಕ್ ಇಲ್ಲಾ. ಸರಿ ಸರಿ ಓದು ಮುಗಿಸಿ ಒಳ್ಳೆ ಕೆಲಸ ಸೇರಿಕೊಂಡು ಒಂದು ಹೊಸ ಬೈಕ್ ತೊಗೊ ಆಮೇಲೆ ಎಷ್ಟು ಬೇಕಾದರೂ ಹತ್ತಿಕೊಂಡು ಅಡ್ಡಾಡಬಹುದು ಎಂದ ರಾಜ್..ಗೀತಾ ಅಯ್ಯೋ ಇನ್ನೂ ಅಷ್ಟು ವರ್ಷ ಕಾಯಬೇಕಲ್ಲಾ ಅಂದಳು. ಕನಸ್ಸು ಕಂಡಿದ್ದು ಸಾಕು ನಡಿ ಕ್ಲಾಸಿಗೆ ಹೋಗೋಣ ಎಂದ. ಕ್ಲಾಸಿನಲ್ಲಿ ಇದ್ದದ್ದು ಇವಳೊಬ್ಬಳೆ ಹುಡುಗಿ, ಯಾವಾಗಲೂ ಒಬ್ಬಳೆ ಕೂಡುತ್ತಿದ್ದ ಗೀತಾಗೆ ಅವತ್ತು ಏನ್ ಅನಿಸಿತೋ ಗೊತ್ತಿಲ್ಲಾ.., ಪ್ರೋಫೆಸರ್ ಕ್ಲಾಸಿಗೆ ಕಾಲು ಇಡುತ್ತಿದ್ದ ಹಾಗೆ ಮೊದಲನೆ ಬೆಂಚು ಬಿಟ್ಟು ಬಂದು ರಾಜ್ ನ ಪಕ್ಕದಲ್ಲಿ ಕುಳಿತು ಬಿಡುತ್ತಾಳೆ. ಎಲ್ಲರಿಗೂ ಆಶ್ಚರ್ಯ…, ಪ್ರೋಫೆಸರ್ ಕೂಡಾ ಕ್ಲಾಸ್ ಮಾಡುವಾಗ ಇವರತ್ತ ನೋಡುತ್ತಿರುತ್ತಾರೆ, ರಾಜ್ ಕೇಳಿದ ಪ್ರಶ್ನೆಗೆ ಆಸಕ್ತಿಯಿಂದ ಉತ್ತರ ನೀಡುತ್ತಾರೆ. ಅಂದಿನಿಂದ ಅವಳ ಜಾಗ ರಾಜ್ ನ ಪಕ್ಕದಲ್ಲೇ ಫಿಕ್ಸ್ ಆಗುತ್ತದೆ. ಗೆಳೆಯರೆಲ್ಲರೂ ಆಡಿಕೊಳ್ಳಲು ಶುರು ಮಾಡುತ್ತಾರೆ, ಅದಕ್ಕೆ ರಾಜ್ ಅವಳ ನನ್ನ ಒಳ್ಳೆ ಸ್ನೇಹಿತೆ ಅಷ್ಟೇ, ಮಕ್ಕಳಾ ಬೇರೆನೂ ಇಲ್ಲಾ ಅಂತಾನೆ. ಅವಳ ಮೇಲೆ ಎಷ್ಟೋ ಅಭಿಮಾನ ಇಟ್ಟುಕೊಂಡವರಿಗೆ ದುಃಖವಾಗುತ್ತದೆ. ಅದರಲ್ಲೆ ಒಬ್ಬ ಹುಡುಗ ಇವಳಲ್ಲಿ ಬಹಳ ಆಸಕ್ತಿ ತೋರಿಸುತ್ತಿರುತ್ತಾನೆ, ಆದರೆ ಆ ವಿಷಯ ರಾಜ್ ಗೆ ತಿಳಿದಿರುವುದಿಲ್ಲಾ.
