ಮನಃಪೂರ್ವಕ ಮೆಚ್ಚಿದೆ !!

ಅವಳ ಅಂದ ಅವಳ ಚಂದ

ಅವಳ ಬಣ್ಣ ಅವಳ ಕಣ್ಣ

ಅವಳ ಕೋಮಲ ಮುಖದ ಚಂದವ..

ಮೆಚ್ಚಿದೆ, ಮೆಚ್ಚಿದೆ... ಮನಃಪೂರ್ವಕ ಮೆಚ್ಚಿದೆ !!

ಅವಳ ನಡೆಯ ಅವಳ ನುಡಿಯ

ಅವಳ ಗುಣವ ಅವಳ ಗಣವ

ಅವಳ ಭಯ ಭಕ್ತಿಯ ನಡುವಳಿಕೆಯ ಕಂಡು..

ಮೆಚ್ಚಿದೆ, ಮೆಚ್ಚಿದೆ... ಮನಃಪೂರ್ವಕ ಮೆಚ್ಚಿದೆ !!

ಅವಳ ಸೌಮ್ಯತೆ ಅವಳ ಚಾತುರ್ಯತೆ

ಅವಳ ಸೂಕ್ಷ್ಮತೆ ಅವಳ ಚಿಂತನೆ

ಅವಳ ಸಮಯ ಪ್ರಜ್ಞೆಯ ಹೆಜ್ಜೆಯ ಕಂಡು

ಮೆಚ್ಚಿದೆ, ಮೆಚ್ಚಿದೆ... ಮನಃಪೂರ್ವಕ ಮೆಚ್ಚಿದೆ !!

ಅವಳ ಕೌಶಲ್ಯ ಅವಳ ನಿಯಮ

ಅವಳ ಶಿಸ್ತು ಅವಳ ಒಣಪು

ಅವಳ ಪಾಕ ಪ್ರವೀಣತೆ ಉಲ್ಲಾಸಗೊಳಿಸಿತು

ಮೆಚ್ಚಿದೆ, ಮೆಚ್ಚಿದೆ... ಮನಃಪೂರ್ವಕ ಮೆಚ್ಚಿದೆ !!

Comments

ಸಂಪೂರ್ಣ ಶರಣಾಗಾತಿ ಅನ್ನಿ.... :-D
ಕ್ಲೀನ್ ಬೋಲ್ಡು ಸಾರ್..... :D
ನಿಮ್ಮ ಕವನ ನನಗೂ ಮನಃಪೂರ್ವಕ ಮೆಚ್ಚಿಗೆಯಾಯಿತು.ಅವಳ ಅಂದ ಚಂದಗಳಿಂದ ಹಿಡಿದು, ಗುಣ ನಡತೆ, ಸೂಕ್ಷ್ಮತೆ, ಚತುರತೆ ಎಲ್ಲವನ್ನೂ ಎಳೆ ಎಳೆಯಾಗಿ ವರ್ಣಿಸಿದ್ದೀರಿ. ಖಂಡಿತಾ ಇಷ್ಟ ಪಡುವ ಕವನ.
ತುಂಬಾ ಧನ್ಯವಾದಗಳು ಚಂದ್ರಶೇಕರ್ ಅವರೇ :)

Popular posts from this blog

ಹುಟ್ಟು ಸಾವು

ಸ್ವಾಭಿಮಾನ /ಅಹಂಕಾರ

ನಗು-ನಗಿಸು