ದೀಪಜ್ಯೋತಿ


ಪ್ರೀತಿಯ ದೀಪ ಹೊತ್ತಿಹುದು
ಎಣ್ಣೆಯ ಹುಯ್ಯಿದು ಸಲಹು
ಅಕ್ಕರೆಯ ಎರೆದು, ಪ್ರಕಾಶಿಸು !!

ಮನದ ಅಂಧಕಾರವ ದೂರಮಾಡು
ಪ್ರೀತಿಯ ಬೊಗಸೆಯಲ್ಲಿ ಹಿಡಿದು
ಜೀವಕೆ ಜೀವ ತುಂಬುವ ಜ್ಯೋತಿಯ ಪ್ರಜ್ವಲಿಸು !!

ನಂಬಿಹೆನು, ನೀ ಬಾಳ ಜ್ಯೋತಿ ಆಗುವಳೆಂದು
ಬೆಳಕ ತುಂಬುವೆ ನನ್ನ ಬಾಳಲಿ ಇಂದೆಂದೂ
ಮಾದರಿಯಾಗು ನೀ, ಪ್ರೀತಿಯ ಸಂಕೇತವೆಂದು !!

2 comments:

Badarinath Palavalli said...

ಅಸ್ತು ಎಂದರು ಮುಕ್ಕೋಟಿ(!) ದೇವತೆಗಳೂ whole saleನಲ್ಲಿ...

Sunil R Agadi (Bhavapriya) said...

ಧನ್ಯವಾದಗಳು ತಮಗು ಹಾಗು ಅಸ್ತು ಅಂದವರಿಗೆಲ್ಲಾ :)

ವರ್ಷಧಾರೆ

ಸರ-ಸರನೆ ಹರಿದು ಬರುತ್ತಿರುವ ವರ್ಷಧಾರೆಗೆ ಬೇಲಿಯ ಕಟ್ಟಲಾದೀತೆ....? ನೀರು ತುಂಬಿ ಹರಿಯುವ ನದಿಯನು ಹರಿಯುವುದನ್ನು ನಿಲ್ಲಿಸಲಾದೀತೆ....? ಒಲಿದು ಬಂದ...