ಒಂದು ದಿನ ಪ್ರ್ಯಾಕ್ಟಿಕಲ್ ಕ್ಲಾಸ್ ನಡೆದಿರುತ್ತದೆ ಅದರಲ್ಲಿ ಕಬ್ಬಿಣ ಬಗ್ಗಿಸುವ ಕೆಲಸ. ಎಲ್ಲ ಹುಡುಗರು ತಮ್ಮ ತಮ್ಮ ಕೆಲಸ ಮುಗಿಸುವದರಲ್ಲಿ ತಲ್ಲೀನರಾಗಿರುತ್ತಾರೆ, ಆದರೆ ಗೀತಾ ಒಬ್ಬಳೇ ಹೇಗೆ ಮಾಡುವುದು ಅನ್ನುತ್ತಾ ಕುಳಿತಿರುತ್ತಾಳೆ. ಇನಸ್ಟ್ರಕಟರ್ ಬಂದು ಹಾ ಬೇಗ ಬೇಗ ಮಾಡಮ್ಮ ಅನ್ನುತ್ತಾರೆ…ಸಾರ್ ಒಬ್ಬಳೆ…ಹಾ ಹೌದು ನೀನೇ ಮಾಡಬೇಕು ಅಂದು ಚಹಾ ಕುಡಿಯಲು ಹೋಗುತ್ತಾರೆ. ಅಷ್ಟರಲ್ಲಿ ಇವೆಲ್ಲವನ್ನು ಗಮನಿಸುತ್ತಿದ್ದ ಆ ಹುಡುಗ ಇವಳ ಹತ್ತಿರ ಬಂದು , ನಾನು ನಿನಗೆ ಸಹಾಯ ಮಾಡುತ್ತೇನೆ ಎಂದ. ಗೀತಾಳಿಗೂ ಏನೋ ಸಂತೋಷವಾಯಿತು. ಸರಿ ಅಲ್ಲಿಗೆ ಅವಳಿಗೆ ಮತ್ತೊಬ್ಬ ಗೆಳೆಯನ ಪರಿಚಯ. ಅವನು ಇವಳ ಹತ್ತಿರ ಮಾತನಾಡುತ್ತ ಇವಳ ಮನೆಯ ಬಗ್ಗೆ ಅಣ್ಣ ತಮ್ಮಂದಿರ ಬಗ್ಗೆ ಕೇಳಿ ತಿಳಿದುಕೊಳ್ಳುತ್ತಾನೆ. ಮಾತು ಮಾತಿನಲ್ಲಿ ಅವಳ ಕೆಲಸ ಕೂಡಾ ಮಾಡಿಮುಗಿಸುತ್ತಾನೆ. ಮರುದಿನ ರಾಜ್ ನನ್ನು ಭೇಟಿ ಮಾಡಿ ಅವಳು ನಡೆದ ವಿಷಯವನ್ನು ಹೇಳುತ್ತಾಳೆ. ಓಹೋ ಪರ್ವಾಗಿಲ್ಲವೇ ನಿನಗೂ ಫ಼ಯ್ಯಾನು ಇದ್ದಾರೆ ಅಂತ ಗೊತ್ತಿರಲಿಲ್ಲ ಅಂತ ಜೋಕ್ ಮಾಡುತ್ತಾನೆ. ಇನ್ನು ರಾಜ್ ನ ವಿಚಾರ, ರಾಜ್ ಗೆ ಸಹಾಯ ಮಾಡಿದ ಗೆಳತಿ ಸುಮನಾ ಬಹಳ ದಿನಗಳಾದ ಮೇಲೆ ಭೇಟಿಯಾಗುತ್ತಾಳೆ. ಇವರುಗಳು ಬರೀ ಓದಿನ ಬಗ್ಗೆ ಅಷ್ಟೇ ಮಾತಾಡುತ್ತಿದ್ದರು. ಯಾವ ವಿಷಯಕ್ಕೆ ಯಾವ ಪುಸ್ತಕ ರೆಫರ್ ಮಾಡಬೇಕು, ಯಾವ ಪುಸ್ತಕದಲ್ಲಿ ಅರ್ಥ ಚೆನ್ನಾಗಿ ಕೊಟ್ಟಿದ್ದಾರೆ. ಆಗಾಗ ಗೀತಾ ರಾಜ್ ಗೆ ಸುಮನಾಳ ಹೆಸರು ಹಿಡಿದು ಕಾಡಿಸುವುದು. ಈ ಎಲ್ಲಾ ಸಂಗತಿಗಳು ನಡೆಯುತ್ತಿದ್ದಂತೆಯೇ ಮತ್ತೆ ಪರೀಕ್ಷೆಗಳು ಸಮೀಪಿಸುತ್ತವೆ. ಎಲ್ಲರೂ ತಯ್ಯಾರಿಯಲ್ಲಿ ತೊಡಗುತ್ತಾರೆ. ರಣರಣ ಬಿಸಿಲಲ್ಲಿ ಪರೀಕ್ಷೆ ಬರೆಯುವ ಕಸರತ್ತು ಯಾರಿಗೂ ಬೇಡಪ್ಪಾ ಅನಿಸುತ್ತಿತ್ತು ಆದರೆ ಏನು ಮಾಡುವುದು ಬರಿಯಲೇ ಬೇಕಲ್ಲವೆ.. ಒಂದು ತಿಂಗಳ ಕಾಲ ನಡೆದ ಪರೀಕ್ಷೆ ಅಂತ್ರು ಮುಗಿಯುತ್ತದೆ. ರಜಾ ದಿನಗಳು ಗೆಳೆಯರಲ್ಲಿ ಯಾರಿಗೂ ಭೇಟಿಯೇ ಇಲ್ಲಾ…ತಿಂಗಳ ಬಳಿಕ ಮತ್ತೆ ಕಾಲೇಜು ಶುರು.. ಹೊಸ ಸಿಲೆಬಸ್ಸು ಹೊಸ ಪುಸ್ತಕಗಳು ಹೊಸ ಉಪಕರ್ಣಗಳ ಹೊಂದಿಸಿಕೊಳ್ಳುವುದರಲ್ಲಿ ಮೊತ್ತೊಂದು ತಿಂಗಳು ಕಳೆದೇ ಹೋಯ್ತು. ರಿಜಲ್ಟ ಸಮಯ, ಈ ಸಾರಿ ರಾಜ್ ನ ಗೆಳತಿ ಸುಮನಾ ಡಿಸ್ಟಿಂಗಷನ್ ನಲ್ಲಿ ಪಾಸಾಗಿರುತ್ತಾಳೆ, ಅವಳ ಮಾರ್ಗ ದರ್ಶನ ಪಡೆದು ಅವನು ಕೂಡಾ ಒಳ್ಳೆಯ ಅಂಕ ಪಡೆದಿರುತ್ತಾನೆ. ಎಲ್ಲಾ ಗೆಳೆಯರು ಉತ್ತೀರ್ಣರಾಗಿ ಸಂಭ್ರಮಿಸುತ್ತಿರುತ್ತಾರೆ.., ಅಷ್ಟರಲ್ಲಿ ರಾಜ್ ಗೆ ಗೀತಾಳ ಬಗ್ಗೆ ತಲೆಗೆ ಬರುತ್ತದೆ, ಅಯ್ಯೊ ಅವಳಿಗೆ ನಾನು ಮಾತನಾಡಿಸಿಯೇ ಇಲ್ಲಾ ಅವಳು ಕೋಪಿಸಿಕೊಳ್ಳುತ್ತಾಳೆ ಅಂತಾ ಹುಡುಕಲಾರಂಭಿಸುತ್ತಾನೆ, ಎಲ್ಲಿ ನೋಡಿದರೂ ಅವಳು ಸಿಗುವುದಿಲ್ಲ…ಬೆಳಿಗ್ಗೆ ತಾನೆ ಅವಳನ್ನ ನೋಡಿದ್ದೆ ಆದರೆ ಈಗ ಎಲ್ಲಿಗೆ ಹೋದಳು..?? ಕಾಲೇಜೆಲ್ಲಾ ಹುಡುಕಾಡಿದರೂ ಅವಳ ಸುಳಿವಿಲ್ಲ. ಅವಳ ಗೆಳತಿಯೊಬ್ಬಳಿಗೆ ವಿಚಾರಿಸಲು…, ಇಲ್ಲಾ ರಾಜ್ ಅವಳು ಒoದು ವಿಷಯದಲ್ಲಿ ನಪಾಸಾಗಿದ್ದಾಳೆ ಆ ದುಃಖ ತಾಳಲಾರದೇ ಅವಳು ಮನೆಗೆ ಹೊರಟು ಹೋದಳು ಎಂದಳು. ಗೆಳತಿಯ ಬಗ್ಗೆ ಅರಿತು ಅವನಿಗೂ ಕೂಡಾ ದುಃಖವಾಗುತ್ತದೆ. ಅವಳಿಗೆ ಹೇಗೆ ಮಾತನಾಡಿಸುವುದು ಅಂತಾ ತಿಳಿಯದೇ ರಾಜ್ ಸುಮ್ಮನಾಗಿಬಿಡುತ್ತಾನೆ. ಅವಳು ಕಾಲೇಜಿಗೆ ಬಂದಾಗ ಮಾತನಾಡಿದರಾಯ್ತು ಅನ್ನುತ್ತಾ. ಆದರೆ ಅವಳು ವಾರದ ಮೇಲಾದರೂ ಕಾಲೇಜಿಗೆ ಬರುವುದಿಲ್ಲ. ಬೇಸರಗೊಂಡು ರಾಜ್ ಅವಳ ಮನೆಗೆ ಪೋನು ಮಾಡುತ್ತಾನೆ ಯಾರೂ ತೆಗೆಯುವುದಿಲ್ಲ. ಅರ್ಧ ಘಂಟೆ ಕಳೆದ ನಂತರ ಗೀತಾನೇ ಪೋನು ಮಾಡುತ್ತಾಳೆ. ಸಾರಿ ಕಣೋ ಇಷ್ಟೊಂದು ದಿನ ನಿನ್ನ ಹತ್ತಿರ ಮಾತನಾಡಲಿಲ್ಲ ಅಂದಳು, ಅದು ಇರ್ಲಿ ಬಿಡು ಏಕೆ ಹೀಗಾಯ್ತು ? ಎನೋ ಕಣೋ ನನ್ನ ತಲೆಗೆ ಕೆಲವೊಂದು ಸಾರಿ ಓದಿದ್ದು ಸೇರುವುದೇ ಇಲ್ಲಾ ಅನಿಸುತ್ತೆ. ಹೋಗ್ಲಿ ಬಿಡು ಮುಂದಿನ ಸಾರಿ ಕಟ್ಟಿ ಪಾಸು ಮಾಡಿಕೊಳ್ಳುತ್ತೇನೆ. ನಾಳಿನಿಂದ ಕಾಲೇಜಿಗೆ  ಬರುತ್ತೇನೆ ಅಲ್ಲೆ ಸಿಗುತ್ತೇನೆ, ಎಂದು ಕಾಲ್ ಕಟ್ಟ ಮಾಡುತ್ತಾಳೆ. (ಮುಂದುವರೆವುದು..)

No comments:

ವರ್ಷಧಾರೆ

ಸರ-ಸರನೆ ಹರಿದು ಬರುತ್ತಿರುವ ವರ್ಷಧಾರೆಗೆ ಬೇಲಿಯ ಕಟ್ಟಲಾದೀತೆ....? ನೀರು ತುಂಬಿ ಹರಿಯುವ ನದಿಯನು ಹರಿಯುವುದನ್ನು ನಿಲ್ಲಿಸಲಾದೀತೆ....? ಒಲಿದು ಬಂದ...