ಒಂದು ಜೋಡಿ ಪಾರಿವಾಳು ನಮ್ಮ ಮನೆಯ ಛಾವಣಿ ಮೇಲೆ ತಮ್ಮ ಸಂಸಾರ ನಡೆಸುತ್ತಿದ್ದವು. ಸಾಧಾರಣವಾಗಿ ಅವು ಪೈಪು ಅಥವಾ ಗಿಡ ಮರಗಳ ಪೊಟ್ರೇಗಳಲ್ಲಿ ವಾಸಿಸುತ್ತವೆ. ಅವುಗಳನ್ನು ಕಂಡು ಅಚ್ಚರಿಯು ಹಾಗು ಸಂತೋಷವೂ ಆಯಿತು. ಅವುಗಳ ಹತ್ತಿರ ಸುಳಿದಾಡಲು ಹೋದಾಗ ಒಂದು ಮಾತ್ರ ಹಾರಿ ಹೋಗುತ್ತಿತ್ತು, ಮತ್ತೊಂದು ಕುಂಟುತ್ತಾ ಸಾಗುತ್ತಿತ್ತು ಆದರೆ ಹಾರುತ್ತಿರಲಿಲ್ಲಾ. ಆಮೇಲೆ ನನಗೆ ತಿಳಿದ ವಿಷಯ, ಹೆಣ್ಣು ಪಾರಿವಾಳದ ರೆಕ್ಕೆಗೆ ಗಾಯವಾಗಿದ್ದರಿಂದ ಅದಕ್ಕೆ ಹಾರಲು ಸಾಧ್ಯವಾಗುತ್ತಿರಲಿಲ್ಲ. ಗಂಡು ಪಾರಿವಾಳ ಬೆಳಿಗ್ಗೆನೆ ಹೋಗಿ ಕಾಳು ಕಡಿಗಳನ್ನು ಹೆಕ್ಕಿ ತರುತ್ತಿತ್ತು. ನಾನು ಶಾಲೆಗೆ ಹೋಗುತ್ತಿದ್ದರಿಂದ ದಿನಾಲು ಇವಗಳನ್ನು ಕಾಣಲು ಆಗುತ್ತಿರಲಿಲ್ಲ. ರಜಾ ದಿನವದ ರವಿವಾರದಂದು ಬೆಳ್ಳಬೆಳಿಗ್ಗೆ ಆ ಪಾರಿವಾಳಗಳನ್ನು ನೋಡಲು ಹೋದೆ, ಅಲ್ಲೊಂದು ವಿಸ್ಮಯ ಕಾಣಿಸಿತು ನನಗೆ.ಗಂಡು ಪಾರಿವಾಳ ತನ್ನ ಚುಂಚಿನಿಂದಾ ಹೆಣ್ಣು ಪಾರಿವಾಳಕ್ಕೆ ಕಾಳು ಹಂಚಿಕೊಳ್ಳುತ್ತಿತ್ತು. ಇದನ್ನು ಕಂಡು ನನ್ನ ಮನಸ್ಸು ಕರಗಿ ಹೋಯಿತು. ಅಂದಿನಿಂದಾ ನಾನು ಆ ಪಾರಿವಾಳಗಳಿಗೆ ದಿನಾ ಒಂದು ಬಟ್ಟಲಲ್ಲಿ ಕಾಳು ಹಾಗು ಇನ್ನೊಂದು ಬಟ್ಟಲಲ್ಲಿ ನೀರು ಹಾಕಿ ಹೋಗುತ್ತಿದ್ದೆ. ಅವುಗಳ ಕಷ್ಟ ನೋಡಿ ನಾ ಮಾಡಿದ ಸಹಾಯ ಅಷ್ಟೇ. ಹೆಣ್ಣು ಪಾರಿವಾಳ ದಿನೆ ದಿನೆ ಸ್ವಲ್ಪ ಹಾರಲು ಪ್ರಯತ್ನಿಸುತ್ತಿತ್ತು ಆದರೆ ಸಾಧ್ಯಾವಾಗುತ್ತಿರಲಿಲ್ಲ. ಬಹುದಿನಗಳ ಕಾಲ ಅವುಗಳನ್ನು ನಾ ಭೇಟಿಯೆ ಆಗಲಿಲ್ಲಾ ಅಂತಾ ನೋಡಲು ಹೋದಾಗ.., ನನಗೆ ಕಂಡ ದೃಷ್ಯ ನನ್ನ ಕಣ್ಣುಗಳಲ್ಲಿ ಅಳು ತರಿಸಿ ಬಿಟ್ಟಿತು. ಹೆಣ್ಣು ಪಾರಿವಾಳ ಯಾವುದೋ ಕೆಟ್ಟ ಕಣ್ಣುಗಳಿಗೆ ಬಲಿಯಾಗಿತ್ತು. ಅಲ್ಲೆಲ್ಲಾ ಕೆಲವು ಪಾರಿವಾಳಗಳು