ಒಲವಿನ ಕಾದಂಬರಿ ಸಂಚಿಕೆ - ೨


ಒಂದು ವರ್ಷದ ಓದು ಮುಗಿದೇ ಹೋಯ್ತು, ಆ ಒಂದು ವರ್ಷದಲ್ಲೆ ರಾಜ್ಗೆ ಏರಿಳಿತದ ಅನುಭವ ಕೂಡಾ ಆಯ್ತು. ಜೀವನ ಹಾಗೆ ತಾನೆ ಏರಿಳಿತಗಳ ಪ್ರಯಾಣ. ಗೆಳೆಯರ ನಡುವೆ ಹೆಚ್ಚು ಒಡನಾಟ, ಎಲ್ಲರೂ ಕೂಡಿಕೊಂಡು ಕಾಲೇಜಿನ ಜೀವನವನ್ನು ಸಂತೋಷದ ಕ್ಷಣಗಳಿಂದ ಕಳೆಯುತ್ತಿದ್ದರು. ಸಾಮಾನ್ಯವಾಗಿ ಹುಡುಗೀಯರಿಗೆ ಓದೊ ಹುಚ್ಚು.., ಹುಡುಗರದು ಲೈಫ್ ಎಂಜಾಯ್ ಮಾಡುವ ತವಕ, ಅದಕ್ಕೆ ಹುಡುಗರು ಹಾದಿ ತಪ್ಪುವುದು , ಇಲ್ಲಾ ಯಾವುದೊ ಒಂದು ಚಟಕ್ಕೆ ಬಲಿಯಾಗುವುದು , ಇಲ್ಲಾ ಪ್ರೀತಿಯಲ್ಲಿ ಬಿದ್ದು ಓದುವುದ ಮರೆತು ಅತ್ಯಮೂಲ್ಯ ಸಮಯವನ್ನು ಹಾಳು ಮಾಡಿಕೊಳ್ಳುವುದು. ಇವೆಲ್ಲಾ ಹುಡುಗಿಯರ ಜೀವನದಲ್ಲಿ ಆಗುವುದಿಲ್ಲಾ ಅಂತೇನೂ ಇಲ್ಲಾ, ಅಲ್ಲಿಯೂ ಆಗುತ್ತವೆ ಆದರೆ ಕಡಿಮೆ ಪ್ರಮಾಣದಲ್ಲಿ. ಸರಿ ರಾಜ್ ಸ್ವಲ್ಪ ಜಾಗರುಕನಾಗುತ್ತಾನೆ, ಮೊದಲನೆ ವರ್ಷದ ಸ್ಥಿತಿ ಮತ್ತೆ ಬರಬಾರದು ಅಂದುಕೊಂಡು ಶ್ರದ್ದೆಯಿಂದ ವಿಧ್ಯಾಭ್ಯಾಸ ಮಾಡುತ್ತಿರುತ್ತಾನೆ. ಕ್ಲಾಸಿನ ಪರೀಕ್ಷೆಗಳಲ್ಲಿ ಒಳ್ಳೆಯ ಅಂಕ ಪಡೆದು ಮುನ್ನುಗ್ಗುತ್ತಿರುತ್ತಾನೆ. ಈ ಸಮಯದಲ್ಲಿ ತನ್ನದೇ ಕ್ಲಾಸಿನವಳಾದ ಗೀತಾಳ ಪರಿಚಯವಾಗುತ್ತದೆ. ಗೀತಾ ಸ್ವಲ್ಪ ಸುಂದರಿ, ಶ್ವೆತ ವರ್ಣ, ಅಚ್ಚುಕಟ್ಟು ಮೈಕಟ್ಟು ಧಾರ್ಮಿಕ ಹಾಗು ಒಳ್ಳೆಯ ಮನೆತನದವಳಾಗಿರುತ್ತಾಳೆ. ಸ್ವಚ್ಚ ಮನಸು ಅವಳದು, ನೇರ ಹಾಗು ದಿಟ್ಟ ಸ್ವಭಾವದವಳು. ಒಂದೇ ಕ್ಲಾಸಿನಲ್ಲಿ ಓದುತ್ತಾರೆ ಅಂದರೆ ಗೆಳೆತನ ಇರಲೇಬೇಕಲ್ಲವೆ ಅನ್ನುತ್ತಾ ನಮ್ಮ ರಾಜ್ ನೆ ಮೊದಲ ಬಾರಿಗೆ ಅವಳಿಗೆ ತನ್ನ ಪರಿಚಯ ನೀಡಿ ಅವಳನ್ನು ಪರಿಚಯ ಮಾಡಿಕೊಂಡಿರುತ್ತಾನೆ. ಮೊದಲ ದಿನ ಮೆಷ್ಟ್ರುಗೆ ಕಾಯುತ್ತಾ ಎಲ್ಲರೂ ಹೊರಗೆ ನಿಂತಾಗ ಗೀತಾ ಒಬ್ಬಳೇ ದೂರದಲ್ಲಿ ನಿಂತು ಹುಡುಗರು ಏನ್ ಮಾಡುತ್ತಾರೆ, ಎಲ್ಲಿಗೆ ಹೋಗುತ್ತಾರೆ , ಯಾರ ಪರಿಚಯವೂ ಇಲ್ಲ ಹೇಗೆ ನಾನು ಮಾತನಾಡಿಸಲಿ, ಯಾರಿಗೆ ಮಾತನಾಡಿಸಲಿ ಅನ್ನೋ ದುಗಡದಿಂದ ಇದ್ದಾಗ ನಮ್ಮ ರಾಜ್ ಸೂಕ್ಷ್ಮವಾಗಿ ಗಮನಿಸಿ ಅವಳ ಸಹಾಯಕ್ಕಾಗಿ ನಿಲ್ಲುತ್ತಾನೆ. ಹಾಯ್ ನಾನು ರಾಜ್….ನಿಮ್ಮ ಹೆಸರು….ಅವಳು ಹೆಲೋ ನನ್ನ ಹೆಸರು ಗೀತಾ ನಿಮ್ಮ ಕ್ಲಾಸಿನವಳೆ….ಹಾ ಗೊತ್ತು ನಿಮ್ಮನ್ನ ಮೊದಲನೆ ವರ್ಷ ಗಮನಿಸಿದ್ದೆ ಆದರೆ ನೀವು ನಮ್ಮ ಕ್ಲಾಸಿನವರು ಅಂತಾ ತಿಳಿದಿರಲಿಲ್ಲ ಅನ್ನುತ್ತಾನೆ. ಗೀತಾಗೆ ಅಂತೂ ಒಬ್ಬ ಗೆಳೆಯ ಸಿಕ್ಕಾ ಅನ್ನುವ ಖುಷಿಯಾಗುತ್ತದೆ. ಹೀಗೆ ಹಾಯ್ ಬಾಯ್ ಅನ್ನುತ್ತಾ ಒಂದು ವಾರ ಕಳೆಯುತ್ತದೆ. ಒಂದು ದಿನ ಗೀತಾ ಕ್ಲಾಸ್ ಮಿಸ್ ಮಾಡಿಕೊಂಡಿರುತ್ತಾಳೆ ಅಂದಿನದ ನೋಟ್ಸ ಬೇಕಿತ್ತು ಅಂತಾ ರಾಜ್ಗೆ ಕೇಳುತ್ತಾಳೆ…, ಅದಕ್ಕೆ ರಾಜ್ ಸರಿ ನಾಳೆ ತಂದು ಕೊಡುತ್ತೇನೆ ಅಂತಾ ಹೇಳಿ ಹೊರಡ ಬೇಕು ಅನ್ನುವಷ್ಟರಲ್ಲಿ…ಗೀತಾ ಅವನನ್ನು ಕೂಗಿ ನಿಮ್ಮ ಕಾಂಟ್ಯಾಕ್ಟ ಮಾಡಲು ನಂಬರ್ ಏನಾದರು ಇದೆನಾ ಅಂತಾ ಕೇಳುತ್ತಾಳೆ. ರಾಜ್ ಹಾ ಇದೆ ಮನೆಯ ಲ್ಯಾಂಡಲೈನ್ ನಂಬರ್ ಆಗಬಹುದೇ..? ಓಹೋ ಪರವಾಗಿಲ್ಲಾ..ಕೊಡಿ ಅಂತಾ ಹೇಳಿ ತೊಗೊಳುತ್ತಾಳೆ. ಮತ್ತೆ ದಿನಗಳು ಎಂದಿನಂತೆ ಸಾಗುತ್ತವೆ. ಕೆಲವು ದಿನಗಳ ನಂತರ ರಾಜ್ ಮನೆಗೆ ಒಂದು ದೂರವಾಣಿ ಕರೆ ಬರುತ್ತದೆ. ರಾಜ್ ನ ತಂದೆ ಆ ಕರೆಯನ್ನು ಸ್ವಿಕರಿಸುತ್ತಾರೆ…, ಆದರೆ ಆಕಡೆಯಿಂದಾ ಯಾವುದೇ ಧ್ವನಿ ಕೇಳಿ ಬರುವುದಿಲ್ಲ. ಒಂದೆರೆಡು ಬಾರಿ ಹೀಗೆಯೇ ಆಗುತ್ತದೆ.., ಅದಕ್ಕೆ ರಾಜ್ ನ ತಂದೆ ಪೋನನ್ನು ತೆಗೆದು ಇಟ್ಟುಬಿಡುತ್ತಾರೆ. ರಾಜ್ ಕೂಡ ಈ ಕರೆಯ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ.  ಇತ್ತ ಕಾಲೇಜಿನಲ್ಲಿ ಎರಡು ಮೂರ ದಿನದ ವರೆಗೆ ಗೀತಾ ಹಾಗು ರಾಜ್ ನ ಮಾತು ಕಥೆಗಳು ಆಗಿರುವುದಿಲ್ಲ. ರಾಜ್ ಲೈಬ್ರರಿಗೆ ಹೋಗಿ ಯಾವುದೋ ಪುಸ್ತಕವನ್ನು ಹುಡುಕುತ್ತಿರುತ್ತಾನೆ ಅಷ್ಟರಲ್ಲಿ ಗೀತಾ ಕೂಡಾ ಅಲ್ಲಿಗೆ ಬರುತ್ತಾಳೆ..ದೂರದಲ್ಲಿ ನಿಂತು ರಾಜನನ್ನು ನೋಡಿ ಮಂದಹಾಸ ನೀಡುತ್ತಿರುತ್ತಾಳೆ..ಅವಳಿಗೆ ಏನೋ ಹೇಳುವುದಿರಬೇಕು ಅದಕ್ಕೆ ಹಾಗೆ ಮಾಡುತ್ತಿದ್ದಾಳೆ ಅಂದುಕೊಂಡು ರಾಜ್ ಅವಳಬಳಿ ಹೋಗಿ ಏನ್ ವಿಷಯ ಅಂತಾ ವಿಚಾರಿಸುತ್ತಾನೆ…ಅವಳು ಏನು ಇಲ್ಲಾ ನಿನಗೆ ಒಂದು ವಿಷಯ ಹೇಳಬೇಕಿತ್ತು..