ಸಂಗೀತ ಕಛೇರಿ

ಪದೇ ಪದೇ ಇಣುಕಿ ನೋಡುತ್ತಿರುವಳು,

ಹೃದಯ ಬಾರಿಸುತ್ತಿರುವ ಡೊಳ್ಳನು !

ಅನುಸರಿಸಿ ಅದರ ರಾಗವ ಅವಳು,

ಮೆಲ್ಲಗೆ ನುಡಿಸುತ್ತಿರುವಳು ಕೊಳಲನು !

ನನ್ನ ಎದೆಯ ಡೊಳ್ಳು ಬಡಿತಕೆ...

ಅವಳ ಮನದ ಭಾವಗಳ ಕುಣಿತ..

ಇನ್ನೂ ಇಬ್ಬರ ಹೃದಯದಲಿ ಪ್ರೇಮದ ಏರಿಳಿತ..!

ಒಮ್ಮೆ ನನ್ನ ಡೊಳ್ಳಿನ ಹೊಡೆತ,

ಆಕಡೆಯಿಂದ ಅವಳ ಕೊಳಲ ನುಲಿತ..

ಶುರುವಾಗಿದೆ ನಮ್ಮ ಕಛೇರಿ..,ಆಲಿಸಿ ಬನ್ನಿ ನಮ್ಮ ಸಂಗೀತ !!

Comments

ಅದೆಲ್ಲ ಸರಿ, ಆಕೆ ಹಿಂದೂಸ್ಥಾನಿ ತಾವು ಕರ್ನಾಟಕ ಸಂಗೀತ ಯಾಕೀ differenceಊ ಸಾಹೇಬರೇ?
ಅದು ಸ್ವಿಟು ಖಾರಾ ಇದ್ದಂಗ ರೀ ಸರ , ಎರಡರದು ಗುಣ ಬೆರೆ ಇದ್ದರೂ ಕೂಡಿಕೊಂಡು ಬಾಳಬೇಕಲ್ರಿ, ಅದ ಅಲ್ವೇನ್ರಿ ಜೀವನ..! ಧನ್ಯವಾದಗಳು ಬದ್ರಿ ಸರ್ :)

Popular posts from this blog

ಹುಟ್ಟು ಸಾವು

ಸ್ವಾಭಿಮಾನ /ಅಹಂಕಾರ

ನಗು-ನಗಿಸು