ಸೇರಿದ್ದವು. ಒಂದು ಪಾರಿವಾಳ ಮಾತ್ರ ಅದರ ಹತ್ತಿರನೆ ಸುತ್ತುತ್ತಿತ್ತು. ಅರ್ಧ ಗಂಟೆ ಕಳೆದ ನಂತರ ಬೇರೆ ಎಲ್ಲಾ ಪಾರಿವಾಳಗಳು ಮಾಯವಾದವು.., ಆದರೆ ಆ ಒಂದು ಗಂಡು ಪಾರಿವಾಳ ಮಾತ್ರ ಗೋಡೆಯನೇರಿ ಮಡಿದ ಪಾರಿವಾಳವನ್ನು ನೋಡುತ್ತಾ ಕುಳಿತಿತ್ತು, ಅದರ ಕಣ್ಣುಗಳನ್ನು ನಾನು ಗಮನಿಸಿದಾಗ ಅವು ನೀರೊರೆಯುತ್ತಿದ್ದವು. ಅದರ ದುಃಖವ ಕಂಡು ನನ್ನ ಕಣ್ಣುಗಳಲ್ಲಿಯೂ ನೀರು ಹರಿಲಾರಂಭಿಸಿದವು. ಪ್ರಾಣಿ ಪಕ್ಷಿಗಳಲ್ಲಿಯೂ ಕೂಡಾ ಪ್ರೀತಿ, ವಾತ್ಸಲ್ಯಾ , ಗೆಳೆಯರು, ಸಂಬಂಧಿಕರು ಇರುತ್ತಾರೆ, ಅವರುಗಳು ಕೂಡಾ ಮನುಷ್ಯನ ತರಹವೇ ಎಲ್ಲವನ್ನೂ ಅನುಭವಿಸುತ್ತವೆ ಎಂದು ತಿಳಿಯಿತು. ಆ ಪಾರಿವಾಳಗಳ ಅಮರ ಪ್ರೇಮ, ಅವರ ಒಡನಾಟ ನನ್ನ ಮನವನ್ನು ಇಂದಿಗೂ ಅಚ್ಚರಿಯಾಗಿ ಉಳಿದಿದೆ.
Wednesday, July 17, 2013
ಅಮರ ಪ್ರೇಮಿಗಳು

Subscribe to:
Post Comments (Atom)
ಸಾವಿಗೆ ಕಿವಿ ಕೊಟ್ಟಾಗ..!
ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...
-
ಕನ್ನಡಿಯೇ ಮನುಷ್ಯನ ಆತ್ಮೀಯ ಸ್ನೇಹಿತ! ನಾವು ನಕ್ಕರೆ ಕನ್ನಡಿಯೂ ನಕ್ಕು ನಗೆಯ ಹಂಚುವುದು ... ನಾವು ಅತ್ತರೆ , ಅದು ಕೂಡ ನಮ್ಮ ಜೊತೆಯಲೇ ಅಳುವುದು... ನಿನಂತೆಯೇ ನಾನು .....
-
ಹಸಿರು ಮಾನವನ ಜೀವದ ಉಸಿರು ಹಸಿರು ಇದ್ದಾರೆ ಭಾಗ್ಯ , ಹಸಿರು ತರುವುದು ಸೌಭಾಗ್ಯ ಹಸಿರು ಬೆರೆತಿರಲು ಜೀವನ , ಹಸಿರು ಬದುಕಿನ ಪಯಣ ಕಾಡು ಬೆಳೆದರೆ ನಾಡಿಗೆ ಮಳೆ , ಸೋನೆ ಗರ...
-
ಸಣ್ಣ ಕಂದಮ್ಮಗಳ ಹಸಿವು ಕರುಳ ಹಿಚುಕಿ ಹೊಸೆಯುವುದು ಕಣ್ಣ ಹನಿಗಳ ನೋವು ಮನವ ಹಿಂಡಿ ಕದಡುವುದು ಆಡುತ್ತಾ ಕಳೆಯಬೇಕಿದ್ದ ಬದುಕು ಬೀದಿಗಳಲ್ಲಿ ಅರಸಿದೆ ನೆರವು ...
No comments:
Post a Comment