ಅಂದಳು., ರಾಜ್ ಸರಿ ಹೇಳು ಅಂದನು…ಸ್ವಲ್ಪಾ ತಡಿ ನೀನೆನಾದರೂ ನಮ್ಮ ಮನೆಗೆ ಕರೆ ಮಾಡಿದ್ದಿಯಾ ಅಂತಾ ಕೇಳಲು ದೊಡ್ಡ ನಗೆ ಬೀರಿ ಹೌದು ನಾನೆ ಮಾಡಿದ್ದು…, ಅದು ಯಾರದೊ ಮನೆಗೆ ಹೋಗಿರಬೇಕು ಅಂದುಕೊಂಡು ಇಟ್ಟೆ, ಮತ್ತೆ ಮಾಡಿದರೂ ಯಾರೋ ದೊಡ್ಡವರ ಧ್ವನಿ ಕೇಳಿದಂತಾಯಿತು ಅದಕ್ಕೆ ಇಟ್ಟುಬಿಟ್ಟೆ.. ಹೌದು ನೀನು ಏಕೆ ಕರೆ ತೊಗೊಳಲಿಲ್ಲಾ..? ಅಂತಾ ಕೇಳುತ್ತಾಳೆ.. ನನಗೆ ನಮ್ಮ ಮನೆಯಲ್ಲಿ ಯಾವುದೇ ಕರೆಗಳು ಬರುವುದಿಲ್ಲಾ ಅದಕ್ಕೆ ನಾನು ಅದರ ಗೋಜಿಗೆ ಹೋಗುವುದಿಲ್ಲಾ ಅನ್ನುತ್ತಾನೆ ರಾಜ್. ಸರಿ ನನ್ನ ತಂದೆ ಕರೆ ಸ್ವಿಕರಿಸಿದಾಗ ಮಾತನಾಡಬೇಕಿತ್ತು ಅವರಿಗೆ ಕೇಳಿದ್ದರೆ ನನಗೆ ಕರೆಯುತ್ತಿದ್ದರು ಹಾಗೆಕೆ ಮಾಡಿದೆ ಎಂದು ರಾಜ್ ಪ್ರಶ್ನಿಸಿದ ಅದಕ್ಕ ನಿಮ್ಮ ತಂದೆ ನನಗೆ ಬೈಯ್ಯಬಹುದು ಎಂದು ಭಯಗೊಂಡು ಇಟ್ಟುಬಿಟ್ಟೆ ಅಂದಳು. ಸರಿ, ಇನ್ನೊಂದು ಸರಿ ನಿನ್ನ ಪರಿಚಯ ಹೇಳಿ ರಾಜ್ ಬೇಕಿತ್ತು ಅಂತಾ ಹೇಳು ಅವರು ಏನು ಬೈಯ್ಯುವುದಿಲ್ಲಾ ಅಂತಾನೆ.  ಮತ್ತೆರಡು ದಿನದ ನಂತರ ಕರೆ ಮಾಡಿ ಅಂಟಿ ನಾನು ಗೀತಾ ಸ್ವಲ್ಪ ರಾಜ್ ಇದ್ದರೆ ಕೊಡ್ತೀರಾ ಅಂದಳು. ರಾಜ್ ನ ಅಮ್ಮ ರಾಜ್ ನಿನ್ನ ಗೆಳತಿ ಅಂತೆ ಯಾರೋ ಕರೆ ಮಾಡಿದ್ದಾರೆ ನೋಡಪ್ಪಾ….ರಾಜ್ ಕರೆಯನ್ನು ಸ್ವಿಕರಿಸುತ್ತಾನೆ. ಎಯ್ ನಾನು ಕಣೋ ಗೀತಾ….ನಾಳೆ ಬರಬೇಕಾದಾಗ ಪ್ರ್ಯಾಕ್ಟಿಕಲ್ ಪುಸ್ತಕ ತೊಗೊಂಡು ಬಾ, ನಾನು ಕಾಪಿ ಮಾಡಿಕೊಡ್ತೀನಿ ಅಂದಳೆ…ಆಯ್ತು..ಮತ್ತೆ ಏನ್ ಸಮಾಚಾರ…? ಏನೂ ಇಲ್ಲಾ ಮನೆಲಿ ಬೊರ ಆಗ್ತಾ ಇತ್ತು.., ಸರಿ ನಿನ್ನ ಹತ್ರ ಮಾತಾಡೋಣ ಅಂದು ಕೊಂಡು ಪೋನು ಮಾಡಿದೆ ಹಾಗೆ ನೋಟ್ಸ ಕೂಡಾ ಬೇಕಿತ್ತು ಅಲ್ಲಾ.. ಹಾಗೆ ಮಾಡಿದೆ. ಹೌದು ನಿಮ್ಮ ಮನೆಲಿ ಹುಡುಗಿ ಪೋನ್ ಮಾಡಿದರೆ ಏನು ಅನ್ನುವುದಿಲ್ವಾ..? ರಾಜ್ ಅದಕ್ಕೆ ಅರೆ ಏನು ಅನ್ನಬೇಕು ನಾನು ಒಳ್ಳೆಯ ಹುಡುಗ ಅಂತಾ ನಮ್ಮ ಮನೆಯವರಿಗೆ ಗೊತ್ತು ಅದಕ್ಕೆ ಏನು ಅನ್ನುವುದಿಲ್ಲಾ…ಆದರೆ ನೀನು ಅಂದು ಕರೆ ಮಾಡಿ ಮಾತನಾಡದೇ ಇದ್ದಾಗ ನನ್ನ ಮೇಲೆನೆ ಅನುಮಾನ ಬಂದಿತ್ತೇನೊ ನನ್ನ ಅಪ್ಪನಿಗೆ, ಅದಕ್ಕೆ ನಿನ್ನ ಬಗ್ಗೆ ಎಲ್ಲಾ ಹೇಳಿದ್ದೇನೆ, ಮುಂದಿನ ಬಾರಿ ಕರೆ ಮಾಡಿದರೆ ನಿನ್ನ ಹೆಸರು ಹೇಳು ಅವರು ಏನೂ ಅನ್ನುವುದಿಲ್ಲಾ ಅವರು ಕೂಡಾ ನಿನಗೆ ಚೆನ್ನಾಗಿ ಮಾತನಾಡಿಸುತ್ತಾರೆ.ಸರಿ ಸರಿ ಕಣೋ ನಮ್ಮ ಅಮ್ಮ ಕೂಡ ಬರಬಹುದು ಅಡುಗೆ ಮಾಡಿರು ಅಂತಾ ಹೇಳಿದ್ದ್ರು ನಾನು ಹೊರಡುತ್ತೇನೆ…ಅರೆ ನಿನಗೆ ಅಡುಗೆ ಮಾಡಲಿಕ್ಕೆ ಬರುತ್ತಾ…ಅಂತಾ  ರಾಜ್ ಕೇಳಲು ಹ್ಮು ಬರುತ್ತೆ ಹುಡುಗಿ ಅಲ್ವಾ ಕಲಿಲೇ ಬೇಕು ಮುಂದೆ ಕಷ್ಟ ಆಗಬಾರದು ನೋಡು…ಅದಕ್ಕೆ. ಸರಿ ಸರಿ ನಾಳೆ ಕಾಲೇಜಿನಲ್ಲಿ ಸಿಗೋಣ. ಬಾಯ್ ಅಂತಾ ಹೇಳು ಇಡುತ್ತಾಳೆ. ಗೀತಾಳಿಗೆ ರಾಜ್ ಒಬ್ಬನೆ ಒಳ್ಳೆಯ ಸ್ನೇಹಿತ ಆಗಿ ಬಿಡುತ್ತಾನೆ. ದಿನೆ ದಿನೆ ಇವರ ಗೆಳೆತನ ಬಹಳ ಘಾಡವಾಗುತ್ತದೆ. ಒಂದು ದಿನ ರಾಜ್ ತನ್ನ ಎಲ್ಲಾ ಗೆಳೆಯ ಗೆಳತಿಯರೊಡನೆ ಕಾಲೇಜಿಗೆ ಬರುತ್ತಿರಿವಾಗ ಗೀತಾ ಇವನನ್ನು ನೋಡುತ್ತಾಳೆ…ಸ್ವಾರ್ತಥೆ ಇರಬಹುದು….ಯಾರು ಅವರೆಲ್ಲಾ ನಿನ್ನ ಗೆಳೆಯರೇ…??? ರಾಜ್ ಹೌದು ಗೆಳೆಯರು…..ಗೀತಾ ಮತ್ತೆ ಕೆಲ ಹುಡುಗೀಯರು ಕೂಡಾ ಇದ್ದರು….ಓಹೋ ಅವರಾ ಹೌದು ನಮ್ಮ ಊರಿನವರೆ ಎಲ್ಲರೂ….ಬಾ ಅವರಿಗೆ ಭೇಟಿ ಮಾಡಿಸುತ್ತೇನೆ ಅಂದನು ರಾಜ್.. ಇವನು ಮೋಹನ , ಪವನ್ ಮತ್ತೆ ಮಂಜು…ಎಲ್ಲರಿಗೂ ಹಾಯ್…… ಮತ್ತೆ ಇವಳು ಸ್ಮಿತಾ , ಕಾವ್ಯಾ, ಕವನ , ನಯನಾ..ನಯನಾ ನನ್ನ ಬಾಲ್ಯದ ಗೆಳತಿ…ಮತ್ತೊಬ್ಬಳು “ಸುಮನಾ”
ಸುಮನಾ ಮಂದಹಾಸ ಬೀರುತ್ತಾಳೆ. ಗೀತಾಗೆ ಮನದಲ್ಲಿ ಏನೋ ಪ್ರಶ್ನೆ ಮೂಡಿತು ಆದರೆ ಸುಮ್ಮನಾದಳು. ಎಲ್ಲರೂ ಕ್ಲಾಸಿಗೆ ತೆರಳುತ್ತಾರೆ. ಗೀತಾ ಬಿಡುವಿನಲ್ಲಿ, ಲೋ ರಾಜ್ ನಿನಗೆ ಇಷ್ಟೊಂದು ಗೆಳೆಯರು ಇದ್ದಾರಂತಾ ಏಕೆ ನೀನು ಮೊದಲೇ ಹೇಳಲಿಲ್ಲ…? ಅಯ್ಯೊ ಸಂದರ್ಭ ಬಂದಿರಲಿಲ್ಲ ಅದಕ್ಕೆ ಹೇಳಿರಲಿಲ್ಲ…ಅದಕ್ಕೇನಾಯ್ತು ಈಗ…ಏನು ಇಲ್ಲಾ ಹೋಗೋ…ಸರಿ ಇನ್ನೂ ಒಂದು ಗಂಟೆ ಯಾವ ಕ್ಲಾಸು ಇಲ್ಲಾ ನಾನು ಲೇಡಿಜ್ ರೂಮಿಗೆ ಹೋಗಿ ರೆಸ್ಟು ತೊಗೊತೀನಿ ಅಂತಾ ಹೇಳಿ ನಿರ್ಗಮಿಸುತ್ತಾಳೆ. ರಾಜ್ ಒಬ್ಬನೆ ಇದ್ದಾಗ ಆಕಡೆಯಿಂದ ಸುಮನಾ ಬರುತ್ತಾಳೆ…ಹಾಯ್ ರಾಜ್ ನಾನು ಲೈಬ್ರರಿಗೆ ಹೋಗ್ತಾ ಇದ್ದೇನೆ ಸ್ವಲ್ಪ ಪುಸ್ತಕ ಹುಡುಕುವುದರಲ್ಲಿ ಸಹಾಯ ಮಾಡುತ್ತೀಯಾ….ಹ್ಮು ಸರಿ ನಡಿ ಹೋಗೋಣ ಅಂದ ರಾಜ್. ಇಬ್ಬರು ಒಂದೊಂದು ಪುಸ್ತಕ ಹಿಡಿದು ಓದಲು ಕೂರುತ್ತಾರೆ. ಕೆಲ ಸಮಯ ಕಳೆದ ನಂತರ ಗೀತಾ ಕೂಡಾ ಲೈಬ್ರರಿಗೆ ಬರುತ್ತಾಳೆ.., ಇಬ್ಬರೂ ಕೂಳಿತದ್ದನ್ನು ಕಂಡು ಕಾಣದೆ ಇರುವ ಹಾಗೆ ನಡೆದು ಬಿಡುತ್ತಾಳೆ. ಇದನ್ನು ಗಮನಿಸಿದ ಸುಮನಾ ನೋಡೊ ನಿನ್ನ ಫ್ರೇಂಡು ಹೋಗ್ತಾ ಇದ್ದಾಳೆ ಅಂದಳು…ಸುಮ್ಮನೆ ಕೂತಕೊಂಡು ಓದಿಕೊ ಬರೀ ಕಾಲ್ ಎಳಿಯೋದೆ ನಿನ್ನ ಕೆಲಸ ಅಂದ. ಎಲ್ಲೋ ಗೀತಾಗೆ ಜಲಸ್ಸಿ ಅಂತಾರಲ್ಲಾ ಅದು ಶುರುವಾಗಿತ್ತು ಅನ್ನಿಸುತ್ತೆ. ಮರುದಿನ ಬಂದವಳೆ ಲೋ ರಾಜ್ ಏನಪ್ಪಾ ಸುಮನಾ ಜೊತೆ ನೆನ್ನೆ ಕಂಬಾಯಿನ್ ಸ್ಟಡಿ ನಡೆದಾಗಿತ್ತು ಅಂದಳು…ಹೌದು…ನೀನು ಯಾವಾಗ ನೋಡಿದೆ…? ಮತ್ತೆ ಯಾಕೆ ಅಲ್ಲಿ ಬರಲಿಲ್ಲಾ..? ಅಂದ ರಾಜ್….ಸುಮ್ನೆ ಯಾಕೆ ಡಿಸ್ಟರ್ಬ್ ಮಾಡೋದು ಅಂತಾ ಬರಲಿಲ್ಲಾ…! ಏನೋಪಾ ನೀವು ಹುಡುಗಿರನ್ನ ಅರ್ಥ ಮಾಡಿಕೊಳ್ಳುವುದೇ ಕಷ್ಟ….! ಸರಿ ನಡಿ ಕ್ಲಾಸಿಗೆ ಹೋಗೋಣ…ಇಬ್ಬರೂ ಕ್ಲಾಸಿಗೆ ಹೋಗುತ್ತಾರೆ. ಕ್ಲಾಸ ಮುಗಿದು ಹೊರ ಬರುತ್ತಾರೆ…, ಲೋ ನಾನು ಇವತ್ತು ಊಟದ ಡಬ್ಬಿ ತಂದಿಲ್ಲಾ ನಾನು ಒಬ್ಬಳೆ ಇದ್ದೀನಿ…..ಒಹೋ ಹೌದಾ ಯಾಕೆ….ಅಮ್ಮಂಗೆ ಹುಷಾರಿರಲಿಲ್ಲಾ ಅದಕ್ಕೆ ಕಟ್ಟಿ ಕೊಡಲಿಲ್ಲ…..ಸರಿ ಬಾ ಹಾಗಾದರೆ ನನ್ನ ಜೊತೆ ಊಟಕ್ಕೆ…ಅಯ್ಯಿ ಬೇಡಪ್ಪಾ ನಿನ್ನ ಮೆಸ್ಸಿನಲ್ಲಿ ಬರೀ ಹುಡುಗರೆ ಇರುತ್ತಾರೇನೋ…ಇಲ್ಲಾ ಬಾರಮ್ಮ ಎಲ್ಲರೂ ಇರುತ್ತಾರೆ ಅಲ್ಲಿ…ಮನಸ್ಸಿನಲ್ಲಿ ಹೋಗಬೇಕು ಅಂತಾ ಇದ್ದರೂ ಸುಮ್ಮನೆ ಬೇಡ ಅನ್ನುವುದು ರಾಜ್ ಮನದಲ್ಲೇ ಅಂದುಕೊಳ್ಳುತ್ತಾನೆ. ದಿನಾ ಇಲ್ಲೇ ಊಟಾ ಮಾಡ್ತೀಯಾ.. ಊಟಾ ತುಂಬಾನೆ ಚೆನ್ನಾಗಿದೆ, ನನಗೂ ದಿನಾ ಇಲ್ಲೇ ಬರಬೇಕು ಅನ್ನಿಸುತ್ತೆ. ಓಹೋ…..ಹಾಗೆ……ಸರಿ ಸರಿ ನಿಮ್ಮ ಅಮ್ಮನಿಗೆ ಹೇಳಿ ಬಿಡು ನಾನು ಕಾಲೇಜಿನಲ್ಲೇ ಊಟ ಮಾಡುತ್ತೇನೆ ಅಂತಾ ಅಂದನು…ಗೀತಾ ಹಾಗೇನಾದರೂ ಹೇಳಿದರೆ ಅಮ್ಮಾ ಬೈತಾರೆ ಅವರಿಗೆ ನಾನು ಹೊರಗಡೆ ಏನಾದರೂ ತಿಂದರೆ ಇಷ್ಟವಾಗುವುದಿಲ್ಲ ಅಂದಳು. ಸರಿ ಬಿಡಮ್ಮ..
ನಡಿ ಕ್ಲಾಸಿಗೆ ಹೋಗೋಣ. ರಣ ರಣ ಬಿಸಿಲು ಅದರಲ್ಲಿ ಆ ನಮ್ಮ ಮ್ಯಾನೇಜ್ ಮ್ಯಂಟ ಮೇಷ್ಟ್ರು , ಹೊಟ್ಟೆ ತುಂಬಿದೆ ಇನ್ನೂ ನಾವು ಲಕ್ಚರ್ ಕೇಳಿದಹಂಗೆ…??? ದಿನ ಮುಕ್ತಾಯ……! (ಮುಂದುವರೆವುದು..)

2 comments:

Badarinath Palavalli said...

2ನೇ ಭಾಗವೂ ಚೆನ್ನಾಗಿ ಮೂಡಿಬಂದಿದೆ.

Sunil R Agadi (Bhavapriya) said...

ನನ್ನ ಬ್ಲಾಗಿಗೆ ಭೇಟಿ ನೀಡಿ ನಿಮ್ಮ ಅನಸಿಕೆಗಳನ್ನು ಸದಾ ಹಂಚಿಕೊಳ್ಳುತ್ತೀರಿ, ನಿಮ್ಮ ಪ್ರೋತ್ಸಾಹಕ್ಕೆ ನನ್ನ ತುಂಬು ಹೃದಯದ ಧನ್ಯವಾದಗಳು ಸರ್. ನಿಮ್ಮ ಆಶಿರ್ವಾದ ನನ್ನ ಮೇಲೆ ಹೀಗೆ ಇರಲಿ. :)

ವರ್ಷಧಾರೆ

ಸರ-ಸರನೆ ಹರಿದು ಬರುತ್ತಿರುವ ವರ್ಷಧಾರೆಗೆ ಬೇಲಿಯ ಕಟ್ಟಲಾದೀತೆ....? ನೀರು ತುಂಬಿ ಹರಿಯುವ ನದಿಯನು ಹರಿಯುವುದನ್ನು ನಿಲ್ಲಿಸಲಾದೀತೆ....? ಒಲಿದು ಬಂದ...